Viral Video: ಮಹಿಳೆಯ ಕೂದಲಿನ ಮೇಲೆ ಥೂ ಅಂತ ಉಗುಳಿದ ಹೆಸರಾಂತ ಹೇರ್ ಸ್ಟೈಲಿಸ್ಟ್..! ವಿಡಿಯೋ ನೋಡಿ

ಜಾವೆಬ್ ಹಬೀಬ್ ಮಹಿಳೆಯ ಕೂದಲನ್ನು ಕಟ್ ಮಾಡಲು ಸಿದ್ದಪಡಿಸಿಕೊಳ್ಳುವಾಗ ಆ ಕೂದಲಿಗೆ ಸ್ವಲ್ಪ ಒದ್ದೆ ಮಾಡಿಕೊಳ್ಳಲು ನೀರು ಇಲ್ಲದೆ ತಕ್ಷಣಕ್ಕೆ ಅವರು ಆ ಮಹಿಳೆಯ ಕೂದಲಿನಲ್ಲಿ ಥೂ ಅಂತ ಉಗುಳಿದ್ದಾರೆ.

ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್

ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್

  • Share this:
ಸಾಮಾನ್ಯವಾಗಿ ನಾವು ರಸ್ತೆಯ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ನಮ್ಮ ಪಕ್ಕದಲ್ಲಿ ಒಂದು ಬಸ್ ಹಾದು ಹೋಗುತ್ತಿದ್ದರೆ ನಮಗೆ ತಲೆಗೆ ಬರುವ ಮೊದಲ ಯೋಚನೆ ಎಂದರೆ ಯಾರಾದರೂ ಆ ಬಸ್ ಕಿಟಕಿಯಿಂದ ತಮ್ಮ ಬಾಯಿಯಲ್ಲಿ ಯಾವುದೋ ಪದಾರ್ಥ ಅಗೆಯುತ್ತಿದ್ದರೆ ಅಥವಾ ಅವರಿಗೆ ಕೆಮ್ಮು ಬಂದು ಉಗುಳಬೇಕು ಎಂದೆನಿಸಿ ಥಟ್ಟನೆ ಕಿಟಕಿ (Window) ಯಿಂದಾಚೆಗೆ ಮುಖ ಮಾಡಿ ಹೊರಕ್ಕೆ ಉಗುಳಿದರೆ ಅದೆಲ್ಲಿ ನಮ್ಮ ಮೇಲೆ ಬೀಳುತ್ತದೆ ಎಂಬ ಆಲೋಚನೆ ಎಂದು ಹೇಳಬಹುದು.ಯಾರೋ ಗೊತ್ತಿರದೆ ಮತ್ತು ಗಮನಿಸದೆ ಆ ತಪ್ಪು ನಡೆದು ಹೋದರೆ ನಾವು ಏನು ಮಾಡಲು ಆಗುವುದಿಲ್ಲ. ಯಾರೋ ಪಾಪ ನೋಡದೆ ಮಾಡಿರುವ ತಪ್ಪು ಎಂದು ಅದನ್ನು ಒರೆಸಿಕೊಂಡು ಮುಂದೆ ಹೋಗುತ್ತೇವೆ. ಆದರೆ ಇಲ್ಲಿ ನಡೆದ ಒಂದು ಘಟನೆಯಲ್ಲಿ ಒಬ್ಬ ಜನಪ್ರಿಯ ಹೇರ್ ಸ್ಟೈಲಿಸ್ಟ್ (Popular Hair Stylist) ಮಹಿಳೆಯ ಕೂದಲನ್ನು ಕತ್ತರಿಸುವಾಗ ಅಲ್ಲಿ ಥಟ್ಟನೆ (Suddenly)ಕೂದಲನ್ನು ಒದ್ದೆ ಮಾಡಲು ನೀರು ಇಲ್ಲದ ಕಾರಣ ತನ್ನ ಬಾಯಿಯಿಂದ ಆ ಮಹಿಳೆಯ ತಲೆಯ ಮೇಲೆ ಥೂ ಅಂತ ಉಗುಳಿದ್ದಾನೆ (Spitting) ನೋಡಿ.

ಜಾವೇದ್ ಹಬೀಬ್ ಸೆಮಿನಾರ್
ಹೆಸರಾಂತ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ತುಂಬಾ ವರ್ಷಗಳಿಂದ ಜಾವೇದ್ ಹಬೀಬ್ ಹೇರ್ ಅಂಡ್ ಬ್ಯೂಟಿ ಲಿಮಿಟೆಡ್ ಬ್ರ್ಯಾಂಡ್‌ ಅನ್ನು ನಡೆಸುತ್ತಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿರುವ ವಿಚಾರವೇ ಆಗಿದೆ. ವಾಸ್ತವವಾಗಿ, ಇದು ನಮ್ಮ ಭಾರತ ದೇಶದಲ್ಲಿಯೇ ಅತಿ ಹೆಚ್ಚು ಹೇರ್ ಸಲೂನ್ ಅಂಗಡಿಗಳನ್ನು ಹೊಂದಿದೆ. ಇತ್ತೀಚೆಗೆ ಇವರ ಒಂದು ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಹರಿದಾಡುತ್ತಿದೆ ಎಂದು ಹೇಳಬಹುದಾಗಿದೆ. ಏನಪ್ಪಾ ಇದೆ ಅಂತದ್ದು ಆ ವಿಡಿಯೋದಲ್ಲಿ ಅಂತ ನೀವು ಕೇಳಬಹುದು.

ಇದನ್ನೂ ಓದಿ: Viral Video: ಒಡನಾಡಿಯನ್ನು ಕಳೆದುಕೊಂಡ ನವಿಲಿನ ಆಕ್ರಂದನ

ಇತ್ತೀಚೆಗೆ ನಡೆದಂತಹ ಒಂದು ನೈಜ ಘಟನೆಯಲ್ಲಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ಸೆಮಿನಾರ್ ಒಂದನ್ನು ನಡೆಸುತ್ತಿರುವ ಸಮಯದಲ್ಲಿ ಅವರು ಪೂಜಾ ಗುಪ್ತಾ ಎಂಬ ಮಹಿಳೆಯನ್ನು ವೇದಿಕೆಯ ಮೇಲೆ ಆಹ್ವಾನಿಸಿದರು ಮತ್ತು ಹೇರ್ ಕಟ್ ಮಾಡಲು ಅವಳನ್ನು ಸಿದ್ಧಪಡಿಸುತ್ತಿದ್ದರು.

ವಿಡಿಯೋ ನೋಡಿ:



ನೀರು ಇಲ್ಲದೆ ಇದ್ದಾಗ
ಆನಂತರ ಅವರು ಮಾಡಿದ್ದನ್ನು ನೋಡಿದ ಎಲ್ಲರೂ ಒಂದು ಕ್ಷಣ ಆಘಾತಕ್ಕೊಳಗಾದರು. ಏಕೆಂದರೆ ಜಾವೆಬ್ ಹಬೀಬ್ ಮಹಿಳೆಯ ಕೂದಲನ್ನು ಕಟ್ ಮಾಡಲು ಸಿದ್ದಪಡಿಸಿಕೊಳ್ಳುವಾಗ ಆ ಕೂದಲಿಗೆ ಸ್ವಲ್ಪ ಒದ್ದೆ ಮಾಡಿಕೊಳ್ಳಲು ನೀರು ಇಲ್ಲದೆ ತಕ್ಷಣಕ್ಕೆ ಅವರು ಆ ಮಹಿಳೆಯ ಕೂದಲಿನಲ್ಲಿ ಥೂ ಅಂತ ಉಗುಳಿದ್ದಾರೆ. ಇದನ್ನು ನೋಡಿದ ಸೆಮಿನಾರ್‌ನಲ್ಲಿದ್ದ ಜನರು ಇದನ್ನು ನೋಡಿ ಆಶ್ಚರ್ಯಕ್ಕೊಳಗಾಗಿ ಕೂಗಿಕೊಂಡರು, ಅದನ್ನು ಕೇಳಿದ ಹೇರ್ ಸ್ಟೈಲಿಸ್ಟ್ ಜಾವೇದ್ ತನ್ನ ಉಗುಳಿನಲ್ಲಿ ನನ್ನ ಪ್ರಾಣವಿದೆ ಎಂದು ಹೇಳುತ್ತಿರುವುದನ್ನು ಈ 30 ಸೆಕೆಂಡಿನ ವೈರಲ್ ವಿಡಿಯೋ ತುಣುಕಿನಲ್ಲಿ ನಾವು ನೋಡಬಹುದಾಗಿದೆ.

ಅಸಹ್ಯ ಪಟ್ಟ ಮಹಿಳೆ
ತನ್ನ ಕೂದಲಿನಲ್ಲಿ ಉಗಿಸಿಕೊಂಡ ಮಹಿಳೆಯು ಆ ಕ್ಷಣಕ್ಕೆ ತುಂಬಾನೇ ಅಸಹ್ಯ ಪಟ್ಟುಕೊಂಡದ್ದು ಈ ವೈರಲ್ ವಿಡಿಯೋದಲ್ಲಿ ನೋಡಬಹುದು ಮತ್ತು ಆಕೆ ತನ್ನ ಪ್ರತಿಕ್ರಿಯೆಯನ್ನು ಒಂದು ವಿಡಿಯೋ ಮೂಲಕವೇ ನೀಡಿದ್ದಾರೆ.

ಇದನ್ನೂ ಓದಿ: Viral Video: ಕೊರೋನಾ ಬಂದರೂ ಕುಟುಂಬಸ್ಥರ ಜೊತೆ Party; ಈಕೆ ಮಾಡಿದ್ದ ಪ್ಲಾನ್​ ಅದ್ಬುತ

ಅದರಲ್ಲಿ ಪೂಜಾ ಗುಪ್ತಾ ಅವರು “ಸ್ನೇಹಿತರೇ ನನಗೆ ಜಾವೇದ್ ಅವರು ವೇದಿಕೆಯ ಮೇಲೆ ಕರೆದು ನನಗೆ ಹೇರ್ ಕಟ್ ಮಾಡುತ್ತಿದ್ದಾಗ ಅವರು ನೀರು ಇರದೇ ಇದ್ದರೆ ನಿಮ್ಮ ಉಗುಳಿನಿಂದ ಸಹ ಹೇರ್ ಕಟ್ ಮಾಡಬಹುದು ಎಂದು ಹೇಳಿ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ನಾನು ರಸ್ತೆಯ ಮೇಲೆ ಯಾವುದಾದರೂ ಸಲೂನ್‌ಗೆ ಹೋಗಿ ನನ್ನ ಹೇರ್ ಕಟ್ ಮಾಡಿಸುವೆ, ಆದರೆ ಜಾವೇದ್ ಹಬೀಬ್ ಅವರ ಸಲೂನ್‌ಗೆ ಎಂದೂ ಹೋಗುವುದಿಲ್ಲ” ಎಂದು ಹೇಳಿದ್ದಾರೆ.
Published by:vanithasanjevani vanithasanjevani
First published: