• Home
  • »
  • News
  • »
  • trend
  • »
  • Jaswiendre Singh: ಇವರ್ಯಾರು ಗುರು? ನಷ್ಟವಾದ್ರೂ ಪರ್ವಾಗಿಲ್ಲಾ ಅಂತ ಕಡಿಮೆ ಬೆಲೆಗೆ ಇಂಧನ ಮಾರಾಟ ಮಾಡ್ತಾರಂತೆ!

Jaswiendre Singh: ಇವರ್ಯಾರು ಗುರು? ನಷ್ಟವಾದ್ರೂ ಪರ್ವಾಗಿಲ್ಲಾ ಅಂತ ಕಡಿಮೆ ಬೆಲೆಗೆ ಇಂಧನ ಮಾರಾಟ ಮಾಡ್ತಾರಂತೆ!

ಜಸ್ವಿಂದರ್ ಸಿಂಗ್

ಜಸ್ವಿಂದರ್ ಸಿಂಗ್

fuel: ತಮ್ಮ ಉದ್ಯಮದಲ್ಲಿ ಲಾಭಗಳಿಸಲು ಏನಾದರೂ ಮಾಡುತ್ತಲೇ ಇರುತ್ತಾರೆ. ಅಂಥದ್ದರಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಉದ್ದೇಶದಿಂದ ನಷ್ಟವನ್ನು ಸಹ ಮಾಡಿಕೊಂಡು ವ್ಯಾಪಾರ ಮಾಡುವಂಥ ಹೃದಯ ಶ್ರೀಮಂತಿಕೆ ಇರುವವರು ಈ ಜಗತ್ತಿನಲ್ಲಿ ವಿರಳ ಎಂದೇ ಹೇಳಬಹುದು. ಅದರಲ್ಲೂ ವಿಶೇಷವಾಗಿ ಭಾರತದಲ್ಲಿರುವ ಹಲವಾರು ಜನರು ಇಂತಹ ದೊಡ್ಡತನದ ಹೃದಯ ಹೊಂದಿದ್ದಾರೆ.

ಮುಂದೆ ಓದಿ ...
  • Share this:

ವ್ಯಾಪಾರ (Business) ಅಥವಾ ಉದ್ದಿಮೆಗಳೆಂದಾಗ ಲಾಭ-ನಷ್ಟಗಳ (Profit and loss) ಲೆಕ್ಕಾಚಾರಗಳು (Calculation) ಸಾಮಾನ್ಯ. ಆದರೆ, ಯಾವೋಬ್ಬ ಉದ್ದಿಮೆದಾರನಾಗಲಿ ಅಥವಾ ವ್ಯಾಪಾರಿಯಾಗಲಿ (Merchant) ನಷ್ಟವನ್ನು ಎಂದಿಗೂ ಬಯಸುವುದಿಲ್ಲ. ತಮ್ಮ ಉದ್ಯಮದಲ್ಲಿ ಲಾಭಗಳಿಸಲು ಏನಾದರೂ ಮಾಡುತ್ತಲೇ ಇರುತ್ತಾರೆ. ಅಂಥದ್ದರಲ್ಲಿ ಕಷ್ಟದಲ್ಲಿದ್ದವರಿಗೆ (Difficulty) ಸಹಾಯ (Help) ಮಾಡುವ ಉದ್ದೇಶದಿಂದ ನಷ್ಟವನ್ನು ಸಹ ಮಾಡಿಕೊಂಡು ವ್ಯಾಪಾರ ಮಾಡುವಂಥ ಹೃದಯ ಶ್ರೀಮಂತಿಕೆ (Richness) ಇರುವವರು ಈ ಜಗತ್ತಿನಲ್ಲಿ (World) ವಿರಳ ಎಂದೇ ಹೇಳಬಹುದು. ಅದರಲ್ಲೂ ವಿಶೇಷವಾಗಿ ಭಾರತದಲ್ಲಿರುವ (India) ಹಲವಾರು ಜನರು (People) ಇಂತಹ ದೊಡ್ಡತನದ ಹೃದಯ (Heart) ಹೊಂದಿದ್ದಾರೆ.


ಸ್ಥಳೀಯರಿಗೆ ಇಂಧನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸಿಖ್ ವ್ಯಕ್ತಿ
ಪ್ರಸ್ತುತ, ಅಮೆರಿಕದಲ್ಲೂ ಒಬ್ಬ ಭಾರತ ಮೂಲದ ವ್ಯಕ್ತಿ ತಮ್ಮ ಹೃದಯ ವೈಶಾಲ್ಯವನ್ನು ಪ್ರದರ್ಶಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಹೌದು, ಅಮೆರಿಕದ ಅರಿಜೋನಾದಲ್ಲಿರುವ ಭಾರತೀಯ ಮೂಲದ ಸಿಖ್ ವ್ಯಕ್ತಿಯೊಬ್ಬರು ತಮ್ಮ ಗ್ಯಾಸ್ ಸ್ಟೇಶನ್ ನಲ್ಲಿ ಇಂಧನವನ್ನು ಸ್ಥಳೀಯರಿಗೆ ನೆರವಾಗಲೆಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು ಪ್ರತಿನಿತ್ಯ 500 ಡಾಲರ್ ಗಳಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.


ಸಾವಿರ ಗ್ಯಾಲನ್ ಗಳಷ್ಟು ಇಂಧನವನ್ನು ಕಡಿಮೆ ಬೆಲೆಗೆ ಮಾರಾಟ
ರಷ್ಯಾ-ಉಕ್ರೇನ್ ಹಾಗೂ ಇತರೆ ಅಂಶಗಳಿಂದಾಗಿ ಸದ್ಯ ಜಗತ್ತಿನ ಎಲ್ಲೆಡೆ ಸಾಮಾನು-ಸರಂಜಾಮುಗಳ ಬೆಲೆ ಗಗನಕ್ಕೇರಿರುವುದು ಎಲ್ಲರಿಗೂ ಗೊತ್ತಿದೆ. ಬೆಲೆ ಹೆಚ್ಚಳದ ಈ ಪರಿಣಾಮ ಅಮೆರಿಕದ ಮೇಲೆಯೂ ಉಂಟಾಗಿದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.


ಇದನ್ನೂ ಓದಿ: Viral Marksheet: ಗಣಿತದಲ್ಲಿ ಬರೀ 36 ಅಂಕ! IAS ಆಫೀಸರ್ SSLC ಮಾರ್ಕ್​ ಕಾರ್ಡ್ ವೈರಲ್


ಇಂತಹ ಸಂದರ್ಭದಲ್ಲಿ ಅದೆಷ್ಟೋ ಲಕ್ಷಾನುಗಟ್ಟಲೆ ಜನರು ಈ ಬೆಲೆ ಹೆಚ್ಚಳದಿಂದ ತತ್ತರಿಸಿ ಹೋಗಿದ್ದು ಬದುಕಲು ಸಾಕಷ್ಟು ಕಷ್ಟಪಡುತ್ತಿದ್ದಾರೆ ಎಂಬುದು ಅಷ್ಟೇ ಸತ್ಯ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಜಸ್ವಿಂದರ್ ಸಿಂಗ್ ಎಂಬುವವರು ನಿತ್ಯ ಸಾವಿರ ಗ್ಯಾಲನ್ ಗಳಷ್ಟು ಇಂಧನವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಮೂಲಕ ಆನ್ಲೈನ್ ನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.


ಇವರಿಗಾಗುವ ನಷ್ಟವೆಷ್ಟು?
AZ Family ಎಂಬ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿರುವಂತೆ ಸಿಂಗ್ ಅವರು ತಮ್ಮ ಇಂಧನ ಸರಬರಾಜುದಾರರಿಂದ ಪ್ರತಿ ಗ್ಯಾಲನ್ ಗೆ 5.66 ಡಾಲರ್ ಪಾವತಿಸುತ್ತಿದ್ದು ಆದರೆ ಅದನ್ನೇ ಅವರು ತಮ್ಮ ಸ್ಟೇಶನ್ ನಿಂದ 5.19 ಡಾಲರ್ ಪ್ರತಿ ಗ್ಯಾಲನ್ ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಪ್ರತಿ ಗ್ಯಾಲನ್ ಮೇಲೆ 47 ಸೆಂಟ್ ಗಳಷ್ಟು ನಷ್ಟವಾಗುತ್ತಿದೆ.


ಇದನ್ನೂ ಓದಿ: IIT Entrance Exam ಬರೆದ 80ರ ಹರೆಯದ ಎಂಜಿನಿಯರ್, ಇಳಿವಯಸ್ಸಿನ ಇವರ ಚೈತನ್ಯಕ್ಕೆ ಸಾಟಿ ಯಾರು ಗೊತ್ತಾ?


ಈ ಬಗ್ಗೆ ಸಿಂಗ್ ಅವರು ನಾವು ಇಷ್ಟು ಮಾಡದಿದ್ದರೆ ನಮ್ಮ ಬಹುತೇಕ ಜನರು ನಿದ್ದೆಯನ್ನೂ ಸಹ ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ನಷ್ಟ ಸಾರ್ಥವಾಗಿದೆ ಎಂದು ಹೇಳಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.


ಸ್ಟೋರ್ ನಿಂದಲೂ ಸ್ವಲ್ಪ ಮಟ್ಟಿನ ಆದಾಯಗಳಿಸುವ ದಂಪತಿ
ಈ ಸಂದರ್ಭದಲ್ಲಿ ಸಿಂಗ್ "ಗ್ರಾಹಕರು ಹಾಗೂ ನಮ್ಮ ಸಮುದಾಯದವರಿಗಾಗಿ ಇದೊಂದು ಬ್ರೆಕ್. ಜನರ ಬಳಿ ಸದ್ಯ ಸಾಕಷ್ಟು ಹಣವಿಲ್ಲ. ಅಲ್ಲದೆ, ನನ್ನ ಪೋಷಕರು ನಮ್ಮ ಬಳಿ ಏನಾದರೂ ಇರುವಾಗ ಅದನ್ನು ಮತ್ತೊಬ್ಬರ ಕಷ್ಟ ನಿವಾರಿಸಲು ಬಳಸಬೇಕು ಎಂದು ಕಲಿಸಿದ್ದಾರೆ, ಇದರಿಂದ ಅವರಿಗೆ ಸಹಾಯವಾಗುತ್ತದೆ" ಎಂದು ಹೇಳಿದ್ದಾರಲ್ಲದೆ ಭಗವಂತ ಅವರಿಗೆ ಇನ್ನೊಬ್ಬರಿಗೆ ಸಹಾಯ ಮಾಡುವಂತೆ ಸಶಕ್ತನನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಸಿಂಗ್ ಹಾಗೂ ಅವರ ಹೆಂಡತಿ ಇದರಿಂದ ನಷ್ಟ ಅನುಭವಿಸುತ್ತಿದ್ದರೂ ಇದನ್ನು ಸರಿದೂಗಿಸಿಕೊಳ್ಳಲು ಅವರು ತಮ್ಮದೆ ಆಗಿರುವ ಸ್ಟೋರ್ ನಿಂದಲೂ ಸ್ವಲ್ಪ ಮಟ್ಟಿಗಿನ ಆದಾಯ ಗಳಿಸುತ್ತಿದ್ದಾರೆ.


ಇವರ ಈ ಸಹಾಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಜನರು
ಸ್ಥಳೀಯ ಮಾಧ್ಯಮ ವರದಿ ಮಾಡಿರುವಂತೆ ಸಿಂಗ್ ಅವರು ಈ ರೀತಿ ನಷ್ಟದಲ್ಲಿ ಇಂಧನ ಮಾರುತ್ತಿರುವುದು ಮೊದಲ ಸಲವೇನಲ್ಲ. ಹಿಂದೆ ಮಾರ್ಚ್ ನಲ್ಲಿಯೂ ಸಿಂಗ್ ಅವರು ತಾವು ಖರೀದಿಸಿದ ದರಗಿಂತಲೂ ಹತ್ತು ಸೆಂಟ್ಸ್ ಕಡಿಮೆ ಹಣದಲ್ಲಿಇಂಧನ ಮಾರಾಟ ಮಾಡಿದ್ದರು. ತದನಂತರ ನಿತ್ಯ ಇಂಧನ ಬೆಲೆಗಳಲ್ಲಿ ಹೆಚ್ಚಳವಾದಂತೆಲ್ಲ ಜನರಿಗೆ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಸಿಗುವಂತೆ ಅವರು ಮತ್ತಷ್ಟು ಸೆಂಟ್ ಗಳನ್ನು ಕಡಿತ ಮಾಡಿದರೆನ್ನಲಾಗಿದೆ.


ಅವರ ಈ ನಡತೆಯು ಈಗ ಅವರನ್ನು ಸ್ಥಳೀಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ಜಾಗತಿಕವಲಯದಲ್ಲೂ ಪ್ರಶಂಸೆಗಳಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಮೆಚ್ಚಿ ಅನೇಕರು ಕಾಮೆಂಟ್ ಮಾಡುತ್ತಿದ್ದು ಅವರೊಬ್ಬರು ಸಿಂಗ್ ಬಗ್ಗೆ ಈ ರೀತಿಯ ಪ್ರಶಂಸೆಯ ಕಾಮೆಂಟ್ ಹಾಕಿದ್ದಾರೆ, "ಎಲ್ಲ ನಾಯಕರು ಕ್ಯಾಪ್ ಧರಿಸುವುದಿಲ್ಲ, ಕೆಲವರು ಟರ್ಬನ್ ಹಾಕಿಕೊಳ್ಳುತ್ತಾರೆ".

Published by:Ashwini Prabhu
First published: