ಆಗರ್ಭ ಶ್ರೀಮಂತರು ಅಥವಾ ರಾಜ ಮನೆತನದವರು ಬಡವರನ್ನು ಮದುವೆಯಾಗಿರುವುದನ್ನು ಹಲವು ಸಿನಿಮಾಗಳಲ್ಲಿ ನೋಡಿರಬಹುದು ಹಾಗೂ ಕತೆಗಳಲ್ಲಿ ಕೇಳಿರಬಹುದು. ಅಲ್ಲದೆ, ಬ್ರಿಟನ್ ಪ್ರಿನ್ಸ್ ಹ್ಯಾರಿ(Prince Harry) - ನಟಿ ಮೇಘನ್ನನ್ನು(Meghan) ಮದುವೆಯಾಗಿದ್ದು, ನಂತರ ಮೇಘನ್ಗೆ ರಾಜ ಮನೆತನ ಕಿರುಕುಳ ನೀಡುತ್ತಿದೆ ಎಂಬ ಆರೋಪವಿದ್ದು, ಈಗ ಅವರಿಬ್ಬರೂ ರಾಜ ಮನೆತನವನ್ನು ತೊರೆದು ಅಮೆರಿಕದಲ್ಲಿ ನೆಲೆಸಿರುವುದು ನಿಮಗೆ ಗೊತ್ತೇ ಇದೆ. ಇದೇ ರೀತಿ, ಈಗ ಜಪಾನ್ನ ರಾಜಕುಮಾರಿ ಮಕೊ ತನ್ನ ಸಹಪಾಠಿಯನ್ನು ಮದುವೆಯಾಗಲು ತನ್ನ ರಾಯಲ್ ಸ್ಥಾನಮಾನವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಒಂದು ಮಿಲಿಯನ್ ಡಾಲರ್ ಹಣವನ್ನು ತ್ಯಜಿಸಲಿದ್ದಾರೆ ಎಂದು ಜಪಾನ್ನ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿರುವುದನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಅಲ್ಲದೆ, ಹಲವು ವರ್ಷಗಳಿಂದ ಈ ಮದುವೆ ನಡೆಯಲು ಸಾಕಷ್ಟು ವಿರೋಧ ಕೇಳಿಬಂದಿದ್ದು, ಈಗ ಆ ಮದುವೆಗೆ ಒಪ್ಪಿಗೆ ಸಿಕ್ಕಂತಾಗಿದೆ ಎಂದೂ ವರದಿಯಾಗಿದೆ.
ಜಪಾನ್ನ ಅಂದಿನ ಚಕ್ರವರ್ತಿ ಅಕಿಹಿಟೊ ರವರ 29 ವರ್ಷದ ಮರಿ ಮೊಮ್ಮಗಳಾದ ಮಕೊ ಮತ್ತು ಆಕೆಯ ಕಾಲೇಜಿನ ಸಹಪಾಠಿಯಾಗಿದ್ದ ಕೆಯಿ ಕೊಮುರೊ 2017ರಲ್ಲಿ ತಮ್ಮ ಎಂಗೇಜ್ಮೆಂಟ್ ಅನ್ನು ಘೋಷಿಸಿದ್ದರು. ಆದರೆ ಕೊಮುರೊ ಅವರ ತಾಯಿ ಮತ್ತು ಆಕೆಯ ಮಾಜಿ ಫಿಯಾನ್ಸೆ ನಡುವಿನ ಹಣಕಾಸಿನ ವಿವಾದದ ವರದಿಯ ನಂತರ ಮದುವೆಯನ್ನು ಮುಂದೂಡಲಾಗಿತ್ತು.
ರಾಜಕುಮಾರಿಯು ತನ್ನ ನಿಶ್ಚಿತ ವರನ ಬಗ್ಗೆ ಸಾರ್ವಜನಿಕ ಟೀಕೆಗಳ ನಡುವೆ, ರಾಜಮನೆತನದವರು ಸಾಮಾನ್ಯರನ್ನು ಮದುವೆಯಾಗಲು ತಮ್ಮ ಸ್ಥಾನಮಾನ ಬಿಟ್ಟುಕೊಟ್ಟರೆ, 150 ಮಿಲಿಯನ್ ಯೆನ್ (1.35 ಮಿಲಿಯನ್
ಡಾಲರ್) ವರೆಗಿನ ಹಣವನ್ನು ರಾಜಕುಮಾರಿ ಬಿಟ್ಟುಬಿಡುತ್ತಾರೆ ಎಂದು ಸರ್ಕಾರ ಒಪ್ಪಿಕೊಳ್ಳಲು ಸಿದ್ಧವಾಗಿದೆ ಎಂದು ಸಾರ್ವಜನಿಕ ಬ್ರಾಡ್ಕಾಸ್ಟರ್ ಎನ್ಎಚ್ಕೆ ಮತ್ತು ಇತರರು ಹೇಳಿದರು.
ಈಗ ಮದುವೆಗೆ ಒಪ್ಪಿಗೆ ದೊರೆತಿರುವುದರಿಂದ ಅಕ್ಬೋಬರ್ನಲ್ಲಿ ಮದುವೆಯ ದಿನಾಂಕ ಘೋಷಣೆಯಾಗಬಹುದೆಂದು NHK ಹೇಳಿದೆ.
ಆದರೆ, ಈ ಮಾಹಿತಿ ದೃಢೀಕರಿಸಲು ಇಂಪೀರಿಯಲ್ ಹೌಸ್ಹೋಲ್ಡ್ ಏಜೆನ್ಸಿಯ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯೆ ನೀಡಲು ಲಭ್ಯವಿರಲಿಲ್ಲ.
ಇನ್ನು, ವಿವಾಹ ಹತ್ತಿರವಾಗುವುದನ್ನು ನಿರೀಕ್ಷಿಸಿರುವ ಹಿನ್ನೆಲೆ ಜಪಾನಿನ ಬ್ರಾಡ್ಕ್ಯಾಸ್ಟರ್ ಗಳು ಕೆಯಿ ಕೊಮುರೊರನ್ನು ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನೋಡಿದ್ದಾರೆ. ಆಗ ಅವರು ಜುಟ್ಟು ಧರಿಸಿದ್ದರು. , ಇದು ಕೆಲವು ಜಪಾನಿನ ಟ್ವಿಟ್ಟರ್ ಬಳಕೆದಾರರಲ್ಲಿ ಗದ್ದಲ ಉಂಟುಮಾಡಿತು.
ಅಲ್ಲದೆ, ಜಪಾನ್ ರಾಜಕುಮಾರಿ ಹಾಗೂ ಕೊಮುರೋ ದಂಪತಿ ಯುನೈಟೆಡ್ ಸ್ಟೇಟ್ಸ್ನಲ್ಲೇ ವಾಸಿಸಲು ಯೋಜಿಸಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. ಜಪಾನ್ನಲ್ಲಿ ಪುರುಷರು ಮಾತ್ರ ರಾಜರಾಗುತ್ತಾರೆ. ಈ ಕಾನೂನಿನ ಅಡಿಯಲ್ಲಿ, ಸಾಮ್ರಾಜ್ಯಶಾಹಿ ಕುಟುಂಬದ ಮಹಿಳಾ ಸದಸ್ಯರು ಸಾಮಾನ್ಯರನ್ನು ಮದುವೆಯಾದರೆ ರಾಜ ಮನೆತನವನ್ನು ತೊರೆಯಬೇಕಾಗುತ್ತದೆ ಹಾಗೂ ಆ ಸ್ಥಾನಮಾನವನ್ನೂ ತ್ಯಜಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ