ಸಾಮಾನ್ಯವಾಗಿ ನಮಗೆ ಒಂದು ಹಾಡು ಇಷ್ಟ ಆಯಿತು ಎಂದರೆ ಅದನ್ನು ಹಾಡಿದವರು ಯಾರು ಮತ್ತು ಅದು ಯಾವ ಚಿತ್ರದ್ದು ಅಂತ ಕೇಳುತ್ತೇವೆ ಹೊರತು ಈ ಹಾಡು ಯಾವ ದೇಶದ್ದು ಅಂತ ಕೇಳುವುದಿಲ್ಲ ನೋಡಿ. ಹೌದು. ಕಿವಿಗೆ ಸಂಗೀತ ಇಷ್ಟವಾದರೆ ಸಾಕು ಅಲ್ಲಿ ಯಾವ ದೇಶದ ಹಾಡು ಅನ್ನೋ ಮಾತು ಬರೋದೆ ಇಲ್ಲ ನೋಡಿ. ಈ ಹಿಂದೆ ಸಹ ಶ್ರೀಲಂಕಾದ (Sri Lanka) ಗಾಯಕಿ ಹಾಡಿದ ‘ಮಣಿಕೆ ಮಗೇ ಹಿತೆ’ ಎಂಬ ಹಾಡು ಇಡೀ ಜಗತ್ತಿನಾದ್ಯಂತ ತುಂಬಾನೇ ಹಿಟ್ ಆಗಿತ್ತು ಅಂತ ಹೇಳಬಹುದು. ಈ ಹಿಂದೆ ಸಹ ಶಾರುಖ್ ಖಾನ್ ಅಭಿನಯದ ‘ದಿಲ್ ತೊ ಪಾಗಲ್ ಹೈ’ ಚಿತ್ರದ ಹಾಡೊಂದಕ್ಕೆ ಬೇರೆ ದೇಶದ ಯುವಕರು ಡ್ಯಾನ್ಸ್ (Dance) ಮಾಡಿದ್ದ ವೀಡಿಯೋ ಸಹ ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾನೇ ಹಿಟ್ ಆಗಿತ್ತು. ಈ ಹಾಡು ಮತ್ತು ಸಂಗೀತ ಎಂದರೆನೇ ಹೀಗೆ ನೋಡಿ. ಮನಸ್ಸಿಗೆ ಹಿತ ಅಂತ ಅನ್ನಿಸಿದರೆ ಸಾಕು ಜನರು ಅದನ್ನು ಅರ್ಥವಾಗದೆ ಇದ್ದರೂ ಪದೇ ಪದೇ ಕೇಳಿ ಸೂಪರ್ ಹಿಟ್ (Super Hit) ಮಾಡುತ್ತಾರೆ.
ಒಟ್ಟಿನಲ್ಲಿ ನಮ್ಮ ಭಾರತೀಯ ಹಾಡುಗಳು ಮತ್ತು ಡ್ಯಾನ್ಸ್ ಗಳು ಕಳೆದ ಕೆಲವು ವರ್ಷಗಳಲ್ಲಿ ಇತರ ದೇಶಗಳ ಜನರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ ಅಂತ ಹೇಳಬಹುದು. ವಿವಿಧ ಭಾರತೀಯ ಹಾಡುಗಳಿಗೆ ವಿದೇಶಿಯರು ಹಾಡುವುದನ್ನು ಅಥವಾ ಡ್ಯಾನ್ಸ್ ಮಾಡುವುದನ್ನು ತೋರಿಸುವ ಸಾಮಾಜಿಕ ಮಾಧ್ಯಮದಲ್ಲಿನ ವಿವಿಧ ವೀಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
‘ಡೋಲಾ ರೇ ಡೋಲಾ’ ಹಾಡಿಗೆ ಡ್ಯಾನ್ಸ್ ಮಾಡಿದ ಜಪಾನ್ ಮಹಿಳೆಯರು..
ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.. ಬಾಲಿವುಡ್ ನಟಿಯರಾದ ಐಶ್ವರ್ಯಾ ರೈ ಮತ್ತು ಮಾಧುರಿ ದೀಕ್ಷಿತ್ ಅವರ ಮೇಲೆ ಚಿತ್ರೀಕರಿಸಲಾದ ‘ಡೋಲಾ ರೇ ಡೋಲಾ’ ಹಾಡಿಗೆ ಜಪಾನ್ ನ ಇಬ್ಬರು ಮಹಿಳೆಯರು ನಟಿಯರಷ್ಟೇ ಚೆನ್ನಾಗಿ ಡ್ಯಾನ್ಸ್ ಮಾಡಿರುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು.
ಇದನ್ನೂ ಓದಿ: ಪ್ರಪಂಚದಲ್ಲಿ ಎಲ್ಲಿಯೂ ಕಾಣ ಸಿಗದ ಹೂವುಗಳನ್ನು ನೀವಿಲ್ಲಿ ನೋಡಬಹುದು, ಈ ತಿಂಗಳು ಹೋಗದಿದ್ರೆ ಮಿಸ್ ಮಾಡ್ಕೋಳ್ತೀರಾ
ಟೋಕಿಯೊದ ಇನ್‌ಸ್ಟಾಗ್ರಾಮ್ ಬಳಕೆದಾರ ಮತ್ತು ಕಂಟೆಂಟ್ ರೈಟರ್ ಮಾಯೊ ಜಪಾನ್ ತನ್ನ ವೈಯಕ್ತಿಕ ಪುಟದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. "ಜಪಾನ್ ನ ಡೋಲಾ ರೇ ಡೋಲಾ" ಎಂದು ಅವರು ಬರೆದು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಈ ಡ್ಯಾನ್ಸ್ ಕ್ಲಿಪ್ ಸಿಕ್ಕಾಪಟ್ಟೆ ವೈರಲ್ ಆಗಿದೆಯಂತೆ..
ಈ ವಿಡಿಯೋವನ್ನು ಕೆಲವು ತಿಂಗಳ ಹಿಂದೆ ಶೇರ್ ಮಾಡಲಾಗಿತ್ತು. ಇದನ್ನು ಪೋಸ್ಟ್ ಮಾಡಿದಾಗಿನಿಂದ, ಕ್ಲಿಪ್ ಸುಮಾರು 2.4 ಲಕ್ಷ ವೀಕ್ಷಣೆಗಳನ್ನು ಗಳಿಸಿದ್ದು, 23,000ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಇದು ಪಡೆದಿದೆ ಅಂತ ಹೇಳಬಹುದು. ಈ ವಿಡಿಯೋಗೆ ಪ್ರತಿಕ್ರಿಯಿಸುವಾಗ ಜನರು ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ಅವರು ಧರಿಸಿರುವ ಸೀರೆಯ ಬಗ್ಗೆಯೂ ಮಾತನಾಡಿದರು ಮತ್ತು ಅವುಗಳ ಮೇಲೆ ಕೆಲವು ಬಂಗಾಳಿ ಪದಗಳನ್ನು ಬರೆದರು.
ಡ್ಯಾನ್ಸ್ ನೋಡಿದ ನೆಟ್ಟಿಗರು ಹೇಳಿದ್ದೇನು ನೋಡಿ..
"ವಾವ್, ಅದ್ಭುತ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರು ವ್ಯಕ್ತಪಡಿಸಿದ್ದಾರೆ. "ವಾಹ್! ಎಂತಹ ನೃತ್ಯ ಪ್ರದರ್ಶನ" ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ. "ನೀವು ಧರಿಸಿರುವ ಉಡುಪು ನನಗೆ ಇಷ್ಟವಾಯಿತು. ಅದ್ಭುತವಾಗಿದೆ" ಎಂದು ಮೂರನೇ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ. "ನೀವು ತುಂಬಾ ಮುದ್ದಾಗಿದ್ದೀರಾ ಮತ್ತು ಡೋಲಾ ರೇ ಡೋಲಾ ರಾಗಕ್ಕೆ ತುಂಬಾ ಸೊಗಸಾಗಿ ಡ್ಯಾನ್ಸ್ ಮಾಡಿದ್ದೀರಿ" ಎಂದು ನಾಲ್ಕನೆಯವರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ