ಜಪಾನಿನ ಶಾಲೆಗಳಲ್ಲಿ (Japanese Schools) ದಿನಕ್ಕೊಂದು ನಿಯಮಗಳನ್ನು ಜಾರಿಗೆ ತರುತ್ತಾರೆ. ಬಿಳಿ ಒಳ ಉಡುಪು ನೀತಿಯ ನಂತರ ಈಗ ಹೊಸದಾಗಿ ಜಾರಿಗೆ ತಂದ ನಿಯಮವು ಹೇರ್ಸ್ಟೈಲ್ಗೆ (Hairstyle) ಸಂಬಂಧಿಸಿದೆ. ಹೆಣ್ಣು ಮಕ್ಕಳ ಪೋನಿಟೇಲ್ ಅಥವಾ ಜುಟ್ಟಿನ ಕೇಶವಿನ್ಯಾಸವನ್ನು ಜಪಾನಿನ ಶಾಲೆಗಳಲ್ಲಿ ಬ್ಯಾನ್ (Ban) ಮಾಡಿ ಆದೇಶ ಹೊರಡಿಸಲಾಗಿದೆ. ಹೆಣ್ಣು ಮಕ್ಕಳು (Girls) ಹಾಕಿಕೊಳ್ಳುವ ಜಡೆ ಪುರುಷರನ್ನು 'ಲೈಂಗಿಕವಾಗಿ ಪ್ರಚೋದಿಸುತ್ತದೆ' ಎಂಬ ಕಾರಣ ನೀಡಿ ಜಪಾನ್ ಶಾಲೆಗಳಲ್ಲಿ ಈ ಕೇಶವಿನ್ಯಾಸವನ್ನು ನಿಷೇಧಿಸಲಾಗಿದೆ. ಹೌದು, ಪೋನಿಟೇಲ್ ಎನ್ನುವುದು ಒಂದು ಕೇಶವಿನ್ಯಾಸವಾಗಿದ್ದು, ಅದರಲ್ಲಿ ಎಲ್ಲಾ ಕೂದಲನ್ನು ಎಳೆದು, ಕ್ಲಿಪ್ ಅಥವಾ ಇತರ ರೀತಿಯ ಆಕ್ಸೆಸರಿಯೊಂದಿಗೆ ತಲೆಯ ಹಿಂಭಾಗದ ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ. ಇದು. ಕುದುರೆಯ ಬಾಲದಂತೆ ಕಾಣುವುದರಿಂದ ಇದನ್ನು ಪೋನಿಟೇಲ್ (Ponytail) ಹೆಸರಿನಿಂದ ಕರೆಯಲಾಗುತ್ತದೆ.
ಜುಟ್ಟು ಹಾಕಿ ಕೊಳ್ಳುವುದು ನಿಷೇಧ:
ಜಪಾನಿನ ಶಾಲೆಗಳ ಮಹಿಳಾ ವಿದ್ಯಾರ್ಥಿನಿಯರು ಹಾಕಿಕೊಳ್ಳುವ ಜುಟ್ಟು ಕೇಶವಿನ್ಯಾಸ ಶಿಕ್ಷಣ ಸಂಸ್ಥೆಗಳಲ್ಲಿ ಪುರುಷರನ್ನು ಲೈಂಗಿಕವಾಗಿ ಪ್ರಚೋದಿಸುವ ಸಾಧ್ಯತೆಯಿದೆ ಎಂದು ಹೇಳಿ ಈ ಹೇರ್ ಸ್ಟೈಲ್ ಬ್ಯಾನ್ ಮಾಡುವ ಆದೇಶ ನೀಡಿದೆ. ಜಪಾನಿನ ಶಾಲೆಯಲ್ಲಿ ಇಂತಹ ಹತ್ತಾರು ಕಠಿಣ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ.
ಒಂದೊಂದು ದೇಶಗಳಲ್ಲಿ ಶಿಕ್ಷಣವು ಒಂದೊಂದು ರೀತಿಯಲ್ಲಿರುವುದು. ಜಪಾನ್ನಲ್ಲಿ ಶಿಕ್ಷಣದ ಜೊತೆ ವಿದ್ಯಾರ್ಥಿಗಳಿಗೆ ಕೆಲವು ಕಠಿಣ ಕ್ರಮಗಳು ಸಹ ಜಾರಿಯಲ್ಲಿವೆ. ಕಳೆದ ವರ್ಷ ಜಪಾನಿನಲ್ಲಿ ಸಮವಸ್ತ್ರದ ಒಳಗೆ ಕಡ್ಡಾಯವಾಗಿ ಬಿಳಿ ಒಳ ಉಡುಪನ್ನು ಧರಿಸಬೇಕೆಂದು ವಿವಾದಾತ್ಮಕ ರೂಲ್ಸ್ ಜಾರಿ ಮಾಡಿ ಸುದ್ದಿಯಲ್ಲಿತ್ತು. ಬಳಿಕ ಇದೀಗ ಜುಟ್ಟನ್ನು ಬ್ಯಾನ್ ಮಾಡಿದೆ.
ಇದನ್ನೂ ಓದಿ: ತೆಳ್ಳಗೆ ಬೆಳ್ಳಗೆ ಇದ್ದಾಳೆ...ಜಪಾನ್ ಹುಡುಗಿಯರ ಸೌಂದರ್ಯದ ಗುಟ್ಟೇನು ಗೊತ್ತಾ?
2020ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ದೇಶದ ಫುಕುವೋಕಾ ಪ್ರಾಂತ್ಯದ 10 ಶಾಲೆಗಳಲ್ಲಿ ಒಂದು ಶಾಲೆಯಲ್ಲಿ ಪೋನಿಟೇಲ್ ಅನ್ನು ನಿಷೇಧಿಸಿದೆ. ಹುಡುಗರು ಹುಡುಗಿಯರನ್ನು ನೋಡುವ ಮೂಲಕ ಚಿಂತಿತರಾಗಿದ್ದಾರೆ. ಇದು ಬಿಳಿ ಒಳ ಉಡುಪುಗಳ ಬಣ್ಣದ ನಿಯಮವನ್ನು ಎತ್ತಿಹಿಡಿಯುವ ಹಿಂದಿನ ತಾರ್ಕಿಕತೆಯನ್ನು ಹೋಲುತ್ತದೆ. ನಾನು ಯಾವಾಗಲೂ ಈ ನಿಯಮಗಳನ್ನು ಟೀಕಿಸಿದ್ದೇನೆ, ಆದರೆ ಅಂತಹ ಟೀಕೆಗಳ ಕೊರತೆಯಿರುವುದರಿಂದ ಮತ್ತು ಅದು ತುಂಬಾ ಸಾಮಾನ್ಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅವುಗಳನ್ನು ಸ್ವೀಕರಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ ಎಂದು ಮಾಧ್ಯಮಿಕ ಶಾಲೆಯ ಮಾಜಿ ಶಿಕ್ಷಕರು ತಿಳಿಸಿದ್ದಾರೆ.
ಒಳ ಉಡುಪುಗಳ ಬಣ್ಣ ತಪಾಸಣೆ:
ಸಾಗಾ ಪ್ರಿಫೆಕ್ಚರ್ ಬೋರ್ಡ್ ಆಫ್ ಎಜುಕೇಶನ್ 51 ಆಡಳಿತ ಮಧ್ಯಮ ಮತ್ತು ಪ್ರೌಢಶಾಲೆಗಳಲ್ಲಿ ಪ್ರಶ್ನಾರ್ಹ ನಿಯಮಗಳ ಅಧ್ಯಯನವನ್ನು ನಡೆಸಿತು. ಅವುಗಳಲ್ಲಿ 14 ಶಾಲೆಗಳು ಬಿಳಿ ಒಳ ಉಡುಪುಗಳ ಅಗತ್ಯವನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ನಂತರ ಮಂಡಳಿಯು ನಿಯಮವನ್ನು ರದ್ದುಗೊಳಿಸಲು ನಿರ್ಧರಿಸಿತು. ಕಳೆದ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಒಳ ಉಡುಪುಗಳ ಬಣ್ಣ ತಪಾಸಣೆ ನಡೆಸುತ್ತಿಲ್ಲ.
ಜಪಾನಿನ ಶಾಲೆಯಲ್ಲಿನ ಕೆಲವು ರೂಲ್ಸ್ಗಳು:
ಭಾರತದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕೆಲಸ ಮಾಡಿಸಿದರೆ ದೊಡ್ಡ ವಿವಾದವಾಗುವುದು. ಆದರೆ ಜಪಾನ್ನಲ್ಲಿ ವಿದ್ಯಾರ್ಥಿಗಳೇ ತರಗತಿ ಕೋಣೆ, ಶೌಚಾಲಯ ಮತ್ತು ಸಂಪೂರ್ಣ ಶಾಲೆಯ ಸ್ವಚ್ಛತೆ ನೋಡಿಕೊಳ್ಳುವರು. ಧೂಳು ತೆಗೆಯುವುದು, ಗುಡಿಸುವುದು, ಒರೆಸುವುದು ಮತ್ತು ಕರಿಹಲಗೆ ಸ್ವಚ್ಛಗೊಳಿಸುವುದು ಅವರ ಜವಾಬ್ದಾರಿ. ವಿದ್ಯಾರ್ಥಿಗಳು ಡೇಟಿಂಗ್ ಅಥವಾ ಮುಕ್ತ ಸಂಬಂಧದಲ್ಲಿ ತೊಡಗಿಕೊಳ್ಳುವಂತಿಲ್ಲ. ವಿದ್ಯಾರ್ಥಿಗಳು ತಮ್ಮ ಯೂನಿಫಾರಂನ್ನು ಯಾವುದೇ ವಿಧದಿಂದಲೂ ವಿರೂಪಗೊಳಿಸುವಂತಿಲ್ಲ. ಯೂನಿಫಾರಂಗೆ ಯಾವುದೇ ರೀತಿಯ ಆಭರಣ ಸಿಕ್ಕಿಸಿ ಅದನ್ನು ಧರಿಸುವಂತಿಲ್ಲ.
ಇದನ್ನೂ ಓದಿ: ಗೋರಿ ಮೇಲೆ QR code, ಒಳಗಿರೋದ್ಯಾರು ಸ್ಕ್ಯಾನ್ ಮಾಡಿ ತಿಳ್ಕೊಳಿ.. ಹೈಟೆಕ್ ಅಂದ್ರೆ ಇದು!
ಮನೆಯಿಂದ ವಿದ್ಯಾರ್ಥಿಗಳು ಆಹಾರದ ಬಾಕ್ಸ್ ತರುವಂತಿಲ್ಲ. ಶಾಲೆಯ ಕ್ಯಾಂಟೀನಿನಲ್ಲಿ ಸಿಗುವ ಆಹಾರ ಸೇವಿಸಬೇಕು ಮತ್ತು ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲೇ ನೆಲಹಾಸು ಹಾಸಿ ಅದರ ಮೇಲೆ ಕುಳಿತು ತಿನ್ನಬೇಕು. ಹಿರಿಯರೊಂದಿಗೆ ಯಾವ ರೀತಿ ವರ್ತಿಸಬೇಕು ಎನ್ನುವ ಶಿಕ್ಷಣ ಸಿಗುವುದು ಶಾಲೆಗಳಲ್ಲಿ. ಶಿಕ್ಷಕರನ್ನು ತರಗತಿಗೆ ಮೊದಲು ಮತ್ತು ಬಳಿಕ ಹೇಗೆ ಸ್ವಾಗತಿಸಬೇಕು ಎನ್ನುವುದನ್ನು ಕಲಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ