Princess Mako: ಸಾಮಾನ್ಯನನ್ನು ಮದುವೆಯಾಗಲು, ಸುಮಾರು 8 ಕೋಟಿಗೂ ಹೆಚ್ಚು ಹಣ ತಿರಸ್ಕರಿಸಿದ ಜಪಾನ್ ರಾಜಕುಮಾರಿ

Japanese Princess Mako: ಸಾರ್ವಜನಿಕ ವಿವಾದಗಳು ಮತ್ತು ಮದುವೆಯ ವಿಳಂಬದ ಬಳಿಕ, ಇದೀಗ ಜಪಾನಿನ ರಾಜಕುಮಾರಿ ಮಾಕೋ ಮದುವೆಯಾಗಲು ನಿರ್ಧರಿಸಿದ್ದು , ಆ ಬಳಿಕ ಅಮೆರಿಕಕ್ಕೆ ಹಾರಲಿದ್ದಾರೆ ಎಂದು ವರದಿಗಳು ತಿಳಿಸಿವೆ.

Princess Mako

Princess Mako

  • Share this:

Princess Mako: ನಿಜವಾದ ಪ್ರೀತಿಯ ಹಾದಿ ಎಂದಿಗೂ ಸುಗಮವಾಗಿರುವುದಿಲ್ಲ. ಸಾಮಾನ್ಯ ಪ್ರಜೆಯೊಬ್ಬರನ್ನು ಇಷ್ಟಪಟ್ಟಿರುವ ಜಪಾನಿ ರಾಜಕುಮಾರಿ ಮಾಕೋ ಕಥೆಯೂ ಇದೇ ಆಗಿತ್ತು. ಆದರೆ, ತನ್ನ ಮದುವೆಗೆ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು, ಪ್ರಿಯತಮನನ್ನು ವರಿಸಲು ಸಜ್ಜಾಗಿದ್ದಾರೆ ಮಾಕೋ. ಸಾರ್ವಜನಿಕ ವಿವಾದಗಳು ಮತ್ತು ಮದುವೆಯ ವಿಳಂಬದ ಬಳಿಕ, ಇದೀಗ ಜಪಾನಿನ ರಾಜಕುಮಾರಿ ಮಾಕೋ ಮದುವೆಯಾಗಲು ನಿರ್ಧರಿಸಿದ್ದು , ಆ ಬಳಿಕ ಅಮೆರಿಕಕ್ಕೆ ಹಾರಲಿದ್ದಾರೆ ಎಂದು ವರದಿಗಳು ತಿಳಿಸಿವೆ.


ಜಪಾನಿನ ಯುವರಾಜನ ಮಗಳು ಮತ್ತು ಮಹಾರಾಜ ನರುಹಿಟೋ ಸೋದರ ಸೊಸೆ ಮೈಕೋ, ತನ್ನ ಪ್ರಿಯತಮ ಕೇ ಕೋಮುರೋರನ್ನು ಮದುವೆಯಾಗುವ ಯೋಜನೆಯನ್ನು ಇಷ್ಟು ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದಾರೆ. ಇದೀಗ ಆ ಜೋಡಿ ಯಾವುದೇ ಸಾಂಪ್ರದಾಯಿಕ ವಿಧಿ ವಿಧಾನಗಳು ಇಲ್ಲದೆ ಮದುವೆಯಾಗಲು ನಿರ್ಧರಿಸಿದ್ದು, ಸಾಮಾನ್ಯವಾಗಿ ರಾಜ ಕುಟುಂಬದ ಹೊರಗಿನವರನ್ನು ಮದುವೆಯಾಗುವ ರಾಜ ಕುಟುಂಬದ ಸ್ತ್ರೀಯರಿಗೆ ನೀಡಲಾಗುವ ಧನವನ್ನೂ ನಿರಾಕರಿಸಿದ್ದಾರೆ. ಜಪಾನಿನ ಸಾಮ್ರಾಜ್ಯಶಾಹಿ ಉತ್ತರಾಧಿಕಾರದ ನಿಯಮಗಳ ಪ್ರಕಾರ, 29 ವರ್ಷದ ಮಾಕೋ, ಸಾಮಾನ್ಯನನ್ನು ಮದುವೆಯಾದ ಬಳಿಕ ತನ್ನ ಪಟ್ಟ ಕಳೆದುಕೊಳ್ಳುತ್ತಾಳೆ.


ದೆಹಲಿಯಲ್ಲಿ ನಯಾಗರಾ ಫಾಲ್ಸ್‌! ಫ್ಲೈಓವರ್ ಕೆಳಗೆ ಮಳೆ ನೀರು ಹರಿಯುತ್ತಿರುವ ವಿಡಿಯೋ ವೈರಲ್

ಆದರೆ, ಕುಮುರೋ ತನ್ನ ತಾಯಿಯು ಹಿಂದೆ ನಿಶ್ವಯವಾಗಿದ್ದ ವಧುವಿನಿಂದ ಹಣವನ್ನು ಸಾಲ ಪಡೆದಿದ್ದು, ಅದನ್ನು ಮರು ಪಾವತಿಸಲು ವಿಫಲರಾಗಿರುವ ಆರೋಪದ ಬಗ್ಗೆ ಇನ್ನೂ ತನಿಖೆ ಎದುರಿಸುತ್ತಿದ್ದಾರೆ. ಈ ಕುರಿತು ಟ್ಯಾಬ್ಲಾಯ್ಡ್ ಒಂದು ವರದಿ ಮಾಡಿದ ಬಳಿಕ, ದೇಶದಲ್ಲಿ ಈ ಕುರಿತು ಕೋಲಾಹಲ ಎದ್ದಿತ್ತು. ಹಾಗಾಗಿ ಈ ಜೋಡಿ ಮದುವೆಯನ್ನು ಮುಂದೂಡಿತು, ಮತ್ತು ಕೊಮುರೋ ಅಮೆರಿಕಾಗೆ ಹೋಗಿ ಲಾ ಸ್ಕೂಲ್ ಸೇರಿಕೊಂಡರು. ಅದು ನಕಾರಾತ್ಮಕ ಗಮನವನ್ನು ತಗ್ಗಿಸುವ ಪ್ರಯತ್ನವಾಗಿ ಕಂಡು ಬಂತು.


ಯುವರಾಜ ಆಕಿಶಿನೋ ಕಳೆದ ವರ್ಷ, ತಾನು ಮಗಳ ಮದುವೆಯನ್ನು ಬೆಂಬಲಿಸುತ್ತೇನೆ , ಆದರೆ ಅವಳು ಜನತೆಯ “ವಿಶ್ವಾಸ” ಪಡೆಯಬೇಕಾದ ಅಗತ್ಯವಿದೆ ಎಂದು ಹೇಳಿದ್ದರು.




ಜಪಾನಿ ರಾಜಕುಮಾರಿ ಮಾಕೋ

ಆದರೆ ಈ ಸಮಸ್ಯೆ ಬಗೆಹರಿಸಲು ರಾಜಕುಮಾರಿ ಮಾಕೋ ಬೇರೆಯೇ ದಾರಿ ಆರಿಸಿಕೊಂಡಿದ್ದಾರೆ. ಆದೇನೆಂದರೆ, ರಾಜಮನೆತನದ ಮದುವೆ ಪದ್ಧತಿ ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳು ಇಲ್ಲದೆ ಮದುವೆಯಾಗಲು ನಿರ್ಧರಿಸಿದ್ದು, ಸಾಮಾನ್ಯವಾಗಿ ರಾಜ ಕುಟುಂಬದ ಹೊರಗಿನವರನ್ನು ಮದುವೆಯಾಗುವ ರಾಜ ಕುಟುಂಬದ ಸ್ತ್ರೀಯರಿಗೆ ರಾಜಮನೆತನದಿಂದ ನೀಡಲಾಗುವ ಧನವನ್ನು ಕೂಡ ನಿರಾಕರಿಸಿದ್ದಾರೆ. ಆ ಧನದ ಮೊತ್ತ ಎಷ್ಟು ಎಂಬುವುದು ನಿಖರವಾಗಿ ತಿಳಿದು ಬಂದಿಲ್ಲ, ಆದರೆ ಕೆಲವು ವರದಿಗಳ ಪ್ರಕಾರ 1.2 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.


ಕತ್ತರಿ ಬದಲು ಹಲ್ಲಿನಿಂದ ರಿಬ್ಬನ್ ಕತ್ತರಿಸಿದ ಮಂತ್ರಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

ಆಕೆ ಮದುವೆಯ ನಂತರ ಅಮೆರಿಕಕ್ಕೆ ಹೋಗಿ ನೆಲೆಸಲು ನಿರ್ಧರಿಸಿದ್ದಾರೆ. ಮಾಕೋ ಮದುವೆಯ ಯೋಜನೆಗಳ ಕುರಿತು ಯಾವುದೇ ಅಧಿಕೃತ ಹೇಳಿಕೆ ಪ್ರಕಟಿಸಲಿದ್ದರೂ, ಮಾಧ್ಯಮಗಳು ಈ ಕುರಿತು ವರದಿ ಮಾಡಿರುವುದರಿಂದ ಸಾಮಾಜಿಕ ಮಾಧ್ಯಮಗಳನ್ನು ಹಲವಾರು ರೀತಿಯ ಪರ ವಿರೋಧ ಅಭಿಪ್ರಾಯಗಳು ಹರಿದು ಬರುತ್ತಿವೆ. ಪ್ರೀತಿಗಾಗಿ ಎಲ್ಲವನ್ನು ತ್ಯಜಿಸಲು ಸಿದ್ಧವಾಗಿರುವ ಮಾಕೋ ದೃಢ ನಿರ್ಧಾರಕ್ಕೆ ಬಹಳಷ್ಟು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.


Princess Mako, Japan, Kei Komuro, ರಾಜಕುಮಾರಿ ಮಾಕೋ,  ಜಪಾನ್, ಕೇ ಕೊಮುರೋ


First published: