Viral Post: ನಾಯಿಯಂತೆ ಕಾಣಲು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಈ ವ್ಯಕ್ತಿ!

ಕೆಲವರು ಎಂದಿಗೂ ನನಸಾಗದ ಅಲೌಕಿಕ ಕನಸು ಕಂಡರೆ, ಇನ್ನು ಕೆಲವು ಭೂಪರು ಅನ್ಯರ ಕಲ್ಪನೆಗೂ ಮೀರಿದ ಚಿತ್ರ-ವಿಚಿತ್ರ ಕನಸು ಕಾಣುತ್ತಾರೆ. ಜಪಾನಿನ ವ್ಯಕ್ತಿಯೊಬ್ಬ, ಇದೇ ರೀತಿ ಯಾರೂ ಊಹಿಸದ ವಿಚಿತ್ರ ಕನಸೊಂದನ್ನು ಕಂಡು, ಅದನ್ನು ನನಸಾಗಿಸಿಕೊಂಡಿದ್ದಾನೆ.

ನಾಯಿಯಂತೆ ಕಾಣುವ ಆಸೆಯನ್ನು ಈಡೇರಿಸಿಕೊಂಡ ವ್ಯಕ್ತಿ

ನಾಯಿಯಂತೆ ಕಾಣುವ ಆಸೆಯನ್ನು ಈಡೇರಿಸಿಕೊಂಡ ವ್ಯಕ್ತಿ

  • Share this:
ಪ್ರತಿಯೊಬ್ಬ ಮನುಷ್ಯನಿಗೂ (Man) ಒಂದಲ್ಲ ಒಂದು ಕನಸು (Dream) ಇದ್ದೇ ಇರುತ್ತದೆ. ಕೆಲವರು ತಮ್ಮ ಪರಿಸ್ಥಿತಿಗೆ (Condition) ಅನುಗುಣವಾಗಿ ಅಥವಾ ಒಂದು ಮಿತಿಯಲ್ಲಿ ಕನಸು ಕಂಡರೆ, ಇನ್ನು ಕೆಲವರು ತಮ್ಮ ಮಿತಿ ಮೀರಿ ಕನಸು ಕಾಣುತ್ತಾರೆ (Dreaming beyond limits). ಮತ್ತೆ ಕೆಲವರು ಎಂದಿಗೂ ನನಸಾಗದ ಅಲೌಕಿಕ ಕನಸು (A supernatural dream come true) ಕಂಡರೆ, ಇನ್ನು ಕೆಲವು ಭೂಪರು ಅನ್ಯರ ಕಲ್ಪನೆಗೂ ಮೀರಿದ ಚಿತ್ರ-ವಿಚಿತ್ರ ಕನಸು (A strange dream) ಕಾಣುತ್ತಾರೆ. ಜಪಾನಿನ (Japan) ವ್ಯಕ್ತಿಯೊಬ್ಬ, ಇದೇ ರೀತಿ ಯಾರೂ ಊಹಿಸದ ವಿಚಿತ್ರ ಕನಸೊಂದನ್ನು ಕಂಡು, ಅದನ್ನು ನನಸಾಗಿಸಿಕೊಂಡಿದ್ದಾನೆ.

ನಾಯಿಯಂತೆ ಕಾಣುವ ಕನಸು
ಆತನ ಈ ಹುಚ್ಚಾಟ ಕಂಡು ಜನರು ದಂಗಾಗಿದ್ದಾರೆ. ಅಷ್ಟಕ್ಕೂ ಅವನೇನು ಮಾಡಿದ್ದಾನೆ? ಆ ವಿಚಿತ್ರ ಕನಸ್ಯಾವುದು ಅಂತೀರಾ? ಅವನು ಜೀವಮಾನವಿಡೀ ಕಂಡ ಕನಸು ಒಂದೇ, ಅದು ನಾಯಿಯಂತೆ ಕಾಣುವುದು! ಸಿನಿಮಾ ತಾರೆಯರಂತೆ ಕಾಣಬೇಕು, ನೆಚ್ಚಿನ ಕ್ರೀಡಾ ತಾರೆಯನ್ನು ಹೋಲಬೇಕು ಎಂಬ ಕನಸನ್ನು ಕಾಣುವವರು ಜಗತ್ತಿನ ಯಾವ ಮೂಲೆಗೆ ಹೋದರೂ ಕಾಣಸಿಗುತ್ತಾರೆ.

ಇದನ್ನೂ ಓದಿ:   Viral Video: ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ಕುರ್ಚಿ ಮೇಲೆ ಮಲಗಿರುವುದು ಮನುಷ್ಯನಲ್ಲ! ಇದು ತುಂಟ ನಾಯಿಯ ದರ್ಬಾರ್

ಆದರೆ ಪ್ರಾಣಿಯಂತೆ ಕಾಣುವ ಕನಸು ಹೊತ್ತವರೂ ಇದ್ದಾರೆಯೇ ಎಂದು ಅಚ್ಚರಿ ಪಡುತ್ತಿದ್ದೀರಾ? ವಿಚಿತ್ರವಾದರೂ, ಇದು ನಿಜ. ಟೋಕೋ ಎಂಬ ವ್ಯಕ್ತಿ, ನಾಯಿಯಂತೆ ಕಾಣುವ ಕನಸು ಕಂಡು, ಅದನ್ನು ನನಸಾಗಿಸಿಕೊಂಡ ಫೋಟೋಗಳನ್ನು ಟೋಕೋ ಈವಿ ಎಂಬ ಹೆಸರಿನ ತನ್ನ ಟ್ವಿಟ್ಟರ್ ಖಾತೆಯಲ್ಲಿ, ಸ್ವತಃ ಪೋಸ್ಟ್ ಮಾಡಿದ್ದಾರೆ.

ನಾಯಿಯಂತೆ ಕಾಣುವ ಆಸೆಯನ್ನು ಈಡೇರಿಸಿಕೊಂಡ ವ್ಯಕ್ತಿ
ವ್ಯಕ್ತಿಯೊಬ್ಬ “ಕೋಲಿ” ತಳಿಯ ನಾಯಿಯಾಗಿ ರೂಪಾಂತರಗೊಂಡಿರುವ ಆ ಪೋಟೋಗಳನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ಅಸಲಿ ನಕಲಿಗಳ ವ್ಯತ್ಯಾಸವೇ ತಿಳಿಯದಷ್ಟು ಸಹಜವಾಗಿದೆ ಆ ರೂಪಾಂತರ. ಆ ವ್ಯಕ್ತಿಗೆ ನಾಯಿಯಂತೆ ಕಾಣುವ ಆಸೆಯನ್ನು ಈಡೇರಿಸಿಕೊಳ್ಳಲು ಸಹಾಯ ಮಾಡಿದ್ದು ಜೆಪ್ಪೆಟ್ ಎಂಬ ವೃತ್ತಿಪರ ಏಜೆನ್ಸಿ.



ಜಪಾನಿನ ಸ್ಥಳೀಯ ಮಾಧ್ಯಮವೊಂದರ ಪ್ರಕಾರ, ಜೆಪ್ಪೆಟ್ ಏಜನ್ಸಿ, ಸಿನಿಮಾಗಳು, ಜಾಹೀರಾತುಗಳು ಮತ್ತು ಮನರಂಜನಾ ಉದ್ದೇಶಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಶಿಲ್ಪಗಳು ಮತ್ತು ಪೋಷಾಕುಗಳನ್ನು ಒದಗಿಸುತ್ತದೆ. ಟಿವಿಗಳನ್ನು ಕಾಣಸಿಗುವ ಮತ್ತು ಜಪಾನಿನ ಜನಪ್ರಿಯ ಮ್ಯಾಸ್ಕಾಟ್ ಪಾತ್ರಗಳ ಪೋಷಾಕುಗಳನ್ನು ಕೂಡ ಈ ಸಂಸ್ಥೆ ಉತ್ಪಾದಿಸುತ್ತದೆ.

12 ಲಕ್ಷಕ್ಕೂ ಅಧಿಕ ಖರ್ಚು
ಅಷ್ಟಕ್ಕೂ ಆ ಪುಣ್ಯಾತ್ಮ , ನಾಯಿಯಂತೆ ಕಾಣುವ ಬಯಕೆಯನ್ನು ಈಡೇರಿಸಲು ಖರ್ಚು ಮಾಡಿದ ಹಣವೆಷ್ಟು ಗೊತ್ತೇ? ಬರೋಬ್ಬರಿ 2 ಮಿಲಿಯನ್ ಯೆನ್ (ಸುಮಾರು 12 ಲಕ್ಷಕ್ಕೂ ಅಧಿಕ) ! ‘ಕೋಲಿ’ ತಳಿಯ ನಾಯಿಯ ಕಾಸ್ಟ್ಯೂಮ್ ಅನ್ನು ತಯಾರಿಸಲು ಆ ಸಂಸ್ಥೆಗೆ 40 ದಿನಗಳು ಬೇಕಾಯಿತಂತೆ.

ನಾಲ್ಕು ಕಾಲಿನ ಮುದ್ದಾದ ಪ್ರಾಣಿಗಳು ತುಂಬಾ ಇಷ್ಟ
ನಾಯಿಯಂತೆ ಕಾಣುವ ಕನಸೇನೋ ಸರಿ, ಆದರೆ ಅದಕ್ಕಾಗಿ ‘ಕೋಲಿ’ ತಳಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ? ಎಂದು ಮಾಧ್ಯಮವೊಂದು ಪ್ರಶ್ನಿಸಿದಾಗ, ಟೋಕೋ, “ನಾನು ಕೋಲಿಯನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂದರೆ, ಆ ಪೋಷಾಕನ್ನು ಹಾಕಿಕೊಂಡಾಗ ಅದು ಸಹಜವಾಗಿ ಕಾಣುತ್ತದೆ. ನನಗೆ ನಾಲ್ಕು ಕಾಲಿನ ಪ್ರಾಣಿಗಳು, ಮುಖ್ಯವಾಗಿ ಮುದ್ದಾದ ಪ್ರಾಣಿಗಳು ತುಂಬಾ ಇಷ್ಟ. ಹಾಗಾಗಿ ನನಗಿಷ್ಟದ ದೊಡ್ಡ ಪ್ರಾಣಿಯನ್ನು ಆಯ್ಕೆ ಮಾಡಿಕೊಳ್ಳುವುದು ಚೆನ್ನಾಗಿರುತ್ತದೆ ಎಂದು ಆಲೋಚಿಸಿದೆ. ಆದ್ದರಿಂದ ನಾಯಿಯನ್ನು ಆರಿಸಿಕೊಂಡೆ. ಉದ್ದ ಕೂದಲಿನ ನಾಯಿಗಳ ಪೋಷಾಕಿನೊಳಗೆ ಆರಾಮವಾಗಿ ಮುಚ್ಚಿಕೊಳ್ಳಬಹುದು. ಅದಕ್ಕೆ ನನ್ನ ನೆಚ್ಚಿನ ‘ಕೋಲಿ’ ತಳಿಯ ನಾಯಿಯ ಪೋಷಾಕು ತಯಾರಿಸಲು ಹೇಳಿದೆ” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ:  Weird Job: ಕೆಲಸ ಖಾಲಿ ಇದೆ! ವಾರಕ್ಕೆ 5 ದಿನ ನಾಯಿ ಆಹಾರ ಸೇವಿಸಿದ್ರೆ 5 ಲಕ್ಷ ಸಂಬಳ

ಈ ಪೋಷಾಕನ್ನು ಧರಿಸಿ, ಆಂಗಾಗಗಳನ್ನು ಚಲಿಸುವಂತೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದಾಗ “ಕೆಲವೊಂದು ನಿರ್ಬಂಧಗಳಿವೆ, ಆದರೆ ನೀವು ಅವುಗಳನ್ನು ಅಲ್ಲಾಡಿಸಬಹುದು. ಆದರೂ, ನೀವು ಅತಿಯಾಗಿ ಚಲಿಸಿದರೆ, ನಾಯಿಯಂತೆ ಕಾಣುವುದು ಸಾಧ್ಯವಾಗುವುದಿಲ್ಲ” ಎಂದು ಉತ್ತರಿಸಿದ್ದಾರೆ.

ಟೋಕೋ ಒಂದು ಯೂಟ್ಯೂಬ್ ಚ್ಯಾನಲನ್ನು ಕೂಡ ಹೊಂದಿದ್ದು, ನಾಯಿಯ ಕಾಸ್ಟ್ಯೂಮ್ ತೊಟ್ಟು ವಿವಿಧ ಭಂಗಿಗಳನ್ನು ಮಾಡಿ ತೋರಿಸುವ ವಿಡಿಯೋವನ್ನು ಅದರಲ್ಲಿ ಕಾಣಬಹುದು. ಅದನ್ನು ನೋಡಿದಾಗ, ಅದು ಕೋಲಿ ತಳಿಯ ನಾಯಿ ಅಲ್ಲ, ಅದರೊಳಗೆ ಮನುಷ್ಯನಿದ್ದಾನೆ ಎಂದು ಊಹಿಸುವುದು ಕೂಡ ಕಷ್ಟ. ಅಷ್ಟು ಸಹಜವಾಗಿದೆ ನಾಯಿ ಪೋಷಾಕು.
Published by:Ashwini Prabhu
First published: