Viral News: 11 ಲಕ್ಷ ರೂಪಾಯಿಗೆ ಮಾರಾಟವಾಯ್ತು 1 ಕೆಜಿ ಚಹಾ ಎಲೆ! ಅಷ್ಟಕ್ಕೂ ಇದ್ಯಾಕೆ ಇಷ್ಟು ದುಬಾರಿ?

(Japan) ಪ್ರಸಿದ್ಧ 1 ಕೆಜಿ ಸಮಿಡೋರಿ ಹಸಿರು ಚಹಾ ಎಲೆಗಳು ಹರಾಜಿನಲ್ಲಿ ದಾಖಲೆಯ 1.96 ಮಿಲಿಯನ್ ಯೆನ್ (ಜಪಾನಿನ ರೂಪಾಯಿ) (ಅಂದಾಜು 15,294 ಡಾಲರ್, 1,184,254.25 ಭಾರತೀಯ ರೂಪಾಯಿ ) ಗಳಿಸಿದೆ ಎಂದು ಸುದ್ದಿ ಸಂಸ್ಥೆ ಕ್ಯೋಡೋ ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಗುಣಮಟ್ಟಕ್ಕೆ ಹೆಸರಾಗಿರುವ ಸಮಿಡೋರಿ ಹಸಿರು ಚಹಾ ಎಲೆಗಳು ಯಾರು ಊಹಿಸಲಾಗದ ಬೆಲೆಗೆ ಮಾರಾಟವಾಗಿ ದಾಖಲೆ ಬರೆದಿವೆ. ಜಪಾನಿನ (Japan) ಪ್ರಸಿದ್ಧ 1 ಕೆಜಿ ಸಮಿಡೋರಿ ಹಸಿರು ಚಹಾ ಎಲೆಗಳು ಹರಾಜಿನಲ್ಲಿ (Auction) ದಾಖಲೆಯ 1.96 ಮಿಲಿಯನ್ ಯೆನ್ (ಜಪಾನಿನ ರೂಪಾಯಿ) (ಅಂದಾಜು 15,294 ಡಾಲರ್, 1,184,254.25 ಭಾರತೀಯ ರೂಪಾಯಿ ) ಗಳಿಸಿದೆ ಎಂದು ಸುದ್ದಿ ಸಂಸ್ಥೆ ಕ್ಯೋಡೋ ವರದಿ ಮಾಡಿದೆ. ಹೊಸ ದಾಖಲೆ ಬರೆದ ಸಮಿಡೋರಿ ಎಲೆಗಳು, ಹಸಿರು ಚಹಾದ ಅಡಿಯಲ್ಲಿನ ಒಂದು ಚಹಾ ತಳಿ. ಶಿಜುವೊಕಾ ಪ್ರೀಫೆಕ್ಚರ್‌ನಲ್ಲಿರುವ ಫ್ಯೂಜಿನೋಮಿಯಾ ನಗರದಲ್ಲಿ ಇವನ್ನು ಬೆಳೆಯಲಾಗುತ್ತದೆ, ಈ ಸಮಿಡೋರಿ ಎಲೆಗಳು ಜಪಾನ್‌ನಾದ್ಯಂತ ಅದರ ಉತ್ತಮ ಗುಣಮಟ್ಟದ ಹಸಿರು ಚಹಾಗಳಿಗೆ (Green Tea) ಹೆಸರುವಾಸಿಯಾಗಿದೆ.


ದುಬಾರಿ ಚಹಾದ ದಾಖಲೆ

ಇದಕ್ಕೂ ಮೊದಲು, ಜಪಾನ್‌ನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಚಹಾದ ದಾಖಲೆಯು 2021ರಲ್ಲಿ 1.08 ಮಿಲಿಯನ್ ಯೆನ್ ಅಥವಾ 8,507.70 ಡಾಲರ್ ಆಗಿತ್ತು ಎಂದು ಸ್ಥಳೀಯ ಸುದ್ದಿ ಸಂಸ್ಥೆ SBS ನ್ಯೂಸ್ ತಿಳಿಸಿದೆ.


ಶಿಜುವೊಕಾ ಜಪಾನೀಸ್ ಟೀ ಮಾರುಕಟ್ಟೆಯಲ್ಲಿ ಸಮಿಡೋರಿ ಎಲೆಗಳ ಮಾರಾಟ

ಬೆಳೆ ಋತುವಿನ ಆರಂಭವನ್ನು ಗುರುತಿಸಲು ವಾರ್ಷಿಕ ಹರಾಜಿನಲ್ಲಿ ಶಿಜುವೊಕಾ ಜಪಾನೀಸ್ ಟೀ ಮಾರುಕಟ್ಟೆಯಲ್ಲಿ ಸಮಿಡೋರಿ ಎಲೆಗಳ ಮಾರಾಟ ಮಾಡಲಾಯಿತು. ಪ್ರಸ್ತುತ ಏರುತ್ತಿರುವ ಇಂಧನ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆ ದುಬಾರಿ ಚಹಾ ಎಲೆಗಳ ಮಾರಾಣಕ್ಕೆ ಕಾರಣವಾಗಿದೆ ಎಂದು ಶಿಜುವೊಕಾ ಮಾರುಕಟ್ಟೆ ಅಧ್ಯಕ್ಷ ಯಸುಹಿಡೆ ಉಚಿನೊ ಕ್ಯೋಡೋ ನ್ಯೂಸ್‌ಗೆ ತಿಳಿಸಿದರು.

ಗುಣಮಟ್ಟದ ಚಹಾವನ್ನು ನ್ಯಾಯಯುತ ಬೆಲೆಯಲ್ಲಿ

ಇಂಧನ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಸವಾಲುಗಳ ಕುರಿತು ಮಾತನಾಡಿದ ಅವರು “ಇದರ ಹೊರತಾಗಿಯೂ, ಮಾರುಕಟ್ಟೆಯು ಗ್ರಾಹಕರಿಗೆ ಗುಣಮಟ್ಟದ ಚಹಾವನ್ನು ನ್ಯಾಯಯುತ ಬೆಲೆಯಲ್ಲಿ ಒದಗಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿದರು.

ಹರಾಜಿನಲ್ಲಿದ್ದ ಟೀ ಸಗಟು ವ್ಯಾಪಾರಿಗಳು ತಮ್ಮ ಖರೀದಿಯಿಂದ ಸಂತೋಷಪಟ್ಟರು. "ನಾವು ಉತ್ತಮ ಬಣ್ಣ ಮತ್ತು ಗುಣಮಟ್ಟದ ಚಹಾವನ್ನು ಪಡೆಯಲು ಸಾಧ್ಯವಾಯಿತು" ಎಂದು ಶಿಜುಕಾ ನಗರದ ಸಗಟು ವ್ಯಾಪಾರಿ ನಟ್ಸುಕಿ ವಾಡಾ ಕ್ಯೋಡೋಗೆ ತಿಳಿಸಿದರು. ಜೊತೆಗೆ ಈ ವರ್ಷ ಚಹಾದ ಗುಣಮಟ್ಟವು ಉತ್ತಮವಾಗಿದೆ ಎಂದು ಮಾರುಕಟ್ಟೆಯ ಅಧಿಕಾರಿಗಳು ತಿಳಿಸಿದರು.


ಇದನ್ನೂ ಓದಿ: Viral News: ಬೆಕ್ಕೋ ಬ್ರೆಡ್ಡೋ? ಏನಿದು? ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ಸಮಿಡೋರಿ ಎಲೆಗಳ ಎರಡು ಟೀ ಚಮಚಗಳೊಂದಿಗೆ ತಯಾರಿಸಿದ ಒಂದು ಕಪ್ ಚಹಾಕ್ಕೆ 31 ಡಾಲರ್ (2,368.50 ಭಾರತೀಯ ಹಣ) ವೆಚ್ಚವಾಗುತ್ತದೆ. 2020ರಲ್ಲಿ ಎರಡು ಟೀ ಚಮಚ ಎಲೆಗಳನ್ನು ಬಳಸಿ ಒಂದು ಕಪ್ ಹಸಿರು ಚಹಾದ ಸರಾಸರಿ ಬೆಲೆ 8 ಸೆಂಟ್‌ಗಳಿಗಿಂತ ಕಡಿಮೆಯಿತ್ತು ಮತ್ತು ರೆಸ್ಟೋರೆಂಟ್‌ಗಳಲ್ಲಿ ಊಟದ ಜೊತೆಗೆ ಚಹಾ ಕಪ್‌ಗಳನ್ನು ಹೆಚ್ಚಾಗಿ ಉಚಿತವಾಗಿ ನೀಡುತ್ತಿದ್ದರು. ಚಹಾದ ಬೆಲೆಯು ಲಭ್ಯತೆ ಮತ್ತು ಬೆಳೆಯಲು ಹಾಗೂ ಕೊಯ್ಲು ಮಾಡಲು ತೆಗೆದುಕೊಳ್ಳುವ ಶ್ರಮವನ್ನು ಆಧರಿಸಿ ಬದಲಾಗುತ್ತದೆ.


ಸೆಮಿಡೋರಿ ಎಲೆಗಳ ವಿಶೇಷತೆ ಮತ್ತು ಇತಿಹಾಸ
ಬೆಚ್ಚನೆಯ ಹವಾಮಾನಕ್ಕೆ ಈ ಎಲೆಗಳ ಚಹಾ ಸೂಕ್ತವಾಗಿದೆ, ಇದನ್ನು ಮುಖ್ಯವಾಗಿ ದಕ್ಷಿಣ ಜಪಾನ್‌ನ ಕ್ಯುಶು ಪ್ರದೇಶದಲ್ಲಿ, ಪ್ರಮುಖವಾಗಿ ಕಾಗೋಶಿಮಾ ಪ್ರಾಂತ್ಯದಲ್ಲಿ ಬೆಳೆಸಲಾಗುತ್ತದೆ. ಸೆಮಿಡೋರಿಯ ಬಣ್ಣ, ಪರಿಮಳ ಮತ್ತು ರುಚಿ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಹೆಚ್ಚಿನ ಅಮೈನೋ ಆಮ್ಲದ ಅಂಶವನ್ನು ಹೊಂದಿದೆ.


ಇದನ್ನೂ ಓದಿ: Viral News: ತಲೆ ಸುತ್ತಿ ಚಲಿಸುತ್ತಿದ್ದ ಟ್ರೈನ್ ಅಡಿಗೆ ಬಿದ್ದಾಕೆ ಬದುಕಿ ಬಂದಳು! ಮರುಜನ್ಮ ಅಂತಿದ್ದಾರೆ ಜನ

ಸೇಮಿಡೋರಿಯ ಎಲೆ ಅಸತ್ಸುಯು ತಳಿಯು ಉತ್ತಮ ಗುಣಮಟ್ಟದ್ದಾಗಿದೆ. ಸೆಮಿಡೋರಿಯನ್ನ ಅಂತಿಮವಾಗಿ 1990ರಲ್ಲಿ ಚಹಾ ತಳಿ ಸಂಖ್ಯೆ 40 ಎಂದು ನೋಂದಾಯಿಸಲಾಯಿತು. ಬೆಳೆಯಾಗಿ ಇದನ್ನು ತುಂಬಾ ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಬೆಳೆಸಬೇಕು. ಹಿಮದಲ್ಲಿ ಇದು ಬದುಕುವುದಿಲ್ಲ, ಸೇಮಿಡೋರಿ ಚಹಾ ಸಸ್ಯಗಳ ಎಲೆಗಳು ಬಲವಾದ ಗಾಳಿಗೆ ಉದುರಿ ಹೋಗುತ್ತದೆ ಮತ್ತು ಒಮ್ಮೆ ಇವು ಹಾನಿಗೆ ಒಳಗಾದರೆ ಅದು ಸುಲಭವಾಗಿ ಚೇತರಿಸಿಕೊಳ್ಳುವುದಿಲ್ಲ. ಹೀಗಾಗಿ ಬಹಳ ಜಾಗರೂಕತೆಯಿಂದ ರೈತರು ಬೆಳೆಸುತ್ತಾರೆ.


ವಿಶ್ವಸಂಸ್ಥೆ ಪ್ರಕಾರ, ಜಾಗತಿಕ ಚಹಾ ಉದ್ಯಮವು 2024ರ ವೇಳೆಗೆ 21.3 ಬಿಲಿಯನ್‌ ಡಾಲರ್‌ ತಲುಪುತ್ತದೆ ಎಂದು ಅಂದಾಜಿಸಿದೆ. ಚೀನಾ ಮತ್ತು ಭಾರತವು ಚಹಾ ಮಾರುಕಟ್ಟೆಯ ಅತಿದೊಡ್ಡ ಷೇರುಗಳನ್ನು ಹೊಂದಿದೆ.

Published by:Divya D
First published: