Japanese Children: ಹುಟ್ಟಿದ 2 ವರ್ಷದಲ್ಲೇ ಏಕಾಂಗಿಯಾಗಿ ಶಾಪಿಂಗ್ ಮಾಡುತ್ತಾರಂತೆ ಜಪಾನಿನ ಮಕ್ಕಳು! ಏನ್ ಗುರು ಇದು..

Japanese Kids: ಜಪಾನ್​ ದೇಶದ ತಾಯಂದಿರು ತನ್ನ ಮಕ್ಕಳಿಗೆ ಪ್ರೀತಿ, ದಯೆ ಜೊತೆಗೆ, ಅವರಿಗೆ ಜವಾಬ್ದಾರಿ ಮತ್ತು ಸ್ವಾವಲಂಬನೆಯನ್ನು ಕಲಿಸುತ್ತಾರೆ. ಜಪಾನ್‌ನ ಈ ಸಂಸ್ಕೃತಿಯನ್ನು ಆಧರಿಸಿದ ಜಪಾನೀಸ್ ಸರಣಿ ಓಲ್ಡ್ ಎನಫ್ ಇಂಟರ್ನೆಟ್‌ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜಪಾನ್‌ (Japan) ದೇಶದ ಬಗ್ಗೆ ಏನಾದರೊಂದು ಹೊಸ ಸಂಗತಿ ಬೆಳಕಿಗೆ ಬರುತ್ತಿರುತ್ತದೆ. ಕೆಲವು ಸಂಗತಿಗಳು ಅಚ್ಚರಿಗೆ ಕಾರಣವಾದರೂ ಅನುಮಾನವಿಲ್ಲ, ಅದರಲ್ಲೂ ಜಪಾನ್​ ಜನರ ವಿಭಿನ್ನ ಚಿಂತನೆ ಮತ್ತು ಜೀವನಶೈಲಿಯನ್ನು (Life style) ಉಳಿದೆಲ್ಲಾ ದೇಶಗಳಿಗಿಂತ ಕೊಂಚ ಭಿನ್ನವಾಗಿದೆ. ಜಪಾನಿನ ಸಂಸ್ಕೃತಿಯಲ್ಲಿ (Culture) ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ (Childen) ಶಿಸ್ತು ಮತ್ತು ಸ್ವಾವಲಂಬನೆಯನ್ನು (Discipline and Self-reliance) ಕಲಿಸಲಾಗುತ್ತದೆ. ಇದು ಪ್ರಪಂಚದಿಂದ ಸಂಪೂರ್ಣವಾಗಿ ವಿಭಿನ್ನವಾದ ಸ್ಟ್ರೀಮ್​ನಲ್ಲಿ ನಡೆಯುತ್ತದೆ. ಅದಕ್ಕಾಗಿಯೇ 2-3 ವರ್ಷ ವಯಸ್ಸಿನಲ್ಲೂ  ಮಕ್ಕಳು ಒಬ್ಬರೇ ಮನೆಯಿಂದ ಹೊರಗೆ ಹೋಗಲು ತರಬೇತಿ ನೀಡುತ್ತಾರೆ.

  ಈ ಸಂಗತಿ ಕೇಳಿದಾಗ ಅಚ್ಚರಿಯಾಗಬಹುದು. ಆದರೆ ಭಾರತದಲ್ಲಿ ಮಕ್ಕಳನ್ನು ಮಡಿಲಲ್ಲಿಟ್ಟುಕೊಂಡು ರಸ್ತೆ ದಾಟುವ ಸಮಯದಲ್ಲಿಯ್ಯೂ ಪೋಷಕರು ಜೊತೆಯಲ್ಲಿಯೇ ಇರುತ್ತಾರೆ ಆದರೆ  ಜಪಾನಿನ ಅದೇ ವಯಸ್ಸಿನ ಮಕ್ಕಳು ಒಬ್ಬರೇ ಮಾರುಕಟ್ಟೆಯನ್ನು ಸುತ್ತಲು ಶುರು ಮಾಡುತ್ತಾರಂತೆ ಮತ್ತು ಶಾಪಿಂಗ್ ಮಾಡಿ ಹಿಂತಿರುಗುತ್ತಾರಂತೆ.

  ಜಪಾನ್​ ದೇಶದ ತಾಯಂದಿರು ತನ್ನ ಮಕ್ಕಳಿಗೆ ಪ್ರೀತಿ, ದಯೆ ಜೊತೆಗೆ, ಅವರಿಗೆ ಜವಾಬ್ದಾರಿ ಮತ್ತು ಸ್ವಾವಲಂಬನೆಯನ್ನು ಕಲಿಸುತ್ತಾರೆ. ಜಪಾನ್‌ನ ಈ ಸಂಸ್ಕೃತಿಯನ್ನು ಆಧರಿಸಿದ ಜಪಾನೀಸ್ ಸರಣಿ ಓಲ್ಡ್ ಎನಫ್ ಇಂಟರ್ನೆಟ್‌ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

  ಜಪಾನಿನ ಮಕ್ಕಳಷ್ಟು ಬುದ್ಧಿವಂತರು ಯಾರೂ ಇಲ್ಲ!

  ಡೈಲಿ ಮೇಲ್ ವರದಿಯ ಪ್ರಕಾರ, ಜಪಾನ್‌ನಲ್ಲಿ 1990 ರ ದಶಕದಲ್ಲಿ ಬಿಡುಗಡೆಯಾದ ಹಾಜಿಮೆಟೆ ನೋ ಒಟ್ಸುಕೈ ಸರಣಿಯಲ್ಲಿ ಮೊದಲ ಬಾರಿಗೆ, ಚಿಕ್ಕ ಮಕ್ಕಳು ಯಾವುದೇ ಪೋಷಕರಿಲ್ಲದೆ ತುಂಬಾ ಆರಾಮವಾಗಿ ಮನೆಯಿಂದ ಹೊರಗೆ ಹೋಗುತ್ತಿರುವುದು ಕಂಡುಬಂದಿದೆ. ಈ ಕಾರ್ಯಕ್ರಮ ಯುಕೆಯಲ್ಲೂ ಪ್ರಸಾರವಾಗುತ್ತಿದೆ. ಸರಣಿಯ 20 ಸಂಚಿಕೆಗಳಲ್ಲಿ, ಮಕ್ಕಳು ಏಕಾಂಗಿಯಾಗಿ ಸೂಪರ್​ ಮಾರ್ಕೆಟ್​ಗಳಿಂದ ಶಾಪಿಂಗ್ ಮಾಡುತ್ತಾರೆ. ಹಣ್ಣಿನ ರಸವನ್ನು ತಯಾರಿಸುತ್ತಾರೆ ಮತ್ತು ರಸ್ತೆ ದಾಟುತ್ತಾರೆ.

  ತಂದೆ-ತಾಯಿಯ ಸಹಾಯವಿಲ್ಲದೆ ಇದನ್ನೆಲ್ಲ ಮಾಡುತ್ತಿದ್ದಾರೆ. ಚಿತ್ರೀಕರಣದ ವೇಳೆ ಮಕ್ಕಳ ಸುರಕ್ಷತೆಗಾಗಿ ಕಂಪ್ಲೀಟ್ ಬ್ಯಾಕಪ್ ತೆಗೆದುಕೊಳ್ಳುತ್ತಾರೆ. ಆದರೆ ಮಕ್ಕಳ ಸ್ಮಾರ್ಟ್‌ನೆಸ್ ನೋಡಿ ಯಾರೂ ಆಶ್ಚರ್ಯ ಪಡಬೇಕಾಗಿಲ್ಲ. ಕಳೆದ 30 ವರ್ಷಗಳಿಂದ ಈ ಪ್ರದರ್ಶನ ಜಪಾನ್‌ನಲ್ಲಿ ನಡೆಯುತ್ತಿದೆ.

  ಇದನ್ನೂ ಓದಿ- Viral Video: ಪಂದ್ಯದ ವೇಳೆ ಟಾಪ್​ ಲೆಸ್​ ಆಗಿ ಮೈದಾನಕ್ಕೆ ಬಂದ ಮಹಿಳೆ! ಇದೆಕ್ಕೆಲ್ಲಾ ಕಾರಣ ಸ್ನೇಹಿತ ನೀಡಿದ ಚಾಲೆಂಜ್​!

  2-3 ವರ್ಷ ಆರಾಮವಾಗಿ ಮಾತನಾಡಲು ಕಳಿಯುವ ಮಕ್ಕಳು ಶಾಪಿಂಗ್ ಮಾಡುತ್ತಾರೆ. ಗೃಹೋಪಯೋಗಿ ವಸ್ತುಗಳಿಂದ ಹಿಡಿದು ಹೂವು, ಚಾಕಲೇಟುಗಳವರೆಗೆ ಎಲ್ಲವನ್ನೂ ಹೇಗೆ ಖರೀದಿಸಬೇಕು ಎಂಬುದು ಅವರಿಗೆ ತಿಳಿದಿದೆ. ಒಂದು ವೇಳೆ ಮಕ್ಕಳು ಶಾಪಿಂಗ್​ ಅಥವಾ ಪ್ರಯಾಣ ಮಾಡುವ ವಿಷಯಗಳಿಗೆ ಹೆದರುತ್ತಿದ್ದರೆ,ಅವರ ತಾಯಂದಿರು ಇದಾವುದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ.  ಮಕ್ಕಳಿಗೆ ಧೈರ್ಯವನ್ನು ಹೇಳುತ್ತಾರೆ.

  ಇದನ್ನೂ ಓದಿ- Viral Video: ಮಗಳ ಮದುವೆಗೆ ಫುಲ್ ಖುಷ್, ಊ ಅಂಟಾವಾ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಅಪ್ಪ  ಅಂದಹಾಗೆಯೇ, ಜಪಾನ್‌ನ ಶಾಲೆಗಳಲ್ಲಿ ಸಹ, ಮಕ್ಕಳಿಗೆ ಸ್ವಾವಲಂಬನೆಯನ್ನು ಬಹಳಷ್ಟು ಕಲಿಸಲಾಗುತ್ತದೆ. ಮಕ್ಕಳು ಶಾಲೆಯಿಂದ ಕಲಿಯುತ್ತಾರೆ. ಅಲ್ಲಿ ಅವರು ಅಧ್ಯಯನ ಮಾಡುತ್ತಾರೆ. ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ದೈಹಿಕ ಮತ್ತು ಮಾನಸಿಕ ಶಿಸ್ತನ್ನು ಅನುಸರಿಸುತ್ತಾರೆ. ಜಪಾನಿಯರನ್ನು ಅವರ ವಯಸ್ಸಿನಿಂದ ತಾಂತ್ರಿಕ ತಿಳುವಳಿಕೆಯವರೆಗೆ ಸೋಲಿಸುವುದು ಸುಲಭವಲ್ಲ ಎಂಬುದಕ್ಕೆ ಇದು ಕಾರಣವಾಗಿದೆ.

  ಜಪಾನ್​ ದೇಶಿಗರು ಸದಾ ಎನಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಾಮಾನ್ಯವಾಗಿ ಟೆಕ್ನಾಲಜಿ ವಿಚಾರದಲ್ಲಿ ಅವರೇ ಮುಂದಿದ್ದಾರೆ. ಅಲ್ಲಿನ ಸೈನ್ಯವನ್ನು ಗಮನಿಸಿದಾಗಲ ವಿಭಿನ್ನವಾಗಿ ಸೈನಿಕರಿಗೆ ತರಬೇತಿ ನೀಡುತ್ತಾರೆ. ಪುಟಾಣಿ ಮಕ್ಕಳಿಗೆ ಸೈನ ಸೇರಲು ಬೆಂಬಲ ನೀಡುತ್ತಾರೆ. ಅಷ್ಟೇ ಏಕೆ ಸಣ್ಣ ವಯಸ್ಸಿನಿಂದಲೇ ದೇಶ ಸೇವೆಗೆ ಹಾಜರಾಗಲು ಸರಿಯಾದ ತರಬೇತಿ ನೀಡುತ್ತಾರೆ. ಉಳಿದ ದೇಶಗಳನ್ನು ಹೋಲಿಸಿದಾಗ ಜಪಾನ್​ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಜೊತೆಗೆ ಸಂಸ್ಕೃತಿ ಕೂಡ ಭಿನ್ನವಾಗಿದೆ.
  Published by:Harshith AS
  First published: