ಪಂದ್ಯ ಸೋತರು ಫುಟ್ಭಾಲ್ ಅಭಿಮಾನಿಗಳ ಮನಗೆದ್ದ ಜಪಾನ್ ತಂಡ

news18
Updated:July 3, 2018, 8:24 PM IST
ಪಂದ್ಯ ಸೋತರು ಫುಟ್ಭಾಲ್ ಅಭಿಮಾನಿಗಳ ಮನಗೆದ್ದ ಜಪಾನ್ ತಂಡ
news18
Updated: July 3, 2018, 8:24 PM IST
ನ್ಯೂಸ್ 18 ಕನ್ನಡ

ಮಾಸ್ಕೋ (ಜುಲೈ. 03): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಡಾರ್ಕ್​​ಹಾಸ್​ ಟೀಮ್ ಜಪಾನ್ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಆದರೂ ಕೂಡ ಜಪಾನ್ ತಂಡದ ಆಟಗಾರರು ವಿಶ್ವದ ಫುಟ್ಬಾಲ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ನಾಕೌಟ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿದ ಜಪಾನ್ ತಂಡ ದುಃಖದಲ್ಲಿ  ಮುಳುಗಿತ್ತು. ಇಂತಹ ಸಂದರ್ಭದಲ್ಲೂ ಮೈದಾನದಿಂದ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರಳಿದ ಫುಟ್ಬಾಲ್ ಪಟುಗಳು, ತಮಗೆ ನೀಡಲಾಗಿದ್ದ ಡ್ರೆಸ್ಸಿಂಗ್ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿದ್ದಾರೆ. ಸ್ವಚ್ಚಗೊಳಿಸಿದ ಬಳಿಕ ಧನ್ಯವಾದ ಎಂಬ ಪತ್ರ ಬರೆದಿಟ್ಟು, ತಾಯಿನಾಡಿಗೆ ಪ್ರಯಾಣ ಬೆಳೆಸಿದ್ದಾರೆ.

 
ಸೋಲಿನ ನೋವಿನಲ್ಲೂ ಜಪಾನ್ ತಂಡದ ಸ್ವಚ್ಚತಾ ಕಾರ್ಯಕ್ಕೆ ಇದೀಗ ಫಿಫಾ ಆಯೋಜಕರು ಮಾತ್ರವಲ್ಲದೆ, ಫುಟ್ಬಾಲ್ ಪ್ರೇಮಿಗಳಿಂದ ಪ್ರಶಂಸೆ ಮಾತುಗಳು ಕೇಳಿಬರುತ್ತಿವೆ. ಇನ್ನು ಆಟಗಾರರು ಅಷ್ಟೇ ಅಲ್ಲದೆ ಜಪಾನ್​ ತಂಡದ ಅಭಿಮಾನಿಗಳು ಸಹ ಪಂದ್ಯ ಸೋತರು ನೋವಿನಲ್ಲಿ ಸ್ಟೇಡಿಯಂನಲ್ಲಿ ಬಿದ್ದಿದ್ದ ಕಸವನ್ನೆಲ್ಲಾ ಎತ್ತಿ ಹಾಕುವ ಮೂಲಕ ಸ್ವಚ್ಚತೆಯ ಮಹತ್ವ ಸಾರಿದ್ದಾರೆ.

 

First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ