ಖ್ಯಾತ ಗಾಯಕಿಗೆ ವೀರ್ಯ ಕಳಿಸಿದ್ದ ಅಭಿಮಾನಿ ಕೇಳಿಕೊಂಡಿದ್ದೇನು?!

news18
Updated:September 2, 2018, 6:10 PM IST
ಖ್ಯಾತ ಗಾಯಕಿಗೆ ವೀರ್ಯ ಕಳಿಸಿದ್ದ ಅಭಿಮಾನಿ ಕೇಳಿಕೊಂಡಿದ್ದೇನು?!
news18
Updated: September 2, 2018, 6:10 PM IST
-ನ್ಯೂಸ್ 18 ಕನ್ನಡ

ಅಮೆರಿಕದ ಪಾಪ್ ಗಾಯಕಿ ಜಾನೆಟ್ ಜಾಕ್ಸನ್ 'ಬಿಕಾಸ್ ಆಫ್ ಲವ್...' ಗೀತೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವುದು ಗೊತ್ತಿರುವ ವಿಷಯ. ಅಣ್ಣ ಮೈಕೆಲ್ ಜಾಕ್ಸನ್​ನಂತೆ ಸಂಗೀತ ಲೋಕದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ್ದ ಜಾನೆಟ್ ಜಾಕ್ಸನ್ ಇತ್ತೀಚೆಗೆ ಸಂದರ್ಶನದಲ್ಲಿ ತಮಗೆ ಎಂಥೆಂತಾ ಅಭಿಮಾನಿಗಳಿದ್ದರು ಎಂಬ ವಿಷಯಗಳನ್ನು ಹಂಚಿಕೊಂಡಿದ್ದಾರೆ.ಬಿಗ್ ಬಾಯ್ ಟಿವಿ ನಡೆಸಿದ ಇಂಟರ್​ವ್ಯೂನಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಫ್ಯಾನ್ ಮಾಡಿದ್ದ ಕ್ರೇಜಿಯಸ್ಟ್​ ವಿಷಯ ಯಾವುದೆಂದು ಕೇಳಲಾಗಿತ್ತು. ಇದಕ್ಕೆ ಮುಚ್ಚು ಮರೆಯಿಲ್ಲದೆ ಉತ್ತರಿಸಿದ ಜಾನೆಟ್, ಅಭಿಮಾನಿಯೊಬ್ಬರು ಈ ಹಿಂದೆ ಜನನಾಂಗದ ಫೋಟೋದೊಂದಿಗೆ ಒಂದು ಡಬ್ಬದಲ್ಲಿ ವೀರ್ಯವನ್ನು ಕಳುಹಿಸಿ ಕೊಟ್ಟಿದ್ದನು. ಅದರ ಜೊತೆ ಒಂದು ಪತ್ರ ಕೂಡ ಇರಿಸಲಾಗಿತ್ತು. ಅದರಲ್ಲಿ ನೀವು ಈ ವೀರ್ಯದಿಂದ ಗರ್ಭಿಣಿಯಾಗಿ, ಮಕ್ಕಳನ್ನು ಪಡೆಯಬೇಕೆಂದು ವಿನಂತಿ ಮಾಡಿಕೊಂಡಿದ್ದನು.ಆದರೆ ನಾನು ವಿವಾಹವಾಗಿಯೇ ಮಗನನ್ನು ಪಡೆದುಕೊಂಡಿದ್ದೇನೆ ಎಂದು ತಿಳಿಸಿದ ಜಾನೆಟ್​ಗೆ ಈಗ 18 ತಿಂಗಳ ಹಿಸ್ಸಾ ಎಂಬ ಮಗನಿದ್ದಾನೆ. ವಿಸ್ಸಾಮ್ ಅಲ್ ಮನಾರೊಂದಿಗೆ ವಿವಾಹವಾದ ಜಾನೆಟ್​ ಸದ್ಯ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾರೆ. ಸೆಲೆಬ್ರಿಟಿಗಳಾದರೆ ಎಂಥಂತಹ ಅಭಿಮಾನಿಗಳನ್ನು ಪಡೆಯುತ್ತೇವೆ ಎಂಬುದಕ್ಕೆ ಜಾನೆಟ್ ಜಾಕ್ಸನ್ ಅವರ ಈ ಅನುಭವವೇ ಸಾಕ್ಷಿ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...