ಇತ್ತೀಚಿಗಿನ ಕಾಲದಲ್ಲಿ ಯಾರು ಮೊಬೈಲ್ ಯೂಸ್ (Mobile Use) ಮಾಡೋಲ್ಲ ಎಂಬ ಪ್ರಶ್ನೆಯನ್ನು ಕೇಳುವ ಹಾಗೆಯೇ ಇಲ್ಲ. ಯಾಕಂದ್ರೆ ಪ್ರತಿಯೊಬ್ಬರ ಕೈಯಲ್ಲಿಯು ಈ ಮೊಬೈಲ್ ರಾರಾಜಿಸುತ್ತಿದೆ. ಬೋರ್ ಆದ್ರೆ ಮನರಂಜಿಸಲು, ಕುಟುಂಬದವರ ಮುಖ ನೋಡಬೇಕೆಂದರೆ ವಿಡಿಯೋ ಕಾಲ್. ಇನ್ನೇನು ಬೇಕು ಹೇಳಿ? ಎಲ್ಲವೂ ಅಂಗೈ ಯಲ್ಲಿ ಸಿಗುತ್ತೆ ಅಂದ್ರೆ ಯಾಕೆ ಮೊಬೈಲ್ ಯೂಸ್ ಮಾಡಬಾರದು ಅಲ್ವಾ? ಅದ್ರಲ್ಲೂ ಸಾಮಾಜಿಕ ಜಾಲತಾಣಗಳನ್ನು (Social Media) ಬಳಸದೇ ಇರುವವರು ಸಿಗುವುದು ಅಪರೂಪ . ಸಾಮಾಜಿಕ ಮಾಧ್ಯಮಗಳು ಅನೇಕ ವಿಷಯಗಳನ್ನು ಸಾಧ್ಯವಾಗಿಸಿದೆ. ಈಗ ಸೋಷಿಯಲ್ ಮೀಡಿಯಾದಿಂದಾಗಿ ಮಗು ಕೂಡ ಹುಟ್ಟಿದೆ. ಸೋಷಿಯಲ್ ಮೀಡಿಯಾದಿಂದ ಮಗು ಹುಟ್ಟಿದೆಯೇ? ಅದು ಹೇಗೆ ಸಾಧ್ಯ? ಅಂತ ನೀವೂ ಓದಿ ಆಶ್ಚರ್ಯಪಟ್ಟಿದ್ದೀರಾ? ಆದರೆ ಇದು ನಿಜ. ವಾಟ್ಸಾಪ್ ಕರೆ ಮೂಲಕ ಮಗು ಜನಿಸುತ್ತದೆ . ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಪ್ರಕರಣ.
ಈ ವಿಷಯವನ್ನು ಕೇಳ್ತಾ ಯಾರಿಗೆ ಆದ್ರು ತಲೆಯಲ್ಲಿ ನೂರು ಪ್ರಶ್ನೆ ಮೂಡುವುದು ಸಹಜವೇ ಬಿಡಿ. ಯಾಕಂದ್ರೆ ಈ ರೀತಿಯೂ ಆಗುತ್ತಾ? ಇಷ್ಟೊಂದು ಟೆಕ್ನಾಲೆಜಿ ಮುಂದುವರೆದಿದ್ಯಾ ಅಂತ ಅನಿಸುತ್ತೆ ಅಲ್ವಾ? ಹೌದು ಈ ಪ್ರಕರಣ ಇದೇ ಮೊದಲ ಬಾರಿಗೆ ನಡೆದಿದ್ದು ಎಂದು ಇಲ್ಲಿನ ವೈದ್ಯರು ಕೂಡ ಹೇಳುತ್ತಾರೆ.
ಹೆಚ್ಚಿನ ಜನರು WhatsApp ಯೂಸ್ ಮಾಡ್ತಾರೆ. ಈ WhatsApp ಬಳಕೆದಾರರನ್ನು ಹೆಚ್ಚು ಮಾಡಿದೆ. ವಾಟ್ಸಾಪ್‌ನಿಂದ ಮಗು ಜನಿಸಿದೆ. ಜಮ್ಮು ಮತ್ತು ಕಾಶ್ಮೀರದ ಕೇರಾನ್ ನಲ್ಲಿ ಮಹಿಳೆಯೊಬ್ಬರು ವಾಟ್ಸಾಪ್ ಕರೆಯಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಗೆ ಕೆರಾನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಲಾಗಿದೆ.
ಪಿಟಿಐ ವರದಿಗಳ ಪ್ರಕಾರ, ಕ್ರಾಲ್ಪೋರಾ ವೈದ್ಯಕೀಯ ಅಧಿಕಾರಿ ಡಾ. ಮೀರ್ ಮೊಹಮ್ಮದ್ ಶಾಫಿ ಮಾತನಾಡಿ,‘ಶುಕ್ರವಾರ ರಾತ್ರಿ ಕೇರಾನ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಗರ್ಭಿಣಿಯೊಬ್ಬರಿಗೆ ಹೆರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಹೆರಿಗೆ ಸೌಲಭ್ಯವಿರುವ ಆಸ್ಪತ್ರೆಗೆ ದಾಖಲಿಸಬೇಕು’ ಎಂದರು.
ಆದರೆ ಚಳಿಗಾಲದ ಅವಧಿಯ ಕಾರಣ ಕೆರನ್ ಕುಪ್ವಾರ ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಎಲ್ಲಾ ರಸ್ತೆಗಳನ್ನು ಮುಚ್ಚಲಾಯಿತು. ಆ ಸಂದರ್ಭದಲ್ಲಿ, ಮಹಿಳೆಯನ್ನು ಹೆರಿಗೆ ಆಸ್ಪತ್ರೆಗೆ ವಿಮಾನದಲ್ಲಿ ಸಾಗಿಸುವುದು ಅಗತ್ಯವಾಗಿತ್ತು. ಆದರೆ ಗುರುವಾರ ಮತ್ತು ಶುಕ್ರವಾರ ಭಾರೀ ಹಿಮಪಾತವಾಗಿತ್ತು. ಇದರಿಂದಾಗಿ ಮಹಿಳೆಯನ್ನು ವಿಮಾನದಲ್ಲಿ ಕರೆತರಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಹೆಂಡತಿಯ ಹುಟ್ಟುಹಬ್ಬ ಮರೆತರೆ ಗಂಡನಿಗೆ ಐದು ವರ್ಷ ಜೈಲು ಶಿಕ್ಷೆಯಂತೆ! ಅಬ್ಬಾ, ಎಲ್ಲಿ ಈ ಕಾನೂನು?
ಅಂತಿಮವಾಗಿ, ಕೇರಾನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಮಹಿಳೆಗೆ ಹೆರಿಗೆಗೆ ವಿಭಿನ್ನ ಮಾರ್ಗವನ್ನು ಆರಿಸಲಾಯಿತು. ವಾಟ್ಸಾಪ್ ಕರೆ ಮೂಲಕ ಹಿರಿಯ ವೈದ್ಯರ ಸೂಚನೆಯಂತೆ ಇತರ ವೈದ್ಯರು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಸುಮಾರು ಆರು ಗಂಟೆಗಳ ನಂತರ, ವೈದ್ಯರ ಪ್ರಯತ್ನವು ಯಶಸ್ವಿಯಾಯಿತು. ಕೊನೆಗೂ ಯಶಸ್ವಿಯಾಗಿ ಒಂದು ಹೆಣ್ಣು ಮಗು ಜನಿಸಿತು.
ಮಗು ಸಂಪೂರ್ಣವಾಗಿ ಆರೋಗ್ಯಕರವಾಗಿದೆ. ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಡಾ. ಶಾಫಿ ಹೇಳಿದರು. ಆದರೆ ಆಪರೇಷನ್ ಸಮಯದಲ್ಲಿತುಂಬಾ ಭಯವಾಗಿತ್ತು. ಯಾಕೆಂದರೆ ನಮ್ಮೊಂದಿಗೆ ಇದ್ದ ವೈದ್ಯರು ಜ್ಯೂನಿಯರ್ಸ್. ಕೇವಲ ಒಂದು ವಾಟ್ಸಾಪ್ ಕಾಲ್ ಮೂಲಕ ಹೆರಿಗೆ ಮಾಡಿಸೋದು ಅಂದ್ರೆ ತಮಾಷೆಯ ಮಾತೇ ಅಲ್ಲ. ನಿಜಕ್ಕು ನಮಗೆ ನಾವೇ ಬೆನ್ನನ್ನು ತಟ್ಟಿಕೊಳ್ಳುವಷ್ಟು ಹೆಮ್ಮೆ ಆಗ್ತಾ ಇದೆ ಎಂದು ವೈದ್ಯರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ