ಹುಡುಗಿಯೊಂದಿಗೆ ಟಿಕ್ ಟಾಕ್ ಮಾಡಿದ್ದಕ್ಕೆ ಜೈಪುರದ ಹುಡುಗನಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

ಹುಡುಗನ ಮನೆಯವರು ಪೊಲೀಸ್ ಮೆಟ್ಟಿಲೇರಿದ ಬೆನ್ನಲ್ಲೇ ಹುಡುಗಿಯ ಮನೆಯವರೂ ಕೂಡ ದೂರು ದಾಖಲಿಸಿದ್ದಾರೆ. ತನ್ನ ಹುಡುಗಿಯನ್ನ ಬಳಸಿಕೊಂಡಿ ಟಿಕ್ ಟಾಕ್ ಮಾಡಿದ್ದಾನೆಂದು ಆ ಹುಡುಗನ ಮೇಲೆ ಆರೋಪ ಮಾಡಿ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದಾರೆ.

ಟಿಕ್ ಟಾಕ್

ಟಿಕ್ ಟಾಕ್

 • News18
 • Last Updated :
 • Share this:
  ಜೈಪುರ: ಹುಡುಗಿಯೊಂದಿಗೆ ಟಿಕ್ ಟಾಕ್ ಮಾಡಿದ್ದಕ್ಕೆ ಇಲ್ಲಿನ ಹದಿಹರೆಯದ ಯುವಕನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇಂಥ ಅಮಾನುಷ ಕೃತ್ಯ ಎಸಗಿದ್ದು ಹುಡುಗಿಯ ಸಹೋದರ ಹಾಗೂ ಇತರ ಮೂವರು. ಯುವಕನನ್ನ ಬೆತ್ತಲೆಯಾಗಿ ಮೆರವಣಿಗೆ ಮಾಡುವ ಮುನ್ನ ನಾಲ್ವರು ಸೇರಿಕೊಂಡು ಆತನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಆ ದೃಶ್ಯದ ವಿಡಿಯೋ ಕೂಡ ರೆಕಾರ್ಡ್ ಮಾಡಿದ್ದಾರೆ.

  ಹುಡುಗನನ್ನು ಸಂಪೂರ್ಣವಾಗಿ ವಿವಸ್ತ್ರಗೊಳಿಸಿ, ಆತನ ಮುಖಕ್ಕೆ ಬಟ್ಟೆ ಹಾಕಿ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗಿದೆ. ಆ ಹುಡುಗ ಕ್ಷಮೆ ಕೇಳಲು ಯತ್ನಿಸಿದರೂ ಆರೋಪಿಗಳು ತಮ್ಮ ಕುಕೃತ್ಯ ಮುಂದುವರಿಸಿದ್ದರು. ಟಿಕ್ ಟಾಕ್ ವಿಡಿಯೋ ಮಾಡಿದ್ದಕ್ಕೆ ಇದೇ ನಿನಗೆ ನಾವು ನೀಡುತ್ತಿರುವ ಶಿಕ್ಷೆ ಎಂದು ಆ ಆರೋಪಿಗಳು ಯುವಕನಿಗೆ ನಿಂದಿಸುತ್ತಿದ್ದುದು ತಿಳಿದುಬಂದಿದೆ.

  ಇದನ್ನೂ ಓದಿ: 11 ಕಿ.ಮೀ ಬೈಕ್​ ಚಲಾಯಿಸಿ ಹೆಲ್ಮೆಟ್​ ತೆರೆದಾಗ ಕಣ್ಣಿಗೆ ಕಂಡದ್ದೇ ಬೇರೆ!

  ಘಟನೆಯಿಂದ ಯುವಕ ಸಂಪೂರ್ಣ ಆಘಾತಗೊಂಡಿದ್ದಾನೆ. ಆತನ ಮನೆಯವರು ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಯುವಕನನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ಧಾರೆ. ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ ಮತ್ತಿಬ್ಬರು ಆರೋಪಿಗಳು ಸದ್ಯಕ್ಕೆ ತಪ್ಪಿಸಿಕೊಂಡಿದ್ಧಾರೆ.

  ಹುಡುಗನ ಮನೆಯವರು ಪೊಲೀಸ್ ಮೆಟ್ಟಿಲೇರಿದ ಬೆನ್ನಲ್ಲೇ ಹುಡುಗಿಯ ಮನೆಯವರೂ ಕೂಡ ದೂರು ದಾಖಲಿಸಿದ್ದಾರೆ. ತನ್ನ ಹುಡುಗಿಯನ್ನ ಬಳಸಿಕೊಂಡಿ ಟಿಕ್ ಟಾಕ್ ಮಾಡಿದ್ದಾನೆಂದು ಆ ಹುಡುಗನ ಮೇಲೆ ಆರೋಪ ಮಾಡಿ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದಾರೆ. ಪೊಲೀಸರು ಸದ್ಯಕ್ಕೆ ಎರಡೂ ಕಡೆಯವರ ವಿಚಾರಣೆ ನಡೆಸುತ್ತಿದ್ದಾರೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: