Street Dogs: ಕೇವಲ 5 ರೂ.ಗೆ ಸಾವಿರಾರು ಬೀದಿ ನಾಯಿಗಳಿಗೆ ಆಹಾರ: ಶ್ವಾನಪ್ರೇಮಿಯ ಕಥೆ ಇಲ್ಲಿದೆ

400 ಗ್ರಾಂ ಆಹಾರವನ್ನು ಒಳಗೊಂಡಿರುವ ಬೇಯಿಸಿದ ಊಟದಲ್ಲಿ ಪನ್ನೀರ್‌, ಸೋಯಾಬೀನ್, ಅಕ್ಕಿ ಮತ್ತು ಮೊಟ್ಟೆಗಳ ಜೊತೆಗೆ ನಾಯಿಗಳಿಗೆ ಮಲ್ಟಿವಿಟಮಿನ್ ಔಷಧಿಗಳು ಲಭ್ಯವಿರುತ್ತವೆ.

ಶ್ವಾನಪ್ರೇಮಿ ಗಜರಾಜ್​

ಶ್ವಾನಪ್ರೇಮಿ ಗಜರಾಜ್​

 • Share this:
  ಜೈಪುರ (Jaipur) ಮೂಲದ ಗಜರಾಜ್ ಸಿಂಗ್ ಕಚಾವಾ ( Gajraj Singh Kachhawa) ಎಂಬುವವರು ಬೆಜುಬಾನೋ ಕಿ ರಸೋಯ್ ಯೋಜನೆ ಮೂಲಕ ಸಾವಿರಾರು ಬೀದಿನಾಯಿಗಳಿಗೆ ( Street Dogs) ಕೇವಲ 5 ರೂ. ಗಳಲ್ಲಿಊಟ ನೀಡುತ್ತಿದ್ದಾರೆ. ಜೈಪುರದ ನಿವಾಸಿ ಗಜರಾಜ್ ಸಿಂಗ್ ಕಚಾವಾ ಒಂದು ದಿನ ಅಂಗಡಿಯಲ್ಲಿ ಚಹಾ ಕುಡಿಯುವಾಗ ವ್ಯಕ್ತಿಯೊಬ್ಬರು ಒಂದು ಬಿಸ್ಕತ್ತು ಪ್ಯಾಕೆಟ್ ಖರೀದಿಸಿ ಬೀದಿ ನಾಯಿಗೆ ಹಾಕಿದರು. ಇದನ್ನು ನೋಡುತ್ತಿದ್ದ ನಿಂತಿದ್ದ ಗಜರಾಜ್, ಆ ವ್ಯಕ್ತಿಯ ಬಳಿಗೆ ನಡೆದು ನಾಯಿಗಳಿಗೆ ಅಪಾಯಕಾರಿ ಎಂದು ಪರಿಗಣಿಸಲಾದ ಸಕ್ಕರೆ ಮತ್ತು ಗೋಧಿ ತುಂಬಿದ ಬಿಸ್ಕೆಟ್‌ಗಳನ್ನು ನಾಯಿಗೆ ಏಕೆ ನೀಡುತ್ತಿದ್ದೀರಿ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ವ್ಯಕ್ತಿ "ನಾನು 5 ರೂಪಾಯಿಗೆ ಪಡೆಯುವುದು ಈ ಬಿಸ್ಕತ್ತು ಪ್ಯಾಕೆಟ್ ಮಾತ್ರ," ಎಂದರು.

  ಇದನ್ನೂ ಓದಿ: Viral News: ಸಮುದ್ರದಾಳದಲ್ಲಿ 12,000 ವರ್ಷಗಳಷ್ಟು ಹಳೆಯದಾದ ನಗರ ಪತ್ತೆ: ಹೇಗಿದೆ 'ಆ' ಊರು?

  ಬೀದಿನಾಯಿಗಳಿಗಾಗಿ ಮಿಡಿದ ಗಜರಾಜ್​​ ಮನ 

  ವ್ಯಕ್ತಿಯ ಈ ಉತ್ತರ ಗಜರಾಜ್‌ ಅವರಿಗೆ ಹೊಸ ಕಲ್ಪನೆಯನ್ನು ನೀಡಿತ್ತು ಮತ್ತು ಅವರು ಬೀದಿ ನಾಯಿಗಳಿಗಾಗಿ ಹೊಸ ವ್ಯವಸ್ಥೆಯೊಂದನ್ನು ಮಾಡಿದರು. ಗಜರಾಜ್ ಅವರು ಬೆಜುಬಾನೋ ಕಿ ರಸೋಯಿ (ಕಿಚನ್ ಫಾರ್ ದಿ ವಾಯ್ಸ್‌ಲೆಸ್) ಅನ್ನು ಸ್ಥಾಪಿಸಿ, ಅಲ್ಲಿ ನಾಯಿಗೆ ಮುಂಚಿತವಾಗಿ ಪ್ಯಾಕ್ ಮಾಡಲಾದ ಪೌಷ್ಟಿಕಾಂಶದ ಊಟವು 5 ರೂ. ಗೆ ದೊರೆಯುವಂತೆ ಮಾಡಿದ್ದಾರೆ. ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಗಜರಾಜ್, “ನಾನು ಐದು ವರ್ಷಗಳಿಂದ ನನ್ನ ಸ್ವಂತ ಸಾಮರ್ಥ್ಯದಲ್ಲಿ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದೇನೆ. ಲಾಕ್‌ಡೌನ್‌ ಜಾರಿಯಾದಾಗ ಜನರಿಗೆ ಆಹಾರ ಪೂರೈಸುವವರೇ ಹೆಚ್ಚು. ಆದರೆ, ಬೀದಿ ನಾಯಿಗಳ ಬಗ್ಗೆ ಯಾರು ಯೋಚಿಸುವುದಿಲ್ಲ. ಹಾಗಾಗಿ ನಾನು ನಾಯಿಗಳಿಗೆ ಆಹಾರ ನೀಡುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನವನ್ನು ಆರಂಭಿಸಿದೆ ಎನ್ನುತ್ತಾರೆ.

  ಪ್ರತಿದಿನ 500 ಪ್ಯಾಕೆಟ್‌ಗಳು ಮಾರಾಟ 

  ಉದ್ಯಮಿ ಮತ್ತು ಡಿಜಿಟಲ್ ಮಾರ್ಕೆಟರ್ ಆಗಿರುವ 27 ವರ್ಷದ ಗಜರಾಜ್ ಜೈಪುರದಲ್ಲಿ ಬೆಜುಬಾನೊ ಕಿ ರಸೋಯ್ ಕಾರ್ಯನಿರ್ವಹಿಸುವ ಕ್ಲಬ್ ಅನ್ನು ಹೊಂದಿದ್ದಾರೆ. "ಕ್ಲಬ್ ಸಂಜೆಯ ಸಮಯದಲ್ಲಿ ಮಾತ್ರ ಕಾರ್ಯನಿರ್ವಹಿಸುವುದರಿಂದ ನಾನು ಹಗಲಿನಲ್ಲಿ ಈ ಆರೋಗ್ಯಕರ ಊಟವನ್ನು ತಯಾರಿಸಲು ಅಡುಗೆ ಮನೆಯನ್ನು ಬಳಸಿಕೊಂಡು ಆಹಾರ ತಯಾರಿಸುತ್ತೇನೆ'' ಎಂದಿದ್ದಾರೆ. ಊಟವನ್ನು ತಯಾರಿಸಿ ಪ್ಯಾಕ್ ಮಾಡಿದ ನಂತರ ಅವುಗಳನ್ನು ಜೈಪುರದ ವಿವೇಕ್ ವಿಹಾರ್ ಮೆಟ್ರೋ ನಿಲ್ದಾಣದ ಬಳಿ ಸ್ಥಾಪಿಸಲಾದ ಸ್ಟಾಲ್ ಮೂಲಕ ಮಾರಾಟ ಮಾಡಲಾಗುತ್ತದೆ. "ನಾವು ಈಗ ಪ್ರತಿದಿನ 500 ಪ್ಯಾಕೆಟ್‌ಗಳ ಆಹಾರವನ್ನು ಮಾರಾಟ ಮಾಡುತ್ತಿದ್ದೇವೆ" ಎಂದು ಅವರು ಹೇಳುತ್ತಾರೆ.

  ಕೇವಲ 5 ರೂಪಾಯಿಗೆ ನಾಯಿಗಳಿಗೆ ಪೌಷ್ಟಿಕ ಆಹಾರ

  400 ಗ್ರಾಂ ಆಹಾರವನ್ನು ಒಳಗೊಂಡಿರುವ ಬೇಯಿಸಿದ ಊಟದಲ್ಲಿ ಪನ್ನೀರ್‌, ಸೋಯಾಬೀನ್, ಅಕ್ಕಿ ಮತ್ತು ಮೊಟ್ಟೆಗಳ ಜೊತೆಗೆ ನಾಯಿಗಳಿಗೆ ಮಲ್ಟಿವಿಟಮಿನ್ ಔಷಧಿಗಳು ಲಭ್ಯವಿರುತ್ತವೆ. ಗಜರಾಜ್ ಹೇಳುವ ಪ್ರಕಾರ “ನಾವು ಪ್ರೋಟೀನ್‌ಗಾಗಿ ಪನ್ನೀರ್‌ ಮತ್ತು ಮೊಟ್ಟೆಗಳನ್ನು ಸೇರಿಸುತ್ತೇವೆ ಮತ್ತು ಬೇಸಿಗೆಯಲ್ಲಿ ನಾಯಿಗಳು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಲು ಅಕ್ಕಿಯನ್ನು ಪನ್ನೀರ್‌ನಿಂದ ನೀರಿನಲ್ಲಿ ಬೇಯಿಸಲಾಗುತ್ತದೆ. ಇದಕ್ಕೆ, ನಾವು ಸೀಸನ್ ತರಕಾರಿಗಳನ್ನು ಕೂಡ ಸೇರಿಸುತ್ತೇವೆ. ಸಕ್ಕರೆ ಅಥವಾ ಗೋಧಿಯನ್ನು ನಾವು ಸೇರಿಸುವುದಿಲ್ಲ. ಉಪ್ಪನ್ನು ಬಹಳ ಸೀಮಿತ ಪ್ರಮಾಣದಲ್ಲಿ ಬಳಸುತ್ತೇವೆ ಎಂದಿದ್ದಾರೆ.

  ಇದನ್ನೂ ಓದಿ: Video: ಶಿಕ್ಷಕಿ ವಿರುದ್ಧವೇ ಕಂಪ್ಲೇಂಟ್ ಕೊಟ್ಟ ಶಾಲಾ ಬಾಲಕ! ಪುಟ್ಟ ಪೋರನ ಕಷ್ಟ ಏನು ಅಂತ ನೀವೇ ನೋಡಿ

  ನಾಯಿಗಳಿಗೆ ಪ್ಯಾಕ್ ಮಾಡಿದ ಆಹಾರಗಳು ಲಭ್ಯವಿದ್ದರೂ, ಅವುಗಳಲ್ಲಿ ಹೆಚ್ಚಿನವು ನಾಯಿಗಳನ್ನು ಡಿಹೈಡ್ರೇಟ್ ಮಾಡುತ್ತವೆ ಎಂದಿದ್ದಾರೆ. ಗಜರಾಜ್ ಈ ವ್ಯವಸ್ಥೆಯನ್ನು ಪ್ರಾರಂಭಿಸಿದಾಗ, ಅವರು ಆಹಾರಕ್ಕಾಗಿ ಶುಲ್ಕ ವಿಧಿಸಲು ಬಯಸಲಿಲ್ಲ. ಆದರೂ, ಅವರ ಸ್ನೇಹಿತರು ನಾಮಮಾತ್ರದ ಮೊತ್ತವನ್ನು ವಿಧಿಸುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾರೆ.

  ಪ್ರತಿ ಆಹಾರದ ಪ್ಯಾಕೆಟ್‌ಗೆ 15 ರೂಪಾಯಿ ವೆಚ್ಚ

  ನಾಯಿಗಳಿಗೆ ತಯಾರಿಸುತ್ತಿರುವ ಪ್ರತಿ ಆಹಾರದ ಪ್ಯಾಕೆಟ್‌ಗೆ ಸರಿ ಸುಮಾರು 15 ರೂಪಾಯಿ ವ್ಯಯವಾಗುತ್ತದೆ ಎನ್ನುತ್ತಾರೆ ಗಜರಾಜ್. ತರಕಾರಿ ಬೆಲೆಗೆ ಅನುಗುಣವಾಗಿ ಬೆಲೆ ಏರಿಳಿತವಾಗುತ್ತದೆ. "ನಮಗೆ ಎಷ್ಟೇ ವೆಚ್ಚವಾಗಲಿ ನಾನು ಅದನ್ನು 5 ರೂ.ಗಿಂತ ಹೆಚ್ಚು ಬೆಲೆಗೆ ನಿಗದಿಪಡಿಸಲು ಉದ್ದೇಶಿಸುವುದಿಲ್ಲ. ನಾಯಿಗಳಿಗೆ ಆಹಾರ ನೀಡುವುದು ಮಾತ್ರ ನನ್ನ ಉದ್ದೇಶ ಎಂದಿದ್ದಾರೆ.

  ಪ್ರತಿ ದಿನ ಕನಿಷ್ಠ 3,000 ನಾಯಿಗಳಿಗೆ ಆಹಾರ ನೀಡಲು ಜೈಪುರದಾದ್ಯಂತ ಇನ್ನು ಐದು ಕೌಂಟರ್‌ಗಳನ್ನು ತೆರೆಯುವುದು ಬೆಜುಬಾನೊ ಕಿ ರಸೋಯ್‌ನ ಯೋಜನೆಯಾಗಿದೆ ಎಂದು ಗಜರಾಜ್ ಹೇಳುತ್ತಾರೆ. "ನಾವು ಜನರಿಂದ ಯಾವುದೇ ದೇಣಿಗೆಯನ್ನು ಸ್ವೀಕರಿಸುವುದಿಲ್ಲ ಮತ್ತು ಕೇವಲ ಸ್ವಯಂ-ನಿಧಿ ಮತ್ತು ಊಟದ ಪ್ಯಾಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ನಾವು ಮಾಡುವ ಹಣದ ಮೇಲೆ ಕೆಲಸ ಮಾಡುತ್ತೇವೆ." ಸ್ವಲ್ಪ ಸಮಯದವರೆಗೆ ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಿರುವ ಜೈಪುರ ನಿವಾಸಿ ಪ್ರಿಯಾಂಕಾ ಶರ್ಮಾ “ನಾಯಿಗಳು ಸಾಮಾನ್ಯವಾಗಿ ಏನು ಕೊಟ್ಟರೂ ತಿನ್ನುತ್ತವೆ, ನಾನು ಬೆಜುಬಾನೋ ಕಿ ರಸೋಯ್‌ನಿಂದ ಖರೀದಿಸಿದ ಪ್ಯಾಕೆಟ್‌ಗಳಲ್ಲಿ ಒಂದನ್ನು ಅವರಿಗೆ ತಿನ್ನಿಸಿದಾಗ ವ್ಯತ್ಯಾಸವನ್ನು ನೋಡಿದೆ. ಅದನ್ನು ಅವರ ಮುಂದೆ ಇರಿಸಿದ ಕೆಲವೇ ಸೆಕೆಂಡುಗಳಲ್ಲಿ, ತಿನ್ನುತ್ತವೆ. ಇದು ನಾಯಿಗಳಿಗೆ ಉತ್ತಮ ಪೌಷ್ಠಿಕ ಆಹಾರವಾಗಿದೆ'' ಎಂದು ಗಜರಾಜ್ ಕಾರ್ಯವನ್ನು ಹೊಗಳಿದ್ದಾರೆ.
  Published by:Kavya V
  First published: