Money Heist season 5: ಮನಿ ಹೈಸ್ಟ್ ಸೀಸನ್​ 5 ವೀಕ್ಷಿಸಲೆಂದು ಉದ್ಯೋಗಿಗಳಿಗೆ ರಜೆ ನೀಡಿದ ಕಂಪನಿ!

ಸ್ಪಾನಿಶ್​ ಭಾಷೆಯ Money Heist​ ಸೀಸನ್​ 5 ವೀಕ್ಷಿಸಲು ಜೈಪುರ ಮೂಲದ ಕಂಪನಿ ಒಂದು ದಿನ ರಜೆ ನೀಡಿದೆ. ಕಂಪನಿ ನೀಡಿದ ಇಂತಹ ಒಂದು ಆಫರ್​ನಿಂದಾಗಿ ಉದ್ಯೋಗಿಗಳಿಗೆ ಸಂತಸವಾಗಿದ್ದಲ್ಲದೆ. Money Heist​ ಸೀಸನ್​ 5 ನೋಡುವ ಕಾತುರಲ್ಲಿದ್ದಾರೆ.

ಮನಿ ಹೈಸ್ಟ್ /Money Heist

ಮನಿ ಹೈಸ್ಟ್ /Money Heist

  • Share this:
    ಜನಪ್ರಿಯ ವೆಬ್​​ ಸಿರೀಸ್​ಗಳಲ್ಲಿ Money Heist​ ಕೂಡ ಒಂದು. ಇದೀಗ ಮನಿ ಹೀಸ್ಟ್​ 5ನೇ ಸೀಸನ್​ ಬಿಡುಗಡೆಗೆ  ಸಿದ್ಧವಾಗಿದೆ. ಸೆಪ್ಟೆಂಬರ್​ 3 ರಂದು ಬಿಡುಗಡೆಯಾಗಲಿದೆ. ಸಾಕಷ್ಟು ಜನರು ಇದರ ವೀಕ್ಷಣೆಗೆ ಕಾದು ಕುಳಿತಿದ್ದಾರೆ. ಹೀಗಿರುವಾ ಭಾರತ ಮೂಲದ ಕಂಪನಿಯೊಂದು ತಮ್ಮ ಉದ್ಯೋಗಿಗಳಿಗೆ ಮನಿ ಹೈಸ್ಟ್​ ವೆಬ್​ಸಿರೀಸ್​ 5 ವೀಕ್ಷಿಸಲು ರಜೆಯನ್ನು ಘೋಷಿಸಿದೆ.

    ಸ್ಪಾನಿಶ್​ ಭಾಷೆಯ Money Heist​ ಸೀಸನ್​ 5 ವೀಕ್ಷಿಸಲು ಜೈಪುರ ಮೂಲದ ಕಂಪನಿ ಒಂದು ದಿನ ರಜೆ ನೀಡಿದೆ. ಕಂಪನಿ ನೀಡಿದ ಇಂತಹ ಒಂದು ಆಫರ್​ನಿಂದಾಗಿ ಉದ್ಯೋಗಿಗಳಿಗೆ ಸಂತಸವಾಗಿದ್ದಲ್ಲದೆ. Money Heist ಸೀಸನ್​ 5 ನೋಡುವ ಕಾತುರಲ್ಲಿದ್ದಾರೆ.

    ಜೈಪುರ ಮೂಲಕ ‘ವರ್ವೆ ಲಾಜಿಕ್’​ ಎಂಬ ಕಂಪನಿ ಉದ್ಯೋಗಿಗಳಿಗಾಗಿ ಸೆಪ್ಟೆಂಬರ್ 3 ರಂದು ‘ನೆಟ್​ಫ್ಲಿಕ್ಸ್​ ಆ್ಯಂಡ್​​ ಚಿಲ್​ ಹಾಲಿಡೇ’ ಎಂದು ರಜೆ ಘೋಷಿಸಿದೆ.

    ಕಂಪನಿ ಸಿಇಓ ಅಭಿಷೇಕ್​ ಜೈನ್​ ಈ ಬಗ್ಗೆ ಮಾತನಾಡಿದ್ದು, ಕಂಪನಿಗಾಗಿ ಅಷ್ಟೆಲ್ಲಾ ದುಡಿಯುವ ಉದ್ಯೋಗಿಗಳಿಗೆ  ಒಂದು ದಿನ ರಜೆ ನೀಡುವ ಮೂಲಕ Money Heist​ ಹೊಸ ಸಿರೀಸ್​ ನೋಡುತ್ತಾ ಹಾಯಾಗಿರಲಿ ಎಂದು ಆಲೋಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.



    ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಫೋಸ್ಟ್​ನಲ್ಲಿ,  ಮಾಸ್​ಬಂಕ್​​, ನಂಬರ್​​ ಸ್ವಿಚ್​ ಆಫ್​ ಮಾಡುವುದು, ಸುಳ್ಳು ಹೇಳಿ ರಜೆ ಬೇಕೆಂದು ಕೇಳುವುದನ್ನು ತಪ್ಪಿಸಲೆಂದು ಹೀಗೆ ಮಾಡಿದ್ದೇವೆ. ಕೆಲವೊಮ್ಮೆ ಕೆಲಸದ ಜೊತೆಗೆ ಚಿಲ್ಲಿಂಗ್​ ಕ್ಷಣಗಳನ್ನು ಕಳೆಯಲು ಉತ್ತಮ ಸಮಯ ಬೇಕಾಗುತ್ತದೆ. ಹಾಗಾಗಿ ರಜೆ ನೀಡಿದ್ದೇವೆ  ಎಂದು ಅಭಿಷೇಕ್​ ಬರೆದಿದ್ದಾರೆ.





    ಅಭಿಷೇಕ್​ ತನ್ನ ಉದ್ಯೋಗಿಗಳಿಗೆ ‘‘ಪಾಪ್​ಕಾರ್ನ್​ ಹಿಡಿದುಕೊಂಡು ಇಡೀ ಚಿತ್ರತಂಡಕ್ಕೊಂದು ಬೈ ಹೇಳಲು ಸಜ್ಜಾಗಿ, ವರ್ವೆ ಲಾಜಿಕ್​ ಮನೆಯಿಂದ ಕೆಲಸ ಮಾಡುವ ವೇಳೆ ಸ್ಫರ್ತಿ ತೋರಿಸಿ, ಕಠಿಣ ಕ್ಷಣಗಳಿಂದ ಹೊರಬಂದು ಎಂಜಾಯ್​ ಮಾಡಿರಿ. ನನ್ನೆಲ್ಲಾ ಸಿಬ್ಭಂದಿಗೆ ಧನ್ಯವಾದಗಳು‘ ಎಂದು ಮೇಲ್​ ಮಾಡಿದ್ದಾರೆ.

    ಸೆಪ್ಟೆಂಬರ್​ 3 ರಂದು ಉದ್ಯೋಗಿಗಳು ಒಂದು ಬ್ರೇಕ್​ ಅಂತೂ ತೆಗೆದುಕೊಳ್ಳಬಹುದು ಎಂದು ತನ್ನೆಲ್ಲಾ ಸಿಬ್ಬಂದಿಗೆ ಮೇಲ್​ ಕಳುಹಿಸಲಾಗಿದೆಯಂತೆ.

    Money Heist​ ಬಹುನಿರೀಕ್ಷತ ವೆಬ್​ ಸಿರೀಸ್​ಗಳಲ್ಲಿ ಒಂದು​. ಈಗಾಗಗಳೆ  ಸಿರೀಸ್​ಗಳನ್ನು ಬಿಡುಗಡೆ ಮಾಡಿದ್ದು, ಇದೀಗ 5ನೇ ಸೀಸಸ್​ ಬಿಡುಗಡೆ ಮಾಡಲು ಸಿದ್ಧವಾಗಿದೆ. ಅಂದಹಾಗೆಯೇ Money Heist​ ಪಾರ್ಟ್‌ 1 ಮತ್ತು 2  2017 ರಲ್ಲಿ ಬಿಡುಗಡೆಯಾದರೆ, ಮೂರು ಹಾಗೂ ನಾಲ್ಕನೇ ಭಾಗ 2019-2020ರಲ್ಲಿ ಬಿಡುಗಡೆಯಾಗಿದೆ. ಸೆಪ್ಟೆಂಬರ್​ 3 ರಂದು ಸೀಸನ್ 5 ಬಿಡುಗಡೆಯಾಗಲಿದೆ. ಹಾಗಗಿ ಅನೇಕರು ವೀಕ್ಷಣೆಗೆ ಕಾದಿದ್ದಾರೆ. ಇನ್ನು ಕೆಲವು ಜನರು ಪ್ರೊಪೆಸರ್​ ಹಾಗೂ ಅದರಲ್ಲಿ ಬರುವ ಪಾತ್ರಗಳಿಗೆ ಮನ ಸೋತಿದ್ದಾರೆ. ಅಷ್ಟರಮಟ್ಟಿಗೆ ವೀಕ್ಷಕರ ಮನಗೆದ್ದ ಸಿರೀಸ್​ ಇದಾಗಿದೆ. ಈಗಾಗಲೇ ಟಿವಿ, ಇಂಟರ್​ನೆಟ್​ನಲ್ಲಿ ಮನಿ ಹೀಸ್ಟ್​​ ಕುರಿತಾದ ವಿಡಿಯೋ ಹರಿದಾಡುತ್ತಿದೆ. ಸೆಪ್ಟೆಂಬರ್ 3 ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ.
    First published: