HOME » NEWS » Trend » JAILED PORN STAR RON JEREMY HIT WITH NEW SEX CRIMES CHARGES RMD

ಸೆಕ್ಸ್ ಕ್ರೈಮ್​ ಆರೋಪ; ಪಾರ್ನ್ ಸ್ಟಾರ್​ಗೆ ಬರೋಬ್ಬರಿ 250 ವರ್ಷ ಜೈಲು ಶಿಕ್ಷೆ?

ರೊನಾಲ್ಡ್​ ಜೆರೆಮಿ ಹಯಾತ್​ ಎಂಬುವವರು ರಾನ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. 1996ರ ಅವಧಿಯಲ್ಲಿ ರಾನ್​, 17-38 ವಯಸ್ಸಿನ ನಡುವಿನ ​ಯುವತಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

news18-kannada
Updated:October 29, 2020, 3:37 PM IST
ಸೆಕ್ಸ್ ಕ್ರೈಮ್​ ಆರೋಪ; ಪಾರ್ನ್ ಸ್ಟಾರ್​ಗೆ ಬರೋಬ್ಬರಿ 250 ವರ್ಷ ಜೈಲು ಶಿಕ್ಷೆ?
ಜೈಲು ಶಿಕ್ಷೆಗೊಳಗಾದ ಪಾರ್ನ್​ ಸ್ಟಾರ್​
  • Share this:
ಲೈಂಗಿಕು ಕಿರುಕುಳ, ಅತ್ಯಾಚಾರ ಹಲ್ಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿರುವ ಪಾರ್ನ್​ ಸ್ಟಾರ್​ ರಾನ್​ ಜೆರೆಮಿ (67) ಮೇಲೆ ಈಗ ಮತ್ತಷ್ಟು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಅವರಿಗೆ ವಿಧಿಸಿದ ಜೈಲು ಶಿಕ್ಷೆ ಅವಧಿಯನ್ನು ಈಗ ನ್ಯಾಯಾಲಯ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಿರುಕುಳ, ಮಹಿಳೆಯರ ಮೇಲೆ ಹಲ್ಲೆ ಮಾಡಿದ ಆರೋಪದ ಜೊತೆಗೆ ಅತ್ಯಾಚಾರ ಮಾಡಿದ ಆರೋಪ ರಾನ್​ ಜೆರೆಮಿ ವಿರುದ್ಧ ಕೇಳಿ ಬಂದಿತ್ತು. ಈ ಆರೋಪ ಸಾಬೀತಾದ ಬೆನ್ನಲ್ಲೇ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಈತನ ವಿರುದ್ಧ ನಾಲ್ಕೈದು ಮಹಿಳೆಯರು ಮತ್ತೆ ಹೊಸ ದೂರು​ ದಾಖಲು ಮಾಡಿದ್ದಾರೆ.

ರೊನಾಲ್ಡ್​ ಜೆರೆಮಿ ಹಯಾತ್​ ಎಂಬುವವರು ರಾನ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. 1996ರ ಅವಧಿಯಲ್ಲಿ ರಾನ್​, 17-38 ವಯಸ್ಸಿನ ನಡುವಿನ ​ಯುವತಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, 2013ರಲ್ಲಿ ವೆಸ್ಟ್​ ಹಾಲಿವುಡ್​ ಬಾರ್​ನಲ್ಲಿ ಕಿರುಕುಳ ನೀಡಿರುವುದಾಗಿ ಈಕೆ ಆರೋಪ ಮಾಡಿದ್ದಾಳೆ.

ಇದನ್ನೂ ಓದಿ: ಇದು ಮೂಗಿನ ರಂಧ್ರಕ್ಕೆ ಸಿಲುಕಿಸುವ ಮಾಸ್ಕ್​; ಹೇಗಿದೆ ಗೊತ್ತಾ?

ಮತ್ತೋರ್ವ ಯುವತಿ ಈ ಬಗ್ಗೆ ಆರೋಪ ಮಾಡಿದ್ದು, 2013ರಲ್ಲಿ ತನ್ನ ಮೇಲೆ ರಾನ್​ನಿಂದ ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ಈ ಆರೋಪಗಳು ಸಾಬೀತಾದರೆ ಈತನಿಗೆ ಕನಿಷ್ಠ 250 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ. ಶೀಘ್ರವೇ ಈ ಬಗ್ಗೆಯೂ ವಿಚಾರಣೆ ನಡೆಯಲಿದೆ.
Published by: Rajesh Duggumane
First published: October 29, 2020, 3:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories