Viral Video: ನೀರಿನಲ್ಲಿ ಸಂಚರಿಸುತ್ತಿದ್ದ ಮೊಸಳೆಗಾಗಿ ಎತ್ತರದಿಂದ ಜಿಗಿದು ಬೇಟೆಯಾಡಿದ ಚಿರತೆ!

ಚಿರತೆ ವೇಗವಾಗಿ ಓಡುವ ಪ್ರಾಣಿ, ಅವುಗಳು ಜಿಂಕೆಯನ್ನು ಬೇಟೆಯಾಡುತ್ತವೆ. ಅಂದರೆ ವೇಗವಾಗಿ ಓಡುವ ಜಿಂಕೆಯನ್ನು ಬೆನ್ನಟ್ಟಿ ಹಿಡಿದು ತಿನ್ನುತ್ತವೆ. ಆದರೆ ಇಲ್ಲೊಂದು ಚಿರತೆ ಮೊಸಳೆಯ ಮರಿಯನ್ನ ಹೊಂಚು ಹಾಕಿದೆ.

ಮೊಸಳೆಯನ್ನು ಬೇಟೆಯಾಡಿದ ಚಿರತೆ

ಮೊಸಳೆಯನ್ನು ಬೇಟೆಯಾಡಿದ ಚಿರತೆ

  • Share this:
    ಹುಲಿ, ಚಿರತೆ, ಸಿಂಹದ ಶಕ್ತಿಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಕಣ್ಣೆದುರು ಕಂಡ ಪ್ರಾಣಿಗಳನ್ನು ಹೊಂಚುಹಾಕಿ ಹಿಡಿದು ಮುಕ್ಕುವಂತಹ ಶಕ್ತಿ ಅವುಗಳಿಗಿದೆ. ಸಾಮಾನ್ಯವಾಗಿ ಅನಿಮಲ್​ ಪ್ಲಾನೆಟ್ (Animal Planet), ನ್ಯಾಷನಲ್​ ಜಿಯೋಗ್ರಫಿ​ ವೀಕ್ಷಿಸಿದಾಗ ಈ ಬಲಿಷ್ಠ ಪ್ರಾಣಿಗಳು ಜಿಂಕೆ (Deer), ಕಾಡುಕೋಣ (bison)ಗಳನ್ನು ಹಿಡಿದು ತಿನ್ನುವ ದೃಶ್ಯವನ್ನು ಕಾಣಬಹುದು. ಆದರೆ ಚಿರತೆಯೊಂದು ಮೊಸಳೆಯೊಂದನ್ನು ಹೊಂಚು ಹಾಕಿ ಹಿಡಿದಿದೆ. ಅಚ್ಚರಿಯ ಸಂಗತಿ ಎಂದರೆ ಮೊಸಳೆ ಕೂಡ ಬಲಿಷ್ಠತೆಯಿಂದ ಕೂಡಿದ್ದು, ಆದರೆ ಚಿರತೆ (leopard) ನೀರಿನಲ್ಲಿ ಸಂಚರಿಸುತ್ತಿದ್ದ ಮೊಸಳೆಗಾಗಿ ಕಾದು ಕೊನೆಗೆ ದೊಪ್ಪನೆ ನೀರಿಗೆ ಜಿಗಿದು ಹಿಡಿದು ಕಾಡಿಗೆ ಎಳೆದೊಯ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)​ ಆಗಿದೆ.

    ಚಿರತೆ ವೇಗವಾಗಿ ಓಡುವ ಪ್ರಾಣಿ, ಅವುಗಳು ಜಿಂಕೆಯನ್ನು ಬೇಟೆಯಾಡುತ್ತವೆ. ಅಂದರೆ ವೇಗವಾಗಿ ಓಡುವ ಜಿಂಕೆಯನ್ನು ಬೆನ್ನಟ್ಟಿ ಹಿಡಿದು ತಿನ್ನುತ್ತವೆ. ಆದರೆ ಇಲ್ಲೊಂದು ಚಿರತೆ ಮೊಸಳೆಯ ಮರಿಯನ್ನ ಹೊಂಚು ಹಾಕಿದೆ. ಸಾಮಾನ್ಯವಾಗಿ ಚಿರತೆ ನೀರಿಗೆ ಇಳಿದು ಬೇಟೆಯಾಡುವುದು ತೀರ ಕಡಿಮೆ. ಆದರೆ ಈ ಚಿರತೆ ಮಾತ್ರ ನೀರಿನಲ್ಲಿ ಸಂಚರಿಸುತ್ತಿದ್ದ ಮೊಸಳೆಗಾಗಿ ಕಾದು, ಕೊನೆಗೆ ತಾನಿದ್ದ ಎತ್ತರ ಪ್ರದೇಶದಿಂದ ನೇರವಾಗಿ ಮೊಸಳೆ ಮೇಲೆ ಹಾರಿದೆ. ಹಾರಿದ ರಭಸಕ್ಕೆ ಸರಿಯಾಗಿ ಬೇಟೆ ಸಿಕ್ಕಿದೆ.

    ಚಿರತೆ ನೀರಿಗೆ ಹಾರಿ ತನ್ನ ಹಲ್ಲಿನಿಂದ ಮೊಸಳೆಯನ್ನು ಹಿಡಿದಿದೆ. ಒಂದಷ್ಟು ನಿಮಿಷಗಳ ಕಾಲ ಜೀವನ್ಮರಣಕ್ಕೆ ಮೊಸಳೆ ಹೋರಾಡಿದರು ಚಿರತೆ ಮಾತ್ರ ತನ್ನ ಬಿಗಿಹಲ್ಲಿನಿಂದ ಮೊಸಳೆಯನ್ನು ತಪ್ಪಿಸಿಕೊಳ್ಳಲು ಬಿಟ್ಟಿಲ್ಲ. ಕೊನೆಗೆ ಬೇಟೆ ಸಿಕ್ಕ ಖುಷಿಯಲ್ಲಿ ಮೊಸಳೆಯನ್ನು ಕಾಡಿಗೆ ತೆಗೆದುಕೊಂಡು ಹೋಗಿದೆ.

    ಇದನ್ನೂ ಓದಿ: Viral Story: ಮಲಮಗನಿಂದ ಗರ್ಭಿಣಿಯಾಗಿ ಮಗು ಪಡೆದ ತಾಯಿ! ಇದು ಕಲಿಗಾಲವಯ್ಯಾ

    ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಈ ದೃಶ್ಯವನ್ನೇ ಸೆರೆಹಿಡಿಯಲು ಕ್ಯಾಮೆರಾಮೆನ್​​ ಕಾದು ನಿಂತಿದ್ದಾರೆ. ಗಂಟೆಗಳಷ್ಟು ಹೊತ್ತು ಚಿರತೆಯ ಬೇಟೆಯನ್ನು ಸೆರೆಹಿಡಿಯಲು ನಿಂತಿದ್ದಾರೆ. ಕೊನೆಗೆ ಚಿರತೆಯ ಬೇಟೆ ಕ್ಯಾಮೆರಾದಲ್ಲಿ ಚೆನ್ನಾಗಿ ಸೆರೆಯಾಗಿದೆ.





    ಅಂದಹಾಗೆಯೇ 42 ಸೆಕೆಂಡುಗಳ ಈ ವಿಡಿಯೊವನ್ನು ಟ್ವಿಟ್ಟರ್​ನಲ್ಲಿ ಸದ್ಯ ವೈರಲ್​ ಆಗುತ್ತಿದೆ. ಫಿಗೆನ್ ಹೆಸರಿನ ಖಾತೆಯು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. "OMG ವಾಟ್ ಎ ಪವರ್" ಎಂದು ಬಳಕೆದಾರರು ಶೀರ್ಷಿಕೆ ನೀಡಿದ್ದಾರೆ. ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ ಆಗಿದೆ. ಕಾಡಿನಲ್ಲಿ ಪೊದೆಗಳ ನಡುವೆ ಚಿರತೆ ಕುಳಿತುಕೊಂಡು ಮೊಸಳೆಯನ್ನು ಬೇಟೆಯಾಡಿದೆ.

    ಇದನ್ನೂ ಓದಿ: Two Marriage: ಒಂದಲ್ಲಾ, ಎರಡು ಮದುವೆ ಆಗಲೇಬೇಕು! ಇಲ್ಲಾ ಅಂದ್ರೆ ಈ ದೇಶದಲ್ಲಿ ಜೈಲಿಗೆ ಹಾಕ್ತಾರೆ

    ಈ ಬೇಟೆಯ ವಿಡಿಯೋಗೆ ಅಭಿಮಾನಿಗಳು ಟ್ವಿಟರ್‌ನಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಅಲಿಗೇಟರ್‌ಗಳು/ಮೊಸಳೆಗಳು/ಕೈಮನ್‌ಗಳು ಬೇಟೆಯಾಗಬಹುದೆಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಮತ್ತು ಹುಲಿಗಳು / ಸಿಂಹಗಳು / ಓಸಿಲಾಟ್‌ಗಳು (ಅದು ಏನೇ ಇರಲಿ) ಹಾಗೆ ಮೀನುಗಾರಿಕೆಗೆ ಹೋಗುತ್ತವೆ, ”ಎಂದು ಟ್ವಿಟರ್‌ನಟಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.



    ಟ್ವಿಟ್ಟರ್​ ಬಳಕೆದಾರನೊಬ್ಬ ಈ ವಿಡಿಯೋ ನೋಡಿ "ಏನು ಶಕ್ತಿ?? ಇದು ಮೊಸಳೆ ಮಗುವನ್ನು ಕೊಂದಿತು. ಅಮ್ಮ ಕ್ರೋಕ್ ಮುಂದೆ ಅದು ಎಷ್ಟು ಧೈರ್ಯಶಾಲಿ ಎಂದು ನೋಡೋಣ, ”ಎಂದು ಕಾಮೆಂಟ್​ ಬರೆದಿದ್ದಾರೆ.

    ಚಿರತೆ ಅಥವಾ ಸಿಂಹವಾಗಲಿ ಮೊಸಳೆಯನ್ನೆ ಬೇಟೆಯಾಡಿಲ್ಲವೆಂದಲ್ಲ. ಇಂತಹ ಬಲಿಷ್ಠ ಪ್ರಾಣಿಗಳು ಹೆಬ್ಚಾವು, ಮೊಸಳೆಯನ್ನು ಬೇಟೆಯಾಡಿದ ಅನೇಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ಆದರೆ ಕೆಲವೊಂದು ವಿಡಿಯೋ ವಿಶೇಷತೆಯಿಂದ ಕೂಡಿರುತ್ತದೆ. ಅದರಂತೆಯೇ ಚಿರತೆ ಪದೆಯಲ್ಲಿ ಅಡಗಿ ಕುಳಿತುಕೊಂಡು ಮೊಸಳೆಯ ಮರಿಯ ಮೇಲೆ ಎರಗಿ ಬೇಟೆಯಾಡುವುದು ಮಾತ್ರ ಕಣ್ಣು ಕಟ್ಟುವಂತಿದೆ. ನ್ಯಾಷನಲ್ ಜಿಯಾಗ್ರಫಿಕ್ ಹಂಚಿಕೊಂಡ ವಿಡಿಯೊ ಇದಾಗಿದೆ
    Published by:Harshith AS
    First published: