ಕೆಲವೊಮ್ಮೆ ಎರಡು ಬೇರೆ ಬೇರೆ ಪ್ರಾಣಿಗಳು (Animals Viral Video) ನಮಗೆ ಒಂದೇ ರೀತಿ ಕಾಣುತ್ತವೆ. ಅಷ್ಟೇ ಅಲ್ಲದೆ ರಾತ್ರಿ ಹೊತ್ತು ನೋಡಿದರೆ ಕಾಡು ಬೆಕ್ಕಿನ ಕಣ್ಣು ಮತ್ತು ಚಿರತೆಯ ಕಣ್ಣು ಒಂದೇ ರೀತಿ ಅಂತ ಅನ್ನಿಸುತ್ತವೆ. ಎಷ್ಟೋ ಬಾರಿ ರಾತ್ರಿ ಹೊತ್ತಿನಲ್ಲಿ ಕಾಡು ಬೆಕ್ಕಿನ ಕಣ್ಣುಗಳನ್ನ ಚಿರತೆಯ ಕಣ್ಣುಗಳು ಅಂತ ಜನರು ಅಂದುಕೊಂಡ ಉದಾಹರಣೆಗಳು ಇವೆ. ಹೌದು, ಎರಡು ಬೇರೆ ಬೇರೆ ಪ್ರಾಣಿಗಳು (Animals) ಒಂದೇ ರೀತಿ ನಮಗೆ ಕಂಡರೂ, ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅವುಗಳಲ್ಲಿರುವ ಆ ಚಿಕ್ಕ-ಪುಟ್ಟ ವ್ಯತ್ಯಾಸಗಳು ನಮಗೆ ತಿಳಿಯುತ್ತವೆ.
ಇದನ್ನೆಲ್ಲಾ ಈಗೇಕೆ ಹೇಳುತ್ತಿದ್ದೇವೆ ನಿಮಗೆ ಅಂತ ಆಶ್ಚರ್ಯವಾಗಬಹುದು. ವಿಷಯ ಏನಪ್ಪಾ ಎಂದರೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ವಿಡಿಯೋಗಳಲ್ಲಿ ನಾವು ಈ ಚಿರತೆ ಮತ್ತು ಜಾಗ್ವಾರ್ಗಳನ್ನು ಎಷ್ಟೋ ಬಾರಿ ನೋಡಿ ಎರಡು ಒಂದೇ ಅಂತ ಗೊಂದಲ ಮಾಡಿಕೊಂಡಿರುತ್ತೇವೆ.
ಚಿರತೆ ಮತ್ತು ಜಾಗ್ವಾರ್ ನಡುವಿನ ವ್ಯತ್ಯಾಸ ಗೊತ್ತೇ?
ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಾಸ್ವಾನ್ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಈ ಫೋಟೋದಲ್ಲಿ ದೊಡ್ಡ ಚಿರತೆ ಮತ್ತು ಜಾಗ್ವಾರ್ ಗಳು ಕುಳಿತಿರುವುದನ್ನು ಕಾಣಬಹುದು.
Lets see how many can identify. Which one of them is Jaguar & which one is Leopard. The pattern makes the difference, apart from other things. pic.twitter.com/C68YIlDKCC
— Parveen Kaswan, IFS (@ParveenKaswan) November 28, 2022
ಯಾವುದು ಜಾಗ್ವಾರ್ ಮತ್ತು ಚಿರತೆ?
"ಎಷ್ಟು ಜನರು ಗುರುತಿಸಬಲ್ಲರು ಎಂದು ನೋಡೋಣ. ಅವುಗಳಲ್ಲಿ ಯಾವುದು ಜಾಗ್ವಾರ್ ಮತ್ತು ಯಾವುದು ಚಿರತೆ. ದೇಹದ ಮಾದರಿಯು ಇತರ ವಿಷಯಗಳನ್ನು ಹೊರತುಪಡಿಸಿ ವ್ಯತ್ಯಾಸ ಇರುತ್ತದೆ" ಎಂದು ಕಾಸ್ವಾನ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಎರಡು ಪ್ರಾಣಿಗಳನ್ನು ಸರಿಯಾಗಿ ಗುರುತಿಸಿದ ನೆಟ್ಟಿಗರು
ಟ್ವಿಟರ್ ಬಳಕೆದಾರರು ಈ ಪ್ರಶ್ನೆಗೆ ಉತ್ತರಿಸಲು ತುಂಬಾ ಆಸಕ್ತಿ ತೋರಿದರು. ಅವರಲ್ಲಿ ಅನೇಕರು ಎರಡು ಪ್ರಾಣಿಗಳನ್ನು ಗಮನವಿಟ್ಟು ನೋಡಿ ಸರಿಯಾಗಿ ಗುರುತಿಸಿದರು.
"ಗುರುತಿಸುವುದು ಬಹಳ ಸುಲಭ. ಮೂಲಭೂತ ವ್ಯತ್ಯಾಸವೆಂದರೆ ಚಿರತೆಯ ದೇಹದ ಮೇಲಿನ ಕಲೆಗಳು ಅಷ್ಟೊಂದು ದೊಡ್ಡ ಗಾತ್ರದ್ದಾಗಿಲ್ಲ. ಎರಡು ಚುಕ್ಕೆಗಳ ನಡುವಿನ ಅಂತರವು ತುಂಬಾ ಕಡಿಮೆ. ಆದರೆ ಜಾಗ್ವಾರ್ನ ಮೈ ಮೇಲಿರುವ ಮಚ್ಚೆಗಳು ದೊಡ್ಡದಾಗಿರುತ್ತವೆ ಮತ್ತು ಚಿರತೆಗೆ ಹೋಲಿಸಿದರೆ ಎರಡು ಸ್ಥಳಗಳ ನಡುವಿನ ಅಂತರವೂ ದೊಡ್ಡದಾಗಿದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದರು.
"ಚಿರತೆಗಳು ಹೆಚ್ಚು ಗಾಢವಾದ ಚುಕ್ಕೆಗಳು ಮತ್ತು ರೋಸೆಟ್ಗಳಿಂದ (ಪ್ರಾಣಿಗಳ ತುಪ್ಪಳ ಮತ್ತು ಚರ್ಮದ ಮೇಲೆ ಕಂಡುಬರುವ ಗುಲಾಬಿ-ತರಹದ ಗುರುತು ಅಥವಾ ರಚನೆ) ಆವೃತವಾಗಿವೆ. ಜಾಗ್ವಾರ್ಗಳು ವಿಭಿನ್ನ ಆಂತರಿಕ ಚುಕ್ಕೆಗಳನ್ನು ಹೊಂದಿರುವ ಬ್ಲಾಕಿ ರೋಸೆಟ್ ಗಳನ್ನು ಹೊಂದಿರುತ್ತವೆ. ಜಾಗ್ವಾರ್ ಗಳು ಸರಾಸರಿ ಚಿರತೆಗಳಿಗಿಂತ ದಪ್ಪ ಮತ್ತು ಭಾರವಾಗಿರುತ್ತವೆ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.
ಇದನ್ನೂ ಓದಿ: Helicopter Car: ಮಾರುತಿ ವ್ಯಾಗನಾರ್‌ಗೆ ಹೆಲಿಕಾಪ್ಟರ್ ಲುಕ್! ಈ ಕಾರು ನಿಜವಾಗಿಯೂ ಹಾರುತ್ತಾ?
ನ್ಯಾಷನಲ್ ಜಿಯಾಗ್ರಫಿಕ್ ಎರಡು ಪ್ರಾಣಿಗಳ ಬಗ್ಗೆ ಮೀಸಲಾದ ಪುಟವನ್ನು ಹೊಂದಿದೆ, ಇದು ಅವುಗಳ ಭೌತಿಕ ಗುಣಲಕ್ಷಣಗಳನ್ನು ವಿವರಿಸುತ್ತದೆ. ಎರಡೂ ಪ್ರಾಣಿಗಳು ಪರಭಕ್ಷಕಗಳಾಗಿದ್ದು, ಮೈ ಮೇಲೆ ಮಚ್ಚೆಗಳನ್ನು ಹೊಂದಿದ್ದು, ನೋಡಲು ಬಹುತೇಕವಾಗಿ ಒಂದೇ ರೀತಿ ಕಾಣುತ್ತವೆ ಎಂದು ವನ್ಯಜೀವಿ ನಿಯತಕಾಲಿಕವು ಹೇಳುತ್ತದೆ.
ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಾಣಿಸುವ ಜಾಗ್ವಾರ್ಗಳು
"ಜಾಗ್ವಾರ್ಗಳು ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಆದರೆ ಚಿರತೆಗಳು ಆಫ್ರಿಕಾ ಮತ್ತು ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ" ಎಂದು ಅದರ ವೆಬ್‌ಸೈಟ್ ತಿಳಿಸಿದೆ.
ಇದನ್ನೂ ಓದಿ: Viral Video: ಭಾರತೀಯ ಅತ್ತೆ, ಜರ್ಮನ್ ಸೊಸೆಯ ಈರುಳ್ಳಿ ಕೃಷಿ: ಅಪರೂಪದ ವಿಡಿಯೋಗೆ ನೆಟ್ಟಿಗರು ಫಿದಾ!
ಚಿರತೆಗಳಿಗಿಂತ ಜಾಗ್ವಾರ್ ಗಳು ದೊಡ್ಡದಾಗಿದ್ದು, 175 ಪೌಂಡ್ ತೂಕದ ಚಿರತೆಗೆ ಹೋಲಿಸಿದರೆ ಅದು 250 ಪೌಂಡ್ ತೂಕವಿದೆ ಎಂದು ವೆಬ್‌ಸೈಟ್ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ