ಆ್ಯಕ್ಷನ್​ ಹೀರೊ ಜಾಕಿಚಾನ್​ ಮಗಳು ಬೀದಿಪಾಲು!


Updated:May 1, 2018, 4:51 PM IST
ಆ್ಯಕ್ಷನ್​ ಹೀರೊ ಜಾಕಿಚಾನ್​ ಮಗಳು ಬೀದಿಪಾಲು!

Updated: May 1, 2018, 4:51 PM IST
ನ್ಯೂಸ್​ 18 ಕನ್ನಡ

ಹಾಂಕಾಂಗ್​: ಆ್ಯಕ್ಷನ್​ ಕಿಂಗ್​ ಜಾಕಿಚಾನ್​ ಅವರ ಮಾಜಿ ಪ್ರೇಯಸಿಯ ಮಗಳು ಬೀದಿ ಪಾಲಾಗಿದ್ದು, ತಮ್ಮ ಸ್ಥಿತಿಗೆ ಸಲಿಂಗಕಾಮ ವಿರೋಧಿ ಪೋಷಕರೇ ಕಾರಣ ಎಂದು ಆರೋಪಿಸಿದ್ದಾರೆ.

ಜಾಕಿಚಾನ್​ ಅವರ ಮಾಜಿ ಪ್ರೇಯಸಿ ಎಲೈನ್​ ಎನ್​ಜಿಯ ಮಗಳು ಎಟ್ಟಾ ಎನ್​ಜಿ ಸಲಿಂಗಕಾಮಿಯಾಗಿದ್ದಾಳೆ. ಆದರೆ ಕಳೆದ ಒಂದು ತಿಂಗಳಿ ಹಿಂದೆ ತನ್ನ ಪ್ರೇಯಸಿಯೊಂದಿಗೆ ಮನೆಬಿಟ್ಟಿದ್ದ ಎಟ್ಟಾ ಇದೀಗ ಹಾಂಕಾಂಗ್​ನ ಬೀದಿಯೊಂದರಲ್ಲಿ ವಾಸವಾಗಿರುವುದಾಗಿ ಹೇಳಿಕೊಂಡು ವೀಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ.ನನ್ನ ಪೋಷಕರು ಸಲಿಂಗಕಾಮವನ್ನು ವಿರೋಧಿಸುತ್ತಾರೆ ಹೀಗಾಗಿ ಕಳೆದ ಒಂದು ತಿಂಗಳಿನಿಂದ ಮನೆಯನ್ನು ತೊರೆದಿದ್ದೇವೆ. ಆದರೆ ನಮಗೆ ವಾಸಿಸಲು ಸೂಕ್ತ ಸ್ಥಳ ದೊರಕದೇ ಬೀದಿ ಬದಿ, ಬ್ರಿಡ್ಜ್​ ಕೆಳಗೂ ವಾಸ ಮಾಡುವಂತಾಗಿದೆ. ನಮ್ಮ ಪರಿಸ್ಥತಿಯನ್ನು ಪೊಲೀಸರಿಗೆ, ಎಲ್​ಜಿಬಿಟಿ ಸಂಸ್ಥೆ ಸೇರಿದಂತೆ ಎಲ್ಲರಿಗೂ ಹೇಳಿಕೊಂಡಿದ್ದೇವೆ. ಆದರೆ ಯಾರೊಬ್ಬರೂ ಕಿಂಚಿತ್ತು ಕರುಣೆ ತೋರುತ್ತಿಲ್ಲ ಎಂದು ಎಟ್ಟಾ ತನ್ನ ಪ್ರೇಯಸಿಯೊಂದಿಗೆ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಸದ್ಯ ಜೋನ್ ಲಿನ್​ಳೊಂದಿಗೆ ಕುಟುಂಬ ನಡೆಸುತ್ತಿರುವ ಜಾಕಿ ಚಾನ್ ಈ ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಎಟ್ಟಾಳ ತಾಯಿ ಮಾತ್ರಾ ಮಗಳ ವಿರುದ್ಧ ಗರಂ ಆಗಿದ್ದು, ಎಲ್ಲರೂ ದುಡಿದು ತಿನ್ನುತ್ತಾರೆ. ವೀಡಿಯೋ ಮಾಡಿದರೆ ಹಣ ಸಂಪಾಧಿಸುವುದು ಅಸಾಧ್ಯ. ನೀವು ದುಡಿದು ತಿನ್ನಿ ಎಂದು ಖಡಕ್​ ಆಗಿ ಮಗಳಿಗೆ ಹೇಳಿದ್ದಾರೆ.
First published:May 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...