Video Viral: 18 ಸಾವಿರ ಎತ್ತರ, ಶೂನ್ಯ ತಾಪಮಾನದಲ್ಲಿ ಸೂರ್ಯ ನಮಸ್ಕಾರ ಮಾಡಿದ ಪೊಲೀಸ್ ಅಧಿಕಾರಿ!

ಇಂಡೋ-ಟಿಬೇಟಿಯನ್​ ಬಾರ್ಡರ್​ ಪೊಲೀಸ್​ ಅಧಿಕಾರಿಯೊಬ್ಬರು ​ಲಡಾಕ್​ನ 18 ಸಾವಿರ ಎತ್ತರದ ಪ್ರದೇಶದಲ್ಲಿ ನಿಂತುಕೊಂಡು ಕೊರೆಯುವ ಶೂನ್ಯ ತಾಪಮಾನದ ಚಳಿಗೆ ಸೂರ್ಯ ನಮಸ್ಕಾರ ಮಾಡಿದ್ದಾರೆ. ಸದ್ಯ ಪೊಲೀಸ್​ ಅಧಿಕಾರಿ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್​ ಆಗಿದೆ.

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ

 • Share this:
  ಇಂದು ವಿಶ್ವ ಯೋಗದಿನ. ಅನೇಕರು ಬೆಳಗ್ಗಿನ ಜಾವ ಯೋಗ ಮಾಡುವ ಮೂಲಕ ಈ ದಿನವನ್ನು ಆಚರಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ. ಅದರಂತೆ ಇಲ್ಲೊಬ್ಬರು ಅಧಿಕಾರಿ 18 ಸಾವಿರ ಎತ್ತರದ ಪ್ರದೇಶದಲ್ಲಿ ಝಿರೋ ತಾಪಮಾನದಲ್ಲಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಗಮನಸೆಳೆದಿದ್ದಾರೆ.

  ಇಂಡೋ-ಟಿಬೇಟಿಯನ್​ ಬಾರ್ಡರ್​ ಪೊಲೀಸ್​ ಅಧಿಕಾರಿಯೊಬ್ಬರು ​ಲಡಾಕ್​ನ 18 ಸಾವಿರ ಎತ್ತರದ ಪ್ರದೇಶದಲ್ಲಿ ನಿಂತುಕೊಂಡು ಕೊರೆಯುವ ಶೂನ್ಯ ತಾಪಮಾನದ ಚಳಿಗೆ ಸೂರ್ಯ ನಮಸ್ಕಾರ ಮಾಡಿದ್ದಾರೆ. ಸದ್ಯ ಪೊಲೀಸ್​ ಅಧಿಕಾರಿ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್​ ಆಗಿದೆ.

  ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುವಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯೋಗ ದಿನಾಚರಣೆಯನ್ನು ಆಚರಿಸುವ ಮೂಲಕ ಜನರಲ್ಲಿ ಉತ್ಸಾಹ ಕಡಿಮೆಯಾಗಿಲ್ಲ. ಇಂತಹ ಬಿಕ್ಕಟ್ಟಿನ ಮಧ್ಯೆ ಯೋಗವು ಭರವಸೆಯ ಕಿರಣವಾಗಿದೆ ಎಂದು ಹೇಳಿದ್ದಾರೆ.

  ಇನ್ನು ಹಲವಾರು ರಾಜಕಾರಣಿಗಳು ಕೂಡ ಯೋಗ ಮಾಡುವ ದೃಶ್ಯವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಬಾಲಿವುಡ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಯೋಗ ಮಾಡುವ ಮೂಲಕ ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ.
  Published by:Harshith AS
  First published: