• Home
  • »
  • News
  • »
  • trend
  • »
  • Viral Video: ಲಡಾಖ್​​ನ ಮೈ ಕೊರೆಯುವ ಚಳಿಯಲ್ಲಿ 65 ಪುಷ್-ಅಪ್‌ ಮಾಡಿದ ಯೋಧ; ವಿಡಿಯೋ ಸಖತ್ ವೈರಲ್

Viral Video: ಲಡಾಖ್​​ನ ಮೈ ಕೊರೆಯುವ ಚಳಿಯಲ್ಲಿ 65 ಪುಷ್-ಅಪ್‌ ಮಾಡಿದ ಯೋಧ; ವಿಡಿಯೋ ಸಖತ್ ವೈರಲ್

ವೈರಲ್ ವಿಡಿಯೋದ ದೃಶ್ಯ

ವೈರಲ್ ವಿಡಿಯೋದ ದೃಶ್ಯ

Soldier Push Ups: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ನಮ್ಮ ದೇಶವನ್ನು ರಕ್ಷಿಸುವ ಪರ್ವತ ಪ್ರದೇಶಗಳಲ್ಲಿ ನೇಮಕ ಮಾಡಲಾದ ಸಿಬ್ಬಂದಿಗಳ ಜೀವನದ ಬಗ್ಗೆ ಜನರಿಗೆ ಮಾಹಿತಿ ನೀಡಲು ಹಾಗು ಅದರ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಆಗಾಗ ಸಾಮಾಜಿಕ ಜಾಲಾತಾಣದಲ್ಲಿ ಕೆಲ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತದೆ.

ಮುಂದೆ ಓದಿ ...
  • Share this:

ನಮ್ಮ ಯೋಧರು (Soldiers) ನಮ್ಮ ದೇಶಕ್ಕಾಗಿ ಮತ್ತು ನಮಗಾಗಿ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ, ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಾರೆ.  ಚಳಿ (Winter), ಬಿಸಿಲು ಮತ್ತು ಗಾಳಿಯನ್ನು ಲೆಕ್ಕಿಸದೇ ದಿನದ 24 ಗಂಟೆ ನಮಗೆ ಕಾವಲಾಗಿರುತ್ತಾರೆ. ನಾವು ಯೋಧರ ಕೆಲ ವಿಡಿಯೋಗಳನ್ನು (Video) ನೋಡಿ ಅವರ ಬಗ್ಗೆ ಹೆಮ್ಮೆ ಪಡುತ್ತೇವೆ, ಕೆಲವೊಂದು ವಿಡಿಯೋ ಮೈ ಜುಮ್ಮೆನಿಸುವಂತಿರುತ್ತದೆ. ಈಗ ಇಂತಹದೆ ವಿಡಿಯೋ ಒಂದು ವೈರಲ್​ ಆಗಿದ್ದು, ಇದು ಯೋಧರು ಸಾಧನೆ ಮಾಡಲು ಏನೇ ಅಡ್ಡಿ ಬಂದರೂ ಸಾಧಿಸುತ್ತಾರೆ ಎಂಬುದನ್ನ ತೋರಿಸುತ್ತದೆ.  


ಲಡಾಖ್ ಪ್ರದೇಶದಲ್ಲಿ ತೀವ್ರವಾದ ಚಳಿಯ ಬಗ್ಗೆ ನಾವು ಕೇಳಿರುತ್ತೇವೆ, ಈ ಚಳಿಯ ನಡುವೆ, 55 ವರ್ಷದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕಮಾಂಡೆಂಟ್ ಹಿಮದಿಂದ ಆವೃತವಾದ ಪರ್ವತಗಳಲ್ಲಿ ಪುಷ್-ಅಪ್ ಮಾಡುವ ವೀಡಿಯೊವನ್ನು ಸಾಮಾಜಿಕ ಜಾಲಾತಾಣ ಟ್ವಿಟರ್‌ನಲ್ಲಿ ITBP ಹಂಚಿಕೊಂಡಿದೆ.


ವೀಡಿಯೊದಲ್ಲಿ, ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ಅವರು 17,000 ಅಡಿ ಎತ್ತರದಲ್ಲಿ ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕೇವಲ 1 ನಿಮಿಷ 12 ಸೆಕೆಂಡುಗಳಲ್ಲಿ ಒಂದೇ ಬಾರಿಗೆ 65 ಪುಶ್-ಅಪ್‌ಗಳನ್ನು ಪೂರ್ಣಗೊಳಿಸಿದ್ದು, ಜನರು ಬೆರಗಾಗಿದ್ದಾರೆ.


ಇದನ್ನೂ ಓದಿ: ಈ ವರ್ಷ ಯಾವೆಲ್ಲಾ ವೆರೈಟಿ ಆಹಾರ ಫೇಮಸ್? ಏನಿದೆ 2022ರ ಟ್ರೆಂಡ್?


ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ನಮ್ಮ ದೇಶವನ್ನು ರಕ್ಷಿಸುವ ಪರ್ವತ ಪ್ರದೇಶಗಳಲ್ಲಿ ನೇಮಕ ಮಾಡಲಾದ ಸಿಬ್ಬಂದಿಗಳ ಜೀವನದ ಬಗ್ಗೆ ಜನರಿಗೆ ಮಾಹಿತಿ ನೀಡಲು ಹಾಗು ಅದರ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಆಗಾಗ ಸಾಮಾಜಿಕ ಜಾಲಾತಾಣದಲ್ಲಿ ಕೆಲ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತದೆ.


ಇನ್ನೊಂದು ವಿಶೇಷತೆ ಎಂದರೆ ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ 6 ಜನರ ತಂಡ ಲಡಾಖ್‌ನಲ್ಲಿರುವ 20,177 ಅಡಿ ಎತ್ತರದ ಶಿಖರವನ್ನು ಏರಿದ್ದು, ಡಿವೈ ಕಮಾಂಡೆಂಟ್ ಅನೂಪ್ ನೇಗಿ ಈ ತಂಡದ ನಾಯರಾಗಿದ್ದಾರೆ. ಆದರೆ ಈ ತಂಡ ಪರ್ವತ ಹತ್ತುವಾಗ ಯಾವುದೇ ಚಾರಣ ಉಪಕರಣಗಳನ್ನು ಬಳಸಿಲ್ಲ ಎಂಬುದು ನಿಜಕ್ಕೂ ಆಶ್ಚರ್ಯಕರ.


ಫೆಬ್ರವರಿ 20 ರಂದು ಕನಿಷ್ಠ ತಾಪಮಾನವು ಮೈನಸ್​ 30 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಇಂಡೋ-ಟಿಬೆಟಿಯನ್ ಬಾರ್ಡರ್​ ಪೊಲೀಸ್​ ಕೇಂದ್ರೀಯ ಪಡೆಯ ಕರ್ಝೋಕ್ ಕಂಗ್ರಿ ಪರ್ವತದ ಮೊದಲ ಆರೋಹಣವಾಗಿದೆ.



ಇದನ್ನೂ ಓದಿ:ಪಿಜ್ಜಾಗಾಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ.. 2 ನಿಮಿಷದಲ್ಲಿ ತಯಾರಿಸ್ಬೋದು!


ಇನ್ನು ಇತ್ತೀಚೆಗಷ್ಟೇ ಯೋಧರು ಹಿಮದಲ್ಲಿ ವಾಲಿಬಾಲ್ ಆಡುತ್ತಾ ಖುಷಿಯಿಂದ ಇರುವ ವಿಡಿಯೋ ವೈರಲ್ ಆಗಿತ್ತು. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

Published by:Sandhya M
First published: