ಅದೊಂದು ಪುಟ್ಟ ಗ್ರಾಮ. 8 ವರ್ಷಗಳ ಬಳಿಕ ಗ್ರಾಮದ ಜನರು ಇಂದು ಸಂಭ್ರಮ ಸಡಗರದಲ್ಲಿದ್ದಾರೆ. ಅದಕ್ಕೆ ಕಾರಣ ತಿಳಿದರೆ ನಿಮಗೂ ಅಚ್ಚರಿಯಾಗಬಹುದು. ಅಷ್ಟಕ್ಕೂ ಆ ಗ್ರಾಮದ ಜನರ ಸಂತೋಷಕ್ಕೆ ಕಾರಣವಾದ ವಿಷಯ ಏನು ಗೊತ್ತಾ?
ಭಾರತದಲ್ಲಿ ಸಾಕಷ್ಟು ಗ್ರಾಮಗಳಿವೆ. ಆ ಗ್ರಾಮದಲ್ಲಿ ಕೆಲವೊಂದು ವಿಶೇಷತೆಗಳಿರುತ್ತವೆ. ಅಥವಾ ಯಾವುದೊ ಒಂದು ವಿಚಾರಕ್ಕೆ ಜನಪ್ರಿತೆ ಪಡೆದುಕೊಂಡಿರುತ್ತದೆ. ಅದರಂತೆ ಇಲ್ಲೊಂದು ಗ್ರಾಮವಿದೆ. ಈ ಗ್ರಾಮದಲ್ಲಿ 8 ವರ್ಷಗಳ ಬಳಿಕ ಮಗುವೊಂದು ಜನಿಸಿದೆ. ಹಾಗಾಗಿ ಗ್ರಾಮದ ಜನರು ಮುಖದಲ್ಲಿ ಮಂದಹಾಸ ಮನೆಮಾಡಿದೆ. ಹಾಗಿದ್ದಾರೆ, ಆ ಗ್ರಾಮ ಯಾವುದು? ಎಲ್ಲಿದೆ?.
ಈ ಘಟನೆ ನಡೆದಿರುವುದು ಭಾರತದಲ್ಲಲ್ಲ. ಇಟಲಿಯಲ್ಲಿ. ಮೊರ್ಟೆರೋನ್ ಗ್ರಾಮದ ನಿವಾಸಿಗಳು ಇಂದು ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. 8 ವರ್ಷದ ಬಳಿಕ ಮಗು ಹುಟ್ಟಿದೆ ಎಂಬ ಕಾರಣ ಒಂದಾದರೆ. ಮತ್ತೊಂದು ವಿಶೇಷ ಆ ಗ್ರಾಮದಲ್ಲಿ ಒಟ್ಟು ಜನಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಹೌದು. 2012ರಲ್ಲಿ ಮೊರ್ಟೆರೋನ್ ಗ್ರಾಮದಲ್ಲಿ ಮಗು ಜನಿಸಿತ್ತು. ಈವರೆಗೆ 28 ಜನರು ವಾಸಿಸುತ್ತಿದ್ದರು. ಆದರೀಗ ಪುಟ್ಟ ಕಂದ ಆಗಮನದಿಂದ ಜನಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಹಾಗಾಗಿ ಡಬಲ್ ಖುಷಿಯನ್ನು ಮೊರ್ಟೆರೋನ್ ನಿವಾಸಿಗಳು ಸಂಭ್ರಮಿಸುತ್ತಿದ್ದಾರೆ.
ಇಟಲಿಯ ಲೊಕ್ಕೊದಲ್ಲಿನ ಅಲೆಸ್ಸಾಂಡ್ರೊ ಮಂಜೋನಿಯಲ್ಲಿ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ಪೋಷಕರಾದ ಮ್ಯಾಟಿಯೋ ಹಾಗೂ ಸಾರಾ ಮಗುವಿಗೆ ಡೆನಿಸ್ ಎಂದು ನಾಮಕರಣ ಮಡಿದ್ದಾರೆ. ಹುಟ್ಟಿದ ಮಗು 2.6 ಕಿ.ಗ್ರಾಂ ತೂಕವನ್ನು ಹೊಂದಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಇಟಾಲಿಯನ್ ಸಂಪ್ರದಾಯದಂತೆ ಜನಿಸಿದ ಮಗುವಿನ ಸಂಭ್ರಮವನ್ನು ವ್ಯಕ್ತಪಡಿಸಲು ಮತ್ತು ಮಗುವಿನ ಹೆಸರನ್ನು ಘೋಷಣೆ ಮಾಡಲು ಪೋಷಕರು ರಿಬ್ಬನ್ ಧರಿಸುತ್ತಾರೆ. ಅದರಂತೆ ಸಾರಾ ಮತ್ತು ಮ್ಯಾಟಿಯೋ ನೀಲಿ ರಿಬ್ಬನ್ ಧರಿಸುವ ಮೂಲಕ ಮಗುವಿಗೆ ನಾಮಕರಣ ಮಾಡಿ ಘೋಷಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ