• Home
  • »
  • News
  • »
  • trend
  • »
  • Durian Fruit: ಕಾಣೋದಕ್ಕೆ ಹಲಸು, ತಿಂದರೆ ಹೊಲಸು! ವಿಶ್ವದ ಅತ್ಯಂತ ದುರ್ನಾತದ ಹಣ್ಣನ್ನು ತಿಂದು ತೇಗಿದ ಆ ಮಹಿಳೆ ಯಾರು?

Durian Fruit: ಕಾಣೋದಕ್ಕೆ ಹಲಸು, ತಿಂದರೆ ಹೊಲಸು! ವಿಶ್ವದ ಅತ್ಯಂತ ದುರ್ನಾತದ ಹಣ್ಣನ್ನು ತಿಂದು ತೇಗಿದ ಆ ಮಹಿಳೆ ಯಾರು?

ಡುರಿಯನ್‌ ಹಣ್ಣು

ಡುರಿಯನ್‌ ಹಣ್ಣು

ನೀವು ಡುರಿಯನ್‌ ಹಣ್ಣುಗಳ ಬಗ್ಗೆ ಕೇಳಿರಬಹುದು. ಇಂಡೋನೇಷ್ಯಾ ,ಸಿಂಗಪೂರ, ಥೈಲ್ಯಾಂಡ್‌, ಫಿಲಿಫೈನ್ಸ್‌, ಮುಂತಾದ ಕಡೆಗಳಲ್ಲಿ ಕಾಣಸಿಗುವ ಈ ಹಣ್ಣು ಅತಿ ಹೆಚ್ಚು ಪ್ರೋಟೀನ್‌ ಯುಕ್ತವಾಗಿದೆ. ಆದರೆ ಕೆಟ್ಟ ವಾಸನೆಯಿಂದಾಗಿ ಈ ಹಣ್ಣನ್ನು ತಿನ್ನಲು ಇಷ್ಟ ಪಡಲ್ಲವಂತೆ. ಹೀಗಿದ್ದರೂ ಮಹಿಳೆಯೋರ್ವರು ಇದನ್ನು ತಿಂದಿದ್ದಾರೆ!

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

    ನೀವು ಡುರಿಯನ್‌ ಹಣ್ಣುಗಳ (Durian Fruit) ಬಗ್ಗೆ ಕೇಳಿರಬಹುದು. ಇಂಡೋನೇಷ್ಯಾ (Indonesia), ಮಲೇಷ್ಯಾ (Malesia), ಸಿಂಗಪೂರ (Singapore), ಥೈಲ್ಯಾಂಡ್‌ (Thailand), ಫಿಲಿಫೈನ್ಸ್‌ (Philippian) ಮುಂತಾದ ಕಡೆಗಳಲ್ಲಿ ಕಾಣಸಿಗುವ ಈ ಹಣ್ಣು ಅತಿ ಹೆಚ್ಚು ಪ್ರೋಟೀನ್‌ (Proteins) ಯುಕ್ತವಾಗಿದೆ. ನೋಡಿದರೆ ಚಿಕ್ಕ ಹಲಸಿನ ಹಣ್ಣಿನಂತೆ ಕಾಣುವ ಈ ಡುರಿಯನ್‌ ಹಣ್ಣು ಅದರಂತೆಯೇ ಮುಳ್ಳುಗಳಿರುವ ಹಸಿರು ಬಣ್ಣದ ಹೊರಪದರ ಹೊಂದಿದೆ. ಕೆಲವು ರಾಷ್ಟ್ರಗಳಲ್ಲಿ ಇದನ್ನು ಹಣ್ಣುಗಳ ರಾಜ ಅಂತಲೂ ಕರೆಯುತ್ತಾರೆ. ಆದ್ರೆ ಈ ಹಣ್ಣು ಪ್ರಖ್ಯಾತಿ ಹಾಗೂ ಕುಖ್ಯಾತಿ ಪಡೆದಿರೋದು ಅದರ ವಾಸನೆಯಿಂದ. ಈ ಹಣ್ಣಿನ ಗಾಢವಾದ ವಾಸನೆ ಅತ್ಯಂತ ಕೆಟ್ಟದಾಗಿರುತ್ತದೆ ಎನ್ನಲಾಗಿದ್ದು ಹಲವು ದೇಶಗಳ ರೆಸ್ಟೋರೆಂಟ್‌ (Restaurant), ಸಾರ್ವಜನಿಕ ಸಾರಿಗೆ ಮುಂತಾದೆಡೆ ಈ ಹಣ್ಣನ್ನು ನಿಷೇಧಿಸಲಾಗಿದೆ.


    ಈ ಮಧ್ಯೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಸಿಂಗಾಪುರ ಪ್ರವಾಸದಲ್ಲಿದ್ದು, ಅವರು ಈ ಡುರಿಯನ್‌ ಹಣ್ಣನ್ನು ಟೇಸ್ಟ್‌ ಮಾಡಿದ್ದಾಗಿ ಹೇಳಿದ್ದಾರೆ. 50 ವರ್ಷದ ಗೀತಾ ಗೋಪಿನಾಥ್‌ ಸಿಂಗಾಪುರದ ಹಾಕರ್‌ ಕೇಂದ್ರಗಳಿಗೆ ಭೇಟಿ ನೀಡಿದ್ದು ಅತ್ಯಂತ ವಾಸನೆಯುಕ್ತ ಈ ಹಣ್ಣನ್ನು ತಿಂದಿದ್ದಾಗಿ ಟ್ವಿಟ್ಟರ್‌ ನಲ್ಲಿ ಬರೆದುಕೊಂಡಿದ್ದಾರೆ.


    ಡುರಿಯನ್‌ ಹಣ್ಣಿನ ರುಚಿ ಹೇಗಿದೆ?


    ಇನ್ನು ತನ್ನ ವಾಸೆನೆಗೆ ಕುಖ್ಯಾತಿ ಪಡೆದಿರೋ ಡುರಿಯನ್‌ ಹಣ್ಣಿನ ರುಚಿಯನ್ನು ವಿವರಿಸಿದ ಗೀತಾ ಗೋಪಿನಾಥ್ ಏಷ್ಯಾದ ಕುಖ್ಯಾತ ಹಣ್ಣಿನ ರುಚಿಯನ್ನು ವಿವರಿಸಿದರು. ಸ್ಥಳೀಯ ಹಣ್ಣು ಡುರಿಯನ್ ಹಲಸಿನ ಹಣ್ಣು ಹಾಗೂ ಆವಕಾಡೊ ಮಿಶ್ರಣದಂತೆ ರುಚಿ ನೀಡುತ್ತದೆ ಎಂದಿದ್ದಾರೆ. ಅಲ್ಲದೇ ಅವು ಸಾಕಷ್ಟು ವಿಶಿಷ್ಟವಾಗಿವೆ ಎಂಬುದಾಗಿಯೂ ಅವರು ಬರೆದುಕೊಂಡಿದ್ದಾರೆ.




    ಸಿಂಗಾಪುರದ ಕೆಲವೆಡೆ ಈ ಹಣ್ಣಿನ ಬಳಕೆ ನಿಷೇಧ!


    ಇನ್ನು ಆಗ್ನೇಯ ಏಷ್ಯಾದಲ್ಲಿ ಡುರಿಯನ್‌ ಜನಪ್ರಿಯ ಹಣ್ಣಾಗಿದೆ. ಇದು ಅದರ ದೊಡ್ಡ ಗಾತ್ರ ಮತ್ತು ಮೊನಚಾದ, ಗಟ್ಟಿಯಾದ ಹೊರ ಕವಚದಿಂದ ಪ್ರತ್ಯೇಕಿಸಲ್ಪಟ್ಟಿದೆ. ಪೋಷಕಾಂಶಗಳು ತುಂಬಾ ಹೆಚ್ಚಾಗಿರುವ ಈ ಉಷ್ಣವಲಯದ ಹಣ್ಣಿನ ಒಳ ಭಾಗವು ಹಳದಿ ಬಣ್ಣದಿಂದ ಕೂಡಿರುತ್ತದೆ. ವರದಿಗಳ ಪ್ರಕಾರ, ಹಣ್ಣಿನ ವಾಸನೆಯು ತುಂಬಾ ದುರ್ನಾತವಾಗಿದ್ದು, ಸಿಂಗಾಪುರದ ಕೆಲವು ಸಂಸ್ಥೆಗಳು ಹಣ್ಣಿನ ಬಳಕೆ ಅಥವಾ ಪ್ರವೇಶವನ್ನು ನಿಷೇಧಿಸಿವೆ.


    ಇನ್ನು, ಗೀತಾ ಗೋಪಿನಾಥ್ ಅವರ ಪೋಸ್ಟ್‌ ಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದು, ಹಣ್ಣಿನ ಬಗ್ಗೆ ಹೇಳಿದ್ದಾರೆ. ಒಬ್ಬರು ಇದನ್ನು ಬಹಳ ಅಪಾಯಕಾರಿ ಹಣ್ಣು ಎಂದು ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. "ಬ್ಯಾಂಕಾಕ್‌ನಲ್ಲಿ ಕೆಲವು ಹೋಟೆಲ್‌ಗಳು ನೀವು ಡುರಿಯನ್‌ ನೊಂದಿಗೆ ಪ್ರವೇಶಿಸಿದರೆ ದಂಡ ವಿಧಿಸುತ್ತವೆ ಎಂದು ಇನ್ನೊಬ್ಬರು ಬರೆದಿದ್ದಾರೆ.


    ಮತ್ತೊಬ್ಬರು “ಸಿಂಗಾಪುರದಲ್ಲಿ ಹೇಳದ ನಿಯಮವಿದೆ. ಡುರಿಯನ್ ತಿಂದ ನಂತರ ಈಜುಕೊಳ ಮತ್ತು ಎಲಿವೇಟರ್‌ಗಳನ್ನು ಬಳಸಬೇಡಿ ಎಂದಿದ್ದಾರೆ. ನಾಲ್ಕನೆಯವರು, “ಬಹಳ ವಿಶಿಷ್ಟವಾದ ಹಣ್ಣು. ಅದರ ವಾಸನೆ, ಕೊಳೆತ ಈರುಳ್ಳಿಗೆ ಹತ್ತಿರದಲ್ಲಿದೆ ಎಂದಿದ್ದಾರೆ.


    ಈ ಮಧ್ಯೆ ವಿಶಿಷ್ಟವಾದ ಪ್ರವಾಸಿ ಕೆಲಸಗಳನ್ನು ಮಾಡುವುದರ ಜೊತೆಗೆ, ಗೀತಾ ಗೋಪಿನಾಥ್ ಅವರು ತಮ್ಮ ಪ್ರವಾಸದ ಸಮಯದಲ್ಲಿ ಸಿಂಗಾಪುರದಲ್ಲಿ ಅಧಿಕಾರಿಗಳು ಮತ್ತು IMF ತಂಡವನ್ನು ಭೇಟಿ ಮಾಡಿದರು. ಅವರು ಹಿರಿಯ ಸಚಿವ ಥರ್ಮನ್ ಷಣ್ಮುಗರತ್ನಂ, ಸಿಂಗಾಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಮತ್ತು ಇತರ IMF ತಂಡದ ಸದಸ್ಯರನ್ನು ಭೇಟಿಯಾದರು.


    IMF ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ ಗೀತಾ ಗೋಪಿನಾಥ್​


    ಗೀತಾ ಗೋಪಿನಾಥ್ ಅವರು 2019 ಮತ್ತು 2022 ರ ನಡುವೆ IMF ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಈ ವರ್ಷದ ಆರಂಭದಲ್ಲಿ, ಗೀತಾ ಗೋಪಿನಾಥ್ ಅವರು IMF ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕ (FDMD) ಪಾತ್ರವನ್ನು ವಹಿಸಿಕೊಂಡರು.

    Published by:Gowtham K
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು