ಹೆಣ್ಮಕ್ಕಳಿಗೆ ಕುರ್ತಾ ಅಂದ್ರೆ ಎಲ್ಲಿಲ್ಲದ ಪ್ರೀತಿ. ಸರಳವಾಗಿ, ಸುಲಭವಾಗಿ ನಿಭಾಯಿಸಬಹುದಾದ ಉಡುಗೆ ಅಂದ್ರೆ ಅದು ಕುರ್ತಿ. ಇದೇ ಕಾರಣಕ್ಕೆ ಇಂದು ಸಾಕಷ್ಟು ಇ- ಕಾಮರ್ಸ್ ಪೋರ್ಟಲ್ಗಳು ವೈವಿಧ್ಯಮಯವಾದ ಕುರ್ತಿ ಸಂಗ್ರಹದ ಮೂಲಕ ಹೆಣ್ಮಕ್ಕಳ ಚಿತ್ತಾಕರ್ಷಿಸುತ್ತಿವೆ. ಇನ್ನೂ ಕುರ್ತಿಗಳು ಸಾಮಾನ್ಯ ಬೆಲೆಯಲ್ಲಿ ಕೈಗೆಟಕುವ ಸುಂದರವಾದ ಉಡುಪು. ಆದರೆ ಅವುಗಳ ವಿನ್ಯಾಸದ ಮೇಲೆ ಬೆಲೆಯೂ ಕೂಡ ಬದಲಾಗುತ್ತಿರುತ್ತದೆ. ಅದರಲ್ಲೂ ಆನ್ಲೈನ್ನಲ್ಲಿ ಇವತ್ತು ವಿನ್ಯಾಸಕಾರರು ಸೃಷ್ಟಿಸಿದ ಕುರ್ತಿಗೆ ಸಿಕ್ಕಾಪಟ್ಟೆ ಬೆಲೆ ಇರುತ್ತದೆ. ಹಾಗಂತ ಅದು ದುಬಾರಿ ಏನಲ್ಲ ಬಿಡಿ.
ಇದೇ ಹಿನ್ನೆಲೆಯಲ್ಲಿ ಗುಚ್ಚಿ ಆನ್ಲೈನ್ ವೆಬ್ಸೈಟ್ ಕುರ್ತಿಯೊಂದನ್ನು ಮಾರಾಟಕ್ಕಿಟ್ಟಿದೆ. ಇದು ಕಾಫ್ತಾನ್ ವಿನ್ಯಾಸವನ್ನು ಹೊಂದಿದೆ. ಇನ್ನೂ ಈ ಕುರ್ತಿ ಕಂಡವರೆಲ್ಲರೂ ಹೌಹಾರುತ್ತಿದ್ದಾರೆ. ಕುರ್ತಿಯ ಮಾರಾಟದ ಬೆಲೆಯನ್ನು ಕಂಡು ಹೀಗೂ ಉಂಟಾ? ಎಂದು ಬೆರಗಾಗುತ್ತಿದ್ದಾರೆ. ಇಷ್ಟೆಲ್ಲಾ ಗಮನ ಸೆಳೆದಿರುವ ಈ ಕುರ್ತಿಯಲ್ಲಿ ಅಂಥ ವಿಶೇಷತೆ ಏನಿದೆ ಅಂತೀರಾ? ಅದುವೇ ಈ ಕುರ್ತಿಯ ಬೆಲೆ. ಈ ಕುರ್ತಿಯನ್ನು ಕೊಳ್ಳಬೇಕಾದವರು 2.5 ಲಕ್ಷ ರೂಪಾಯಿ ಹಣ ಕೊಟ್ಟು ಪಡೆದುಕೊಳ್ಳಬೇಕು. ಸದ್ಯ ಈ ಸಂಗತಿಯೇ ಟ್ವಿಟ್ಟಿಗರನ್ನು ರೊಚ್ಚಿಗೆಬ್ಬಿಸಿದೆ.
ಇದನ್ನೂ ಓದಿ:Rohini Sindhuri: ಯೂಟರ್ನ್ ಹೊಡೆದ ಪ್ರತಾಪ್ ಸಿಂಹ; ಫೇಸ್ಬುಕ್ ಲೈವ್ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ?
ಗುಚ್ಚಿ ವೆಬ್ಸೈಟ್ನಲ್ಲಿರುವ ಕುರ್ತಿ ಫೋಟೋ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟಿಗರು ಹಂಚುತ್ತಿದ್ದಾರೆ. ಈ ಕುರ್ತಿಯ ಬೆಲೆ 3,500 ಡಾಲರ್ ಅಂದರೆ ಸುಮಾರು 2.5 ಲಕ್ಷ ಮೌಲ್ಯವನ್ನು ಹೊಂದಿದೆ ಎನ್ನುವುದನ್ನು ವ್ಯಂಗ್ಯ ಮಾಡುತ್ತಿದ್ದಾರೆ. ಭಾರತದ ಕುರ್ತಿಗಳಲ್ಲೇ ಈ ಕುರ್ತಿ ಹೆಚ್ಚು ದುಬಾರಿ ಮೌಲ್ಯದ್ದಾಗಿದೆ. ಹಾಗಂತ ಈ ಕುರ್ತಿ ಏನು ಹಲವಾರು ವಿಶಿಷ್ಟತೆಗಳಿಂದ ಕೂಡಿಲ್ಲ. ಸಾಂಪ್ರದಾಯಿಕ ನೆಕ್ ಲೈನ್ಸ್ ಮತ್ತು ಟಸ್ಸಲ್ಸ್ಗಳನ್ನು ಹೊಂದಿರುವ ಬ್ರ್ಯಾಂಡ್ ನ್ಯೂ ಕುರ್ತಿ ಇದಾಗಿದೆ.
ಈ ದುಬಾರಿ ಫ್ಯಾಷನ್ ಹೌಸ್ನ ಕುರ್ತಿಯ ಫೋಟೋವನ್ನು ಕಂಡೊಡನೆ ಟ್ವೀಟಿಗರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಗುಚ್ಚಿ ವೆಬ್ಸೈಟ್ ಈ ಕುರ್ತಿಯನ್ನು 2.5 ಲಕ್ಷ ರೂಪಾಯಿ ಬೆಲೆಗೆ ಮಾರಟಕ್ಕಿಟ್ಟಿರುವುದು ಆಕ್ಷೇಪಣೆಗೆ ಕಾರಣವಾಗಿದೆ.
Gucci selling an Indian kurta for 2.5 lakhs ? I'll get the same thing for 500 bucks 💀 pic.twitter.com/Opw2mO5xnV
— nalayak (@samisjobless) June 1, 2021
ಇದನ್ನೂ ಓದಿ:Viral News: ಜೇನುನೊಣ ಕೂಡ ಗಣಿತ ಲೆಕ್ಕ ಬಿಡಿಸುತ್ತೆ..! ; ವಿಜ್ಞಾನಿಗಳ ಹೊಸ ಸಂಶೋಧನೆ
'ನನ್ನ ತಾಯಿ ಈ ರೀತಿಯ ಡಿಸೈನರ್ ಕುರ್ತಿಯನ್ನು ವಿನ್ಯಾಸ ಮಾಡಿಕೊಡುತ್ತಾರೆ. ಗುಚ್ಚಿ ಅದನ್ನು ತೆಗೆದುಕೊಳ್ಳಲು ಸಿದ್ಧವಿದೆಯೇ?' ಎಂದು ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ತಿಳಿಸಿದ್ದಾರೆ.
"ನಾವು ಇದನ್ನು ಗರಿಯಾಹತ್ ಇಲ್ಲವೇ ಮಾರುಕಟ್ಟೆಯಲ್ಲಿ (ಕೊಲ್ಕತ್ತಾದಲ್ಲಿ) 1 ಸಾವಿರ ರುಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು" ಎಂದು ಮತ್ತೊಬ್ಬರು ಹೇಳಿದ್ದಾರೆ.
'ಅಲ್ಲದೇ 500 ರೂಪಾಯಿಗೆ ಈ ರೀತಿಯ ಎರಡು ಕುರ್ತಾಗಳನ್ನು ತೆಗೆದುಕೊಳ್ಳಬಹುದು. ನಾನು ಇಂತಹ ಕುರ್ತಾಗಳನ್ನು ಧರಿಸಲು ಇಷ್ಟಪಡುವುದಿಲ್ಲ. ಏಕೆಂದರೆ ಇದು ನನ್ನ ಸ್ಟೈಲ್ ಅಲ್ಲ. ಅಲ್ಲದೇ ಇದಕ್ಕೆ 3,500 ಡಾಲರ್ ಅಂದರೆ ನಿಜಕ್ಕೂ ಅಚ್ಚರಿ' ಎಂದು ಇನ್ನೊಬ್ಬ ವ್ಯಕ್ತಿ ತಿಳಿಸಿದ್ದಾರೆ.
ಅಲ್ಲದೇ ಇನ್ನೂ ಹಲವಾರು ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ:
'ನಾನು ಸರೋಜಿನಿಗೆ ಹೋಗಿ, ಇದೇ ಹಣಕ್ಕೆ ನನ್ನ ಮುಂದಿನ ಹುಟ್ಟುಹಬ್ಬಕ್ಕೂ ಉಡುಗೆ ಖರೀದಿಸುತ್ತೇನೆ' ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.
ಮತ್ತೊಬ್ಬರು 250 ರೂಪಾಯಿಗೆ ಈ ಕುರ್ತಿ ಸಿಗುತ್ತೆ ಎಂದು ಕಮೆಂಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ