Air Pollution: ಈ ಪಟ್ಟಣಕ್ಕೆ ಏನಾಗಿದೆ? ದಕ್ಷಿಣ ಭಾರತದ 10 ನಗರಗಳಲ್ಲಿ ಉಸಿರಾಟವೂ ಕಷ್ಟ!

10 ನಗರಗಳಿಂದ ವಾಯುಮಾಲಿನ್ಯದ ದತ್ತಾಂಶವನ್ನು ಪಡೆದು ಸರ್ವೆ ಮಾಡಲಾಗಿದೆ. ಈ ಪೈಕಿ ರಾಜ್ಯದ ಮೂರು ನಗರಗಳು ಅಪಾಯಕಾರಿ ವಾಯುಗುಣಮಟ್ಟವನ್ನು ಹೊಂದಿವೆ. ಇಲ್ಲಿ ವಾಯು ಮಾಲಿನ್ಯ ಪ್ರಮಾಣ 4 ಪಟ್ಟು ಹೆಚ್ಚಾಗಿವೆ ಅಂತಿದೆ ರಿಪೋರ್ಟ್.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಜಗತ್ತಿನಲ್ಲಿ ಯಾವುದೂ ಪುಕ್ಕಟ್ಟೆ ಸಿಗೋದಿಲ್ಲ ಅನ್ನೋದು ಸತ್ಯ. ಆದ್ರೆ ಗಾಳಿ, ಬೆಳಕು, ನೀರು ಇವಕ್ಕೆಲ್ಲ ಹಿಂದೆ ನಮ್ಮ ಪೂರ್ವಜರೆಲ್ಲ ದುಡ್ಡುಕೊಟ್ಟಿದ್ದೇ ಇಲ್ಲ. ಈಗ ಆಧುನಿಕತೆ ಬೆಳೆದಂತೆ ಜಗತ್ತಿನ ಪ್ರತಿಯೊಂದಕ್ಕೂ ಹಣ ಕೊಡಬೇಕಾದ ಪರಿಸ್ಥಿತಿ ಇದೆ. ಸೂರ್ಯನ ಬೆಳಕೊಂದನ್ನು (Solar Light) ಬಿಟ್ಟು ಈ ಜಗತ್ತಿನಲ್ಲಿ ಯಾವುದೂ ಫ್ರೀ ಅಲ್ಲ ಅಂದರೆ ಅತಿಶಯೋಕ್ತಿಯೇನಲ್ಲ. ಸದ್ಯ ಉಸಿರಾಡೋ ಗಾಳಿಗೂ ದುಡ್ಡು ಕೊಡಬೇಕಾದ ಸಂದರ್ಭ ಬಂದರೂ ಬರಬಹುದು. ಯಾಕೆಂದ್ರೆ ಪರಿಸರ ಮಾಲಿನ್ಯದಿಂದ (Air Pollution) ಉಸಿರಾಡುವ ಗಾಳಿಯೂ ವಿಷವಾಗುತ್ತಿದೆ. ನಗರಗಳಲ್ಲಂತೂ ಪರಿಸ್ಥಿತಿ ಉಹಿಸಿಕೊಳ್ಳವುದೂ ಕಷ್ಟ. ಇಂತಹ ವಿಷಮ ಪರಿಸ್ಥಿತಿಯಲ್ಲೇ ದಕ್ಷಿಣ ಭಾರತದಲ್ಲಿ (South India) 10 ಸಿಟಿಗಳು ಅಶುದ್ಧವಾಗಿವೆ ಅಂತ ಸರ್ವೆಯೊಂದು (Survey) ಹೇಳಿದೆ. ಹಾಗಿದ್ರೆ ವಿಷಗಾಳಿ ಇರುವ ನಗರಗಳು ಯಾವುವು? ಕರ್ನಾಟಕದ ಯಾವ ಭಾಗದಲ್ಲಿ ಉಸಿರಾಡುವುದು ಕಷ್ಟವಾಗಲಿದೆ? ಈ ಬಗ್ಗೆ ಸರ್ವೆ ಏನು ಹೇಳುತ್ತದೆ ಅಂತ ತಿಳಿಯಲು ಇಲ್ಲಿ ಓದಿ…

ಆಘಾತಕಾರಿ ವರದಿ ನೀಡಿದ ಗ್ರೀನ್ ಪೀಸ್

ಗ್ರೀನ್ ಪೀಸ್ ಇಂಡಿಯಾ ಸಂಸ್ಥೆ ಮಹತ್ವದ ಸರ್ವೆ ಮಾಡಿದೆ. ಭಾರತದಲ್ಲಿ ಶುದ್ಧ ಗಾಳಿ ಎಲ್ಲಿ ಸಿಗುತ್ತದೆ? ಯಾವ ನಗರದ ಗಾಳಿಯು ಉಸಿರಾಡಲು ಯೋಗ್ಯವಾಗಿದೆ? ಎಂಬ ಬಗ್ಗೆ ಸುದೀರ್ಘ ಸಮೀಕ್ಷೆ ಕೈಗೊಂಡಿದೆ. ಇದರ ವರದಿಯ ಪ್ರಕಾರ ದಕ್ಷಿಣ ಭಾರತದ 10 ನಗರಗಳಲ್ಲಿ ಉಸಿರಾಡಲು ಯೋಗ್ಯವಾದ ಶುದ್ಧ ಗಾಳಿ ಸಿಗುತ್ತಿಲ್ಲವಂತೆ.

10 ನಗರಗಳಲ್ಲಿ ಪರಿಸ್ಥಿತಿ ಗಂಭೀರ

ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯ ಸರ್ವೆ ಪ್ರಕಾರ ದಕ್ಷಿಣ ಭಾರತದ 10 ನಗರಗಳು ಅಶುದ್ಧ ಗಾಳಿಯನ್ನು ಹೊಂದಿವೆಯಂತೆ. ಅದರ ಪ್ರಕಾರ ಹೈದರಾಬಾದ್, ಚೆನ್ನೈ, ಅಮರಾವತಿ, ವಿಶಾಖಪಟ್ಟಣಂ, ಕೊಚ್ಚಿ, ಪುದುಚೇರಿ, ಕೊಯಮತ್ತೂರು ಸೇರಿದಂತೆ 10 ನಗರಗಳು ಮಾಲಿನ್ಯಕ್ಕೆ ಒಳಪಟ್ಟಿವೆ. ಈ ಪೈಕಿ ಕರ್ನಾಟಕದ ಮೂರು ನಗರಗಳು ಇವೆ ಅಂತ ವರದಿಗಳು ಹೇಳುತ್ತಿವೆ.

ಇದನ್ನೂ ಓದಿ: Twitterನಲ್ಲಿ ಬೆಂಗಳೂರು, ದೆಹಲಿಯ ಬಾಡಿಗೆ ಮನೆಗಳ ಕುರಿತು ನಡಿದಿದೆ ಭಾರಿ Debate!

ರಾಜ್ಯ ರಾಜಧಾನಿಯಲ್ಲಿ ಉಸಿರಾಡುವಂತೆಯೇ ಇಲ್ಲ!

ಸಿಲಿಕಾನ್ ಸಿಟಿ, ಐಟಿ ಸಿಟಿ ಅಂತೆಲ್ಲ ಕರೆಸಿಕೊಳ್ಳುವ ಬೆಂಗಳೂರಿನಲ್ಲೂ ಪರಿಸ್ಥಿತಿ ವಿಷಮಕ್ಕೆ ತಲುಪಿದೆ.  ಹಿಂದೆ ಉದ್ಯಾನನಗರಿಯಾಗಿದ್ದ ಬೆಂಗಳೂರು ಈಗ 'ವಿಷಗಾಳಿಯ ನಗರಿ'ಯಾಗಿರುವುದು ವಿಪರ್ಯಾಸ. ಇದರೊಂದಿಗೆ ಕ್ಲೀನ್ ಸಿಟಿ ಪಟ್ಟ ಹೊತ್ತುಕೊಂಡ ಮೈಸೂರು ಹಾಗೂ ಕಡಲನಗರಿ ಮಂಗಳೂರು ಸಹ ಸೇರಿವೆ.

ಬೆಂಗಳೂರಿನಲ್ಲಿದೆ ಅಪಾಯಕಾರಿ ಪ್ರದೇಶಗಳು 

ಬೆಂಗಳೂರಿನ ಬಿಟಿಎಂ ಲೇಔಟ್, ಬಾಪೂಜಿ ನಗರ, ಹೊಂಬೇಗೌಡ ನಗರ, ಜಯನಗರ 5ನೇ ಬ್ಲಾಕ್ ಮತ್ತು ಸಾಣೆಗುರುವನಹಳ್ಳಿ ವಾಣಿಜ್ಯ ವಲಯ, ಹೆಬ್ಬಾಳ, ಸಿಲ್ಕ್ ಬೋರ್ಡ್, ಪೀಣ್ಯ ಮತ್ತು BWSSB ಕಾಡುಬೀಸನಹಳ್ಳಿ ಮತ್ತು ಕೈಗಾರಿಕಾ ವಲಯಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಿದೆ. PM2.5 ಮತ್ತು PM10 ರ ವಾರ್ಷಿಕ ಸರಾಸರಿ ಮೌಲ್ಯಗಳು ಎಲ್ಲಾ ಸ್ಥಳಗಳಲ್ಲಿ, ಮೌಲ್ಯಗಳು WHO ಪರಿಷ್ಕೃತ ಮಾನದಂಡಗಳಿಗಿಂತ ಹೆಚ್ಚಿವೆ ಎಂದು ವರದಿ ಹೇಳುತ್ತಿದೆ.

ಇದನ್ನೂ ಓದಿ: Chennaiನಲ್ಲಿ 1.50ರೂಗೆ ಸಿಗುತ್ತೆ ಸೂಪರ್ ಇಡ್ಲಿ, ಅಜ್ಜಿ ಮಾಡೋ ಇಡ್ಲಿ ತಿನ್ನಲು ಕ್ಯೂ ನಿಲ್ತಾರೆ ಜನ!

4 ಪಟ್ಟು ಹೆಚ್ಚಾಯಿತು ವಾಯುಮಾಲಿನ್ಯ ಪ್ರಮಾಣ 

ಕೊಯಮತ್ತೂರು, ಬೆಂಗಳೂರು, ಮಂಗಳೂರು ಮತ್ತು ಅಮರಾವತಿ ವಾರ್ಷಿಕ PM2.5 (2.5 ಮೈಕ್ರೋಮೀಟರ್‌ಗಳಿಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ವಾತಾವರಣದ ಕಣಗಳು) ಮಟ್ಟಗಳು ವಿಶ್ವ ಆರೋಗ್ಯ ಸಂಸ್ಥೆಯ (WHO) 5 µg/m3 ಮಾರ್ಗಸೂಚಿಗಳನ್ನು ಆರರಿಂದ ಏಳು ಪಟ್ಟು ಮೀರಿದೆ. ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪಾಂಡಿಚೇರಿಯಲ್ಲಿ, PM2.5 ಮಟ್ಟವು ಮಾರ್ಗಸೂಚಿಗಳನ್ನು ನಾಲ್ಕರಿಂದ ಐದು ಪಟ್ಟು ಮೀರಿದೆ.

ಲಾಕ್ ಡೌನ್ ನಂತರವೂ ಸುಧಾರಿಸಿಲ್ಲ ಪರಿಸ್ಥಿತಿ

10 ನಗರಗಳಿಂದ ವಾಯುಮಾಲಿನ್ಯದ ದತ್ತಾಂಶವನ್ನು ಪಡೆದು ಸರ್ವೆ ಮಾಡಲಾಗಿದೆ. ಲಾಕ್‌ಡೌನ್‌ ಘೋಷಣೆ, ಕೋರೋನ ಬಳಿಕ ಹೆಚ್ಚಿನ ಕಾರ್ಖಾನೆಗಳು ಸ್ಥಗಿತಗೊಂಡಿದ್ದರೂ ವಾಯುಮಾಲಿನ್ಯ ಕಂಟ್ರೋಲ್ ಆಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ವಾರ್ಷಿಕ ಸರಾಸರಿ ಮೌಲ್ಯಗಳಾದ PM2.5 ಮತ್ತು PM10ನ ಹಲವು ಪಟ್ಟು ಮೀರಿದೆ ಎಂಬ ಆಘಾತಕಾರಿ ವಿಚಾರ ಈ ವರದಿಯಲ್ಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆಯನ್ನೂ ವರದಿ ನೀಡಿದೆ.
Published by:Annappa Achari
First published: