IT Department Notice; ರಿಕ್ಷಾ ಚಾಲಕನಿಗೆ 3 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್; ಚಾಲಕ ಮಾಡಿದ್ದೇನು ಗೊತ್ತಾ?
ಪ್ರತಾಪ್ ಸಿಂಗ್ ಮಥುರಾ ನಗರದಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ನೋಟಿಸ್ ನೀಡಿದ್ದು, ಅದರಲ್ಲಿ 3,47,54,896 ರೂಪಾಯಿ ಟ್ಯಾಕ್ಸ್ ಪಾವತಿಸುವಂತೆ ಸೂಚಿಸಲಾಗಿದೆ
ಲಕ್ನೋ: ತಪ್ಪು ಯಾರಿಂದ ಆಗಲ್ಲ ಹೇಳಿ. ಮನುಷ್ಯ ಅಂದ್ರೆ ತಪ್ಪು ಮಾಡೋದು ಸಹಜ, ಆದ್ರೆ ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು ಜಾಣತನ. ಎಷ್ಟೇ ಅಚ್ಚುಕಟ್ಟಿನಿಂದ ಕೆಲಸ ಮಾಡಿದ್ರೂ ತಪ್ಪುಗಳಾಗುತ್ತವೆ. ಇನ್ನು ಆದಾಯ ತೆರಿಗೆ ಇಲಾಖೆ ( Income Tax Department of India ) ಹಣಕಾಸಿನ ವಿಚಾರವನ್ನ ಅತ್ಯಂತ ಎಚ್ಚರಿಕೆಯಿಂದ ಮಾಡುತ್ತದೆ. ಆದಾಯ ತೆರಿಗೆ ಇಲಾಖೆ ಮಾಡಿದ ತಪ್ಪು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ. ರಿಕ್ಷಾ ಚಾಲಕ(Rickshaw puller)ನೋರ್ವನಿಗೆ ಮೂರು ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. ನೋಟಿಸ್ ಸ್ವೀಕರಿಸಿದ ಚಾಲಕ ವಿಡಿಯೋ ಮೂಲಕ ವಿಷಯವನ್ನು ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಫನ್ನಿ ಫನ್ನಿ ಕಮೆಂಟ್ ಮಾಡುತ್ತಿದ್ದಾರೆ.
ನೋಟಿಸ್ ಕಂಡು ಆತಂಕಕ್ಕೊಳಗಾದ ಚಾಲಕ
ಉತ್ತರ ಪ್ರದೇಶದ ಮಥುರಾ ನಗರ ಅಮರ್ ಕಾಲೋನಿಯಲ್ಲಿ ವಾಸವಾಗಿರುವ ಪ್ರತಾಪ್ ಸಿಂಗ್ ಎಂಬವರಿಗೆ ಮೂರು ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಪ್ರತಾಪ್ ಸಿಂಗ್ ಮಥುರಾ ನಗರದಲ್ಲಿ ರಿಕ್ಷಾ ಚಾಲಕ(ರಿಕ್ಷಾ ಎಳೆಯುವ ಕೆಲಸ)ರಾಗಿ ಕೆಲಸ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ನೋಟಿಸ್ ನೀಡಿದ್ದು, ಅದರಲ್ಲಿ 3,47,54,896 ರೂಪಾಯಿ ಟ್ಯಾಕ್ಸ್ ಪಾವತಿಸುವಂತೆ ಸೂಚಿಸಲಾಗಿದೆ. ಐಟಿ ನೋಟಿಸ್ ನೋಡುತ್ತಿದ್ದಂತೆ ಆತಂಕಕ್ಕೆ ಒಳಗಾದ ಪ್ರತಾಪ್ ಸಿಂಗ್ ಆಪ್ತರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಮೌಖಿಕ ದೂರು ದಾಖಲಿಸಿದ್ದಾರೆ.
ವಿಡಿಯೋ ಮಾಡಿದ ಪ್ರತಾಪ್ ಸಿಂಗ್
ಈ ಸಂಬಂಧ ವಿಡಿಯೋ ಮಾಡಿರುವ ಪ್ರತಾಪ್ ಸಿಂಗ್ ನೋಟಿಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ತೇಜ್ ಪ್ರಕಾಶ್ ಉಪಾಧ್ಯಾಯ ಎಂಬವರ ಜನ್ ಸುವಿಧಾ ಕೇಂದ್ರದಲ್ಲಿ ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದೆ. ಪ್ಯಾನ್ ಕಾರ್ಡ್ ಸಲ್ಲಿಸುವಂತೆ ಬ್ಯಾಂಕ್ ಸಿಬ್ಬಂದಿ ಹೇಳಿದ್ದರಿಂದ ಅರ್ಜಿ ಭರ್ತಿ ಮಾಡಿದ್ದೆ. ನನಗೆ ಮತ್ತೊಬ್ಬರ ಫೋಟೋದ ಪ್ಯಾನ್ ಕಾರ್ಡ್ ನೀಡಲಾಗಿದೆ ಎಂದು ಹೇಳಿದ್ದಾರೆ.
ಮಧ್ಯ ಪ್ರದೇಶದ ಗುಣ ಜಿಲ್ಲೆಯ ರಾಮಬಾಯಿ ವಾಸಿಸುತ್ತಿರುವುದು ಗುಡಿಸಲಿನಲ್ಲಿ. ಅವರ ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳೆಂದರೆ ಒಂದು ಬಲ್ಬು ಮತ್ತು ಟೇಬಲ್ ಫ್ಯಾನ್ ಬಿಟ್ಟರೆ ಬೇರೆ ಯಾವ ವಸ್ತುಗಳೂ ಇಲ್ಲ. ಇವರಿಗೆ ಪ್ರತಿ ತಿಂಗಳು 300 ರಿಂದ 500 ರೂ. ಬಿಲ್ ಬರುತ್ತಿತ್ತು, ಲಾಕ್ಡೌನ್ ಕಾರಣ ಅವರು ಎರಡು ತಿಂಗಳಿಂದ ಬಿಲ್ ಮೊತ್ತ ಪಾವತಿಸಿರಲಿಲ್ಲ. ಆದರೆ ಅವರಿಗೆ ಕಳೆದ ತಿಂಗಳು 2.5 ಲಕ್ಷ ಮೊತ್ತದ ಬಿಲ್ ತಲುಪಿತ್ತು.
ಅಳಲು ತೋಡಿಕೊಂಡಿದ್ದ ರಾಮಾಬಾಯಿ
ನಾನು ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನನಗೆ 2.5 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ. ಇದನ್ನು ಊಹಿಸಲಾಗದು. ನಾನು ಕಳೆದ ಒಂದು ವಾರದಿಂದ ವಿದ್ಯುತ್ ಇಲಾಖೆಗೆ ಓಡಾಡುತ್ತಿದ್ದೇನೆ. ಯಾರೊಬ್ಬರು ನನ್ನ ಸಹಾಯಕ್ಕೆ ಬಂದಿಲ್ಲ ಎಂದು ರಾಮಾಬಾಯಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಒಬ್ಬ ವೃದ್ಧ ವ್ಯಕ್ತಿಗೆ 8ಂ ಕೋಟಿ ರೂ. ವಿದ್ಯುತ್ ಬಿಲ್ ಬಂದಿತ್ತು. ಈ ಬಿಲ್ ನೋಡಿದ ಅವರಿಗೆ ರಕ್ತದೊತ್ತಡ ಹೆಚ್ಚಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಲ್ ಪಡೆದ ಗಣಪತ್ ನಾಯಕ್ ಸಿರಿವಂತರಲ್ಲ. ಇವರು ಮಿಲ್ನಲ್ಲಿ ಕೆಲಸ ಮಾಡುವ ವ್ಯಕ್ತಿ. ನಾಯಕ್ ಅವರ ಮೊಮ್ಮಗ ಇಡೀ ಜಿಲ್ಲೆಗೆ ಸೇರಿ ಇಷ್ಟೊಂದು ಬಿಲ್ ಬಂದಿರಬೇಕು ಎಂದು ಭಾವಿಸಿದ್ದರು.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ