• Home
  • »
  • News
  • »
  • trend
  • »
  • Weird Laws: ಈತನಿಗೆ ಐದಲ್ಲ ಹತ್ತಲ್ಲ, ಬರೋಬ್ಬರಿ 8,658 ವರ್ಷ ಜೈಲು ಶಿಕ್ಷೆ! ಅಷ್ಟಕ್ಕೂ ಈ ಧರ್ಮ ಪ್ರಚಾರಕ ಮಾಡಿದ ಪಾಪವಾದ್ರೂ ಏನು?

Weird Laws: ಈತನಿಗೆ ಐದಲ್ಲ ಹತ್ತಲ್ಲ, ಬರೋಬ್ಬರಿ 8,658 ವರ್ಷ ಜೈಲು ಶಿಕ್ಷೆ! ಅಷ್ಟಕ್ಕೂ ಈ ಧರ್ಮ ಪ್ರಚಾರಕ ಮಾಡಿದ ಪಾಪವಾದ್ರೂ ಏನು?

ಬಂಧಿತ ಆರೋಪಿ

ಬಂಧಿತ ಆರೋಪಿ

Weird Laws: ಧಾರ್ಮಿಕ ಪ್ರವಚನಕಾರರೊಬ್ಬರಿಗೆ ಇಸ್ತಾನ್‌ಬುಲ್ ನ್ಯಾಯಾಲಯವು 8,658 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಇವರು ಕಡಿಮೆ ವಸ್ತ್ರಗಳನ್ನು ಧರಿಸಿರುವ ಮಹಿಳೆಯರೊಂದಿಗೆ ಧಾರ್ಮಿಕ ಪ್ರವಚನಗಳನ್ನು ನಡೆಸುತ್ತಾರೆ ಎಂಬ ಆರೋಪವಿದೆ.

  • Share this:

ಧಾರ್ಮಿಕ ಪ್ರವಚನಕಾರರೊಬ್ಬರಿಗೆ ಇಸ್ತಾನ್‌ಬುಲ್ (İstanbul) ನ್ಯಾಯಾಲಯವು (Court) 8,658 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಇವರು ಕಡಿಮೆ ವಸ್ತ್ರಗಳನ್ನು ಧರಿಸಿರುವ ಮಹಿಳೆಯರೊಂದಿಗೆ ಧಾರ್ಮಿಕ ಪ್ರವಚನಗಳನ್ನು ನಡೆಸುತ್ತಾರೆ ಎಂಬ ಆರೋಪವಿದೆ. ಇದಲ್ಲದೆ ಇನ್ನಷ್ಟು ಆರೋಪಗಳು ಅದ್ನಾನ್ ಮೇಲಿದೆ ಎಂಬುದಾಗಿ ವರದಿಗಳಿಂದ ತಿಳಿದುಬಂದಿದೆ. ಸೃಷ್ಟಿವಾದ ಹಾಗೂ ಸಂಪ್ರದಾಯವಾದಿ ತತ್ವಗಳನ್ನು ಪ್ರತಿಪಾದಿಸಲು ದೂರದರ್ಶನ ಪ್ರಸಾರಕ ಅದ್ನಾನ್ ಅಕ್ತಾರ್ (Adnan Oktar) ಕಾರ್ಯಕ್ರಮ ಆಯೋಜಿಸುತ್ತಿದ್ದರು. ಮೇಕಪ್ ಹಾಗೂ ಕಡಿಮೆ ವಸ್ತ್ರಗಳನ್ನು ಧರಿಸಿರುವ ಮಹಿಳೆಯರಿಂದ ಸುತ್ತುವರೆದು ಕಾರ್ಯಕ್ರಮ ನಿರೂಪಿಸುತ್ತಾರೆ ಎಂಬುದು ಅವರ ಮೇಲಿರುವ ಆರೋಪವಾಗಿದೆ.


ಅದ್ನನ್ ಅಕ್ತಾರ್ ಯಾರು?


ಅಕ್ತಾರ್, ತನ್ನ ವಿಮರ್ಶೆಗಳಿಂದ ಸುದ್ದಿಯಲ್ಲಿದ್ದು, ಆನ್‌ಲೈನ್ A9 ದೂರದರ್ಶನ ಚಾನೆಲ್‌ನಲ್ಲಿ ನಡೆಸಿಕೊಡುವ ಕಾರ್ಯಕ್ರಮಗಳಿಗೆ ಪ್ರಸಿದ್ಧರಾಗಿದ್ದಾರೆ ಹಾಗೂ ಟರ್ಕಿಯ ಅಧಿಕಾರಿಗಳಿಂದ ಆಗಾಗ್ಗೆ ಟೀಕೆಗೂ ಒಳಗಾಗುತ್ತಿರುತ್ತಾರೆ. ಹರುನ್ ಯಾಹ್ಯಾ ಎಂಬ ಕಾವ್ಯನಾಮದಲ್ಲಿ ಪ್ರಪಂಚದಾದ್ಯಂತದ ಬಹು ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.


66 ರ ಹರೆಯದ ಅಕ್ತಾರ್‌ಗೆ ಜನವರಿ 2021 ರಲ್ಲಿ ಲೈಂಗಿಕ ದೌರ್ಜನ್ಯ, ವಂಚನೆ ಮತ್ತು ರಾಜಕೀಯ, ಮಿಲಿಟರಿಯಲ್ಲಿ ಬೇಹುಗಾರಿಕೆಯ ಪ್ರಯತ್ನದಂತಹ 10 ಪ್ರತ್ಯೇಕ ಆರೋಪಗಳಿಗಾಗಿ ಒಟ್ಟು 1,075 ವರ್ಷಗಳ ಶಿಕ್ಷೆಯನ್ನು ನೀಡಲಾಯಿತು.


ಅಕ್ತಾರ್ ಮೇಲಿದೆ ಲೈಂಗಿಕ ದೌರ್ಜನ್ಯದ ಆರೋಪ


ಲೈಂಗಿಕ ದೌರ್ಜನ್ಯ ಮತ್ತು ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಸೇರಿದಂತೆ ವಿವಿಧ ಅಪರಾಧಗಳಿಗೆ ಅಕ್ತಾರ್ ತಪ್ಪಿತಸ್ಥರೆಂದು ಕಂಡುಬಂದಿದೆ. ಅನಾಡೋಲು ಸುದ್ದಿ ಸಂಸ್ಥೆಯ ಪ್ರಕಾರ, ಇಸ್ತಾಂಬುಲ್ ಹೈ ಕ್ರಿಮಿನಲ್ ನ್ಯಾಯಾಲಯ ಅಕ್ತಾರ್‌ಗೆ 8,658 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಏಜೆನ್ಸಿ ಪ್ರಕಾರ, ನ್ಯಾಯಾಲಯವು ಇತರ 10 ಆರೋಪಿಗಳಿಗೆ 8,658 ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದೆ.


ಇದನ್ನೂ ಓದಿ: Elephant Viral Video: ಪತ್ರಕರ್ತರ ವರದಿಯನ್ನು ಕಂಡು ಮುದ್ದಿಸಿದ ಆನೆ! ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್


ಆತನ ನೂರಾರು ಅನುಯಾಯಿಗಳನ್ನು 2018 ರಲ್ಲಿ ಬಂಧಿಸಲಾಯಿತು, ಅವರ ವಿಲ್ಲಾದ ಮೇಲೆ ಪೋಲೀಸ್ ದಾಳಿಯ ನಂತರ ಅವರು ಹೆಟೆರೊಡಾಕ್ಸ್ ಇಸ್ಲಾಮಿಕ್ ಆರಾಧನೆಯ ಹೆಸರಿನಲ್ಲಿ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದೆ. ಈ ಹಿನ್ನಲೆಯಲ್ಲಿ ವಿವಿಧ ಪ್ರಕಾಶನ ಸಂಸ್ಥೆಗಳು ಮತ್ತು ಮಾಧ್ಯಮಗಳ ಮೂಲಕ ಅಂತರರಾಷ್ಟ್ರೀಯ ವಿರೋಧಿ ಅಭಿಯಾನಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆತನ ಆನ್‌ಲೈನ್ ಎ9 ಟಿವಿ ಚಾನೆಲ್ ಅನ್ನು ಸಹ ಮುಚ್ಚಲಾಯಿತು.


ವಿಶ್ವದಲ್ಲೇ ಅತ್ಯಂತ ದೀರ್ಘವಾದ ಶಿಕ್ಷೆ


ಯುಎಸ್ ಮೂಲದ ಮುಸ್ಲಿಂ ವಿದ್ವಾಂಸ ಫೆತುಲ್ಲಾ ಗುಲೆನ್ ನೇತೃತ್ವದ ನೆಟ್‌ವರ್ಕ್‌ಗೆ ಸಹಾಯ ಮಾಡಿದ ಆರೋಪವೂ ಈತನ ಮೇಲಿದ್ದು, 2016 ರಲ್ಲಿ ವಿಫಲ ದಂಗೆಯ ಯತ್ನದ ಮಾಸ್ಟರ್‌ಮೈಂಡ್ ಎಂದು ಟರ್ಕಿ ಆರೋಪಿಸಿದೆ. ಅಕ್ತಾರ್‌ಗೆ ಆ ಸಮಯದಲ್ಲಿ 1,075 ವರ್ಷಗಳ ಶಿಕ್ಷೆ ವಿಧಿಸಲಾಯಿತು, ಆದರೆ ಮೇಲಿನ ನ್ಯಾಯಾಲಯವು ಆ ತೀರ್ಪನ್ನು ರದ್ದುಗೊಳಿಸಿತು.


ಟರ್ಕಿಶ್ ಡೈಲಿ ಸಬಾಹ್ ಪ್ರಕಾರ, ಶಿಕ್ಷೆಗಳು ನ್ಯಾಯಾಲಯವು ನೀಡಿದ ಹಿಂದಿನ ದಾಖಲೆಯ ಶಿಕ್ಷೆಯಾದ 9,803 ವರ್ಷಗಳು ಮತ್ತು ಆರು ತಿಂಗಳುಗಳನ್ನು ಮೀರಲಿಲ್ಲ ಎಂದಾಗಿದೆ. ಅದಾಗ್ಯೂ ಈ ಶಿಕ್ಷೆಯ ಅವಧಿಯು ದೇಶದಲ್ಲಿ ಹಾಗೂ ಪ್ರಪಂಚದಲ್ಲೇ ಅತ್ಯಂತ ದೀರ್ಘಾವದಿಯದ್ದಾಗಿದೆ.


ಮಹಿಳೆಯರಿಗೆ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳಲು ಒತ್ತಾಯ


ಇನ್ನು ಕಿಟನ್ಸ್‌ಗಳೆಂದು ಅಕ್ತಾರ್ ಕರೆದುಕೊಂಡಿರುವ ಅವರನ್ನು ಸುತ್ತುವರೆದಿರುವ ಮಹಿಳೆಯರು ಆತನ ಚಳುವಳಿಯ ಪ್ರಮುಖ ವಕೀಲರಾಗಿದ್ದಾರೆ. ಆತನ ಕಂಪನಿಯನ್ನು ತೊರೆದ ಹಲವಾರು ಸಿಬ್ಬಂದಿಗಳು ಆತನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಕ್ತಾರ್ ತನ್ನ ಮೇಲೆ ಹಾಗೂ ಇತರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿರುವ ಮಹಿಳೆಯೊಬ್ಬರು, ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.


ನಿವಾಸದಲ್ಲಿ ಪತ್ತೆಯಾಗಿರುವ ಮಾತ್ರೆಗಳು


ಅವರ ಮನೆಯಲ್ಲಿ ಸುಮಾರು 69,000 ಗರ್ಭನಿರೋಧಕ ಮಾತ್ರೆಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಅಕ್ತಾರ್ ಈ ಮಾತ್ರೆಗಳನ್ನು ಚರ್ಮದ ಅಸ್ವಸ್ಥತೆಗಳು ಮತ್ತು ಮುಟ್ಟಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

Published by:shrikrishna bhat
First published: