Human Poop: ಮನುಷ್ಯರ ಮಲದಿಂದ ಕಲ್ಲಿದ್ದಲು ಉತ್ಪಾದಿಸಿದ ವಿಜ್ಞಾನಿಗಳು! ಇನ್ಮುಂದೆ ಇದಕ್ಕೂ ಬೇಡಿಕೆ ಬರುತ್ತಂತೆ!

Human Poop into Coal: ಮಾನವನ ಮಲದಿಂದಲೂ ಗ್ಯಾಸ್​​ ಉತ್ಪಾದಿಸುವ ದೇಶಗಳಿವೆ. ಸೌತ್​ ಕೊರಿಯಾದಲ್ಲಿ ಮನುಷ್ಯರ ಮಲದಿಂದ ಮಿಥೇನ್​ ಅನಿಲ ತಯಾರಿಸುತ್ತಿವೆ. ಅಷ್ಟು ಮಾತ್ರವಲ್ಲ ಮಿಥೇನ್​ ಅನಿಲದಿಂದ ಡಿಜಿಟಲ್​ ಕರೆನ್ಸಿ ಕೂಡ ಉತ್ಪಾದಿಸುತ್ತಾರೆ ಎಂಬುದು ಮನುಷ್ಯ ಲೋಕದ ಮತ್ತೊಂದು ಅಚ್ಚರಿಯ ವಿಚಾರ. ಇದೀಗ ಮಗದೊಂದು ಅಚ್ಚರಿ ಏನೆಂದರೆ ಮಾನವನ ತ್ಯಾಜ್ಯದಿಂದ ಕಲ್ಲಿದ್ದಲನ್ನು ಕೂಡ ಉತ್ಪಾದಿಸಬಹುದಂತೆ!. ವಿಜ್ಞಾನಿಗಳೇ ಇದನ್ನು ಸಾಬೀತು ಪಡಿಸಿದ್ದಾರೆ.

ಮಲ/ poop

ಮಲ/ poop

 • Share this:
  Poop into Coal: ಮನುಷ್ಯನ ಕಣ್ಣು (Eye), ಕಿಡ್ನಿ (Kidney) , ಹೃದಯಕ್ಕೆ (Heart) ಹೀಗೆ ಇನ್ನಿತರ ಅಂಗಗಳಿಗೆ ಬೇಡಿಕೆಯಿದೆ. ವೈದ್ಯ ಲೋಕ ಮನುಷ್ಯನ ಕೆಲವು ಅಂಗಗಳನ್ನು ಬೇರೆ ವ್ಯಕ್ತಿಗಳಿಗೆ ಮಾರ್ಪಡಿಸುವ ಮೂಲಕ ವೈದ್ಯ ಲೋಕದಲ್ಲೇ ಸಾಹಸ ಮೆರೆದಿದ್ದಾರೆ ಎಂಬುದು ಗೊತ್ತಿರುವ ಸಂಗತಿ. ಆದರೆ ಮನುಷ್ಯ ಹೊರ ಹಾಕುವ ತಾಜ್ಯ ಅಂದರೆ ಮಲಕ್ಕೂ ಬೇಡಿಕೆ ಬಂದಿದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಪ್ರಾಣಿಗಳ ಮಲದಿಂದ ಗ್ಯಾಸ್​ ತಯಾರಿಸುತ್ತಿರುವ ಬಗ್ಗೆ ನಿಮಗೆ ಗೊತ್ತಿರುತ್ತೆ. ದನದ ಸಗಣಿಯಿಂದ ಗೋಬರ್ ಗ್ಯಾಸ್ (Gobar Gas)​ ಬಳಕೆ ಮಾಡಲು ಉಪಯುಕ್ತವಾಗಿದೆ. ಹಳ್ಳಿಗಳಿಗೆ ತೆರಳಿದರೆ ಜಾನುವಾರ ಸಾಕುವವರು ಆಕಳಿನ ಸಗಣಿಯಿಂದ ಗೋಬರ್​ ಗ್ಯಾಸ್​ ತಯಾರಿಸುತ್ತಾರೆ. ಅದನ್ನೇ ಅಡುಗೆ ಗ್ಯಾಸನ್ನಾಗಿ ಬಳಸುತ್ತಾರೆ. ಅದರಂತೆ ಮಾನವನ ಮಲದಿಂದಲೂ ಗ್ಯಾಸ್​​ ಉತ್ಪಾದಿಸುವ ದೇಶಗಳಿವೆ. ಸೌತ್​ ಕೊರಿಯಾದಲ್ಲಿ ಮನುಷ್ಯರ ಮಲದಿಂದ ಮಿಥೇನ್​ ಅನಿಲ ತಯಾರಿಸುತ್ತಿವೆ. ಅಷ್ಟು ಮಾತ್ರವಲ್ಲ ಮಿಥೇನ್​ ಅನಿಲದಿಂದ ಡಿಜಿಟಲ್​ ಕರೆನ್ಸಿ(Digital Currency) ಕೂಡ ಉತ್ಪಾದಿಸುತ್ತಾರೆ ಎಂಬುದು ಮನುಷ್ಯ ಲೋಕದ ಮತ್ತೊಂದು ಅಚ್ಚರಿಯ ವಿಚಾರ. ಇದೀಗ ಮಗದೊಂದು ಅಚ್ಚರಿ ಏನೆಂದರೆ ಮಾನವನ ತ್ಯಾಜ್ಯದಿಂದ ಕಲ್ಲಿದ್ದಲನ್ನು (Coal) ಕೂಡ ಉತ್ಪಾದಿಸಬಹುದಂತೆ!. ವಿಜ್ಞಾನಿಗಳೇ ಇದನ್ನು ಸಾಬೀತು ಪಡಿಸಿದ್ದಾರೆ. ಹಾಗಾದರೆ ಮುಂದೊಂದು ದಿನ ಮಾನವನ ಮಲಕ್ಕೆ ಬೇಡಿಕೆ ಬಂದೆ ಬರುತ್ತದೆ ಎಂಬುದು ಸತ್ಯವಾದ ಮಾತಾಗಿದೆ.

  ದೇಶಗಳು ಶಕ್ತಿಯ ಪರ್ಯಾಯ ಮೂಲಗಳನ್ನು ಹುಡುಕುತ್ತಿರುವಾಗ, ಕೆಲವು ವಿಜ್ಞಾನಿಗಳು ಮಾನವನ ಮಲದಿಂದ ಶಕ್ತಿ ಉತ್ಪಾದಿಸುತ್ತಿದ್ದಾರೆ. ಅದರಲ್ಲೂ ಇಸ್ರೇಲ್‌ನ ಸಂಶೋಧಕರು ಒಂದು ಹೆಜ್ಜೆ ಮುಂದೆ ಹೋಗಿ ಮಲವನ್ನು ಸಂಗ್ರಹಿಸಿ ಅದರಿಂದ ಹೈಡ್ರೋಚಾರ್ ಉತ್ಪಾದಿಸಿದ್ದಾರೆ. ಪಾಪ್ಯುಲರ್ ಸೈನ್ಸ್ ಈ ಬಗ್ಗೆ ವರದಿ ಮಾಡಿದ್ದು, ಸದ್ಯ ನೈಜ ಸಂಗತಿಯನ್ನು ಬಿಚ್ಚಿಟ್ಟಿದೆ.

  ಇಸ್ರೇಲ್‌ನ ಬೆನ್-ಗುರಿಯನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನೆಗೆವ್ ಮರುಭೂಮಿಯಲ್ಲಿ ಶೌಚಾಲಯವನ್ನು ಸ್ಥಾಪಿಸಿ ಜನರಿಂದ ಮಲವನ್ನು ಸಂಗ್ರಹಿಸಿದರು. ನಂತರ ಅದನ್ನು ಸಂಶೋಧನೆಗೆ ಬಳಸಿಕೊಳ್ಳುತ್ತಾರೆ. ಮಲದಲ್ಲಿರುವ ಸೂಕ್ಷ್ಮಾಣುಗಳನ್ನು ತೊಡೆದುಹಾಕಲು ಆಟೋಕ್ಲೇವ್‌ಗಳಲ್ಲಿ ತ್ಯಾಜ್ಯವನ್ನು ಬಿಸಿಮಾಡುತ್ತಾರೆ. ಅದರ ನಂತರ, ಮಾನವನ ಮಲವನ್ನು ಒಣ ರೂಪದಲ್ಲಿ ಪುಡಿಮಾಡುತ್ತಾರೆ.

  ನಂತರ ಕಪ್ಪು-ಕಂದು ಪುಡಿಯನ್ನು ನೀರಿನೊಂದಿಗೆ ಬೆರೆಸಿ ಸಣ್ಣ ಬ್ಯಾಚ್‌ಗಳಾಗಿ ಹಾಕುತ್ತಾರೆ. ಒಂಬತ್ತು 50 ಮಿಲಿ ಪ್ರಯೋಗಾಲಯ ರಿಯಾಕ್ಟರ್‌ಗಳಲ್ಲಿ ಲೋಡ್ ಮಾಡುತ್ತಾರೆ. ಈ ರಿಯಾಕ್ಟರ್‌ಗಳು ತೀವ್ರವಾದ ಶಾಖ ಮತ್ತು ಒತ್ತಡವನ್ನು ಉತ್ಪಾದಿಸಯತ್ತದೆ ಮತ್ತು ಅಡುಗೆ ಸಮಯದಲ್ಲಿ ಸುರಕ್ಷಿತವಾಗಿ ಬಳಸಲು ಸಹಕಾರಿಯಾಗಿದೆ.

  ಇದಕ್ಕಾಗಿ ವಿಜ್ಞಾನಿಗಳು 180-240 ಡಿಗ್ರಿ ಸೆಲ್ಸಿಯಸ್‌ನಿಂದ ವಿಭಿನ್ನ ತಾಪಮಾನಗಳನ್ನು ಪ್ರಯೋಗಿಸಿದ್ದಾರೆ. ಎಲ್ಲಾ ಮಲವನ್ನು ನೀರಿನ ಮಿಶ್ರಣದಿಂದ ಬೇಯಿಸಲಾಗುತ್ತದೆ ಮತ್ತು ಮುಖ್ಯವಾಗಿ ಆಮ್ಲಜನಕದ ಉಪಸ್ಥಿತಿಯಿಲ್ಲದೆ ಬೇಯಿಸಲಾಗುತ್ತದೆ.

  ಇದನ್ನು ಓದಿ: 

  ಬೆನ್-ಗುರಿಯನ್‌ನಲ್ಲಿರುವ ಪರಿಸರ ಹೈಡ್ರಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗದ ಅಧ್ಯಕ್ಷ ಅಮಿತ್ ಗ್ರಾಸ್ ಈ ಬಗ್ಗೆ ಮಾತನಾಡಿದ್ದು," ಮಲ ಎಂದಾಗ ಜನರು ಹಿಂದೆ ಸರಿಯುವುದುಂಟು. ಆದರೆ ಒಣ ಮತ್ತು ಪುಡಿಮಾಡಿದ ರೂಪದಲ್ಲಿ ಸಿಕ್ಕಾಗ ಇದು ಮಲ ಎಂಬುದನ್ನೇ ನೀವು ಮರೆತುಬಿಡುತ್ತೀರಿ, ”ಎಂದಿದ್ದಾರೆ.

  ಮಲವನ್ನು ಬೇಯಿಸುವ ವಿಧಾನಕ್ಕೆ ಹೈಡ್ರೋಥರ್ಮಲ್ ಕಾರ್ಬೊನೈಸೇಶನ್ (HTC) ಎಂದು ಕರೆಯಲಾಗುತ್ತದೆ ಮತ್ತು ಹೈಡ್ರೋಚಾರ್ ಅನ್ನು ಉತ್ಪಾದಿಸುವುದು ಇದರ ಉದ್ದೇಶವಾಗಿದೆ. ಇದರರ್ಥ ನೀರು ಮತ್ತು ಸುಟ್ಟ ಜೀವರಾಶಿಯನ್ನು ಒಳಗೊಂಡಿರುವ ದಪ್ಪ ಕಂದು ವಸ್ತುವಾಗಿ ಮಾರ್ಪಡುತ್ತದೆ.  ಮಲದಿಂದ ಕಲ್ಲಿದ್ದಲು ಉತ್ಪಾದಿಸಿದ ವಿಜ್ಞಾನಿಗಳು!

  ಕಲ್ಲಿದ್ದಲು ಚಾಲಿತ ವಿದ್ಯುತ್ ಸ್ಥಾವರಗಳ ಕುಲುಮೆಗಳಲ್ಲಿ ಇಂಧನದಂತೆ ಹೈಡ್ರೋಚಾರ್ ಅನ್ನು ಬಳಸಬಹುದು. ಕಲ್ಲಿದ್ದಲಿನಂತಹ ದಹನ ಗುಣವನ್ನು ರಚಿಸಲು ಹೈಡ್ರೋಚಾರ್‌ನಿಂದ ನೀರನ್ನು ಬೇರ್ಪಡಿಸುವ ಅಗತ್ಯವಿದೆ. ಆದರೆ ವಿಜ್ಞಾನಿಗಳು ಈಗಾಗಲೇ ಅಡುಗೆ ಹಂತದಲ್ಲಿ ಎಲ್ಲಾ ರೋಗಕಾರಕಗಳನ್ನು ಕೊಂದಿರುವುದರಿಂದ ಉಳಿದ ಬೇರ್ಪಡಿಸಿದ ದ್ರವವು ಈಗ ಸುರಕ್ಷಿತ ಸಾವಯವ ಗೊಬ್ಬರವಾಗಿರುವುದರಿಂದ ಇದರ ಬಳಕೆ ಸೂಕ್ತವೆಂದೆನಿಸಿಕೊಂಡಿದೆ.

  ಇದನ್ನು ಓದಿ: Shitcoin: ನಿಮ್ಮ ಮಲದಿಂದ ಕೂಡಾ ಹಣಗಳಿಸಬಹುದು, ಬಿಟ್ ಕಾಯ್ನ್ ರೀತಿಯಲ್ಲೇ ಬಂದಿದೆ ಶಿಟ್​ಕಾಯ್ನ್ !

  ವಿಜ್ಞಾನಿಗಳು ಪ್ರಯೋಗ ಮತ್ತು ಅದರ ಹಿಂದಿನ ಶ್ರಮ ಹೀಗಿದೆ..

  ಬೆನ್-ಗುರಿಯನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮೊದಲು ಟರ್ಕಿ ಮತ್ತು ಕೋಳಿಗಳ ಮಲದ ಮೇಲೆ ಗಮನ ಕೇಂದ್ರೀಕರಿಸಿ ಪ್ರಯೋಗ ಆರಂಭಿಸಿದರು. ಆದರೆ ಅಂತಿಮವಾಗಿ ಮಾನವನ ಮಲದ ಮೇಲೆ ಇಂತಹದೊಂದು ಪ್ರಯೋಗ ನಡೆಸಿದರೆ ಹೇಗೆ ಎಂಬ ಪ್ರಶ್ನೆ ಮೂಡಿ ಕೊನೆಗೆ ಪ್ರಯೋಗ ಮಾಡುತ್ತಾರೆ. ಮಾನವ ಆಹಾರವನ್ನು ಎಣ್ಣೆ ಬಳಸಿ ತಯಾರಿಸುವುದರಿಂದ ಮತ್ತು ವೈವಿಧ್ಯಮಯ ಆಹಾರದ ಕಾರಣದಿಂದಾಗಿ ಮಲದಲ್ಲಿ  ಹೆಚ್ಚು ಶಕ್ತಿ ಉತ್ಪಾದನೆಯಾಗುತ್ತದೆ. ಮಾತ್ರವಲ್ಲದೆ ದಹನಕ್ಕೆ ಹೆಚ್ಚಿನ ಅವಕಾಶವನ್ನು ಸೃಷ್ಟಿಸುತ್ತದೆ ಎಂಬುದನ್ನು ಮೊದಲು ಅರಿತುಕೊಂಡರು.

  ಆದರೆ ವಿಜ್ಞಾನಿಗಳು ಟರ್ಕಿ ಅಥವಾ ಕೋಳಿ ಹಿಕ್ಕೆ ಉಪಯುಕ್ತವಲ್ಲ ಎಂದು ಹೇಳಿಲ್ಲ. ಉದ್ಯಮದ ಉತ್ಪಾದನೆಯಲ್ಲಿ ಬಳಸಲಾಗುವ ಎಲ್ಲಾ ಕಲ್ಲಿದ್ದಲಿನ 10 ಪ್ರತಿಶತವನ್ನು ಕೋಳಿ ಹಿಕ್ಕೆ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ.
  Published by:Harshith AS
  First published: