ನಿಮ್ಮ ಬಾಯ್​ಫ್ರೆಂಡ್​ ಈ ರೀತಿ ಮಾಡುತ್ತಿದ್ದಾನಾ?; ಹಾಗಿದ್ರೆ ನಿಮ್ಮ ಲವ್​ಸ್ಟೋರಿ ಅಂತ್ಯವಾಗಬಹುದು!

ಇಬ್ಬರೂ ಪ್ರಯತ್ನಪಟ್ಟರೆ ಮಾತ್ರ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಬ್ಬರಲ್ಲಿ ಒಬ್ಬರು ಎಫರ್ಟ್​ ಹಾಕೋದು ನಿಲ್ಲಿಸಿದರೂ ಸಂಬಂಧಗಳು ಬಣ್ಣ ಕಳೆದುಕೊಂಡು ಬಿಡುತ್ತವೆ. ಹಾಗಾದರೆ ಇದನ್ನು ಗ್ರಹಿಸೋದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ.

news18-kannada
Updated:June 25, 2020, 11:43 AM IST
ನಿಮ್ಮ ಬಾಯ್​ಫ್ರೆಂಡ್​ ಈ ರೀತಿ ಮಾಡುತ್ತಿದ್ದಾನಾ?; ಹಾಗಿದ್ರೆ ನಿಮ್ಮ ಲವ್​ಸ್ಟೋರಿ ಅಂತ್ಯವಾಗಬಹುದು!
ಸಾಂದರ್ಭಿಕ ಚಿತ್ರ
  • Share this:
ಎಲ್ಲ ಸಂಬಂಧಗಳು ಆರಂಭದಲ್ಲಿ ತುಂಬಾನೇ ಉತ್ತಮವಾಗಿರುತ್ತವೆ. ಆದರೆ, ಬರುಬರುತ್ತಾ ಸಂಬಂಧಗಳು ಮೊದಲಿನ ತೀವ್ರತೆಯನ್ನು ಕಳೆದುಕೊಳ್ಳುತ್ತಾ ಬರುತ್ತವೆ. ಇದಕ್ಕೆ ನಾನಾ ಕಾರಣಗಳು ಇರಬಹುದು.

ಇಬ್ಬರೂ ಪ್ರಯತ್ನಪಟ್ಟರೆ ಮಾತ್ರ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಬ್ಬರಲ್ಲಿ ಒಬ್ಬರು ಎಫರ್ಟ್​ ಹಾಕೋದು ನಿಲ್ಲಿಸಿದರೂ ಸಂಬಂಧಗಳು ಬಣ್ಣ ಕಳೆದುಕೊಂಡು ಬಿಡುತ್ತವೆ. ಹಾಗಾದರೆ ಇದನ್ನು ಗ್ರಹಿಸೋದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ.


  • ನೀವು ಮಾತ್ರ ಆತನ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಆದರೆ, ಆತ ಮಾತ್ರ ನಿಮ್ಮ ಬಗ್ಗೆ ಹಾಗೂ ನಿಮ್ಮ ಜೀವನದ ಬಗ್ಗೆ ತಿಳಿದುಕೊಳ್ಳಲು ಯಾವುದೇ ಆಸಕ್ತಿಯನ್ನೂ ತೋರುವುದಿಲ್ಲ.

  • ನೀವು ಹೇಳಿದ ನಂತರ ಮಾತ್ರ ಆತ ಐ ಲವ್​ ಯು ಎಂದು ಹೇಳುತ್ತಾನೆ. ಸ್ವ ಇಚ್ಛೆಯಿಂದ ಆತ ಎಂದಿಗೂ ಹೇಳುವುದಿಲ್ಲ. ಇದು ಆತ ನಿಮ್ಮಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ ಎಂದು ಹೇಳೋ ಪ್ರಮುಖ ಲಕ್ಷಣ.

  • ನಿಮ್ಮ ಬಗ್ಗೆ ನೀವು ಮಾಡುವ ಕೆಲಸದ ಬಗ್ಗೆ ಆತ ದೂರನ್ನೇ ನೀಡುವದಿಲ್ಲ. ಅಂದರೆ, ಆತ ನಿಮ್ಮನ್ನು ಇಂಪ್ರೆಸ್​ ಮಾಡೋದನ್ನು ನಿಲ್ಲಿಸಿದ್ದಾನೆ ಎಂದರ್ಥ!

  • ಫ್ರೀ ಟೈಂ ಇದ್ದರೂ ಆತ ನಿಮ್ಮನ್ನು ಭೇಟಿ ಆಗುವುದೇ ಇಲ್ಲ.
  • ಆತ ಭೇಟಿ ಆಗದಿದ್ದರೂ ನೀವು ಅನೇಕ ಪ್ಲ್ಯಾನ್​ಗಳನ್ನು ಮಾಡಿರುತ್ತೀರಿ. ಆದರೆ, ಬೇರೆ ಕೆಲಸವಿದೆ ಎಂದು ಹೇಳಿ ಆತ ಭೇಟಿ ಆಗುವುದರಿಂದ ತಪ್ಪಿಸಿಕೊಳ್ಳುತ್ತಾನೆ.

  • ನಿಮ್ಮ ಮೊದಲ ಭೇಟಿ, ಮೊದಲ ಬಾರಿಗೆ ಪ್ರಪೋಸ್​ ಮಾಡಿದ್ದು ಎಲ್ಲವೂ ನಿಮಗೆ ವಿಶೇಷ ದಿನವಾಗಿರುತ್ತದೆ. ಇದು ನಿಮಗೆ ಮಾತ್ರ ನೆನಪಿರುತ್ತದೆ. ಆದರೆ, ಆತ ಅದನ್ನು ನೆನಪಿಟ್ಟುಕೊಳ್ಳುವುದೇ ಇಲ್ಲ. ನೀವಾಗಿಯೇ ಹೇಳಿದರೂ ಅದನ್ನು ನೆನಪು ಮಾಡಿಕೊಳ್ಳುವ ಯಾವುದೇ ಪ್ರಯತ್ನವನ್ನು ಆತ ಮಾಡುವುದಿಲ್ಲ.

  • ನೀವು ವಿಶೇಷ ಅಡುಗೆ ಮಾಡಿ ಅಥವಾ ವಿಶೇಷ ಗಿಫ್ಟ್​ಗಳನ್ನು ನೀಡುತ್ತಿರುತ್ತೀರಿ. ಆದರೆ, ಆತನ ಕಡೆಯಿಂದ ನಿಮಗೆ ಒಂದು ಚಾಕೋಲೇಟ್​ ಕೂಡ ಸಿಗುತ್ತಿರುವುದಿಲ್ಲ.

  • ಸಂಬಂಧಗಳು ಗಟ್ಟಿತನ ಕಳೆದುಕೊಂಡ ನಂತರ ಆತ ನಿಮ್ಮಿಂದ ಎಲ್ಲ ವಿಚಾರಗಳನ್ನೂ ಮುಚ್ಚಿಡಲು ಆರಂಭಿಸುತ್ತಾನೆ. ಇದು ಸಂಬಂಧದ ಮೇಲೂ ನೇರ ಪರಿಣಾಮ ಬೀರಬಹುದು.

First published:June 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading