ಇದುವೇ ಭಾರತದ ದುಬಾರಿ ಕತ್ತೆ: ಬೆಲೆಯೆಷ್ಟು ಗೊತ್ತಾ?

ಹರಿಯಾಣದಲ್ಲಿರುವ ಟಿಪ್ಪು ಎಂಬ ಹೆಸರಿನ ಕತ್ತೆ ತನ್ನ ಮಾರಾಟದ ಬೆಲೆಯಿಂದ ಭಾರತದಲ್ಲಿ ಸುದ್ದಿ ಮಾಡುತ್ತಿದೆ. ಟಿಪ್ಪುವಿನ ನೈಜ್ಯ ಬೆಲೆ 10 ಲಕ್ಷ ರೂಪಾಯಿಯಾಗಿದ್ದು, ರಾಜು ಸಿಂಗ್​ ಎಂಬವರು ಈ ಕತ್ತೆಯನ್ನು ಸಾಕುತ್ತಿದ್ದಾರೆ. ಹಾಗಿದ್ದರೆ, ಈ ಕತ್ತೆಗೆ ಇಷ್ಟೊಂದು ಬೆಲೆ ಇರಲು ಕಾರಣವಾದ್ರೂ ಏನು.? ಇಲ್ಲಿದೆ ಮಾಹಿತಿ.

news18
Updated:May 8, 2019, 7:10 PM IST
ಇದುವೇ ಭಾರತದ ದುಬಾರಿ ಕತ್ತೆ: ಬೆಲೆಯೆಷ್ಟು ಗೊತ್ತಾ?
ಪ್ರಾತಿನಿಧಿಕ ಚಿತ್ರ
  • News18
  • Last Updated: May 8, 2019, 7:10 PM IST
  • Share this:
ಕತ್ತೆ ಎಂದರೆ ಸಾಧು ಪ್ರಾಣಿ. ಸಾಮಾನ್ಯವಾಗಿ ಕತ್ತೆಗಳನ್ನು ಮೂಟೆ ಹೊರಲು ಬಳಸಿಕೊಳ್ಳುತ್ತಾರೆ. ಅಂತೆಯೇ, ಕತ್ತೆ ಹಾಲಿಗೂ ಬೇಡಿಕೆ ಹೆಚ್ಚುತ್ತಿದೆ. ಹಾಗಾಗೀ ಕತ್ತೆಗಳು 2 ರಿಂದ 3 ಲಕ್ಷ ರೂ.ಗೆ ಮಾರಾಟವಾಗುತ್ತದೆ. ಆದರೆ ಇಲ್ಲೊಂದು ಕತ್ತೆ ಬರೋಬ್ಬರಿ 10 ಲಕ್ಷ ರೂ.ಗೆ ಬೆಲೆ ಬಾಳುತ್ತಿದ್ದು, ದೇಶದಾದ್ಯಂತ ಅಚ್ಚರಿ ಮೂಡಿಸಿದೆ.

ಹೌದು ಹರಿಯಾಣದಲ್ಲಿರುವ ಟಿಪ್ಪು ಎಂಬ ಹೆಸರಿನ ಕತ್ತೆ ತನ್ನ ಮಾರಾಟದ ಬೆಲೆಯಿಂದ ಭಾರತದಲ್ಲಿ ಸುದ್ದಿ ಮಾಡುತ್ತಿದೆ. ಟಿಪ್ಪುವಿನ ನೈಜ್ಯ ಬೆಲೆ 10 ಲಕ್ಷ ರೂಪಾಯಿಯಾಗಿದ್ದು, ರಾಜು ಸಿಂಗ್​ ಎಂಬವರು ಈ ಕತ್ತೆಯನ್ನು ಸಾಕುತ್ತಿದ್ದಾರೆ. ಹಾಗಿದ್ದರೆ, ಈ ಕತ್ತೆಗೆ ಇಷ್ಟೊಂದು ಬೆಲೆ ಇರಲು ಕಾರಣವಾದ್ರೂ ಏನು.? ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ‘ಆಪ್​​, ಎಸ್​​ಪಿ-ಬಿಎಸ್​​ಪಿ ಬಿಟ್ಟು ಬಿಜೆಪಿ ವಿರುದ್ಧ ಪ್ರಚಾರ ಮಾಡಿ’; ಕಾಂಗ್ರೆಸ್​​ಗೆ ಸಿಎಂ ಕೇಜ್ರಿವಾಲ್​​ ಸಲಹೆ

ರಾಜು ಅವರ ತಂದೆ ಇಟಲಿಯಿಂದ ಕತ್ತೆಯೊಂದನ್ನು ತಂದು ಅಮೃತಸರದಲ್ಲಿರೋ ಕತ್ತೆಗೆ ಜೋಡಿಯಾಗಿಸಿದ್ದರು. ಆ ಎರಡು ಕತ್ತೆಗಳಿಂದ ಹುಟ್ಟಿದ ಮರಿ ಟಿಪ್ಪು. ಸಾಮಾನ್ಯ ಕತ್ತೆಗಳಿಂತ ಕೊಂಚ ಭಿನ್ನವಿರುವ ಈ ಕತ್ತೆ 7 ಇಂಚು ಎತ್ತರವಿದೆ. ಟಿಪ್ಪು ಹಠಮಾರಿ ಕತ್ತೆಯಾಗಿದ್ದು, ಯಾರಾದರೂ ಹತ್ತಿರ ಬಂದರೆ ಒದೆಯುತ್ತದೆ. ಹೀಗಾಗಿ ಟಿಪ್ಪುವನ್ನು ಮಾರಾಟ ಮಾಡಲು ಮಾಲೀಕ ಮನಸ್ಸು ಮಾಡಿಲ್ಲ.

ಟಿಪ್ಪು ಮಾರ್ಟಿನಾ ಫ್ರಾಂಕಾ ಎಂಬ ಬ್ರಿಗೇಡ್​ಗೆ ಸೇರಿದ್ದು, ಈ ಜಾತಿಯ ಕತ್ತೆಗಳು ಹಾಲು ಉತ್ಪಾದನೆಗೆ ಹೆಸರುವಾಸಿಯಾಗಿದೆ. ಅಂತೆಯೇ, ಹೇಸರಗತ್ತೆ ಕಸಿ ಮಾಡೋಕೆ ಟಿಪ್ಪುವನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಟಿಪ್ಪುವಿಗೆ 40 ಸಾವಿರ ರೂಪಾಯಿಯನ್ನು ನೀಡಲಾಗುತ್ತದೆ. ಮಾತ್ರವಲ್ಲದೆ, ಟಿಪ್ಪು 2 ವರ್ಷಗಳಲ್ಲಿ 50 ಹೇಸರಗತ್ತೆಗಳ ಜನ್ಮಕ್ಕೆ ಕಾರಣವಾಗಿ 20 ಲಕ್ಷ ರೂಪಾಯಿ ಹಣವನ್ನು ಸಂಪಾದಿಸಿದ್ದಾನೆ
First published:May 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ