ಅಯ್ಯೋ... ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಇಂತಾ ಗತಿ ಬಂತಾ..?

ವರ್ಷವೊಂದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರು ಲೋಕಲ್ ರೈಲಿನಲ್ಲಿ ಓಡಾಡುತ್ತಿದ್ದಾರೆ. ಇವರಿಗೆ ಇಂತಾ ಗತಿ ಬಂತಾ  ಅಂದುಕೊಳ್ಳುತ್ತಿದ್ದೀರಾ?. ಅಸಲಿ ಸಂಗತಿ ಬೇರೆನೆ ಇದೆ | Is that Ravi Shastri? Viral picture of Indian coach's 'doppelganger' is a hit meme on social media.

Photo: Twitter

Photo: Twitter

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ವರ್ಷವೊಂದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರು ಲೋಕಲ್ ರೈಲಿನಲ್ಲಿ ಓಡಾಡುತ್ತಿದ್ದಾರೆ. ಇವರಿಗೆ ಇಂತಾ ಗತಿ ಬಂತಾ  ಅಂದುಕೊಳ್ಳುತ್ತಿದ್ದೀರಾ?. ಅಸಲಿ ಸಂಗತಿ ಬೇರೆನೆ ಇದೆ.

ಮುಂಬೈಯ ಲೋಕಲ್ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ ಜನರು ಕಿಟಕಿ ಬದಿಯಲ್ಲಿದ್ದ ವ್ಯಕ್ತಿಯನ್ನು ನೋಡಿ ಒಮ್ಮೆ ಅಚ್ಚರಿಗೊಂಡರು. ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸಾದ ಸೀದ ವ್ಯಕ್ತಿಯಂತೆ ಇರುವುದನ್ನು ನೋಡಿ ಅರೆ ಇವರಿಗೆ ಈ ಗತಿ ಯಾಕಪ್ಪ ಬಂತು ಎಂದು ಮಾತನಾಡಿಕೊಂಡರು. ಜೊತೆಗೆ ಫೋಟೋವನ್ನು ತೆಗೆದರು. ಆದರೆ, ನಂತರ ತಿಳಿಯಿತು..ಇದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅಲ್ಲ. ಬದಲಾಗಿ ರವಿ ಶಾಸ್ತ್ರಿ ಅವರಂತೆ ಹೋಲುವ ಬೇರೊಬ್ಬ ವ್ಯಕ್ತಿಯೆಂದು.

ಇದನ್ನೂ ಓದಿ: 2ನೇ ಟಿ-20: ಗೆಲುವಿನ ಪಟಾಕಿ ಸಿಡಿಸಲು ರೋಹಿತ್ ರೆಡಿ: ಹೇಗಿದೆ ಆಡುವ ಬಳಗ..?

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರೊಬ್ಬರು ಇವರ ಫೋಟೋವನ್ನು ತೆಗೆದು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಟ್ರೋಲ್ ಆಗುತ್ತಿವೆ. ಕಿಟಕಿ ಬದಿ ಕುಳಿತಿರುವ ಇವರ ಮುಖದ ಭಾವಕ್ಕೆ ಹೋಲಿಸಿ ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು 2019ರ ವಿಶ್ವಕಪ್​ ನಂತರ ರವಿ ಶಾಸ್ತ್ರಿ ಅವರ ಸ್ಥಿತಿ ಈ ರೀತಿ ಇರಲಿದೆ ಎಂದರೆ, ಇನ್ನೂ ಕೆಲವರು ರೋಹಿತ್ ಶರ್ಮಾ ಭಾರತ ತಂಡ ಖಾಯಂ ನಾಯಕ ಆದರೆ ಹೀಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.

       

First published: