HOME » NEWS » Trend » IS ROUTINE FLU VACCINATION KEY TO PANDEMIC PREPAREDNESS DOCTORS SAY YES STG SKTV

Influenza Vaccine: ಫ್ಲೂ ಲಸಿಕೆ ತೆಗೆದುಕೊಳ್ತಾ ಇದ್ರೆ ಕೊರೊನಾ ನಮ್ಮನ್ನು ಬಾಧಿಸೋದಿಲ್ಲ ! ಆದರೆ ಎಷ್ಟು ದಿನ ?

Influenza Vaccine: ಕೋವಿಡನ್ನು ತಗ್ಗಿಸುವ ಕಟ್ಟುನಿಟ್ಟಿನ ಕ್ರಮಗಳು, ಈ ಋತುವಿನ ಇನ್‍ಫ್ಲುಯೆನ್ಸಾ ಅಥವಾ ಶೀತ ವೈರಸ್ ರೋಗಗಳ ಹರಡುವಿಕೆ ಮತ್ತು ತೀವ್ರತೆಯ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಆಗಿದ್ದರೂ ಸಹ, ಇನ್‍ಫ್ಲುಯೆನ್ಸಾ ವೈರಸನ್ನು ಕಡೆಗಣಿಸುವಂತಿಲ್ಲ.

Trending Desk
Updated:June 23, 2021, 1:32 PM IST
Influenza Vaccine: ಫ್ಲೂ ಲಸಿಕೆ ತೆಗೆದುಕೊಳ್ತಾ ಇದ್ರೆ ಕೊರೊನಾ ನಮ್ಮನ್ನು ಬಾಧಿಸೋದಿಲ್ಲ ! ಆದರೆ ಎಷ್ಟು ದಿನ ?
ಸಾಂದರ್ಭಿಕ ಚಿತ್ರ
  • Share this:

Influenza Vaccine: ಕೋವಿಡ್ ಮಹಾಮಾರಿಯಿಂದ ಅಂದಾಜು ಸುಮಾರು 3.8 ಮಿಲಿಯನ್ ಜನರು ಈ ವರಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನು ಒಂದಲ್ಲ ಒಂದು ರೀತಿಯಲ್ಲಿ ಈ ಕಾಯಿಲೆಯ ಪ್ರಭಾವದಿಂದ ಸಂಕಷ್ಟಕ್ಕೆ ಒಳಗಾಗಿದ್ದಾನೆ ಎಂದರೆ ಅತಿಶಯೋಕ್ತಿ ಆಗಲಾರದು. ಇದೇ ಸಮಯದಲ್ಲಿ ಮತ್ತೊಂದು ಆತಂಕಕಾರಿಯಾದ ಬದಲಾವಣೆಯೊಂದು ನಡೆಯುತ್ತಿದೆ. ಅದುವೇ ಪ್ರತಿ ಋತು ಅನುಸಾರವಾಗಿ ಬರುವ ವೈರಸ್ ಜ್ವರದ ಕುರಿತ ಬಗೆಗಿನ ಚರ್ಚೆ ಜಾಗತಿಕ ಮಟ್ಟದಲ್ಲಿ ಕಣ್ಮರೆ ಆಗಿರುವುದು. ಆದರೆ ಹಾಗಾಗಿರುವುದು ವಿಶ್ವ ಆರೋಗ್ಯಕ್ಕೆ ಒಂದು ಗಂಭೀರ ಅಪಾಯವೆಂದು ಹೇಳಬಹುದು. ಅದು ಕೆಲವು ರಾಷ್ಟ್ರಗಳ ಸಾಮರ್ಥ್ಯವನ್ನು ಅದು ಜಟಿಲಗೊಳಿಸುತ್ತದೆ. ಜಿ7 ಆರೋಗ್ಯ ಮಂತ್ರಿಗಳ ಇತ್ತೀಚಿನ ಮಾತುಗಳ ಪ್ರಕಾರ, “ಭವಿಷ್ಯಕ್ಕಾಗಿ ವಿಶ್ವ ಆರೋಗ್ಯ ಸುರಕ್ಷತೆ ಮತ್ತು ವ್ಯವಸ್ಥೆಯನ್ನು ಮರಳಿ ಉತ್ತಮ ಹಾಗೂ ಸದೃಢಗೊಳಿಸಬೇಕಿದೆ’.




ಕೋವಿಡನ್ನು ತಗ್ಗಿಸುವ ಕಟ್ಟುನಿಟ್ಟಿನ ಕ್ರಮಗಳು, ಈ ಋತುವಿನ ಇನ್‍ಫ್ಲುಯೆನ್ಸಾ ಅಥವಾ ಶೀತ ವೈರಸ್ ರೋಗಗಳ ಹರಡುವಿಕೆ ಮತ್ತು ತೀವ್ರತೆಯ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಆಗಿದ್ದರೂ ಸಹ, ಇನ್‍ಫ್ಲುಯೆನ್ಸಾ ವೈರಸನ್ನು ಕಡೆಗಣಿಸುವಂತಿಲ್ಲ. ಏಕೆಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಸಾಮಾನ್ಯ ಸನ್ನಿವೇಶಗಳಲ್ಲಿ, ಇನ್‍ಫ್ಲುಯೆನ್ಸಾ ವೈರಸ್ ಕಾರಣದಿಂದ ಜಾಗತಿಕವಾಗಿ ವರ್ಷಕ್ಕೆ 650,000 ಸಾವುಗಳು ಸಂಭವಿಸುತ್ತವೆ.


ಇದನ್ನೂ ಓದಿ: ಮಳೆಗಾಲ ಪ್ರಾರಂಭವಾಗುವ ಮೊದಲು ಎಲ್ಲಾ ಮಕ್ಕಳಿಗೆ Influenza​ ಲಸಿಕೆ ನೀಡಲು ತಜ್ಞರು ಶಿಫಾರಸು ಮಾಡುತ್ತಿದ್ದಾರೆ

ಋತುಕಾಲದ ಫ್ಲೂಗಳು ಮರಳುತ್ತವೆಯೇ?
ಋತುಕಾಲದ ಫ್ಲೂಗಳು ಖಂಡಿತಾ ಮರಳಬಹುದು. ಜಾಗತಿಕ ಸಮುದಾಯ ಆರೋಗ್ಯಕ್ಕೆ ಅವಿಭಾಜ್ಯವಾಗಿರುವ ಕೆಲವು ಕೆಳ ಮತ್ತು ಮಧ್ಯಮ ಆದಾಯದ ದೇಶಗಳು ಎಂದಿನ ಜ್ವರ ಲಸಿಕೆ ಯೋಜನೆಗಳಿಗೆ ಆದ್ಯತೆ ಕೊಡುವುದನ್ನು ಕಡಿಮೆ ಮಾಡಿದರೆ ಅದರಿಂದ ಅಪಾಯ ಖಂಡಿತಾ. ಉಸಿರಾಟದ ವೈರಲ್ ಸೋಂಕಿನ ಅಪಾಯಕ್ಕೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು, ಕಾಲೋಚಿತ ಇನ್‍ಫ್ಲುಯೆನ್ಸಾ ಯೋಜನೆಗಳೊಂದಿಗೆ ಸದಾ ಸಿದ್ಧವಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹಲವು ವರ್ಷಗಳಿಂದ ಹೇಳುತ್ತಲೇ ಇದೆ.


2009ರ ಹೆಚ್1ಎನ್1 ಸಾಂಕ್ರಾಮಿಕದ ಸಂದರ್ಭದಲ್ಲಿ, ಋತುಕಾಲಿಕ ಇನ್‍ಫ್ಲುಯೆನ್ಸಾ ಯೋಜನೆಗಳನ್ನು ಹೊಂದಿಲ್ಲದ ದೇಶಗಳಿಗೆ ಹೋಲಿಸಿದರೆ, ಇನ್‍ಫ್ಲುಯೆನ್ಸಾ ಯೋಜನೆಗಳನ್ನು ಹೊಂದಿರುವ ದೇಶಗಳು ಹೆಚ್ಚು ಪರಿಣಾಮಕಾರಿಯಾಗಿ ಸಾಂಕ್ರಮಿಕ ರೋಗಕ್ಕೆ ಪ್ರತಿಕ್ರಿಯೆ ನೀಡಿದವು.


ಇನ್‍ಫ್ಲುಯೆನ್ಸಾ ಲಸಿಕೆಗಳ ಬಳಕೆ ಜಾತಿಕವಾಗಿ ಹೆಚ್ಚುತ್ತಿದ್ದರೂ, ಕೆಳ ಮತ್ತು ಮಧ್ಯಮ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಇನ್ನೂ ಅದರ ಕೊರತೆ ಕಾಡುತ್ತಿದೆ. ಹಾಗಾದರೆ ಮುಂದೇನು ಮಾಡಬಹುದು? ಇತ್ತೀಚಿನ ಅಧ್ಯಯನವೊಂದು ನೀಡಿರುವ ಸಲಹೆ ಇಂತಿದೆ:


• ವಿಶಾಲ ಆರ್ಥಿಕ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಇನ್‍ಫ್ಲುಯೆನ್ಸಾದ ಪರಿಣಾಮವನ್ನು ನಿರ್ಣಯಿಸಬೇಕು
• ಋತುಕಾಲಿಕ ಇನ್‍ಫ್ಲುಯೆನ್ಸಾ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸಬೇಕು
• ಪರಿಣಾಮಕಾರಿ ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಅಭಿಯಾನಗಳ ಮೂಲಕ ಇನ್‍ಫ್ಲುಯೆನ್ಸಾ ಲಸಿಕೆಗಳ ಸ್ವೀಕಾರ ಹೆಚ್ಚುವಂತೆ ಮಾಡಬೇಕು.



ಇತರ ಲಸಿಕೆ ಕಾರ್ಯಕ್ರಮಗಳಿಂದಲೂ ಲಾಭವಿದೆ
ಸದ್ಯಕ್ಕೆ ಕೋವಿಡ್ -19 ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದ್ದರೂ, ನಾವು ಇನ್‍ಫ್ಲುಯೆನ್ಸಾದ ಅಪಾಯವನ್ನು ಕೂಡ ಕಡೆಗಣಿಸುವಂತಿಲ್ಲ. ಫ್ಲೂ ವ್ಯಾಕ್ಸಿನೇಶನ್‍ಗಳ ಕೊರತೆ ಇರುವ ಕೆಳ ಮತ್ತು ಮಧ್ಯಮ ಆರ್ಥಿಕತೆ ಹೊಂದಿರುವ ದೇಶಗಳು, ಅದಕ್ಕೆ ಪರಿಹಾರ ಒದಗಿಸಬಲ್ಲ ಯೋಜನೆಗಳನ್ನು ರೂಪಿಸಬೇಕು.ಇಂತಹ ಬೆಳವಣಿಗೆಗಳು, ವಾರ್ಷಿಕ ಋತುಕಾಲಿಕ ವೈರಸ್ ರೋಗಗಳ ಸಮಸ್ಯೆ ಮಾತ್ರವಲ್ಲ, ಸದ್ಯದ ಕೋವಿಡ್ -19 ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳಿಗೂ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಹಕಾರಿಯಾಗುತ್ತದೆ.



Youtube Video


ಕೆಳ ಮತ್ತು ಮಧ್ಯಮ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಇನ್‍ಫ್ಲುಯೆನ್ಸಾ ವ್ಯಾಕ್ಸಿನೇಶನ್ ಯೋಜನೆಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ನಾವು ಸಹಯೋಗ ನೀಡಬೇಕು. ಹಾಗೆ ಮಾಡುವ ಮೂಲಕ ಜಾಗತಿಕ ಆರೋಗ್ಯ ಸುರಕ್ಷತತೆಯನ್ನು ಹೆಚ್ಚಿಸಬಹುದು.


Published by: Soumya KN
First published: June 23, 2021, 1:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories