ಸೋಶಿಯಲ್ ಮೀಡಿಯಾಗಳು (Social Media) ಇತ್ತೀಚೆಗೆ ಬಹಳಷ್ಟು ಬಳಕೆಯಲ್ಲಿವೆ. ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗ್ತಾ ಇದೆ. ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲೇ ಸೆಲಬ್ರಿಟಿಗಳಾಗುವುದು ಸುಲಭವಾಗಿದೆ. ಇದಕ್ಕಾಗಿ ರೀಲ್ಸ್ (Reels) ಮಾಡುವ ಮೂಲಕವೋ, ಏನಾದರೊಂದು ವಿಡಿಯೋ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ತಾರೆ. ಆದರೆ ಇಲ್ಲೊಂದು ಇರಾನ್ ದಂಪತಿಗಳು (Iran Couples) ರೀಲ್ಸ್ಗಾಗಿ ವಿಡಿಯೋ ಮಾಡಲು ಹೋಗಿ 10 ವರ್ಷ ಜೈಲು ಶಿಕ್ಷೆಯನ್ನು ಪಡೆದುಕೊಂಡಿದ್ದಾರೆ. ಈ ದಂಪತಿಗಳು ಟೆಹ್ರಾನ್‌ನ ಟವರ್ ಮುಂದೆ ನಿಂತು ರೊಮ್ಯಾಂಟಿಕ್ ಆಗಿ ಡ್ಯಾನ್ಸ್ (Romantic Dance) ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆ ನಂತರ ಇರಾನ್ ಆಡಳಿತವು ಇವರಿಗೆ ಈ ಶಿಕ್ಷೆಯನ್ನು ವಿಧಿಸಿದೆ.
ಹೌದು, ಟೆಹ್ರಾನ್‌ನ ಆಜಾದಿ ಟವರ್‌ನ ಮುಂದೆ ಪ್ರಣಯವಾಗಿ ನೃತ್ಯ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಅಸ್ತಿಯಾಜ್ ಹಘಿಘಿ ಮತ್ತು ಆಕೆಯ ವರ ಅಮೀರ್ ಮೊಹಮ್ಮದ್ ಅಹ್ಮದಿ ಅವರಿಗೆ ಇರಾನ್ ಆಡಳಿತವು 20 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ. ಕಾರಣವೇನು ಎಂಬುದನ್ನು ತಿಳಿಬೇಕಾದರೆ ಈ ಲೇಖವನ್ನು ಓದಿ.
ಕಾರಣವೇನು?
ಮುಖ್ಯವಾಗಿ ಯಾರೇ ಹುಎಉಗಿಯರು ಇರಾನ್ನಲ್ಲಿ ತಲೆಗೆ ಸ್ಕಾರ್ಫ್ ಧರಿಸಿ ಓಡಾಡುವಂತಿಲ್ಲ. ಹಾಗೆಯೇ ಮಹಿಳೆಯರು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಡ್ಯಾನ್ಸ್ ಮಾಡಬಾರದು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ ಹಘಿಘಿ ಅವರು ಟೆಹ್ರಾನ್ ಟವರ್ ಮುಂದೆ ಸ್ಕಾರ್ಫ್ ಧರಿಸದೆಯೇ, ಸಾರ್ವಜನಿಕವಾಗಿ ಪುರುಷನೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಸಾರ್ವಜನಿಕವಾಗಿ ಇರಾನ್ನಲ್ಲಿ ಪುರುಷರೊಂದಿಗೆ ಮಹಿಳೆಯರು ಡ್ಯಾನ್ಸ್ ಮಾಡುವಂತಿಲ್ಲ. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ಕಾರಣಕ್ಕೆ ಇರಾನ್ ನ್ಯಾಯಾಲಯವು ಈ ದಂಪತಿಗಳಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಏನೆಲ್ಲಾ ಶಿಕ್ಷೆ ವಿಧಿಸಿದೆ?
ಟೆಹ್ರಾನ್‌ನಲ್ಲಿನ ಕ್ರಾಂತಿಕಾರಿ ನ್ಯಾಯಾಲಯವು ಅಸ್ತಿಯಾಜ್ ಹಘಿಘಿ ಮತ್ತು ಆಕೆಯ ವರ ಅಮೀರ್ ಮೊಹಮ್ಮದ್ ಅಹ್ಮದಿ ಅವರಿಗೆ ತಲಾ 10 ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತು, ಇದರ ಜೊತೆಗೆ ಇಂಟರ್ನೆಟ್ ಬಳಸುವುದರ ಮೇಲೆ ಮತ್ತು ಇರಾನ್‌ನಿಂದ ಹೊರಹೋಗುವ ವಿಷಯದಲ್ಲೂ ನಿಷೇಧವನ್ನು ವಿಧಿಸಿತು ಎಂದು ಯುಎಸ್ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ (HRANA) ತಿಳಿಸಿದೆ.
ಇನ್ಸ್ಟಾಗ್ರಾಮ್ನಲ್ಲಿ ಫುಲ್ ಫೇಮಸ್
ಈ ದಂಪತಿಗಳು ಈಗಾಗಲೇ ಜನಪ್ರಿಯ ಇನ್ಸ್ಟಾಗ್ರಾಮ್ ಬ್ಲಾಗರ್ಗಳಾಗಿ ಟೆಹ್ರಾನ್ನಲ್ಲಿ ಸಾಕಷ್ಟು ಫಾಲೋವರ್ಸ್ಗಳನ್ನು ಹೊಂದಿದ್ದರು. ಈ ವಿಡಿಯೋವನ್ನು ನೋಡಿದ ಇರಾನ್ ನ್ಯಾಯಾಲಯವು "ಭ್ರಷ್ಟಾಚಾರ ಮತ್ತು ಸಾರ್ವಜನಿಕ ವೇಶ್ಯಾವಾಟಿಕೆಯನ್ನು ಪ್ರೋತ್ಸಾಹಿಸುವ" ಮತ್ತು "ರಾಷ್ಟ್ರೀಯ ಭದ್ರತೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಒಟ್ಟುಗೂಡಿಸುವ" ತಪ್ಪಿತಸ್ಥರೆಂದು ಅದು ಹೇಳಿದೆ.
For the crime of dancing, these two young Iranians have been sentenced to 10 years and 6 months in prison.#AstiyazhHaghighi 21 & #AmirMohammadAhmadi,
22 danced in the streets in support of #WomanLifeFreedom revolution in Iran.
They don’t deserve such brutality.#MahsaAmini pic.twitter.com/Bs9VxqnxFV
— Masih Alinejad 🏳️ (@AlinejadMasih) January 30, 2023
ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಈ ದಂಪತಿಗಳು ವಕೀಲರಿಂದ ವಂಚಿತರಾಗಿದ್ದಾರೆ ಮತ್ತು ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡುವ ಎಲ್ಲಾ ಪ್ರಯತ್ನಗಳನ್ನು ತಿರಸ್ಕರಿಸಲಾಗಿದೆ ಎಂದು ಅವರ ಕುಟುಂಬಗಳಿಗೆ ಮೂಲಗಳನ್ನು ಈ ಸುದ್ದಿ ಸಂಸ್ಥೆಯ ಮೂಲಕ ಉಲ್ಲೇಖಿಸಲಾಗಿದೆ.
ಈ ವಿಡಿಯೋದಲ್ಲಿ ಏನಿದೆ?
ಇನ್ನು ಟೆಹ್ರಾನ್‌ನ ಅಜಾದಿ ಟವರ್‌ನ ಮುಂದೆ ಅಸ್ತಿಯಾಜ್ ಹಘಿಘಿ ಮತ್ತು ಆಕೆಯ ವರ ಅಮೀರ್ ಮೊಹಮ್ಮದ್ ಅಹ್ಮದಿ ಮುಂದೆ ದಂಪತಿಗಳು ಡ್ಯಾನ್ಸ್ ಮಾಡಿದ ವಿಡಿಯೋ ಫುಲ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೊಹಮ್ಮದ್ ಅಹ್ಮದಿ ಅವರು ತನ್ನ ಹೆಂಡತಿಯನ್ನು ಎತ್ತಿ ತಿರುಗಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಈಗ ಶೇರ್ ಆಗಿದ್ದು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ