ಭಾರತೀಯರು (India) ತಮ್ಮ ಕೈಚಳಕ ಹಾಗೂ ಬುದ್ಧಿವಂತಿಕೆಯಿಂದ ಕಸವನ್ನು (Waste) ರಸವನ್ನಾಗಿಸುವಲ್ಲಿ ನಿಷ್ಣಾತರು. ಅದರಲ್ಲೂ ಗ್ರಾಮೀಣ ಪ್ರತಿಭೆಗಳು ಚಕಿತಗೊಳಿಸುವಷ್ಟು ಕ್ರಿಯಾಶೀಲರಾಗಿದ್ದು ತಮ್ಮ ಮಾಂತ್ರಿಕ ಕಲಾ (magical art)ನೈಪುಣ್ಯತೆಯಿಂದ ಪ್ರತಿಯೊಬ್ಬರನ್ನೂ ಮಂತ್ರಮುಗ್ಧಗೊಳಿಸುತ್ತಾರೆ. ಈಗೀಗ ಸಾಮಾಜಿಕ ತಾಣದಲ್ಲೂ ಇಂತಹುದೇ ಕಲಾತ್ಮಕ (Artistic) ವಿಡಿಯೋಗಳನ್ನು (Video) ನೋಡುತ್ತಿರುತ್ತೇವೆ.
ಕೈಗಾರಿಕೋದ್ಯಮಿ ಹಂಚಿಕೊಂಡ ಪೋಸ್ಟ್ ಕ್ಷಣಮಾತ್ರದಲ್ಲಿ ವೈರಲ್
ಇಂತಹುದೇ ವೈವಿಧ್ಯಮಯ ಪೋಸ್ಟ್‌ಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವಲ್ಲಿ ಆರ್‌ಪಿಜಿ (RPG) ಅಧ್ಯಕ್ಷ ಹರ್ಷ್ ಗೋಯೆಂಕಾ ಸಿದ್ಧಹಸ್ತರು.
ಕೈಗಾರಿಕೋದ್ಯಮಿ ತಮ್ಮ ಟ್ವಿಟರ್ ಖಾತೆಯಲ್ಲಿ ಏನಾದರೊಂದು ಆಸಕ್ತಿಕರ ಟ್ವೀಟ್‌ಗಳನ್ನು ಹಾಗೂ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಅಂತೆಯೇ ಭಾರತೀಯರನ್ನು ಚಕಿತರನ್ನಾಗಿಸುತ್ತಾರೆ. ಹೀಗೆ ಹಂಚಿಕೊಂಡ ಪೋಸ್ಟ್‌ಗಳು ಟ್ವೀಟ್‌ಗಳು ಲಕ್ಷಗಟ್ಟಲೆ ಲೈಕ್‌ಗಳು ಹಾಗೂ ಕಾಮೆಂಟ್‌ಗಳು ಅಂತೆಯೇ ಮರುಪೋಸ್ಟ್‌ಗಳನ್ನು ಪಡೆದುಕೊಳ್ಳುತ್ತವೆ.
ಸಾಮಾನ್ಯ ಆಟೋರಿಕ್ಷಾ ವೈಭವೋಪೇತ ಕಾರಾಗಿ ಮಾರ್ಪಾಡು
ಇದೀಗ ಕೈಗಾರಿಕೋದ್ಯಮಿ ಆಸಕ್ತಿಕರ ಪೋಸ್ಟ್ ಒಂದನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಆಟೋರಿಕ್ಷಾವನ್ನು ಐಷಾರಾಮಿ ಕಾರಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಲಕ್ಷುರಿ ಕಾರಿನ ಎಲ್ಲಾ ನೋಟವನ್ನು ಈ ಆಟೋರಿಕ್ಷಾ ಕಾರು ಪಡೆದುಕೊಂಡಿದೆ.
ಹಾಗೂ ಇದನ್ನು ಮಾರ್ಪಡಿಸಿರುವ ಆ ಕುಶಲಕರ್ಮಿ ವ್ಯಕ್ತಿಗೆ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಸಾಲದು ಎಂದು ಟ್ವಿಟರ್ ಬಳಕೆದಾರರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಆಟೋರಿಕ್ಷಾವನ್ನು ಕಾರಾಗಿ ಹೇಗೆ ಬದಲಾಯಿಸಲಾಗಿದೆ?
ವೈರಲ್ ಆಗಿರುವ ವಿಡಿಯೋವನ್ನು ಆವಿಷ್ಕರ್ ನಾಯಕ್ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 58 ಸೆಕೆಂಡ್‌ಗಳ ವಿಡಿಯೋದಲ್ಲಿ ಹೊಸ ಬಗೆಯಲ್ಲಿ ತಯಾರಾಗಿರುವ ಆಟೋರಿಕ್ಷಾವನ್ನು ಕಾಣಬಹುದಾಗಿದ್ದು ಇದು ಸಾಮಾನ್ಯವಾಗಿ ನೋಡುವ ರಿಕ್ಷಾಗಿಂತಲೂ ಭಿನ್ನವಾಗಿದೆ. ಬೆಲೆಬಾಳುವ ದುಬಾರಿ ಸೀಟ್‌ಗಳನ್ನು ಒಳಗೊಂಡಿರುವ ಐಷಾರಾಮಿ ಕಾರಿನಂತೆ ಈ ರಿಕ್ಷಾವನ್ನು ಮಾರ್ಪಡಿಸಲಾಗಿದೆ.
ವೈರಲ್ ಆದ ಆಟೋರಿಕ್ಷಾ ಪೋಸ್ಟ್
ರಿಕ್ಷಾದ ಮುಂಭಾಗವನ್ನು ಸಾಮಾನ್ಯ ರಿಕ್ಷಾದಂತೆಯೇ ನಿರ್ಮಿಸಲಾಗಿದ್ದು, ಸೀಟು ಹಾಗೂ ನಂತರದ ಮಾರ್ಪಾಡುಗಳನ್ನು ಲಕ್ಷುರಿ ಕಾರಿನಂತೆ ಸಿದ್ಧಪಡಿಸಲಾಗಿದೆ.
ಈ ಪೋಸ್ಟ್ ಶೇರ್ ಮಾಡಿದ ತಕ್ಷಣವೇ ವೈರಲ್ ಆಗಿದ್ದು 16 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ. ಟ್ವಿಟರ್ ಬಳಕೆದಾರರು ರಿಕ್ಷಾದ ಅಂದ ಚಂದಕ್ಕೆ ಹಾಗೂ ಕಾರಿನ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಕ್ಕೆ ಬೆರಗಾಗಿದ್ದು ಇದನ್ನು ನಿರ್ಮಿಸಿದವರು ನಿಜವಾಗಿಯೂ ಅದ್ಭುತ ಕಲಾಕಾರ ಎಂದು ಹೊಗಳಿದ್ದಾರೆ.
ಟ್ವಿಟರ್‌ನಲ್ಲಿ ಕಾಮೆಂಟ್ ಮಾಡಿದ ಬಳಕೆದಾರರ ಪ್ರತಿಕ್ರಿಯೆಗಳೇನು?
ಟ್ವಿಟರ್‌ನಲ್ಲಿ ಈ ಪೋಸ್ಟ್‌ಗೆ ಬಳಕೆದಾರರು ವಿಭಿನ್ನವಾದ ಕಾಮೆಂಟ್‌ಗಳನ್ನು ನೀಡಿದ್ದು, ಆಟೋರಿಕ್ಷಾ ಕಾರು ಸಾಮಾಜಿಕ ತಾಣದಲ್ಲಿ ಬಳಕೆದಾರರ ಮನಗೆದ್ದಿರುವುದು ನಿಜವಾಗಿದೆ.
ರಿಕ್ಷಾದ ರಾಯಲ್ ಲುಕ್‌ಗೆ ಫಿದಾ ಆದ ಬಳಕೆದಾರರು
ಗ್ರಾಹಕರ ತೃಪ್ತಿ 100% ನಿಜವಾಗಲಿದೆ ಎಂದು ಒಬ್ಬ ಬಳಕೆದಾರ ಬರೆದುಕೊಂಡಿದ್ದರೆ ಇದು ನಿಜಕ್ಕೂ ಅದ್ಭುತ ಎಂದು ಇನ್ನೊಬ್ಬ ಬಳಕೆದಾರರು ಹೊಗಳಿದ್ದಾರೆ.
ಅನಿಲ್ ಸೇಠ್ ಎಂಬುವವರು ರಿಕ್ಷಾ ಕಾರನ್ನು ಹೊಗಳಿದ್ದು ಇದು ಸುಂದರ ಹಾಗೂ ರಾಯಲ್ ಲುಕ್ ಅನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಹಲವಾರು ವಸ್ತುಗಳಿಗೆ ವಿಶಿಷ್ಟ ಹಾಗೂ ಆಕರ್ಷಕ ನೋಟ ಮಾರ್ಪಾಡನ್ನು ನೀಡಲು ನಾವು ಭಾರತೀಯರು ನಿಸ್ಸೀಮರು ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ:Viral Story: ದುಡ್ಡು ಕೊಡದಕ್ಕೆ ತಂದೆಯ ಅಂತ್ಯಸಂಸ್ಕಾರ ಮಾಡದ ಮಗ, ವಿಧಿವಿಧಾನ ನೆರವೇರಿಸಿದ ಮಗಳು!
ಆಟೋರಿಕ್ಷಾ ಕಾರಿನ ಅಂದದಿಂದ ರಸ್ತೆಯ ನೋಟವೇ ಬದಲಾಗಲಿದೆ ಎಂದು ಕೊಂಡಾಡಿದ ಬಳಕೆದಾರರು
ಆಟೋರಿಕ್ಷಾವನ್ನು ಕಾರಿನಂತೆ ಮಾರ್ಪಡಿಸಿರುವುದು ನಿಜಕ್ಕೂ ಅತ್ಯದ್ಭುತ ಎಂದು ಇನ್ನೊಬ್ಬ ಬಳಕೆದಾರ ಹೊಗಳಿದ್ದಾರೆ. ಇನ್ನೊಬ್ಬ ಬಳಕೆದಾರರು ಅದ್ಭುತ ಎಂದು ಹೊಗಳಿ ಕಾಮೆಂಟ್ ಮಾಡಿದ್ದಾರೆ.
ಹೆಚ್ಚಿನ ಬಳಕೆದಾರರು ವಿಧ ವಿಧವಾದ ಕಾಮೆಂಟ್‌ಗಳನ್ನು ನೀಡಿದ್ದು ಒಬ್ಬ ಬಳಕೆದಾರರಂತೂ ಇನ್ನು ಭಾರತೀಯ ರಸ್ತೆಗಳ ನೋಟವೇ ವಿಭಿನ್ನವಾಗಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಯಾವುದಾದರೂ ವಸ್ತುವನ್ನು ಆಲೋಚಿಸುವುದು ಹಾಗೂ ಅದರಂತೆ ವಿನ್ಯಾಸಪಡಿಸುವುದು ಅಳವಡಿಸುವುದರಲ್ಲಿ ಭಾರತೀಯರು ನಿಸ್ಸೀಮರು ಎಂದು ಇನ್ನೊಬ್ಬ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದರೆ ಇನ್ನೊಬ್ಬರು ಬಹುತ್ ಸುಂದರ್ (ತುಂಬಾ ಸುಂದರ) ಎಂದು ಹಿಂದಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ