ಪ್ಲಾಸ್ಟಿಕ್​ ನಿಷೇಧದ ಪಟ್ಟಿಯಲ್ಲಿ ಕಾಂಡೋಮ್​ ಇದೆಯಾ ಎಂದ ಪೂನಂ ಪಾಂಡೆ!

news18
Updated:June 26, 2018, 7:06 PM IST
ಪ್ಲಾಸ್ಟಿಕ್​ ನಿಷೇಧದ ಪಟ್ಟಿಯಲ್ಲಿ ಕಾಂಡೋಮ್​ ಇದೆಯಾ ಎಂದ ಪೂನಂ ಪಾಂಡೆ!
news18
Updated: June 26, 2018, 7:06 PM IST
ನ್ಯೂಸ್​ 18 ಕನ್ನಡ 

ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಪೂನಂ ಪಾಂಡೆ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಮಹಾರಾಷ್ಟ್ರದಲ್ಲಿ ಹೇರಿರುವ ಪ್ಲಾಸ್ಟಿಕ್​ ನಿಷೇಧವನ್ನು ಪ್ರಶ್ನಿಸಲು ಹೋಗಿ ಸಾಮಾಜಿಕ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು ದೇಶದಲ್ಲೇ ಅತ್ಯಂತ ಹೆಚ್ಚು ಪ್ಲಾಸ್ಟಿಕ್​ ಬಳಕೆಯಾಗುವ ರಾಜ್ಯ ಎಂದೇ ಕುಖ್ಯಾತಿಗಳಿಸಿದ ಬಳಿಕ ಮಹಾರಾಷ್ಟ್ರದ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ಪ್ಲಾಸ್ಟಿಕ್​ ಬಳಕೆ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಈ ನಿರ್ಧಾರದ ಕುರಿತು ವ್ಯಂಗ್ಯ ವ್ಯಕ್ತ ಮಾಡಲು ಮುಂದಾದ ಪಾಂಡೆ, ಪ್ಲಾಸ್ಟಿಕ್​ ನಿಷೇಧದ​ ಪಟ್ಟಿಯಲ್ಲಿ ಕಾಂಡೋಮ್​ ಕೂಡಾ ಸೇರಿದೆಯಾ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಹೊರ ಬೀಳುತ್ತಿದ್ದಂತೆಯೇ ರೊಚ್ಚಿಗೆದ್ದ ಜಾಲತಾಣಿಗರು ಸಖತ್​ ಕ್ಲಾಸ್​ ತೆಗೆದುಕೊಂಡಿದ್ದಾರೆ, ಕಾಂಡೋಮ್ ಅ​ನ್ನು ರಬ್ಬರ್​ನಿಂದ ಮಾಡುತ್ತಾರೆ, ಪ್ಲಾಸ್ಟಿಕ್​​ನಿಂದ ಅಲ್ಲ ಎಂದು ಪಾಠ ಮಾಡಿದ್ದಾರೆ. ಸ್ಟ್ರೀನ್​ಹೈ ಎಂಬ ವ್ಯಕ್ತಿ ಒಂದು ಹೆಜ್ಜೆ ಮುಂದೆ ಹೋಗಿ ನೀವು ಈ ರಬ್ಬರನ್ನು ಅಳಿಸುವ ಸಾಧನದಂತೆ ಬಳಕೆ ಮಾಡಬಹುದೇ ಎಂದು ಮಾತ್ರ ಮರು ಪ್ರಶ್ನೆ ಹಾಕಬೇಡಿ ಎಂದು ವ್ಯಂಗ್ಯವಾಡಿದ್ದಾರೆ.


Loading...ಪೂನಂ ಪ್ರಶ್ನೆಗೆ ಜಾಲತಾಣಿಗರ ಉತ್ತರಗಳು ಇಲ್ಲಿವೆ....First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...