• Home
  • »
  • News
  • »
  • trend
  • »
  • Trending News: 18 ವರ್ಷಗಳ ಕಾಲ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿಯೇ ವಾಸಿಸುತ್ತಿದ್ದ ವ್ಯಕ್ತಿ ನಿಧನ

Trending News: 18 ವರ್ಷಗಳ ಕಾಲ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿಯೇ ವಾಸಿಸುತ್ತಿದ್ದ ವ್ಯಕ್ತಿ ನಿಧನ

 ಮೆಹ್ರಾನ್ ಕರಿಮಿ ನಸ್ಸೆರಿ

ಮೆಹ್ರಾನ್ ಕರಿಮಿ ನಸ್ಸೆರಿ

ಇರಾನಿನ ಮೆಹ್ರಾನ್ ಕರಿಮಿ ನಸ್ಸೆರಿ (76) ಶನಿವಾರ ವಿಮಾನ ನಿಲ್ದಾಣದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು 18 ವರ್ಷಗಳಿಂದ ವಿಮಾನ ನಿಲ್ದಾಣವನ್ನೇ ತಮ್ಮ ಮನೆಯಾಗಿಸಿಕೊಂಡಿದ್ದರು.

  • Share this:

‘ದಿ ಟರ್ಮಿನಲ್' ಸಿನಿಮಾಗೆ ಸ್ಫೂರ್ತಿ ನೀಡಿದ್ದ ಇರಾನಿ ವ್ಯಕ್ತಿ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ನಿಧನರಾಗಿದ್ದಾರೆ. ಪ್ಯಾರಿಸ್‌ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ 18 ವರ್ಷಗಳ ಕಾಲ ವಾಸಿಸುತ್ತಿದ್ದ ಮತ್ತು 2004ರಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ಮಿಸಿ ನಿರ್ದೇಶಿಸಿದ ಚಲನಚಿತ್ರ "ದಿ ಟರ್ಮಿನಲ್"ಗೆ ಸ್ಪೂರ್ತಿಯಾಗಿದ್ದ ಇರಾನಿನ ಮೆಹ್ರಾನ್ ಕರಿಮಿ ನಸ್ಸೆರಿ (76) ಶನಿವಾರ ವಿಮಾನ ನಿಲ್ದಾಣದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಪ್ಯಾರಿಸ್ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಮಾತನಾಡಿ, "ಮೆಹ್ರಾನ್ ಕರಿಮಿ ನಸ್ಸೆರಿ ಅವರು ಮಧ್ಯಾಹ್ನದ ಸುಮಾರಿಗೆ ವಿಮಾನ ನಿಲ್ದಾಣದ ಟರ್ಮಿನಲ್ 2 ಎಫ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ" ಎಂದು ತಿಳಿಸಿದರು. ಪೊಲೀಸರು ಮತ್ತು ವೈದ್ಯಕೀಯ ತಂಡ ಅವರಿಗೆ ಚಿಕಿತ್ಸೆ ನೀಡಿದರೂ ಸಹ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.


ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ವ್ಯಕ್ತಿ
ಇನ್ನೂ ಪ್ಯಾರಿಸ್‌ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ ಎಲ್ಲಾ ಸಿಬ್ಬಂದಿಗಳು ಇವರನ್ನು ಪ್ರೀತಿಯಿಂದ ಕಾಣುತ್ತಿದ್ದರು ಮತ್ತೆ ಇಲ್ಲಿ ಮುಕ್ತವಾಗಿ ಓಡಾಡುವುದಕ್ಕೆ ನಾವು ಅವಕಾಶ ನೀಡಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


1988 ರಿಂದ 2006 ರವರೆಗೆ ವಿಮಾನ ನಿಲ್ದಾಣದಲ್ಲಿಯೇ ವಾಸ
ನಸ್ಸೆರಿ ಅವರು 1988 ರಿಂದ 2006 ರವರೆಗೆ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ವಾಸಿಸುತ್ತಿದ್ದರು. ಇರಾನಿನ ನಿರಾಶ್ರಿತರಾದ ನಸ್ಸೆರಿ ಅವರು 1988ರಲ್ಲಿ ಬೆಲ್ಜಿಯಂ ಮತ್ತು ಫ್ರಾನ್ಸ್ ಮೂಲಕ ಇಂಗ್ಲೆಂಡ್‌ಗೆ ಹೋಗುತ್ತಿದ್ದಾಗ ಅವರು ತಮ್ಮ ದಾಖಲೆಗಳನ್ನು ಕಳೆದುಕೊಂಡು ಇಲ್ಲಿಯೇ ಉಳಿದಿದ್ದರು. ಇರಾನಿಗೆ ಮತ್ತೆ ಮರಳಲು ಕೆಲವು ಕಾನೂನು ಅಡೆತಡೆಗಳಿದ್ದ ಕಾರಣ ಮೆಹ್ರಾನ್ ಕರಿಮಿ ನಸ್ಸೆರಿ ಇಲ್ಲೇ ಉಳಿಯುವಂತಾಗಿತ್ತು.


ಇದನ್ನೂ ಓದಿ: ಬಾಯಿಯಿಂದ ಹೊಟ್ಟೆಯೊಳಗೆ ಹೊಕ್ಕ 4 ಅಡಿ ಹಾವು! ನೋಡಿ ವೈದ್ಯರೇ ಗಾಬರಿ


ಪೇಪರ್ ಓದುತ್ತಾ ಸಮಯ ಕಳೆಯುತ್ತಿದ್ದರು
ಪ್ಯಾರೀಸ್‌ ವಿಮಾನ ನಿಲ್ದಾಣದಲ್ಲಿಯೇ ಜೀವನ ಸಾಗಿಸುತ್ತಿದ್ದ ಮೆಹ್ರಾನ್ ಕರಿಮಿ ನಸ್ಸೆರಿ ಅಲ್ಲಿಯೇ ಪ್ಲಾಸ್ಟಿಕ್ ಬೆಂಚ್ ಮೇಲೆ ಮಲಗುತ್ತಿದ್ದರು. ಹಾಗೆಯೇ ಅಲ್ಲಿನ ವಿಮಾನ ನಿಲ್ದಾಣದ ಕೆಲಸಗಾರರೊಂದಿಗೆ ಸ್ನೇಹ ಬೆಳೆಸಿಕೊಂಡು ಅವರ ಜೊತೆ ಇರುತ್ತಿದ್ದರು. ಸಿಬ್ಬಂದಿಯ ಕೆಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದರು. ವಿಮಾನ ನಿಲ್ದಾಣದಲ್ಲಿಯೇ ಪೇಪರ್‌ ಓದುತ್ತಾ, ನಿಯತಕಾಲಿಕೆಗಳನ್ನು ಓದುತ್ತಾ ಕಾಲ ಕಳೆಯುತ್ತಿದ್ದರು. ಈ ವ್ಯಕ್ತಿ ತನ್ನ ಪ್ರತಿನಿತ್ಯದ ಡೈರಿ ಸಹ ಬರೆಯುತ್ತಿದ್ದರು.


ಸೆಲೆಬ್ರೆಟಿಯಾಗಿದ್ದ ನಸ್ಸೆರಿ
ಇಲ್ಲಿನ ವಿಮಾನ ಸಿಬ್ಬಂದಿ ವ್ಯಕ್ತಿಯನ್ನು ಲಾರ್ಡ್ ಆಲ್ಫ್ರೆಡ್ ಎಂದು ಅಡ್ಡಹೆಸರಿನಿಂದ ಕರೆಯುತ್ತಿದ್ದರು ಮತ್ತು ಅವರು ಪ್ರಯಾಣಿಕರಿಗೆ ಮಿನಿ-ಸೆಲೆಬ್ರಿಟಿ ಕೂಡ ಆಗಿದ್ದರು. ‘ದಿ ಟರ್ಮಿನಲ್ ಸಿನಿಮಾಗೆ ಸ್ಫೂರ್ತಿ ನೀಡಿದ ವ್ಯಕ್ತಿ ಎಂದು ತಿಳಿದ ಹಲವು ಪ್ರಯಾಣಿಕರು ಇವರನ್ನು ಭೇಟಿ ಮಾಡಿ ಮಾತನಾಡಿಸುತ್ತಿದ್ದರು.


ಇವರ ಪೂರ್ವ ಜೀವನ
ನಸ್ಸೆರಿ ಅವರು 1945 ರಲ್ಲಿ ಇರಾನ್‌ನ ಒಂದು ಭಾಗವಾದ ಸೊಲೈಮಾನ್‌ನಲ್ಲಿ ಜನಿಸಿದರು, ತಂದೆ ಇರಾನ್‌ ಅವರಾಗಿದ್ದು, ತಾಯಿ ಇಂಗ್ಲೆಂಡ್‌ನವರಾಗಿದ್ದರು. 1974 ರಲ್ಲಿ ಇಂಗ್ಲೆಂಡ್‌ನಲ್ಲಿ ಅಧ್ಯಯನ ಮಾಡಲು ಇರಾನ್‌ನಿಂದ ಹೋಗಿದ್ದರು.


ಜೈಲು ವಾಸ ಅನುಭವಿಸಿದ ವ್ಯಕ್ತಿ
ನಂತರ ಶಾ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಅವರನ್ನು ಜೈಲಿನಲ್ಲಿರಿಸಲಾಯಿತು ಮತ್ತು ಪಾಸ್‌ಪೋರ್ಟ್ ಇಲ್ಲದೆ ಹೊರಹಾಕಲಾಯಿತು ಎಂದು ಅವರು ಹೇಳಿದರು. ಒಮ್ಮೆ ಫ್ರೆಂಚ್ ಅಧಿಕಾರಿಗಳು ಅವರಿಗೆ ಫ್ರಾನ್ಸ್‌ನಲ್ಲಿ ವಾಸಿಸಲು ಅವಕಾಶ ನೀಡಲು ಮುಂದಾದರು, ಆದರೆ ನಸ್ಸೆರಿ ಅವರು ತಮ್ಮ ಮೂಲ ತಾಣವಾದ ಇಂಗ್ಲೆಂಡ್‌ಗೆ ಹೋಗಲು ಬಯಸಿದ್ದರಿಂದ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಯುಕೆ ಸೇರಿದಂತೆ ಯುರೋಪಿನ ಹಲವಾರು ದೇಶಗಳಲ್ಲಿ ರಾಜಕೀಯ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎಲ್ಲಿಯೂ ಸಹ ಇವರಿಗೆ ಆಶ್ರಯ ಸಿಗಲಿಲ್ಲ.

First published: