Viral Video: ಥೇಟ್​​ ಫಿಲ್ಮಿ ಸ್ಟೈಲ್​​ನಲ್ಲಿ ಎಂಗೇಜ್​ ಆದ ಆಮೀರ್​ ಮಗಳು ಇರಾ! ವೈರಲ್ ಆಯ್ತು ಪ್ರಪೋಸಿಂಗ್ ವಿಡಿಯೋ

Viral Video: ಫಿಲ್ಮಿ ಸ್ಟೈಲ್​​ನಲ್ಲಿ ಎಂಗೆಜ್ ಆದ ಅಮೀರ್ ಮಗಳು ಇರಾ ಎರಡು ವರ್ಷಗಳಿಂದ ನಡೀತಿತ್ತು ನೂಪುರ್ ಜೊತೆ ಡೇಟಿಂಗ್.

ಇರಾ ಖಾನ್ ಮತ್ತು ನೂಪುರ್

ಇರಾ ಖಾನ್ ಮತ್ತು ನೂಪುರ್

  • Share this:
ಕೆಲವೊಮ್ಮೆ ಈ ಚಲನಚಿತ್ರಗಳಲ್ಲಿ ತೋರಿಸುವಂತೆ ತುಂಬಾ ವೇಗವಾಗಿ ನಮಗೆ ಅರ್ಥವಾಗುವಷ್ಟರಲ್ಲಿಯೇ ನಮ್ಮ ಜೀವನದ (Life) ಕೆಲವು ಮಹತ್ವದ ಘಟನೆಗಳು (Incident) ನಡೆದಿರುತ್ತವೆ. ಇಲ್ಲಿಯೂ ಸಹ ಹಾಗೆ ಆಗಿದೆ ನೋಡಿ, ನಟ ಅಮೀರ್ ಖಾನ್  ಅವರ ಮಗಳು ಇರಾ ಖಾನ್ (Ira Khan) ತನ್ನ ಗೆಳೆಯ ನೂಪುರ್ ಶಿಖಾರೆ (Nupur Shikhare) ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರುವುದು ದೊಡ್ಡ ವಿಷಯ ಅಲ್ಲದೆ ಇದ್ದರೂ ಸಹ, ಅವರಿಬ್ಬರು ಎಲ್ಲಿ ಮತ್ತು ಹೇಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅಂತ ನಿಮಗೆ ಗೊತ್ತಾದರೆ ಗ್ಯಾರೆಂಟಿ ನೀವು ‘ಒಳ್ಳೆ ಫಿಲ್ಮಿ ಸ್ಟೈಲ್ ನಲ್ಲಿ ಎಂಗೆಜ್ ಆಗಿದ್ದಾರೆ’ ಅಂತ ಅನ್ನೋದಂತೂ ಸುಳ್ಳಲ್ಲ.

ಇನ್‌ಸ್ಟಾಗ್ರಾಮ್ ನಲ್ಲಿ ಇವರಿಬ್ಬರು ಎರಡು ವರ್ಷಗಳ ಡೇಟಿಂಗ್ ನಂತರ ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಘೋಷಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇರಾ ಖಾನ್ ಅವರು ನೂಪುರ್ ಅವರ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅದೇ ಸಮಯದಲ್ಲಿ ಅವರು ಇರಾಗೆ ಪ್ರಪೋಸ್ ಮಾಡಿದರು. ಈ ಕ್ಲಿಪ್​​ನಲ್ಲಿ ಇರಾ ಇತರ ಜನರೊಂದಿಗೆ ಕೆಳಗಿನ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತಿದ್ದಳು. ನೂಪುರ್ ಅವಳ ಕಡೆಗೆ ನಡೆದುಕೊಂಡು ಬಂದು ಅವಳನ್ನು ಚುಂಬಿಸಿ ನಂತರ ತಮ್ಮ ಮೊಣಕಾಲುಗಳ ಮೇಲೆ ಕುಳಿತು ಆಕೆಗೆ ಪ್ರಪೋಸ್ ಮಾಡಿದ್ದಾರೆ. ಅವನು ಅವಳನ್ನು "ನೀನು ನನ್ನನ್ನು ಮದುವೆಯಾಗುತ್ತೀಯಾ" ಅಂತ ಕೇಳಿದನು. ಇದಕ್ಕೆ ಉತ್ತರಿಸಿದ ಇರಾ "ಹೌದು" ಎಂದು ಉತ್ತರಿಸಿದಳು. ಜನರ ಚಪ್ಪಾಳೆಗಳ ನಡುವೆ ಈ ಗೆಳೆಯರಿಬ್ಬರು ಮತ್ತೆ ಚುಂಬಿಸಿದರು, ನಂತರ ನೂಪುರ್ ಅಲ್ಲಿಂದ ಹೊರಟು ಹೋಗಿದ್ದನ್ನು ವೀಡಿಯೋದಲ್ಲಿ ನಾವು ನೋಡಬಹುದು.








View this post on Instagram






A post shared by Ira Khan (@khan.ira)






ಇದನ್ನೂ ಓದಿ: ಟ್ರಾಫಿಕ್ ನಿಯಮ ಪಾಲನೆ ಪೋಸ್ಟ್​​​ಗೆ ಬ್ರಹ್ಮಾಸ್ತ್ರದ ಟಚ್

ಇವರ ಪೋಸ್ಟ್ ಗೆ ಹರಿದುಬಂದ ಅಭಿನಂದನೆಗಳ ಮಹಾಪೂರ

ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ರೋಹ್ಮನ್ ಶಾಲ್ "ನಿಮ್ಮಿಬ್ಬರಿಗೂ ಅಭಿನಂದನೆಗಳು ನೂಪುರ್ ಮತ್ತು ಇರಾ" ಎಂದು ಕಾಮೆಂಟ್ ಮಾಡಿದ್ದಾರೆ.
ಫಾತಿಮಾ ಸನಾ ಶೇಖ್ "ಇದು ನಾನು ನೋಡಿದ ಅತ್ಯಂತ ಮಧುರವಾದ ವೀಡಿಯೋ. ತುಂಬಾನೇ ಫಿಲ್ಮಿ ಆಗಿತ್ತು" ಎಂದು ಬರೆದಿದ್ದಾರೆ.
ರಿಯಾ ಚಕ್ರವರ್ತಿ "ನಿಮಗೆ ಅಭಿನಂದನೆಗಳು ಹುಡುಗರೇ" ಎಂದು ಕಾಮೆಂಟ್ ಮಾಡಿದ್ದಾರೆ.

ಹೇಝಲ್ ಕೀಚ್ ಕಾಮೆಂಟ್ ಮಾಡಿ "ವಾವ್.. ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಹೇಳಿದ್ದಾರೆ.
ಕೃಷ್ಣ ಶ್ರಾಫ್ "ಇದು ಅತ್ಯಂತ ಸುಂದರವಾದ ಸುದ್ದಿ, ಅಭಿನಂದನೆಗಳು, ಬೇಬಿ ಗರ್ಲ್" ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೂ ನಟಿ ಹುಮಾ ಖುರೇಶಿ ಸಹ ಕಾಮೆಂಟ್ ಮಾಡಿ "ಓ ದೇವರೇ.. ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನೋಡುಗರಿಗೂ ನಶೆ ಏರಿಸುತ್ತೆ ಹೃತಿಕ್‌ ಆಲ್ಕೋಹಾಲಿಯಾ ಸಾಂಗ್, ನೀವ್ ಕೇಳಿದ್ರಾ?

ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ

ಇರಾ ಮತ್ತು ನೂಪುರ್ ಅವರು ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು, ಈ ವರ್ಷದ ಜೂನ್ ನಲ್ಲಿ ತಮ್ಮ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಅವರು ತಮ್ಮ ಜೀವನದ ಇಣುಕು ನೋಟಗಳನ್ನು ತೋರಿಸುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ, ಇರಾ ಅವರು ನೂಪುರ್ ಅವರೊಂದಿಗೆ ಉಯ್ಯಾಲೆಯಲ್ಲಿ ಒಟ್ಟಿಗೆ ಕುಳಿತು ಸಮಯ ಕಳೆಯುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು.

ಹಬ್ಬಗಳಲ್ಲಿ ಇಬ್ಬರೂ ಭಾಗಿಯಾಗಿದ್ದರು

ಇಷ್ಟೇ ಅಲ್ಲದೆ ಇವರಿಬ್ಬರು ಪರಸ್ಪರರ ಕುಟುಂಬ ಸದಸ್ಯರೊಂದಿಗೆ ವಿಶೇಷ ಸಂದರ್ಭಗಳನ್ನು ಆಚರಿಸುತ್ತಿದ್ದಂತೆ ಇನ್‌ಸ್ಟಾಗ್ರಾಮ್ ಪೋಸ್ಟ್ ಗಳನ್ನು ಸಹ ಹಂಚಿಕೊಂಡಿದ್ದರು. ಅವರು ಈದ್ ಅನ್ನು ಒಟ್ಟಿಗೆ ಆಚರಿಸಿದ್ದರು ಮತ್ತು ಕಳೆದ ವರ್ಷ ದೀಪಾವಳಿಯನ್ನು ನೂಪುರ್ ಅವರೊಂದಿಗೆ ಆಚರಿಸಿದ್ದರು. ನಟ ಅಮೀರ್ ಇವರಿಬ್ಬರ ಜೊತೆ ಕ್ರಿಸ್ಮಸ್ ಆಚರಿಸಿದ್ದರು. ಇತ್ತೀಚೆಗೆ, ಅವರು ಇಟಲಿಗೆ ಸಹ ಹೋಗಿದ್ದರು.
First published: