HOME » NEWS » Trend » IPS VIVEK RAJ SINGH KUKRELE WEIGHT LOSS JOURNEY INSPIRES YOU SESR

43 ಕೆಜಿ ತೂಕ ಕಳೆದುಕೊಂಡ ಅಧಿಕಾರಿ; ತೆಳ್ಳಗೆ ಆಗಬೇಕು ಎನ್ನುವವರಿಗೆ ಸ್ಪೂರ್ತಿ ತುಂಬಲಿದೆ ಇವರ ಕಥೆ

ತಮ್ಮ ದೊಡ್ಡ ಸಾಧನೆಗಳಲ್ಲಿ ಇದು ಒಂದು ಎಂದು ತಮ್ಮ ಯಶೋಗಾಥೆಯನ್ನು ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

news18-kannada
Updated:May 31, 2021, 5:26 PM IST
43 ಕೆಜಿ ತೂಕ ಕಳೆದುಕೊಂಡ ಅಧಿಕಾರಿ; ತೆಳ್ಳಗೆ ಆಗಬೇಕು ಎನ್ನುವವರಿಗೆ ಸ್ಪೂರ್ತಿ ತುಂಬಲಿದೆ ಇವರ ಕಥೆ
IPS Vivek Raj Singh Kukrele
  • Share this:
ಪೊಲೀಸ್​ ಇಲಾಖೆಗೆ ಸೇರಿದ ಬಳಿಕ ಅನೇಕರು ತೂಕ ಹೆಚ್ಚಾಗುವುದನ್ನು ಗಮನಿಸಿದ್ದೇವೆ. ಇದೇ ಕಾರಣದಿಂದಲೇ ಪೊಲೀಸರು ಎಂದರೆ ಡೊಳ್ಳು ಹೊಟ್ಟೆ ಎಂಬ ಚಿತ್ರ ಮನಸ್ಸಿನಲ್ಲಿ ಸಾಮಾನ್ಯವಾಗಿ ಮೂಡುತ್ತದೆ. ಆದರೆ, ಇಲ್ಲೊಬ್ಬರ ಪ್ರಕರಣದಲ್ಲಿ ಇದು ತದ್ವಿರುದ್ಧವಾಗಿದೆ. ಕಾರಣ ದಪ್ಪ ಹೊಟ್ಟೆ, ಅಧಿಕ ತೂಕ ಹೊಂದಿದ್ದ ಇವರು ಫಿಟ್​ ಆಗಿರಲು ಕಾರಣ ಈಗ ಪೊಲೀಸ್​ ಇಲಾಖೆ ಆಗಿದೆ. ಪೊಲೀಸ್​ ಅಕಾಡೆಮಿಯಲ್ಲಿನ ತರಬೇತಿಯಿಂದಾಗಿ ತಾವು ಈಗ ಫಿಟ್​ ಅಂಡ್​ ಫೈನ್​ ಆಗಿರುವುದಾಗಿ ಅವರು ಹೇಳಿದ್ದಾರೆ. ಪಿಎಸ್​ ವಿವೇಕ್​ ರಾಜ್​ ಸಿಂಗ್​ ಕುಕ್ರೆಲೆ ಅವರು 8ನೇ ತರಗತಿ ಓದುವಾಗಲೇ 88 ಕೆ.ಜಿ ತೂಕ ಇದ್ದರೆಂತೆ. ಪೊಲೀಸ್​ ಆಗಬೇಕು ಎಂಬ ಆಸೆ ಹೊಂದಿದ್ದ ಕಿಕ್ರೆಲೆ ತರಬೇತಿಗಾಗಿ ನ್ಯಾಷನಲ್​ ಪೊಲೀಸ್​ ಅಕಾಡೆಮಿ ಸೇರಿದಾಗ 134 ಕೆಜಿ ಇದ್ದರಂತೆ. ಅಕಾಡೆಮಿಯಲ್ಲಿನ ತರಬೇತಿಯಿಂದಾಗಿ ಅವರಿಗ 104 ಕೆಜಿ ಆಗಿದ್ದು,  ತಮ್ಮ ದೊಡ್ಡ ಸಾಧನೆಗಳಲ್ಲಿ ಇದು ಒಂದು ಎಂದು ತಮ್ಮ ಯಶೋಗಾಥೆಯನ್ನು ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ತಮ್ಮ ಈ ಭಾರೀ ತೂಕದ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಕುಕ್ರೆಲೆ, ಆರಂಭದ ದಿನಗಳಲ್ಲಿ ತಮ್ಮ 138 ಕೆಜಿ ತೂಕದಿಂದ ಬಿಹಾರದ ನಕ್ಸಲ್​ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಭಾರೀ ಕಷ್ಟವಾಗಿತ್ತಂತೆ. ಇದರಿಂದ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದೆ ಎನ್ನುತ್ತಾರೆ.

ಇದನ್ನು ಓದಿ: ಮಕ್ಕಳಿಗೆ ಯಾಕೆ ಇಷ್ಟೊಂದು ಕೆಲಸ; ಮೋದಿಗೆ 6 ವರ್ಷ ಪೋರಿಯ ಮುಗ್ದ ಪ್ರಶ್ನೆ

ತಮ್ಮ ಈ ತೂಕ ಈ ಪಾಟಿ ಹೆಚ್ಚಾಗಲು ಕಾರಣ ಅವರ ಆಹಾರ ಪದ್ಧತಿಯೇ ಅಂತೆ, ನಾವು ಹೊಟ್ಟಬಾಕನಾಗಿದ್ದೆ. ಇದೇ ಕಾರಣ ಹೆಚ್ಚಾಗಿ ತಿನ್ನುತ್ತಿದೆ. ಆಹಾರ ವ್ಯರ್ಥ ಮಾಡಬಾರದು ಎಂದು ತಿನ್ನುತ್ತಲೇ ಇದ್ದೆ. ಇದೇ ತಮ್ಮ ಅನಗತ್ಯ ತೂಕ ಹೆಚ್ಚಾಗಲು ಕಾರಣ. ಹೊಟ್ಟೆ ತುಂಬಿದಾಗಲೂ ಚೆನ್ನಾಗಿ ತಿನ್ನುತ್ತಿದ್ದ ಕಾರಣ ನನ್ನ ತೂಕ ಹೆಚ್ಚಾಯಿತು ಎನ್ನುತ್ತಾರೆ.
ತೂಕ ಕಳೆದುಕೊಳ್ಳಲು ನಾನು ನಿರ್ಧರಿಸಿದಾಗ ಸ್ಟೆಪ್​ ಸೆಟ್​ ಗೋ ಎಂಬ ಆಪ್​ ಬಳಸಿ ಈ ತೂಕವನ್ನು ಮೈನ್​ಟೇನ್​ ಮಾಡಲು ಮುಂದಾದೆ. ಈ ಸಮಯದಲ್ಲಿ ವಾಕಿಂಗ್​ ನನ್ನ ಜೀವನದ ಭಾಗವಾಯಿತು. ಇದರಿಂದ ತೂಕ ಕೂಡ ಇಳಿಯಿತು. ಬುದ್ದಿವಂತಿಕೆಯ ಆಹಾರ ಮತ್ತು ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸಿ ನಾನು ತೂಕ ಕಳೆಯುವ ಯತ್ನ ನಡೆಸಿದೆ. ಕ್ರಮೇಣ ತೂಕ ಇಳಿಕೆ ಕಾಣಲಾರಂಭಿಸಿತು, ಇದೇ ವೇಳೆ ತರಬೇತಿ ಮತ್ತು ಉತ್ತಮ ಆಹಾರ ಕ್ರಮ ಕೂಡ ಅನುಸರಿಸಿದೆ. ಕಳೆದ ಕೆಲವು ತಿಂಗಳಿಂದ ನಾನು ದೇಹಕ್ಕೆ ಶಕ್ತಿ ನೀಡುವ ಆಹಾರದಿಂದ ಉತ್ತಮ ಆಕಾರ ಕೂಡ ಪಡೆಯಲಾರಂಭಿಸಿದೆ, ಸದ್ಯ ನಾನು 43 ಕೆಜಿ ತೂಕ ಕಳೆದುಕೊಂಡಿದ್ದೇನೆ ಎನ್ನುತ್ತಾರೆ ಈ ಅಧಿಕಾರಿ.

ಯಾವಾಗಲೂ ಆರೋಗ್ಯಯುತ ಆಹಾರ ಸೇವನೆ ಕ್ರಮ ಅನುಸರಿಸಿದರೆ ಹೇಗೆ ದೇಹದ ತೂಕ ಜೊತೆ ಉತ್ತಮ ಆಕಾರ ಪಡೆಯಲು ಸಾಧ್ಯ ಎಂಬುದನ್ನು ಕುಕ್ರೆಲ್​ ತೋರಿಸಿಕೊಟ್ಟಿದ್ದಾರೆ. ವ್ಯಕ್ತಿಯ ಉತ್ತಮ ಜೀವನ ಶೈಲಿ ಮಾತ್ರ ಆತನನ್ನು ಗಟ್ಟಿ ಮುಟ್ಟಾಗಿ ಆರೋಗ್ಯಯುತವಾಗಿ ಇಡುತ್ತದೆ. ಕುಕ್ರೆಲ್​ ಸದ್ಯ ಫಿಟ್​ ಆಗಿದ್ದು, ಅವರ ರಕ್ತದೊತ್ತಡ ಕೂಡ ನಿಯಂತ್ರಣಕ್ಕೆ ಬಂದಿದೆಯಂತೆ ಅಲ್ಲದೇ ತಮ್ಮ ಪಲ್ಸ್​ ರೇಟಿಂಗ್​ ಕೂಡ ಉತ್ತಮವಾಗಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
Published by: Seema R
First published: May 31, 2021, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories