(VIDEO): 4.2 ಕೋಟಿಗೆ ಆರ್​ಸಿಬಿ ಸೇರುತ್ತಿದ್ದಂತೆ ವಿಂಡೀಸ್​​​ ಬ್ಯಾಟ್ಸ್​ಮನ್​​​ ಮಾಡಿದ್ದೇನು ನೋಡಿ

ಹೆಟ್ಮೇರ್ ಅವರು ಹೊಟೇಲ್ ಒಂದರಲ್ಲಿ ಕೂತು ಟಿವಿ ಮೂಲಕ ಐಪಿಎಲ್​​ ಹರಾಜು ಲೈವ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದು, ತಾನು ವಿರಾಟ್ ಕೊಹ್ಲಿ ತಂಡ ಸೇರುತ್ತಿದ್ದಂತೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ

Vinay Bhat | news18
Updated:December 19, 2018, 6:25 PM IST
(VIDEO): 4.2 ಕೋಟಿಗೆ ಆರ್​ಸಿಬಿ ಸೇರುತ್ತಿದ್ದಂತೆ ವಿಂಡೀಸ್​​​ ಬ್ಯಾಟ್ಸ್​ಮನ್​​​ ಮಾಡಿದ್ದೇನು ನೋಡಿ
Pic: Twitter
Vinay Bhat | news18
Updated: December 19, 2018, 6:25 PM IST
ಐಪಿಎಲ್ 2019 ಋತುವಿನ ಹರಾಜು ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ನಿನ್ನೆ ರಾಜಸ್ಥಾನದ ಜೈಪುರದಲ್ಲಿ ನಡೆದ ಹರಾಜಿನಲ್ಲಿ 351 ಆಟಗಾರರು ಸೇಲ್ ಆಗದೆ ಉಳಿದಿದ್ದರೆ, ಒಟ್ಟು 60 ಆಟಗಾರರು ಮಾರಾಟವಾಗಿದ್ದಾರೆ. ಇದರಲ್ಲಿ 40 ಭಾರತೀಯ ಹಾಗೂ 20 ವಿದೇಶಿ ಆಟಗಾರರಾಗಿದ್ದಾರೆ. ವಿದೇಶಿ ಆಟಗಾರರ ಪೈಕಿ ವೆಸ್ಟ್​ ಇಂಡೀಸ್​ನ ದೈತ್ಯ ಆಟಗಾರರು ಉತ್ತಮ ಮೊತ್ತದಲ್ಲಿ ಸೇಲ್ ಆಗಿದ್ದಾರೆ.

ಅಂತೆಯೆ ವೆಸ್ಟ್​ ಇಂಡೀಸ್​​ನ ಯುವ ಸ್ಪೋಟಕ ಬ್ಯಾಟ್ಸ್​ಮನ್​ ಶಿಮ್ರೋನ್ ಹೆಟ್ಮೇರ್​​​ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಾಲಾಗಿದ್ದಾರೆ. ಹೆಟ್ಮೇರ್​ಗಾಗಿ ಉಳಿದ ಫ್ರಾಂಚೈಸಿಗಳು ಬಿಡ್ ಮಾಡಿದ್ದರಾದರು, ತೀವ್ರ ಪೈಪೋಟಿಯ ನಡುವೆ ಆರ್​ಸಿಬಿ 4.2 ಕೋಟಿ ಕೊಟ್ಟು ಹೆಟ್ಮೇರ್​ರನ್ನು ಖರೀದಿ ಮಾಡಿದೆ.

ಇದನ್ನೂ ಓದಿIPL-2019: ಆರ್​ಸಿಬಿ ತಂಡಕ್ಕೆ 9 ಹೊಸ ಆಟಗಾರರ ಸೇರ್ಪಡೆ

ಹೆಟ್ಮೇರ್ ಅವರು ಹೊಟೇಲ್ ಒಂದರಲ್ಲಿ ಕೂತು ಟಿವಿ ಮೂಲಕ ಐಪಿಎಲ್​​ ಹರಾಜು ಲೈವ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದು, ತಾನು ವಿರಾಟ್ ಕೊಹ್ಲಿ ತಂಡ ಸೇರುತ್ತಿದ್ದಂತೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟೇ ಅಲ್ಲದೆ ಹರಾಜಿನಲ್ಲಿ ತನ್ನ ಹೆಸರು ಬರುತ್ತಿದ್ದಂತೆ, ಅದರಲ್ಲು ಹಣ ಜಾಸ್ತಿಯಾಗುತ್ತಿದ್ದಂತೆ ಸಂತಸದಲ್ಲಿ ತೇಲಾಡಿದ್ದಾರೆ. ಅದರಲ್ಲು ತಾನು ಬೆಂಗಳೂರು ಪಾಲಾಗುತ್ತಿದ್ದಂತೆ ಶರ್ಟ್​​​ ಬಿಚ್ಚಿ, ನೆಲದ ಮೇಲೆ ಮಂಡಿಯೂರಿ ದೇವರನ್ನು ಪ್ರಾರ್ಥಿಸಿದ್ದಾರೆ.

 ಬಳಿಕ ಧನ್ಯವಾದ ತಿಳಿಸಿರುವ ಹೆಟ್ಮೇರ್ ಇದೇ ಮೊದಲ ಬಾರಿ ಐಪಿಎಲ್​​ ಆಡಲಿದ್ದೇನೆ. ನನ್ನ ಖರೀದಿ ಮಾಡಿದ ಆರ್​ಸಿಬಿಗೆ ಧನ್ಯವಾದ. ಬೆಂಗಳೂರು ಅಭಿಮಾನಿಗಳ ಜೊತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕಾತುರನಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೂಲಬೆಲೆ 20 ಲಕ್ಷ, ಹರಾಜಾಗಿದ್ದು 8.4 ಕೋಟಿ: ಯಾರು ಈ 'ವರುಣ್ ಚಕ್ರವರ್ತಿ'?

 First published:December 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ