ಕ್ರೀಡಾ ಸ್ಪೂರ್ತಿ ಮರೆತರೇ ವಿರಾಟ್​ ಕೊಹ್ಲಿ ?


Updated:May 3, 2018, 4:48 PM IST
ಕ್ರೀಡಾ ಸ್ಪೂರ್ತಿ ಮರೆತರೇ ವಿರಾಟ್​ ಕೊಹ್ಲಿ ?

Updated: May 3, 2018, 4:48 PM IST
ಬೆಂಗಳೂರು: ಮುಂಬೈ ಹಾಗೂ ಬೆಂಗಳೂರು ನಡುವಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಕ್ರೀಡಾ ಸ್ಪೂರ್ತಿ ಮರೆತು ಅಭಿಮಾನಿಗಳ ನಂಬಿಕೆಗೆ ಮೋಸ ಮಾಡಿದ್ದಾರೆಯೇ ? ಎಂಬ ಪ್ರಶ್ನೆಗೆ ಎದುರಾಗಿದೆ.

ಹೌದು! ಮುಂಬೈ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, 14ನೇ ಓವರ್​ನಲ್ಲಿ ಬೂಮ್ರಾ ಓವರ್​ನಲ್ಲಿ ಚೆಂಡು ಬ್ಯಾಟ್​ ಸವಿರಕೊಂಡು ಹೋಗಿತ್ತು. ಈ ವೇಳೆ ಅನುಮಾನದಿಂದಲೇ ಕೀಪರ್​ ಔಟೆಂದು ಅಪೀಲ್​ ಮಾಡಿದ್ದರು ಅಂಪೈರ್ ಔಟ್ ನೀಡಲು ನಿರಾಕರಿಸಿದ್ದರು. ಆದರೆ ರೀಪ್ಲೆನಲ್ಲಿ ವೀಕ್ಷಿಸಿದಾಗ ಚೆಂಡು ಬ್ಯಾಟನ್ನು ಸವರಿಕೊಂಡು ಹೋಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಡಿ ಕಾಕ್​ ಬಳಿಕ ಬ್ಯಾಟ್​ ಹಿಡಿದ ಕೊಹ್ಲಿ, ಬೂಮ್ರಾ ಓವರ್​ನಲ್ಲಿ ಚೆಂಡನ್ನು ಎದುರಿಸುವಾಗ ಬ್ಯಾಟ್​ಗೆ ಒರೆಸಿಕೊಂಡಿದ್ದಾರೆ. ಕೂಡಲೇ ಕೀಪರ್​ ಅಪಿಲ್​ ಮಾಡಿದ ಸಂದರ್ಭದಲ್ಲಿ ತಲೆ ತಗ್ಗಿಸಿ ಕೊಹ್ಲಿ ಎಂದಿನಂತೆ ತನಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸಿದ್ದಾರೆ. ಕೋಹ್ಲಿ ನಡೆ ಸೇರಿದಂತೆ ದೊಡ್ಡ ಪರದೆಯಲ್ಲಿ ಕೋಹ್ಲಿ ಬ್ಯಾಟನ್ನು ಚೆಂಡು ವರೆಸಿಕೊಂಡು ಹೋದ ವೀಡಿಯೋ ವೈರಲ್​ ಆಗಿದೆ.

ಟ್ವಿಟ್ಟರಾತಿಗಳು ಕೊಹ್ಲಿ ವಿರುದ್ಧ ಕಿಡಿಕಾರಿ ನೀವು ಎಂದಿಗೂ ಸಚಿನ್​ ಆಗಲು ಸಾಧ್ಯವಿಲ್ಲ, ಕೊಹ್ಲಿಯೊಬ್ಬ ಮೋಸಗಾರ ಎಂದು ಆರೋಪಿಸಿದ್ದಾರೆ. ನಿಜವಾದ ಸ್ಪೋರ್ಟ್​ಮೆನ್​ಶಿಪ್​ ಕೂಡಾ ಕೊಹ್ಲಿಗಿಲ್ಲ ಎಂದು ಹಲವರು ಆರೋಪಿಸಿದ್ದಾರೆ.


Loading...First published:May 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ