HOME » NEWS » Trend » INVESTING IN GOLD WHEN AND HOW MUCH SHOULD YOU INVEST IN GOLD STG LG

Investment on Gold: ಚಿನ್ನದ ಮೇಲೆ ಯಾವಾಗ ಮತ್ತು ಎಷ್ಟು ಹೂಡಿಕೆ ಮಾಡಬೇಕು?

ಕೆಲವೊಮ್ಮೆ  ಚಿನ್ನದ ಬೆಲೆ ಏರಿಕೆ ಇದ್ದಾಗ ಇನ್ನೂ ಎಷ್ಟು ಏರಿಕೆಯಾಗಬಹುದೆಂದು ಜನರು ಕೇಳುವುದಿದೆ. ಈ ದೃಷ್ಟಿಕೋನವು ಹೂಡಿಕೆಯ ಆಧಾರವಾಗಿರುತ್ತದೆ. ಇಲ್ಲಿ ಗಳಿಸುವ ಲಾಭವೂ ನಿರೀಕ್ಷಿತ ಲಾಭದ ಒಂದು ಅಂದಾಜನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಆಗಸ್ಟ್​ 2020 ರಲ್ಲಿ ಚಿನ್ನದ ಬೆಲೆ ಉತ್ತುಂಗಕ್ಕೆ ಏರಿತ್ತು

news18-kannada
Updated:April 7, 2021, 9:17 AM IST
Investment on Gold: ಚಿನ್ನದ ಮೇಲೆ ಯಾವಾಗ ಮತ್ತು ಎಷ್ಟು ಹೂಡಿಕೆ ಮಾಡಬೇಕು?
ಚಿನ್ನ
  • Share this:
ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಭರಣದ ರೀತಿಯಲ್ಲಿ ಚಿನ್ನವನ್ನು ಬಳಸಲಾಗುತ್ತದೆ. ಇದು ಸಿರಿವಂತಿಕೆಯ ಮಾನದಂಡದ ಜೊತೆಗೆ ಪ್ರತಿಷ್ಠೆಯ ಸಂಕೇತವೂ ಹೌದು. ಹೂಡಿಕೆ ವಿಚಾರಕ್ಕೆ ಬರುವುದಾದರೆ ಆಭರಣ ಚಿನ್ನವನ್ನು ಹೂಡಿಕೆಯ ಸಲಹೆಗಾರರು ಸೂಚಿಸುವುದಿಲ್ಲ. ಚಿನ್ನವನ್ನು ಹೂಡಿಕೆಯಾಗಿ ಲಾಭಗಳಿಸಲು ಡಿಜಿಟಲ್ ಮೂಲಕ ಚಿನ್ನವನ್ನು ಖರೀದಿ ಮಾಡಬೇಕು. ಇಲ್ಲವೇ ಎಸ್​ಐಪಿ ರೀತಿಯಲ್ಲಿ ಹೂಡಿಕೆ ಆಯ್ಕೆ ಮಾಡಿಕೊಳ್ಳಬಹುದು. ಚಿನ್ನದ ಮೇಲಿನ ಹೂಡಿಕೆಯ ಲಾಭವು ಹಣದುಬ್ಬರವನ್ನು ಅವಲಂಭಿಸಿದೆ. ಲಿಕ್ವಿಡ್​ ಚಿನ್ನವಾದ ಗೋಲ್ಡ್ ಕಾಯಿನ್​ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ. ಗೋಲ್ಡ್ ಮೈನಿಂಗ್​ ಸ್ಟಾಕ್ಸ್​ ಕೂಡ ಚಿನ್ನದ ಹೂಡಿಕೆಯ ಒಂದು ಭಾಗವಾಗಿದೆ.

ನಿಮ್ಮ ಪೋರ್ಟ್‌ಫೋಲಿಯೋಗೆ ಅನುಗುಣವಾಗಿ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಹೂಡಿಕೆಯ ಉದ್ದೇಶ ಮತ್ತು ಹೂಡಿಕೆಯ ಅಂತರದ ಬಗ್ಗೆಯೂ ಅರಿವಿರಬೇಕು. ನಿಮ್ಮ ಹೂಡಿಕೆಯ ಪ್ರಮುಖ ಭಾಗವಾಗಿರದೇ ಕಡಿಮೆ ಮಿತಿಯಲ್ಲಿರಬೇಕು. ಈಕ್ವಿಟಿ, ಚಿನ್ನ ಅಥವಾ ಇನ್ನಾವುದೇ ಆಸ್ತಿಯ ವರ್ಗವಿದ್ದು ಯಾವುದೇ ಹೂಡಿಕೆ ಇದ್ದರೂ ಅಲ್ಲಿ ಬೆಲೆ ಏರಿಕೆ ಸಮಯದಲ್ಲಿ ಖರೀದಿಸುವ ಪ್ರವೃತ್ತಿ ಇರುತ್ತದೆ. ಇದನ್ನು ಆರ್ಥಿಕ ನಡವಳಿಕೆಯ ಪಕ್ಷಪಾತದ ನಿಲುವು ಎಂದು ಹೇಳಲಾಗುತ್ತದೆ.

ಬೆಲೆಗಳು ಏರಿಕೆಯಾಗುವಾಗ ಆಕರ್ಷಕ ರೀತಿಯಲ್ಲಿ ಕಾಣಿಸಿದರೂ ಅದು ಶಾಶ್ವತ ಎನ್ನುವಂತೆ ಕಂಡುಬರುತ್ತದೆ. ಇನ್ನು, ಈ ಸಂದರ್ಭದಲ್ಲಿ ಕೆಲವರು ಅಸೆಟ್​ ಕ್ಲಾಸ್​ ಬಗ್ಗೆ ಆಸಕ್ತಿ ತೋರುತ್ತಾರೆ. ಆದರೆ ಮಾರುಕಟ್ಟೆಯ ಕನಿಷ್ಠ ಬೆಲೆ( ಕೊಳ್ಳಲು ಉತ್ತಮ ಬೆಲೆ) ಗರಿಷ್ಠ ಬೆಲೆ(ಮಾರಲು ಕನಿಷ್ಠ ಬೆಲೆ) ಯಾವುದು ಎನ್ನುವುದನ್ನು ಮಾರುಕಟ್ಟೆ ಪರಿಣಿತರು ಸಹ ಊಹೆ ಮಾಡಲು ಸಾಧ್ಯವಾಗುವುದಿಲ್ಲ. ನಿಜವಾಗಿಯೂ ಆ ಹಂತದಲ್ಲಿ ಆದನ್ನು ಗುರುತಿಸುವುದು ಕಷ್ಟ. ಆದರೆ ಕೆಲವು ಸಂದರ್ಭಗಳಲ್ಲಿ ಅದರ ಏರಿಳಿತವನ್ನು ಗಮನಿಸಬಹುದು.

ಆಧುನಿಕ ಅವಳಿ ನಗರಗಳಾಗಿ ರಾಮನಗರ- ಚನ್ನಪಟ್ಟಣದ ಅಭಿವೃದ್ಧಿಗೆ ಮುಂದಾದ ಸರ್ಕಾರ

ಇದೇ ರೀತಿಯ ವಿದ್ಯಮಾನ ಚಿನ್ನದ ಬೆಳವಣಿಗೆಯಲ್ಲೂ ಕಂಡು ಬರುತ್ತದೆ. ಕೆಲವೊಮ್ಮೆ  ಚಿನ್ನದ ಬೆಲೆ ಏರಿಕೆ ಇದ್ದಾಗ ಇನ್ನೂ ಎಷ್ಟು ಏರಿಕೆಯಾಗಬಹುದೆಂದು ಜನರು ಕೇಳುವುದಿದೆ. ಈ ದೃಷ್ಟಿಕೋನವು ಹೂಡಿಕೆಯ ಆಧಾರವಾಗಿರುತ್ತದೆ. ಇಲ್ಲಿ ಗಳಿಸುವ ಲಾಭವೂ ನಿರೀಕ್ಷಿತ ಲಾಭದ ಒಂದು ಅಂದಾಜನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಆಗಸ್ಟ್​ 2020 ರಲ್ಲಿ ಚಿನ್ನದ ಬೆಲೆ ಉತ್ತುಂಗಕ್ಕೆ ಏರಿತ್ತು. ಆದರೆ ಆ ನಂತರದ ಪಕ್ಷಪಾತದ ಬೆಳವಣಿಗಳು ಒಂದಷ್ಟು ಬದಲಾವಣೆ ತಂದವು.

ಚಿನ್ನದ ಮೇಲೆ ಹೂಡಿಕೆ

ನಿಮ್ಮ ಪೋರ್ಟ್‌ ಫೋಲಿಯೋದಲ್ಲಿಸರಿಯಾದ ಹಂಚಿಕೆ ಕ್ರಮವನ್ನು ಅನುಸರಿಸುವುದು ಅಸೆಟ್​​ ಬಗ್ಗೆ ನಿರ್ಧರಿಸಲು ಸರಿಯಾದ ದೃಷ್ಟಿಕೋನವಾಗಿದೆ. ನಿಮ್ಮ ಪೋರ್ಟ್​ಫೊಲಿಯೋದಲ್ಲಿ ವಿವಿಧ ಆಸ್ತಿ ವರ್ಗಗಳಿಗೆ ಹಂಚಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಇದು ಸಮತೋಲವನ್ನು ಸೃಷ್ಟಿಸುತ್ತದೆ.ವಿವಿಧ ಆಸ್ತಿ ವರ್ಗಗಳಿಗೆ ಹಂಚಿಕೆ ಮಾಡುವುದರಿಂದ ನಿಮ್ಮ ಪೋರ್ಟ್​​ಫೋಲಿಯೊದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಆಸ್ತಿ ವರ್ಗಗಳ ನಡುವೆ ಕೊಂಚ ವ್ಯತಿರಿಕ್ತ ಪರಿಣಾಮವನ್ನು ಗಮನಿಸಬೇಕು. ಜೊತೆಗೆ ಕೊಂಚ ಸಕಾರಾತ್ಮಕತೆಯನ್ನು ನಿರೀಕ್ಷಿಸಬಹುದು. ಎಲ್ಲಾ ಹೂಡಿಕೆಗಳು ಒಂದೇ ಸಮಯದಲ್ಲಿ ಏರಿಕೆ ಅಥವಾ ಇಳಿಕೆ ಕಾಣುವುದಿಲ್ಲ ಆದ್ದರಿಂದ ಇದು ನಿಮ್ಮ ಫೋರ್ಟೋಫೋಲಿಯೋ ಮೇಲೆ ಬದಲಾವಣೆ ತರಬಹುದು. ಚಿನ್ನದ ಮೇಲೆ ಹೂಡಿಕೆ ಮಾಡಲು ಇದೇ ಅಂಶವನ್ನು ಗಮನಿಸಬೇಕು. ಒಂದಷ್ಟು ಹಣವನ್ನು ಇಲ್ಲಿ ಹೂಡಿದರೆ, ನಿಮ್ಮ ಪೋರ್ಟ್​ಫೋಲಿಯೋದಲ್ಲೂ ಬದಲಾವಣೆಯಾಗಬಹುದು. ಅದು ನಿಮ್ಮ ಪೋರ್ಟ್​​ಫೋಲಿಯೋವಿನ ಇತರ ಸ್ವತ್ತುಗಳ ಮೇಲೆ ಪರಿಣಾಮವನ್ನು ಬೀರಬಹುದು.

ನಿಮ್ಮ ಪೋರ್ಟ್​​ಫೋಲಿಯೋದಲ್ಲಿ ಚಿನ್ನದ ಹಂಚಿಕೆ ನಿಮ್ಮ ಪ್ರೊಫೈಲ್​ಗೆ​ ಅನುಗುಣವಾಗಿರಬೇಕು. ಹೂಡಿಕೆ ಉದ್ದೇಶ ಮತ್ತು ಹೂಡಿಕೆ ಅಂತರವನ್ನು ನೋಡಿಕೊಳ್ಳಬೇಕು. ಪೋರ್ಟ್​ಫೋಲಿಯೋದ 10 ರಿಂದ 15 ಪರ್ಸೆಂಟ್​ ಮಾತ್ರವಾಗಿರಬೇಕು. ಪ್ರಮುಖ ಆಸ್ತಿಗಳಾದ ಈಕ್ವಿಟಿ ಮತ್ತು ಡೆಬ್ಟ್ ಗಮನದಲ್ಲಿರಲಿ. ಈಕ್ವಿಟಿ ಅಂದರೆ ದೀರ್ಘಕಾಲದ ಸಂಪತ್ತಿನ ಗಳಿಕೆ ಜೊತೆಗೆ ಆರ್ಥಿಕ ಅಭಿವೃದ್ಧಿ. ಡೆಬ್ಟ್​ ಅಂದರೆ ಸ್ಥಿರ ಆದಾಯದ ಜೊತೆಗೆ ಆಸ್ತಿಯ ಸೃಷ್ಟಿಯಾಗಿದೆ. ಇನ್ನು ಕೆಲವೊಮ್ಮೆ ನಿಮ್ಮ ಪೋರ್ಟ್​ಫೋಲಿಯೋದಲ್ಲಿರುವ ಚಿನ್ನವು ಈಕ್ವಿಟಿ ಮತ್ತು ಡೆಬ್ಟ್​ಗಿಂತಲೂ ಕಡಿಮೆ ಸೋರಿಕೆಯನ್ನು ತಡೆಯುತ್ತದೆ. ಕೆಲವೊಮ್ಮೆ ಚಿನ್ನ ಈಕ್ವಿಟಿಗಿಂತಲೂ ಹೆಚ್ಚಿನ ಲಾಭವನ್ನೂ ತರಬಹುದು, ಇಲ್ಲವೇ ಅಪಾಯವನ್ನು ತಂದೊಡ್ಡಬಹುದು. ಈಕ್ವಿಟಿ ಮಾರುಕಟ್ಟೆಗಳು ಇಳಿಯಲು ಪ್ರಾರಂಭಿಸಿದರೆ, ಚಿನ್ನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಚಿನ್ನವು ಹೂಡಿಕೆಯಲ್ಲಿ ಕೆಳಗಡೆಯೇ ಇದೆ. ಏಕೆಂದರೆ ಚಿನ್ನ ಇನ್ನೊಂದಷ್ಟು ಸಂಪತ್ತನ್ನು ಹುಟ್ಟಿ ಹಾಕುವುದಿಲ್ಲ. ಸ್ಟೀಲ್ ಮತ್ತು ಅಲ್ಯೂಮಿನಿಯಂನಂತೆ ಹೆಚ್ಚು ಪ್ರಾಧಾನ್ಯತೆ ಪಡೆದಿಲ್ಲ. ಚಿನ್ನಧಾರಣೆ ಭಾರತದಲ್ಲಿ ಮಾತ್ರವೇ ಹೆಚ್ಚಾಗಿ ಕಂಡು ಬರುತ್ತದೆ. ಚಿನ್ನದ ಬೆಲೆಯೂ ಅನಿಶ್ಚಿತತೆಯಿಂದ ಕೂಡಿರುತ್ತದೆ. ಉದಾ: ಭೌಗೋಳಿಕ - ರಾಜಕೀಯ ಅಸ್ಥಿರತೆ, ಯುದ್ಧ ಭೀತಿ, ಸಾಂಕ್ರಾಮಿಕ ಕಾಯಿಲೆ, ಡಾಲರ್ ಕುಸಿತ ಇದೆಲ್ಲವೂ ಪರಿಗಣಿಸಲ್ಪಡುತ್ತದೆ. ಜಾಗತಿಕ ಹೂಡಿಕೆದಾರರು ಸ್ಥಿರಾಸ್ತಿಯಲ್ಲಿ ಬದಲಾವಣೆ ಮಾಡುವುದು ಈ ಎಲ್ಲ ಕಾರಣಗಳನ್ನು ಒಳಗೊಂಡಿರುತ್ತದೆ.

2020 ಆಗಸ್ಟ್​​ನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಈಗ ಅದು ಸರಿಯಾದ ಪ್ರಮಾಣದಲ್ಲಿದೆ. ಈಗ ಉತ್ತಮ ಪ್ರವೇಶವಾಗಿದೆ. ಕಳೆದ ಕೆಲವು ತಿಂಗಳಲ್ಲಿ ಇದೇ ಕಾರಣಕ್ಕೆ ಅಮೆರಿಕ ಡಾಲರ್ ಹಿಂದೆ ಸರಿದಿತ್ತು ಇದೇ ಕಾರಣಕ್ಕೆ ಹೂಡಿಕೆ ಮಾಡಿಲ್ಲ. ನಿಮಗೆ ನಿಮ್ಮ ಪೋರ್ಟ್​ಫೋಲಿಯೋ ಮೇಲಷ್ಟೇ ಹಿಡಿತವಿದ್ದು, ಹೊರಗಿನ ಬದಲಾವಣೆ ನಿಮ್ಮ ಕೈಯಲ್ಲಿಲ್ಲ. ಆದ್ದರಿಂದ ಹೂಡಿಕೆ ಬಗ್ಗೆ ಗಮನವಿರಲಿ. ಅಲ್ಲದೇ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿಸುವುದು ಈಗ ಪ್ರಸ್ತುತ ಹೂಡಿಕೆ ಪರಿಣಿತರ ಆಯ್ಕೆಯಾಗಿದೆ. ಮ್ಯೂಚುಯಲ್ ಫಂಡ್ ವಿತರಕರೊಂದಿಗೆ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಗೋಲ್ಡ್ ಇಟಿಎಫ್ ಅಥವಾ ಚಿನ್ನದ ನಿಧಿಗಳಲ್ಲಿ 500 ರೂನಂತೆ ಎಸ್​ಐಪಿಯಲ್ಲೂ ಹೂಡಿಕೆ ಮಾಡಬಹುದು.
Published by: Latha CG
First published: April 7, 2021, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories