Post Office Savings: ದಿನಕ್ಕೆ 100 ರೂ ಉಳಿಸಿ, 5 ವರ್ಷಗಳಲ್ಲಿ 20 ಲಕ್ಷ ಪಡೆಯಿರಿ; ಪೋಸ್ಟ್ ಆಫೀಸಿನ ಈ ಯೋಜನೆ ಬಗ್ಗೆ ಗೊತ್ತಾ?

Save Less Earn More: ಮಗಳ ಮದುವೆಗೋ, ಮಗನ ವಿದ್ಯಾಭ್ಯಾಸಕ್ಕೋ ಅಥವಾ ಬಹುಕಾಲದಿಂದ ಕನಸು ಕಾಣುತ್ತಿದ್ದ ಸೈಟ್ ಅಥವಾ ಮನೆಯ ಆರಂಭಿಕ ಪೇಮೆಂಟ್​ಗೋ ಈ 20 ಲಕ್ಷ ಬಹಳ ಉಪಯೋಗವಾಗಬಹುದು. ಹಾಗಂತ ದಿನದಿನದ ಖರ್ಚು ಕಳೆದು ಹೆಚ್ಚೇನೂ ಉಳಿಸೋಕಾಗಲ್ಲ, ಲಕ್ಷಗಟ್ಟಲೆ ಹಣ ಹೊಂದಿಸೋದು ಹೇಗೆ ಅನ್ನೋ ಚಿಂತೆಯಲ್ಲಿ ಇರುವವರ ಪಾಲಿಗಂತೂ ಇದು ಹೇಳಿ ಮಾಡಿಸಿದ ಯೋಜನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Short Term Savings Scheme in Post Office: ಈಗಿನಿಂದಲೇ ಅಲ್ಪಸ್ವಲ್ಪವಾದರೂ ಉಳಿತಾಯ ಮಾಡಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ (Secured Future) ಸಮಸ್ಯೆಯಾಗುತ್ತದೆ ಎನ್ನುವುದು ಎಲ್ಲರ ಆಲೋಚನೆ. ಅದಕ್ಕಾಗೇ ದುಡಿಮೆಯ ಜೊತೆಜೊತೆಗೇ ಉಳಿತಾಯ ಯೋಜನೆಗಳನ್ನೂ (Plan Savings) ಪ್ಲಾನ್ ಮಾಡಿಕೊಳ್ತಾರೆ. ಈಗಂತೂ ನಾನಾ ಬ್ಯಾಂಕುಗಳು, ಅವುಗಳ ಬಗೆಬಗೆಯ ಯೋಜನೆಗಳು, ಶೇರ್ ಮಾರ್ಕೆಟ್ (Share Market) ಹೀಗೆ ವಿವಿಧ ಮಾರ್ಗಗಳಲ್ಲಿ ಉಳಿತಾಯ ಮಾಡಬಹುದಾಗಿದೆ. ಆದರೆ ಸೇವಿಂಗ್ಸ್ ವಿವಾರದಲ್ಲಿ ಬಹಳ ಹಿಂದಿನಿಂದಲೂ ಜನ ಅತೀ ಹೆಚ್ಚು ನಂಬುವುದು ಎಲ್​ಐಸಿ (LIC) ಮತ್ತು ಪೋಸ್ಟ್ ಆಫೀಸ್​ನ್ನು. ಅದರಲ್ಲೂ ಪೋಸ್ಟ್ ಆಫೀಸಿನ ಸಣ್ಣ ಪುಟ್ಟ ಉಳಿತಾಯ ಯೋಜನೆಗಳಂತೂ ಮಧ್ಯಮ ವರ್ಗದವರ ನೆಚ್ಚಿನ ಸ್ಕೀಂಗಳಾಗಿವೆ. ದಿನಕ್ಕೆ ಬರೀ 100 ರೂಪಾಯಿ ಉಳಿಸಿದ್ರೆ ಸಾಕು, ಕೇವಲ ಐದು ವರ್ಷಗಳಲ್ಲಿ ಬಡ್ಡಿ (Interest Rate) ಎಲ್ಲಾ ಸೇರಿ 20 ಲಕ್ಷ ರೂಪಾಯಿ ನಿಮ್ಮ ಕೈಯಲ್ಲಿ ಇರುತ್ತದೆ.

20 ಲಕ್ಷ ರೂಪಾಯಿ ಈಗಿನ ದಿನಗಳಲ್ಲಂತೂ ದೊಡ್ಡ ಹಣವೇ. ಮಗಳ ಮದುವೆಗೋ, ಮಗನ ವಿದ್ಯಾಭ್ಯಾಸಕ್ಕೋ ಅಥವಾ ಬಹುಕಾಲದಿಂದ ಕನಸು ಕಾಣುತ್ತಿದ್ದ ಸೈಟ್ ಅಥವಾ ಮನೆಯ ಆರಂಭಿಕ ಪೇಮೆಂಟ್​ಗೋ ಈ 20 ಲಕ್ಷ ಬಹಳ ಉಪಯೋಗವಾಗಬಹುದು. ಹಾಗಂತ ದಿನದಿನದ ಖರ್ಚು ಕಳೆದು ಹೆಚ್ಚೇನೂ ಉಳಿಸೋಕಾಗಲ್ಲ, ಲಕ್ಷಗಟ್ಟಲೆ ಹಣ ಹೊಂದಿಸೋದು ಹೇಗೆ ಅನ್ನೋ ಚಿಂತೆಯಲ್ಲಿ ಇರುವವರ ಪಾಲಿಗಂತೂ ಇದು ಹೇಳಿ ಮಾಡಿಸಿದ ಯೋಜನೆ. ದಿನಕ್ಕೆ 100 ರೂಪಾಯಿಯನ್ನು ಉಳಿಸಿಬಿಟ್ಟರೆ 5 ವರ್ಷದಲ್ಲಿ ನಿಮ್ಮ ಹೆಗಲ ಮೇಲಿನ ಅತಿ ದೊಡ್ಡ ಭಾರ ಇಳಿದಂತಾಗುತ್ತದೆ.

ಇದನ್ನೂ ಓದಿ: Post Office Savings: 5 ವರ್ಷಕ್ಕೆ 14 ಲಕ್ಷ ಗ್ಯಾರಂಟಿ, ಅಂಚೆ ಹೂಡಿಕೆಯ ಈ ಸ್ಕೀಂ ಬಗ್ಗೆ ನಿಮಗೆ ಗೊತ್ತಾ?

ಯಾವುದು ಈ ಯೋಜನೆ?

ಭಾರತೀಯ ಅಂಚೆ ಇಲಾಖೆಯಿಂದ ಬಹಳ ನಂಬಿಕೆ ಉಳಿಸಿಕೊಂಡ ಇದರ ಹೆಸರು ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್. ಇಡೀ ಕುಟುಂಬದ ಆರ್ಥಿಕ ಭದ್ರತೆಗೆ ಈ ಯೋಜನೆ ಹೇಳಿ ಮಾಡಿಸಿದ್ದು. ಹಾಗಂತ ಇದೇನೂ ಹೊಸಾ ಯೋಜನೆಯಲ್ಲ. ಈಗಾಗಲೇ ಲೆಕ್ಕವಿಲ್ಲದಷ್ಟು ಭಾರತೀಯರು ಈ ಯೋಜನೆಯ ಮೂಲಕ ಲಕ್ಷಾಧೀಶ್ವರರಾಗಿದ್ದಾರೆ.

NSSನಿಂದ ಸಿಗುವ ಲಾಭಗಳೇನು?

ಎನ್​ಎಸ್ಎಸ್ ಸರ್ಟಿಫಿಕೇಟ್ ಯೋಜನೆಗಳ ಮೆಚ್ಯೂರಿಟಿ ಪೀರಿಯಡ್ 5 ವರ್ಷಕ್ಕೆ ನಿರ್ಧರಿತವಾಗಿರುತ್ತದೆ. ಆದರೆ ನಿಮಗೆ ಬಹಳ ತುರ್ತು ಸಂದರ್ಭ ಬಂದರೆ ಕೆಲವು ನಿಬಂಧನೆಗಳಿಗೆ ಒಪ್ಪಿ ನೀವು 1 ವರ್ಷದ ನಂತರವೂ ಹಣವನ್ನು ಮರಳಿ ಪಡೆಯಬಹುದು. ಪ್ರತೀ ಆರ್ಥಿಕ ವರ್ಷದ ಮೊದಲ 3 ತಿಂಗಳಲ್ಲಿ ಸರ್ಕಾರವೇ ಈ ಯೋಜನೆಯ ಬಡ್ಡಿದರವನ್ನು ನಿರ್ಧರಿಸುತ್ತದೆ.

ಈ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು?

ತಿಂಗಳಿಗೆ ಕೇವಲ 100 ರೂಪಾಯಿಯಷ್ಟು ಕಡಿಮೆ ಹಣದಿಂದ ನೀವು ಉಳಿತಾಯ ಆರಂಭಿಸಬಹುದು. ಆದರೆ ನಿಮಗೆ 5 ವರ್ಷಗಳ ನಂತರ 20.85 ಲಕ್ಷ ರೂಪಾಯಿ ಹಣ ಬೇಕಿದ್ದರೆ ನೀವು 5 ವರ್ಷಕ್ಕೆ 15 ಲಕ್ಷ ರೂಪಾಯಿಯಂತೆ ಉಳಿತಾಯ ಮಾಡಬೇಕು. ಈ ಯೋಜನೆಯ ಬಡ್ಡಿ ದರ ಸದ್ಯ ಶೇಕಡಾ 6.8 ಇದೆ. ಹಾಗಾಗಿ 5 ವರ್ಷಗಳ ನಂತರ ನೀವು 6 ಲಕ್ಷ ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಪಡೆಯಬಹುದು.

ಈ ಯೋಜನೆಯ ಬಡ್ಡಿ ದರ ಎಷ್ಟು? ಈಗಿನ ಲೆಕ್ಕಾಚಾರದಲ್ಲಿ ವಾರ್ಷಿಕ ಶೇಕಡಾ 6.8ರಷ್ಟು ಬಡ್ಡಿ ದರ ಈ ಯೋಜನೆಗಿದೆ. ವರ್ಷಕ್ಕೆ 1.5 ಲಕ್ಷ ರೂಪಾಯಿಗಳಷ್ಟು ತೆರಿಗೆ ವಿನಾಯಿತಿ ಈ ಯೋಜನೆಯ ಮೂಲಕ ಸಿಗುತ್ತದೆ. ಎಲ್ಲರೂ ತಂತಮ್ಮ ಆದಾಯಕ್ಕೆ ತಕ್ಕಂತೆ ಹೂಡಿಕೆ, ಉಳಿತಾಯ ಪ್ಲಾನ್ ಮಾಡಿಕೊಂಡಿರುತ್ತಾರೆ. ಇದ್ದುದರಲ್ಲೇ ಅಲ್ಪ ಸ್ವಲ್ಪ ಉಳಿತಾಯ ಮಾಡಿದರಷ್ಟೇ ಭವಿಷ್ಯದ ದಿನಗಳನ್ನು ಅಥವಾ ಅರಿಯದೇ ಬಂದ ಕಷ್ಟಗಳನ್ನು ಹೆಚ್ಚು ಸಮಸ್ಯೆ ಇಲ್ಲದೆ ಕಳೆಯಲು ಸಾಧ್ಯ.
Published by:Soumya KN
First published: