VIDEO: ಸಚಿವರ ತಲೆಗೆ ಮೊಟ್ಟೆ ಹೊಡೆದ ಬಾಲಕ: ಸಾಮಾಜಿಕ ಜಾಲತಾಣದಲ್ಲಿ ಎಗ್​​ಬಾಯ್​ ಫುಲ್ ಫೇಮಸ್ಸು!

ನ್ಯೂಜಿಲೆಂಡ್​ನ ದಾಳಿಗೆ ಇಸ್ಲಾಮೋಫೋಬಿಕ್​ಗೆ ಕಾರಣ, ಮುಸ್ಲಿಮರು ನ್ಯೂಜಿಲೆಂಡ್​ಗೆ ವಲಸೆ ಬಂದಿರುವುದರಿಂದ ಈ ದಾಳಿ ನಡೆದಿದೆ ಎಂದು  ಆಸ್ಟ್ರೇಲಿಯಾದ ಸಚಿವ ಫ್ರೇಸರ್ ಅನ್ನಿಂಗ್ ಹೇಳಿದ್ದರು.

zahir | news18
Updated:March 19, 2019, 5:23 PM IST
VIDEO: ಸಚಿವರ ತಲೆಗೆ ಮೊಟ್ಟೆ ಹೊಡೆದ ಬಾಲಕ: ಸಾಮಾಜಿಕ ಜಾಲತಾಣದಲ್ಲಿ ಎಗ್​​ಬಾಯ್​ ಫುಲ್ ಫೇಮಸ್ಸು!
ನ್ಯೂಜಿಲೆಂಡ್​ನ ದಾಳಿಗೆ ಇಸ್ಲಾಮೋಫೋಬಿಕ್​ಗೆ ಕಾರಣ, ಮುಸ್ಲಿಮರು ನ್ಯೂಜಿಲೆಂಡ್​ಗೆ ವಲಸೆ ಬಂದಿರುವುದರಿಂದ ಈ ದಾಳಿ ನಡೆದಿದೆ ಎಂದು  ಆಸ್ಟ್ರೇಲಿಯಾದ ಸಚಿವ ಫ್ರೇಸರ್ ಅನ್ನಿಂಗ್ ಹೇಳಿದ್ದರು.
  • News18
  • Last Updated: March 19, 2019, 5:23 PM IST
  • Share this:
ಆಸ್ಟ್ರೇಲಿಯಾದ ಸಚಿವ ಫ್ರೇಸರ್ ಅನ್ನಿಂಗ್​ ಅವರ ಮೇಲೆ ಮೊಟ್ಟೆ ದಾಳಿ ನಡೆಸಿದ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇತ್ತೀಚೆಗೆ ನ್ಯೂಜಿಲೆಂಡ್​ನ ಕ್ರೈಸ್ಟ್​ಚರ್ಚ್​ನಲ್ಲಿ ಆಸ್ಟ್ರೇಲಿಯಾ ಮೂಲದ ಭಯೋತ್ಪಾದಕ ದಾಳಿ ನಡೆಸಿದ್ದನು. ಈ ಗುಂಡಿನ ದಾಳಿಯಿಂದ 50 ಮಂದಿ ಮೃತಪಟ್ಟಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆಸೀಸ್​ ಸೆನೆಟರ್ ಫ್ರೇಸರ್, ಇದು ಇಸ್ಲಾಮೋಫೋಬಿಕ್​ನಿಂದ ಉಂಟಾದ ದಾಳಿ. ಇದಕ್ಕೆ ಮುಸ್ಲಿಮರೇ ಕಾರಣ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು.

ಈ ಹೇಳಿಕೆಯಿಂದ ಸಿಟ್ಟುಗೊಂಡ ಬಾಲಕ  ಸಚಿವರ ತಲೆಗೆ ಮೊಟ್ಟೆಯಿಂದ ಹೊಡೆದಿದ್ದನು. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಸೆನೆಟರ್​ನ ಹೇಳಿಕೆಯನ್ನು ವಿರೋಧಿಸಿ ಹಲವರು ಬಾಲಕನ ಬೆಂಬಲಕ್ಕೆ ನಿಂತಿದ್ದಾರೆ. ಬಾಲಕನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೀರೋ ಎಂಬಂತೆ ಬಿಂಬಿಸಲಾಗುತ್ತಿದ್ದು, ಅಸಂಬಂದ್ಧ ಹೇಳಿಕೆಗೆ ಸರಿಯಾದ ಕ್ರಮ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.


ಈ ದಾಳಿ ವೇಳೆ ಸಚಿವರು ಕೂಡ ಬಾಲಕನ ವಿರುದ್ಧ ಆಕ್ರಮಣಕ್ಕೆ ಮುಂದಾಗಿದ್ದರು. ಅಷ್ಟರಲ್ಲಿ ಐದು ಮಂದಿ ಸೇರಿ ಬಾಲಕನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದರು. ಅದರಂತೆ ಇದೀಗ ತನಿಖೆಯು ಪ್ರಗತಿಯಲ್ಲಿದ್ದು, ದಾಳಿ ಹಿಂದಿನ ಕಾರಣ ಮತ್ತು ಸಚಿವರ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಜಿಲೆಂಡ್​ನ ದಾಳಿಗೆ ಇಸ್ಲಾಮೋಫೋಬಿಕ್​ಗೆ ಕಾರಣ, ಮುಸ್ಲಿಮರು ನ್ಯೂಜಿಲೆಂಡ್​ಗೆ ವಲಸೆ ಬಂದಿರುವುದರಿಂದ ಈ ದಾಳಿ ನಡೆದಿದೆ ಎಂದು  ಆಸ್ಟ್ರೇಲಿಯಾದ ಸಚಿವ ಫ್ರೇಸರ್ ಅನ್ನಿಂಗ್ ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆದರೆ ಇದೇ ವೇಳೆ ಸೆನೆಟರ್ ಹೇಳಿಕೆಯನ್ನು ವಿರೋಧಿಸಿ ಬಾಲಕ ನಡೆಸಿದ ದಾಳಿಗೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಅಷ್ಟೇ ಅಲ್ಲದೆ ಎಗ್​ಬಾಯ್​ ಎಂಬ ಹ್ಯಾಷ್​ಟ್ಯಾಗ್ ಕ್ರಿಯೇಟ್ ಮಾಡುವ ಮೂಲಕ ಬಾಲಕನ ಬೆಂಬಲಕ್ಕೆ ಹಲವರು ನಿಂತಿದ್ದಾರೆ.



First published:March 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading