HOME » NEWS » Trend » INTERNATIONAL WIDOWS DAY 2021 THEME HISTORY AND SIGNIFICANCE INVISIBLE WOMEN INVISIBLE PROBLEMS HG

International Widow Day: ಈ ದಿನದ ವಿಶೇಷತೆ, ಇತಿಹಾಸ ಮತ್ತು ಮಹತ್ವ ಬಗ್ಗೆ ಮಾಹಿತಿ ಇಲ್ಲಿದೆ

International Widows Day 2021: ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಜಗತ್ತಿನಾದ್ಯಂತ ಸುಮಾರು 258 ಮಿಲಿಯನ್ ವಿಧವೆಯರಿದ್ದಾರೆ ಮತ್ತು ಪ್ರತಿ 10 ವಿಧವೆಯರಲ್ಲಿ ಒಬ್ಬರು ತೀವ್ರ ಬಡತನದ ಜತೆಗೆ ಜೀವನ ಮಾಡುತ್ತಿದ್ದಾರೆ.

news18-kannada
Updated:June 23, 2021, 11:28 AM IST
International Widow Day: ಈ ದಿನದ ವಿಶೇಷತೆ, ಇತಿಹಾಸ ಮತ್ತು ಮಹತ್ವ ಬಗ್ಗೆ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
  • Share this:

ನಿಮ್ಮ ಸಂಗಾತಿಯನ್ನು ಕಳೆದುಕೊಳ್ಳುವುದು ಎಂದಿಗೂ ಯಾರಿಗೂ ಸುಲಭದ ಸಂಗತಿಯಲ್ಲ. ಅದರಿಂದ ತೀವ್ರ ದು:ಖ, ಕಷ್ಟಗಳು ಹೆಚ್ಚಾಗಬಹುದು. ಮಹಿಳೆಯರು ತಮ್ಮ ಸಂಗಾತಿಯನ್ನು ಕಳೆದುಕೊಂಡರಂತೂ, ಪರಿಯನ್ನು ಕಳೆದುಕೊಂಡ ನಷ್ಟದ ಜತೆಗೆ, ಅವರ ಕಷ್ಟಗಳನ್ನು ಯಾರೂ ಊಹಿಸಲಾಗದು. ಜಗತ್ತು ಆಧುನಿಕತೆಯತ್ತ ಸಂಪೂರ್ಣ ವಾಲುತ್ತಿದ್ದರೂ, ನಮ್ಮ ಸಮಾಜ ಇನ್ನೂ ಹೆಚ್ಚು ಬದಲಾಗಿಲ್ಲ. ಈ ಹಿನ್ನೆಲೆ ವಿಶ್ವದ ಹಲವು ಭಾಗಗಳಲ್ಲಿ ವಿಧವೆಯರ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 23 ಅನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ವಿಧವೆಯ ದಿನವಾಗಿ ಆಚರಿಸಲಾಗುತ್ತದೆ.


ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಜಗತ್ತಿನಾದ್ಯಂತ ಸುಮಾರು 258 ಮಿಲಿಯನ್ ವಿಧವೆಯರಿದ್ದಾರೆ ಮತ್ತು ಪ್ರತಿ 10 ವಿಧವೆಯರಲ್ಲಿ ಒಬ್ಬರು ತೀವ್ರ ಬಡತನದ ಜತೆಗೆ ಜೀವನ ಮಾಡುತ್ತಿದ್ದಾರೆ. ಇದರೊಂದಿಗೆ ಮಾರಕ ಕೋವಿಡ್ - 19 ಸಾಂಕ್ರಾಮಿಕಕ್ಕೆ ಪ್ರಪಂಚದ ಹಲವು ಭಾಗಗಳಲ್ಲಿನ ಜನರು ತಮ್ಮ ಪಾರ್ಟ್‌ನರ್‌ ಅನ್ನು ಕಳೆದುಕೊಳ್ಳುತ್ತಿದ್ದು, ಇದು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಂತಾರಾಷ್ಟ್ರೀಯ ವಿಧವೆ ದಿನ: 2021ರ ಥೀಮ್

ಈ ವರ್ಷದ ಅಂತರರಾಷ್ಟ್ರೀಯ ವಿಧವೆ ದಿನದ ವಿಷಯ “ಅದೃಶ್ಯ ಮಹಿಳೆಯರು, ಅದೃಶ್ಯ ಸಮಸ್ಯೆಗಳು”. ನಮ್ಮ ಸಮಾಜದ ಪ್ರಕಾರ ಮಹಿಳೆಯ ಗುರುತನ್ನು ಆಕೆಯ ಸಂಗಾತಿಯೊಂದಿಗೆ ಹೆಣೆಯಲಾಗಿದೆ. ಆಕೆ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ, ಸಂಬಂಧಿಕರು ಸೇರಿ ಬಹುತೇಕರು ನಿರ್ಲಕ್ಷಿಸುತ್ತಾರೆ. ವಿಧವೆಗೆ ಯಾವುದೇ ವಿಶೇಷ ಗಮನವನ್ನು ನೀಡುವುದಿಲ್ಲ.

ಅಂತಾರಾಷ್ಟ್ರೀಯ ವಿಧವೆ ದಿನ: ಇತಿಹಾಸ


ಡಿಸೆಂಬರ್ 23, 2010 ರಂದು ಯುನೈಟೆಡ್ ನ್ಯಾಷನಲ್ ಜನರಲ್ ಅಸೆಂಬ್ಲಿ ಜೂನ್ 23 ಅನ್ನು ಅಧಿಕೃತವಾಗಿ ಅಂತಾರಾಷ್ಟ್ರೀಯ ವಿಧವೆ ದಿನವೆಂದು ಅಂಗೀಕರಿಸಿತು. ಆದರೆ ಯುಎನ್ ಮಾನ್ಯತೆ ಪಡೆಯುವ ಮೊದಲೇ, ಈ ದಿನವನ್ನು 2005 ರಿಂದ ಲೂಂಬಾ ಫೌಂಡೇಶನ್ ಆಚರಿಸುತ್ತಿತ್ತು. 1954 ರಲ್ಲಿ ಈ ದಿನದಂದು ಫೌಂಡೇಶನ್ ಸಂಸ್ಥಾಪಕ ರಾಜಿಂದರ್ ಪಾಲ್ ಲೂಂಬಾ ಅವರ ತಾಯಿ ಶ್ರೀಮತಿ ಪುಷ್ಪಾ ವಾಟಿ ಲೂಂಬಾ ಅವರು ವಿಧವೆಯಾದರು. ಈ ಹಿನ್ನೆಲೆ ಜೂನ್ 23 ಅನ್ನು ಅಧಿಕೃತ ದಿನಾಂಕವಾಗಿ ಆಯ್ಕೆ ಮಾಡಿತ್ತು ಲೂಂಬಾ ಫೌಂಡೇಶನ್.


ಅಂತಾರಾಷ್ಟ್ರೀಯ ವಿಧವೆ ದಿನ: ಮಹತ್ವ

ಲಂಡನ್‌ನ ಹೌಸ್ ಆಫ್ ಲಾರ್ಡ್ಸ್ ಸದಸ್ಯ ರಾಜಿಂದರ್ ಅವರು ಲೂಂಬಾ ಫೌಂಡೇಶನ್‌ಗೆ ನೆರವಾಗಲು ನಿರ್ಧರಿಸಿದರು. ಬಳಿಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಧವೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1954 ರಲ್ಲಿ ತನ್ನ 37 ನೇ ವಯಸ್ಸಿನಲ್ಲಿ ವಿಧವೆಯಾದಾಗ ಅವರ ತಾಯಿ ಅನುಭವಿಸಬೇಕಾದ ಹೋರಾಟಗಳಿಂದ ಸ್ಫೂರ್ತಿ ಪಡೆದರು.


ಈ ಸಂಸ್ಥೆ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ವಿಧವೆಯರ ಮಕ್ಕಳೊಂದಿಗೆ ನಿಕಟವಾಗಿ ಕೆಲಸ ಮಾಡಿತು ಮತ್ತು ಆ ಮಕ್ಕಳು ಶಾಲೆಗೆ ಹೋಗುವಂತೆ ಮಾಡಲು ಸಹಾಯ ಮಾಡಿತು. ಈ ಫೌಂಡೇಶನ್ ಭಾರತ, ಮತ್ತು ಇತರ ಏಷ್ಯಾ, ಆಫ್ರಿಕಾ ದೇಶಗಳು ಸೇರಿದಂತೆ ವಿವಿಧ ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿತು.

First published: June 23, 2021, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories