• Home
  • »
  • News
  • »
  • trend
  • »
  • Viral News: ಸಿಖ್​ ಮಕ್ಕಳಿಗಾಗಿ ರೆಡಿ ಆಯ್ತು ಸ್ಪೆಷಲ್​ ಹೆಲ್ಮೆಟ್​, ಇದು ಕೆನಡಾದ ಮಹಿಳೆಯ ಕೈಚಳಕ!

Viral News: ಸಿಖ್​ ಮಕ್ಕಳಿಗಾಗಿ ರೆಡಿ ಆಯ್ತು ಸ್ಪೆಷಲ್​ ಹೆಲ್ಮೆಟ್​, ಇದು ಕೆನಡಾದ ಮಹಿಳೆಯ ಕೈಚಳಕ!

ಸಿಖ್​ ಹೆಲ್ಮೆಟ್​

ಸಿಖ್​ ಹೆಲ್ಮೆಟ್​

ಸೈಕ್ಲಿಂಗ್, ಕಿಕ್ ಸ್ಕೂಟರ್, ಇನ್‌ಲೈನ್ ಸ್ಕೇಟ್ ಕ್ರೀಡೆಗಳು ಮತ್ತು ಸ್ಕೇಟ್‌ಬೋರ್ಡಿಂಗ್‌ನಲ್ಲಿ ಬಳಸಲು ಸಿಖ್ ಹೆಲ್ಮೆಟ್‌ಗಳು ಲಗ್ಗೆ ಇಟ್ಟಿದೆ. ಏನಿದು ವಿಚಾರ? ಯಾರು ಕಂಡು ಹಿಡಿದರು?

  • Share this:

ದ್ವಿಚಕ್ರ ವಾಹನ  (Two Wheeler) ಚಲಾಯಿಸುವಾಗ   ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅಂಕಿಅಂಶಗಳು ಅನೇಕ ಅಪಘಾತಗಳಲ್ಲಿ ತಲೆಗೆ ಗಾಯಗಳು ಸಾವಿಗೆ ಪ್ರಮುಖ ಕಾರಣವೆಂದು ತೋರಿಸುತ್ತವೆ. ಆದ್ದರಿಂದ ಅಪಘಾತ ಸಂಭವಿಸಿದರೂ ತಲೆಗೆ ಪೆಟ್ಟಾಗದಂತೆ ಹೆಲ್ಮೆಟ್ ಧರಿಸುವಂತೆ ತಿಳಿಸಲಾಗಿದೆ. ಅನೇಕ ದೇಶಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬೈಕು ಅಥವಾ ಬೈಸಿಕಲ್ ಸವಾರಿ ಮಾಡುವಾಗ ಹೆಲ್ಮೆಟ್ (Helmet) ಧರಿಸಬೇಕು. ಇದೀಗ ಬೈಕ್​ನಲ್ಲಿ ಹಿಂದೆ ಕೂರುವ ಸವಾರರು ಕೂಡ ಹೆಲ್ಮೆಟ್​ ಧರಿಸಬೇಕು ಅಂತ ಕಾನೂನು ಇದೆ. ಅದೆಷ್ಟೋ ಜನರು ಪೊಲೀಸರು ಕಂಡಾಗ ಮಾತ್ರ ಹೆಲ್ಮೆಟ್​ಗಳನ್ನು ಹಾಕಿಕೊಂಡು ರೈಡ್​ (Ride)ಮಾಡ್ತಾರೆ. ಇದು ತಪ್ಪು. ಯಾಕಂದ್ರೆ ನಮ್ಮ ಪ್ರಾಣವನ್ನು ಉಳಿಸಲು ಈ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿರುತ್ತಾರೆ. ಜನರ ನಿರ್ಲಕ್ಷ್ಯದಿಂ ಅದೆಷ್ಟೋ ಪ್ರಾಣಗಳು ಹೋಗುತ್ತಾ ಇದೆ.


ಇದೀಗ ಹೆಲ್ಮೆಟ್​ಗೇ ಸಂಬಂಧಿಸಿದ ಹೊಸ ಸುದ್ದಿಯೊಂದು ಸಖತ್​ ವೈರಲ್​ ಆಗ್ತಾ ಇದೆ.  ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತದೆ. ಅದೇ ತೆರೆನಾಗಿ ಈ ವೈರಲ್​ ಆಗ್ತಾ ಇರೋ ಹೆಲ್ಮೆಟ್​ ಕೂಡ ಒಂದು. ಯಾಕಂದ್ರೆ ಇನ್ನೊಬ್ಬರ ಜೀವ ರಕ್ಷಿಸಲೆಂದು ಈ ಹೆಲ್ಮೆಟ್​ ಲಗ್ಗೆ ಇಟ್ಟಿದೆ.


ಏನಿದು ಹೆಲ್ಮಟ್​?


ಆದರೆ ಸಿಖ್ಖರಿಗೆ ಸೂಕ್ತವಾದ ಶಿರಸ್ತ್ರಾಣವನ್ನು ಕಂಡುಹಿಡಿಯುವುದು ಸ್ವಲ್ಪ ಕಷ್ಟ. ಸಿಖ್ ಸಾಂಸ್ಕೃತಿಕ ಸಂಪ್ರದಾಯದ ಪ್ರಕಾರ, ಅವರು ಕುಟುಮಿ ಧರಿಸುತ್ತಾರೆ. ಅಂದ್ರೆ ನೆತ್ತಿಯ ಭಾಗದಲ್ಲಿ ಕೂದಲಿನ ಉಂಡೆ ಮಾಡಿ ಬಟ್ಟೆಯಂದ ಕಟ್ಟಿಕೊಳ್ಳುತ್ತಾರೆ. ಯಾವಾಗ ಕುಡುಮಿ ಹಾಕಿಕೊಳ್ಳುತ್ತಾರೋ, ಅದರ ಮೇಲೆ ಪೇಟ ಧರಿಸುತ್ತಾರೋ ಗೊತ್ತಿಲ್ಲ. ಆದರೆ ಅವರು ಹೆಡ್ಗಿಯರ್ ಧರಿಸಿದಾಗ ಅದು ಸರಿಯಾಗಿ ಹೊಂದಿಕೊಳ್ಳುವುದಿಲ್ಲ.


ಹೀಗಿರುವಾಗ ಕೆನಡಾದಲ್ಲಿ ನೆಲೆಸಿರುವ ಟೀನಾ ಸಿಂಗ್ ಎಂಬ ಸಿಖ್ ಮಹಿಳೆ ತನ್ನ ಪುತ್ರರ ತಲೆಯ ಆಕಾರಕ್ಕೆ ಹೊಂದುವ ಹೆಲ್ಮೆಟ್ ಅನ್ನು ಮಾರುಕಟ್ಟೆಯಲ್ಲಿ ಹುಡುಕಲು ಪ್ರಯತ್ನಿಸಿದರು. ಆದರೆ ಲಭ್ಯವಿಲ್ಲ. ಆಗ ಅವನಿಗೆ ಒಂದು ಉಪಾಯ ಹೊಳೆಯಿತು. ಅಂದಿನಿಂದ ಅವರು ಮಕ್ಕಳ ಟರ್ಬನ್‌ಗೆ ಸೂಕ್ತವಾದ ಹೆಲ್ಮೆಟ್‌ಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರು.


ಇದನ್ನೂ ಓದಿ: ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರ ಹಡಗು, ಅಮೇರಿಕನ್ಸ್​ ಅಂತೂ ಫುಲ್​ ಖುಷಿ!


ಹುಡ್ ಬರುವ ಸ್ಥಳದಲ್ಲಿ ಹುಡ್ ಅನ್ನು ಸ್ವಲ್ಪಮಟ್ಟಿಗೆ ಏರಿಸಲಾಗುತ್ತದೆ ಮತ್ತು ಹುಡ್ ಅದಕ್ಕೆ ಹೊಂದಿಕೊಳ್ಳುತ್ತದೆ ಮತ್ತು ಸಂಪೂರ್ಣ ತಲೆಯನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಅವರು ಇದನ್ನು ಕೇವಲ ಅವರ ತಮ್ಮ ಪುತ್ರರಿಗಾಗಿ ಮಾತ್ರ ಮಾಡುತ್ತಿಲ್ಲ,   ಇತರ ಸಿಖ್ ಮಕ್ಕಳಿಗೆ ಕೂಡ ಸಹಾಯ ಮಾಡಲು "ಸಿಖ್ ಹೆಲ್ಮೆಟ್ಸ್" ಎಂಬ ವೆಬ್‌ಸೈಟ್ ಅನ್ನು ರಚಿಸಿದ್ದಾರೆ.

View this post on Instagram


A post shared by Sikh Helmets (@sikhhelmets)

ಜೀವವನ್ನು ಉಳಿಸಲು ಓರ್ವ ಮಹಿಳೆ ಇಷ್ಟೆಲ್ಲಾ ಸಾಹಸಗಳನ್ನು ಮಾಡುವಾಗ ಅದನ್ನು ಪಾಲಿಸಲೇ ಬೇಕು ಅಂತ ಅನಿಸುತ್ತದೆ. ನಮ್ಮ ಮಲ್ಟಿ-ಸ್ಪೋರ್ಟ್ಸ್ ಹೆಲ್ಮೆಟ್, ಸಿಖ್ಯ ಹೆಲ್ಮೆಟ್ಸ್, ಬೈಸಿಕಲ್, ಕಿಕ್ ಸ್ಕೂಟರ್, ಇನ್‌ಲೈನ್ ಸ್ಕೇಟ್ ಸ್ಪೋರ್ಟ್ಸ್ ಮತ್ತು ಸ್ಕೇಟ್‌ಬೋರ್ಡಿಂಗ್‌ನಲ್ಲಿ ಬಳಸಲು ಪ್ರಮಾಣೀಕರಿಸಲಾಗಿದೆ, ”ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಟೀನಾ ಈಗ ಉದ್ಯಮಿಯಾಗಿಯೂ ಬದಲಾಗಿದ್ದಾರೆ.
ಸಮಾಜದಲ್ಲಿ ತಾನು ಎಂಬ ಸ್ವಾರ್ಥದಿಂದ  ಬದುಕುವ ಜನರ ಮಧ್ಯೆ, ಇನ್ನೊಬ್ಬರ ರಕ್ಷಣೆಗಾಗಿ ಅಂತಲೂ ಜನರು ಇರುತ್ತಾರೆ ಎಂದು ಇವರನ್ನು ನೋಡಿ ಕಲಿಯಲೇಬೇಕು ಅಲ್ವಾ? ಅದ್ರಲ್ಲೂ ಅವರ ಸಾಂಪ್ರದಾಯಕ್ಕೆ ಯಾವುದೇ ಧಕ್ಕೆ ಬಾರದೇ ಇರುವ ಹಾಗೆ ಈ ಹೆಲ್ಮೆಟ್​ಗಳನ್ನು ರೂಪಿಸಿದ್ದಾರೆ.

First published: