ಕಸ್ಟಮರ್​ಗಳು ಬರುತ್ತಿಲ್ಲ, ಆನ್​ಲೈನ್​​ನಲ್ಲಿ ಪೈರಸಿ ಕಾಟ; ಇದು ಸೆಕ್ಸ್ ವರ್ಕರ್​ಗಳ ಗೋಳು

International Sex Workers Day 2020: ದೇಶದಲ್ಲಿ ಕೊರೋನಾ ವೈರಸ್​ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶಾದ್ಯಂತ ಕೊರೋನಾ ನಿಯಂತ್ರಣಕ್ಕಾಗಿ ನಾಲ್ಕು ಲಾಕ್ಡೌನ್ ಜಾರಿಗೆ ತಂದರೂ ಕೊರೋನಾ ಪ್ರಕರಣಗಳೇನೂ ಕಡಿಮೆಯಾಗುತ್ತಿಲ್ಲ. ಈ ಮಧ್ಯೆ, ಲೈಂಗಿಕ ಕಾರ್ಯಕರ್ತೆಯರು ಕೊರೋನಾ ವೈರಸ್​ಗೆ ತತ್ತರಿಸಿದ್ದಾರೆ.

news18-kannada
Updated:June 2, 2020, 2:03 PM IST
ಕಸ್ಟಮರ್​ಗಳು ಬರುತ್ತಿಲ್ಲ, ಆನ್​ಲೈನ್​​ನಲ್ಲಿ ಪೈರಸಿ ಕಾಟ; ಇದು ಸೆಕ್ಸ್ ವರ್ಕರ್​ಗಳ ಗೋಳು
ಸಾಂದರ್ಭಿಕ ಚಿತ್ರ
  • Share this:
ಇಂದು ವಿಶ್ವ ಲೈಂಗಿಕ ಕಾರ್ಯಕರ್ತೆಯರ ದಿನ. ಅವರನ್ನು ಸಮಾಜ ಕೆಟ್ಟ ದೃಷ್ಟಿಯಲ್ಲಿ ನೋಡಬಾರದು, ಉಳಿದವರಿಗೆ ಸಿಕ್ಕಂತೆ ಇವರಿಗೂ ಸಮಾನ ಹಕ್ಕುಗಳು ಸಿಗಬೇಕು ಎನ್ನುವ ಕಾರಣಕ್ಕೆ ಸೆಕ್ಸ್ ವರ್ಕರ್ ಡೇ ಆಚರಣೆ ಮಾಡಲಾಗುತ್ತಿದೆ. ಈಗ ಕೊರೋನಾ ವೈರಸ್ನಿಂದಾಗಿ ಈ ಉದ್ಯಮ ಸಂಪೂರ್ಣ ನೆಲಕಚ್ಚಿದೆ.

ದೇಶದಲ್ಲಿ ಕೊರೋನಾ ವೈರಸ್​ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶಾದ್ಯಂತ ಕೊರೋನಾ ನಿಯಂತ್ರಣಕ್ಕಾಗಿ ನಾಲ್ಕು ಲಾಕ್ಡೌನ್ ಜಾರಿಗೆ ತಂದರೂ ಕೊರೋನಾ ಪ್ರಕರಣಗಳೇನೂ ಕಡಿಮೆಯಾಗುತ್ತಿಲ್ಲ.

ಈ ಮಧ್ಯೆ, ಲೈಂಗಿಕ ಕಾರ್ಯಕರ್ತೆಯರು ಕೊರೋನಾ ವೈರಸ್​ಗೆ ತತ್ತರಿಸಿದ್ದಾರೆ. ವೇಶ್ಯಾವಾಟಿಕೆಯ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಕಮಟಿಪುರ ಸೇರಿ ಸಾಕಷ್ಟು ಕಡೆಗಳಲ್ಲಿ ಗ್ರಾಹಕರು ಬರುತ್ತಿಲ್ಲ. ಇದಕ್ಕೆ ಕಾರಣ ಕೊರೋನಾ ವೈರಸ್. ಹೀಗಾಗಿ ಮೊದಲಿನಿಂದಲೂ ಇದನ್ನೇ ನಂಬಿಕೊಂಡಿದ್ದವರು ಈಗ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ವೇಶ್ಯಾವಾಟಿಕೆಗೂ ತಟ್ಟಿದ ಕೊರೋನಾ ಬಿಸಿ; ಸಹಾಯ ಕೋರಿ ಮೋದಿಗೆ ಮನವಿ

ಇನ್ನು, ಕೆಲ ಲೈಂಗಿಕ ಕಾರ್ಯಕರ್ತೆಯರು ವಿಡಿಯೋ ಕಾಲ್ ಮೂಲಕ ಗ್ರಾಹಕರನ್ನು ಖುಷಿ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ರೀತಿ ಮಾಡುವುದರಿಂದ ತಮ್ಮ ಮಾನ ಹರಾಜಾಗುತ್ತಿದೆ ಎನ್ನುತ್ತಿದ್ದಾರೆ ಕೆಲವರು.
ವಿಡಿಯೋ ಕಾಲ್ ಮೂಲಕ ಗ್ರಾಹಕರನ್ನು ತಲುಪಿದರು ಅವರು ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳಬಹುದು. ಇಲ್ಲವೇ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು. ನಂತರ ಇವುಗಳನ್ನು ಬೇರೆ ಬೇರೆ ಪಾರ್ನ್ ಸೈಟ್​ಗಳ ಜೊತೆ ಹಂಚಿಕೊಳ್ಳುತ್ತಾರೆ ಎನ್ನುವ ಭಯ ಇವರದ್ದು. ಹೀಗಾಗಿ, ಲೈಂಗಿಕ ಕಾರ್ಯಕರ್ತೆಯರು ತುತ್ತು ಅನ್ನಕ್ಕೂ ಕಷ್ಟಪಡುವಂತಾಗಿದೆ.
Published by: Rajesh Duggumane
First published: June 2, 2020, 2:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading