International Red Panda Day 2021; ಅಳಿವಿನಂಚಿನಲ್ಲಿರುವ ಕೆಂಪು ಪಾಂಡಾ ಪ್ರಭೇದ ಕುರಿತು ತಿಳಿದುಕೊಳ್ಳಬೇಕಾದ ಅಂಶಗಳೇನು?

ಪ್ರಸ್ತುತ ಕೆಂಪು ಪಾಂಡಾಗಳ ಸಂಖ್ಯೆಯ ಕುರಿತು ನಿಖರವಾದ ಲೆಕ್ಕಚಾರ ಇಲ್ಲದಿದ್ದರೂ 10,000 ಕೆಂಪು ಪಾಂಡಾಗಳಿವೆ ಎಂಬುದಾಗಿ ಅಂದಾಜಿಸಲಾಗಿದ್ದು IUCN ಪ್ರಕಾರ ಇದು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದವಾಗಿದೆ.

ಕೆಂಪು ಪಾಂಡಾ

ಕೆಂಪು ಪಾಂಡಾ

  • Share this:
ಅಂತರಾಷ್ಟ್ರೀಯ ಕೆಂಪು ಪಾಂಡಾ ದಿನದ ಮಹತ್ವವವು ಈ ಸುಂದರವಾದ ಪ್ರಾಣಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹಾಗೂ ಅವುಗಳನ್ನು ಸಂರಕ್ಷಿಸುವಂತೆ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

ಪ್ರತೀ ವರ್ಷ ಸಪ್ಟೆಂಬರ್ ತಿಂಗಳ ಮೂರನೇ ಶನಿವಾರವನ್ನು ಅಂತರಾಷ್ಟ್ರೀಯ ಕೆಂಪು ಪಾಂಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಸ್ತುತ ಕೆಂಪು ಪಾಂಡಾಗಳು ಅಳಿವಿನಂಚಿನಲ್ಲಿದ್ದು ಇವುಗಳ ಸಂರಕ್ಷಣೆಯನ್ನು ಗುರಿಯಾಗಿರಿಸಿಕೊಂಡು ಹಾಗೂ ಅವುಗಳ ಸಂರಕ್ಷಣೆಯನ್ನು ಮುಂದಿಟ್ಟುಕೊಂಡು ಈ ದಿನವನ್ನು ಆಚರಿಸಲಾಗುತ್ತದೆ. ಪ್ರಸ್ತುತ ಕೆಂಪು ಪಾಂಡಾಗಳ ಸಂಖ್ಯೆಯ ಕುರಿತು ನಿಖರವಾದ ಲೆಕ್ಕಚಾರ ಇಲ್ಲದಿದ್ದರೂ 10,000 ಕೆಂಪು ಪಾಂಡಾಗಳಿವೆ ಎಂಬುದಾಗಿ ಅಂದಾಜಿಸಲಾಗಿದ್ದು IUCN ಪ್ರಕಾರ ಇದು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದವಾಗಿದೆ.

ಹಾಗಾದರೆ ಈ ಕೆಂಪು ಪಾಂಡಾದ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

ಕೆಂಪು ಪಾಂಡಾಗಳ ಆವಾಸ ಸ್ಥಾನ ಪೂರ್ವ ಹಿಮಾಲಯವಾಗಿದೆ. ಈ ಸಸ್ತನಿಗಳು ಬಹುಕಾಲ ಮರದ ಮೇಲೇಯೇ ಜೀವಿಸುತ್ತವೆ. ರಾತ್ರಿಯಲ್ಲಿ ಆಹಾರ ಭಕ್ಷಿಸುವ ಕೆಂಪು ಪಾಂಡಾಗಳು ಮುಸ್ಸಂಜೆಯ ಹಾಗೂ ಬೆಳಗಿನ ಸಮಯದಲ್ಲಿ ಅಹಾರ ಸೇವಿಸುತ್ತವೆ.
ಬೆಕ್ಕಿನ ಗಾತ್ರದಲ್ಲಿರುವ ಕೆಂಪು ಪಾಂಡಾಗಳು ನೋಡಲು ಬಲು ಸುಂದರವಾಗಿವೆ. ಉದ್ದವಾದ ಕುರುಚಲು ಬಾಲುಗಳನ್ನು ಹೊಂದಿರುವ ಕೆಂಪು ಪಾಂಡಾಗಳು ಮನೆಯ ಬೆಕ್ಕಿನ ಗಾತ್ರದಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ:IT Companies Hiring: ಐಟಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರಿಗೆ ಗುಡ್​ ನ್ಯೂಸ್: 120% ಸಂಬಳ ಹೆಚ್ಚಳ, ಬೋನಸ್ ಕೂಡ ಜಾಸ್ತಿ

ಪಾಂಡಾಗಳು ಏಕಾಂಗಿ ಜೀವಿಗಳಾಗಿದ್ದು ಇವುಗಳು ಏಕಾಂಗಿತನವನ್ನು ಹೆಚ್ಚು ಇಷ್ಟಪಡುತ್ತವೆ. ಸಾಮಾಜಿಕವಾಗಿ ಅವು ಬೆರೆಯುವುದು ಕಡಿಮೆ ಹಾಗೂ ಮಿಲನದ ಸಮಯದಲ್ಲಿ ಮಾತ್ರವೇ ಆಂಗಿಕ ಅಭಿನಯಗಳ ಮೂಲಕ ಸಂವಹನ ನಡೆಸುತ್ತವೆ.

ತುಪ್ಪಳ ಹೊಂದಿರುವ ಪ್ರಾಣಿಗಳು ಕರಡಿಗಳಲ್ಲ. ಇನ್ನೂ ಜೀವಂತವಾಗಿರುವ ಐಲುರಿಡೆ ಹೆಸರಿನ ಜೀವಿವರ್ಗೀಕರಣದ ಏಕೈಕ ಕುಟುಂಬ ಸದಸ್ಯರಾಗಿದ್ದಾರೆ. ಹಾಗಾಗಿ ಈ ಪಾಂಡಾಗಳು ದೈತ್ಯ ಪಾಂಡಾಗಳನ್ನು ಹೋಲದೇ ಇದ್ದರೂ ಕೆಲವೊಂದು ಹೋಲಿಕೆಗಳನ್ನು ಒಳಗೊಂಡಿವೆ. ಮುಖ್ಯವಾಗಿ ಬಿದಿರಿನ ಮೇಲೆ ಕೆಂಪು ಪಾಂಡಾಗಳು ಹೆಚ್ಚಿನ ಒಲವನ್ನು ಹೊಂದಿವೆ. ಇವು ಕರಡಿಗಳಿಗಿಂತ ರಕೂನ್‌ಗಳನ್ನು ಹೋಲುತ್ತವೆ.

ಕೆಂಪು ಪಾಂಡಾಗಳಿಗೆ ಹಿಮ ಎಂದರೆ ಅಚ್ಚುಮೆಚ್ಚನದಾಗಿದೆ. ಅವುಗಳ ತುಪ್ಪಳದ ಬಣ್ಣ ಹಾಗೂ ಹಿಮದಿಂದಾಗಿ, ಚಳಿಗಾಲದ ಸಮಯದಲ್ಲಿ ಅವುಗಳನ್ನು ಹೊರಾಂಗಣ ಆವಾಸಸ್ಥಾನದಲ್ಲಿ ನೋಡುವ ಅವಕಾಶ ಕೂಡ ದೊರೆಯಬಹುದು. ಇವುಗಳ ಜೀವಿತಾವಧಿ 23 ವರ್ಷಗಳಾಗಿವೆ. ಇನ್ನೊಂದು ಪ್ರಮುಖ ವಿಷಯವೆಂದರೆ 12 ವರ್ಷಗಳ ನಂತರ ಹೆಣ್ಣು ಕೆಂಪು ಪಾಂಡಾಗಳು ಸಂತಾನೋತ್ಪತ್ತಿಯನ್ನು ಮಾಡುವುದಿಲ್ಲ. ಇವುಗಳು ಹೆಚ್ಚಾಗಿ ಬಿದಿರು ಹಾಗೂ ಸಸ್ಯಗಳನ್ನು ಆಹಾರವಾಗಿ ಸೇವಿಸುತ್ತವೆ.
ಸಂತತಿ ಹೇಗೆ ನಾಶಗೊಳ್ಳುತ್ತಿದೆ:

ಕಾಡು ಹಂದಿಗಳು ಹಾಗೂ ಜಿಂಕೆಗಳನ್ನು ಹಿಡಿಯಲು ಹರಡಿರುವ ಬಲೆಗಳಲ್ಲಿ ಬೀಳುವ ಈ ಪ್ರಾಣಿಗಳನ್ನು ನಿಷ್ಕಾರಣವಾಗಿ ಕೊಲ್ಲಲಾಗುತ್ತದೆ. ಚೀನಾ ಹಾಗೂ ಮಯನ್ಮಾರ್‌ನಲ್ಲಿ ಅವುಗಳ ಚರ್ಮಕ್ಕಾಗಿ ಕೆಂಪು ಪಾಂಡಾಗಳನ್ನು ಬೇಟೆಯಾಡಲಾಗುತ್ತದೆ. ಭೂತಾನ್‌ನಲ್ಲಿ ಕೆಂಪು ಪಾಂಡ ತುಪ್ಪಳದ ಕ್ಯಾಪ್‌ಗಳು ಅಥವಾ ಟೋಪಿಗಳು ಮಾರಾಟಕ್ಕೆ ಲಭ್ಯವಿವೆ. ಒಟ್ಟು ಸಂಭಾವ್ಯ ಕೆಂಪು ಪಾಂಡ ಆವಾಸಸ್ಥಾನದಲ್ಲಿ ಸರಿಸುಮಾರು 38% ನೇಪಾಳದಲ್ಲಿದೆ.

ಇದನ್ನೂ ಓದಿ:IISc Bangalore Recruitment: ಮಾಸಿಕ ವೇತನ 1,66,541 ರೂ; ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ಕೆಂಪು ಪಾಂಡಾದ ದುರ್ಬಲವಾದ ಆವಾಸಸ್ಥಾನದ ಮೇಲೆ ಮಾನವ ಪ್ರಭಾವವನ್ನು ಕಡಿಮೆ ಮಾಡಲು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಗುಂಪು ಯಾಕ್ ಕುರಿಗಾರರು ಮತ್ತು ಇತರ ಸಮುದಾಯ ಗುಂಪುಗಳೊಂದಿಗೆ ಕೆಲಸ ಮಾಡುತ್ತಿವೆ ಹಾಗೂ ಪಾಂಡಾಗಳನ್ನು ಬೇಟೆಯಾಡುವವರಿಗೆ ಕಠಿಣ ದಂಡಗಳನ್ನು ವಿಧಿಸಲಾಗುತ್ತಿದೆ.
Published by:Latha CG
First published: