International Lefthanders Day: ಭಾರತೀಯ ಸಿನಿಮಾ ರಂಗದಲ್ಲಿ ಮಿಂಚಿದ ಎಡಗೈ ಸೆಲೆಬ್ರಿಟಿಗಳು

ಬಹುತೇಕರಿಗೆ ಗೊತ್ತಿಲ್ಲ ಸಾಕಷ್ಟು ಎಡಗೈ ದಾಂಡಿಗರು ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ್ದಾರೆ. ಬಲಗೈ ಬಳಸುವವರ ಮಧ್ಯೆ ಎಡಚರರೂ ಕೂಡ ಸಾಧನೆ ಶಿಖರವನ್ನು ಏರಿದ್ದಾರೆ. ಅವರ ಇಲ್ಲಿದೆ ಮಾಹಿತಿ

news18-kannada
Updated:August 13, 2020, 2:01 PM IST
International Lefthanders Day: ಭಾರತೀಯ ಸಿನಿಮಾ ರಂಗದಲ್ಲಿ ಮಿಂಚಿದ ಎಡಗೈ ಸೆಲೆಬ್ರಿಟಿಗಳು
Photo: Google
  • Share this:
ಇಂದು ವಿಶ್ವ ಎಡಚರರ ದಿನ. ನಮ್ಮ ಸುತ್ತಮುತ್ತ ಬಲಗೈ ಬಳಸುವ ಜನರನ್ನು ಹೆಚ್ಚಾಗಿ ಕಾಣುತ್ತೇವೆ. ಆದರೆ ಎಡಗೈ ಬಳಸುವರು ಮಾತ್ರ ಅಲ್ಪ ಮಾತ್ರ. ವಿಶ್ವದಾದ್ಯಂತ ಒಮ್ಮೆ ಮೆಲುಕು ಹಾಕಿದರೆ ಬಲಕೈ ಬಳದಾರರ ಸಂಖ್ಯೆಯೇ ಹೆಚ್ಚು. ಆದರೆ ಅವರ ಮಧ್ಯೆ ಕೊಂಚ ಮಂದಿ ಎಡಕೈಯಲ್ಲಿ ಬರೆಯವವರು, ಸಹಿ ಮಾಡುವವರು ಸೇರಿದ್ದಾರೆ. ಇಂದು ಈ ದಿನವನ್ನು ಅವರಿಗಾಗಿ ಮುಡಿಪಾಗಿಡಲಾಗಿದೆ.

ಬಹುತೇಕರಿಗೆ ಗೊತ್ತಿಲ್ಲ ಸಾಕಷ್ಟು ಎಡಗೈ ದಾಂಡಿಗರು ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ್ದಾರೆ. ಬಲಗೈ ಬಳಸುವವರ ಮಧ್ಯೆ ಎಡಚರರೂ ಕೂಡ ಸಾಧನೆ ಶಿಖರವನ್ನು ಏರಿದ್ದಾರೆ. ಅವರ ಇಲ್ಲಿದೆ ಮಾಹಿತಿ

ಅಮಿತಾಭ್​ ಬಚ್ಚನ್​:

ಬಾಲಿವುಡ್​ ಖ್ಯಾತ ನಟ ಅಮಿತಾಭ್​ ಬಚ್ಚನ್​ ಯಾರಿಗೆ ಗೊತ್ತಿಲ್ಲ ಹೇಳಿ. ಬಾಲಿವುಡ್​ ನೆಲದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಜನಪ್ರಿಯ ನಟ ಅಮಿತಾಭ್​. ಇವರು ಬಾಲಿವುಡ್​ಗೆ ಬಿಗ್​ ಬ್ರದರ್​ ಇದ್ದಂತೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದವರು ಇವರು 78 ವರ್ಷ ವಯಸ್ಸಿನಲ್ಲಿ ಬೇಡಿಕೆಯ ನಟರಾಗಿದ್ದಾರೆ.  ಕೌನ್​ ಬನೇಗಾ ಕರೋಡ್​ ಪತಿ ಮುಂತಾದ ದೊಡ್ಡ ದೊಡ್ಡ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಪ್ರದ್ಮಶ್ರೀ, ಪದ್ಮ ಭೂಷನ್​, ಪದ್ಮವಿಭೂಷನ್​ ಪ್ರಶಸ್ತಿಯನ್ನು ಪಡೆದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಅಮಿತಾಭ್​ ಬರೆಯೋದು ಯಾವ ಕೈಯಲ್ಲಿ ಗೊತ್ತಾ? ಅದೇ ಎಡಗೈಯಲ್ಲಿ. ಹಾಗಾಗಿ ಎಡಕೈ ಸಾಧಕರ ಪಟ್ಟಿಯಲ್ಲಿ ಬಿಗ್ ಬಿ ಕೂಡ ಇದ್ದಾರೆ ಅನ್ನೋದು ವಿಶೇಷ.



ಅಭಿಷೇಕ್​ ಬಚ್ಚನ್​:

ತಂದೆ ಅಮಿತಾಭ್​ ಬಚ್ಚನ್​ರಂತೆ ಮಗ ಅಭಿಷೇಕ್​ ಬಚ್ಚನ್​ ಕೂಡ ಎಡಚರ ಎಂಬುದು ವಿಶೇಷ. ಅಪ್ಪನಂತೆ ಅಭಿಷೇಕ್​ ಕೂಡ ಸಿನಿಮಾರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ದಿ ಬ್ರೀತ್​ ಇನ್​ ಟು ದಿ ಶ್ಯಾಡೋ’ ವೆಬ್​ ಸಿರೀಸ್​ ಬಿಡುಗಡೆಯಾಗಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಬಂದಿತ್ತು. ಕೊರೋನಾ ಸಮಯದಲ್ಲಿ ಅಭಿಷೇಕ್​ ಒಟಿಟಿ ಫ್ಲಾಟ್​ಫಾಮ್​ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದರು.

ವಿಷ್ಣುವರ್ಧನ್​:ಖ್ಯಾತ ನಟ ವಿಷ್ಣುವರ್ಧನ್​ ಕೂಡ ಎಡಗೈ ಬಳಸುತ್ತಿದ್ದರು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ ಸಾಹಸ ಸಿಂಹ. ಎಡಕೈ ಮೂಲಕ ಸಾಧನೆ ಮಾಡಿದ ಮತ್ತು ಖ್ಯಾತಿ ಗಳಿಸಿದ ಸೆಲೆಬ್ರಿಗಳಲ್ಲಿ ಒಬ್ಬರು ಎಂಬುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ.

ಸಚಿನ್​ ತೆಂಡೂಲ್ಕರ್​:

ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​​ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾಯ ಅಜ್ಜಂದಿರಿಗೂ ಗೊತ್ತು. ಕ್ರಿಕೆಟ್​ ಲೋಕದಲ್ಲಿ ಜಾದು ಮಾಡಿದ ತೆಂಡೂಲ್ಕರ್​ ಮೈದಾನದಲ್ಲಿ ಬ್ಯಾಟ್​ ಬೀಸಲು ಬಲಗೂ ಬಳಸಿದರೆ. ಬರೆಯಲು, ಸಹಿ ಮಾಡಲು ಎಡಗೈ ಬಳಸುತ್ತಾರೆ.

ಬರಾಕ್​ ಒಬಾಮ:

ಅಮೆರಿಕದ 44ನೇ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಬರಾಕ್​ ಒಬಾಮ ಕೂಡ ಎಡಚರ ಎಂಬುದು ವಿಶೇಷ. ಅಮೆರಿಕವನ್ನು 2009ರಿಂದ 2017ವರೆಗೆ ಆಳಿದ ಒಬಾಮ ಡೆಮಾಕ್ರೆಟಿಕ್​ ಪಕ್ಷದ ಸದಸ್ಯನಾಗಿದ್ದರು. ಸಾಕಷ್ಟು ಜನರು ಎಡಕೈ ದಾಂಡಿಗರು ಎಡಮಟ್ಟು ಮಾಡುವುದು ಹೆಚ್ಚು ಎಂಬ ಆರೋಪ ಮಾಡುತ್ತಾರೆ. ಆದರೆ ಅಮೆರಿಕವನ್ನು ಆಳಿದ ಎಡಚರ ಬರಾಕ್​ ಒಬಾಮ ಬಗ್ಗೆ ಏನು ಹೇಳುತ್ತೀರಿ…?

ನೆಲ್ಸನ್​ ಮಂಡೇಲಾ:

ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ದಕ್ಷಿಣಾ ಆಫ್ರಿಕಾದ ನೆಲ್ಸನ್​ ಮಂಡೇಲಾ ಕೂಡ ಬರೆಯಲು, ಸಹಿ ಮಾಡಲು ಎಡಗೈ ಬಳಸುತ್ತಿದ್ದರು. ಜನಾಂಗೀಯ ನಿಂದನೆ ವಿರುದ್ಧ ಹೋರಾಡಿ ಜಯಿಸಿದ್ದ ಮಂಡೇಲಾ ರಾಷ್ಟಪತಿ ಪಟ್ಟವನ್ನು ಅಲಂಕರಿಸಿದ್ದರು. ದಕ್ಷಿಣ ಆಫ್ರಿಕಾದ 11ನೇ ರಾಷ್ಟ್ರಪತಿಯಾಗಿದ್ದರು.

ಹೀಗೆ ದೇಶ-ವಿಶ್ವದಾದ್ಯಂತ ಸಾಕಷ್ಟು ಎಡಕೈ ಸಾಧಕರು ಇದ್ದಾರೆ. ಅತ್ಯುತ್ತಮ ಸಾಧನೆ ಮೂಲಕ ದೇಶಕ್ಕೆ ಕೀರ್ತಿತಂದವರಿದ್ದಾರೆ. ವಿಶ್ವ ಎಡಚರರ ದಿನವಾದ್ದ ಇಂದು ಅವರೆಲ್ಲರಿಗೂ ಶುಭಾಶಯಗಳು.
Published by: Harshith AS
First published: August 13, 2020, 2:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading