• Home
 • »
 • News
 • »
 • trend
 • »
 • International Firefighters’ Day 2022: ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಮಹತ್ವ ಮತ್ತು ಇತಿಹಾಸ ಬಗ್ಗೆ ಮಾಹಿತಿ ಇಲ್ಲಿದೆ

International Firefighters’ Day 2022: ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಮಹತ್ವ ಮತ್ತು ಇತಿಹಾಸ ಬಗ್ಗೆ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

International Firefighters’ Day: ಅಗ್ನಿಶಾಮಕ ದಳದವರು ಸಮಾಜದ ಕಾವಲುಗಾರರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾರ್ವಜನಿಕ ಸುರಕ್ಷತೆಗಾಗಿ ಮತ್ತು ದುರಂತ ಘಟನೆಗಳಿಂದ ಜೀವಗಳನ್ನು ರಕ್ಷಿಸುವ ಸಲುವಾಗಿ ಅಗ್ನಿಶಾಮಕ ದಳದ ಅನೇಕರು ಅಸಂಖ್ಯಾತ ತ್ಯಾಗಗಳನ್ನು ಮಾಡಿದ್ದಾರೆ.

ಮುಂದೆ ಓದಿ ...
 • Share this:

  ನಿಮ್ಮ ಮನೆಗೆ ಅಥವಾ ಕಚೇರಿಗೆ (Office) ಅಥವಾ ನಿಮ್ಮ ಅಂಗಡಿಗೆ (Store) ಬೆಂಕಿ (Fire) ಬಿದ್ದರೆ ನೀವು ಮೊದಲು ಮಾಡುವ ಕೆಲಸಗಳಲ್ಲಿ ಒಂದು ಎಂದರೆ ಅದು ಅಗ್ನಿಶಾಮಕ ಕಚೇರಿ ಅಥವಾ ಸಹಾಯವಾಣಿಗೆ (Helpline) ಕರೆ (Call) ಮಾಡುವುದು ಅಲ್ಲವೇ..? ನಾವು ಕರೆ ಮಾಡಿದ ಸ್ವಲ್ಪ ಸಮಯದಲ್ಲೇ ಅವರು ಎಲ್ಲೇ ಇದ್ದರೂ ಬಂದು ಬೆಂಕಿ ಆರಿಸಲು ಹರಸಾಹಸ ಪಡುತ್ತಾರೆ. ಇದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಾರೆ. ಇಂತಹ ಎಷ್ಟೋ ಕೆಲಸಗಳ ವೇಳೆ ಹಲವು ಅಗ್ನಿಶಾಮಕ ಸಿಬ್ಬಂದಿ (International Firefighters) ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಲ್ಲ, ತಾವು ಜೀವನದಲ್ಲಿ ಎದ್ದು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಇಂತಹ ಘಟನೆಗಳ ಬಗ್ಗೆ ನೀವು ಆಗಾಗ ಕೇಳಿರಬೇಕು ಅಲ್ಲವೇ..? ಅಂದ ಹಾಗೆ, ಇವತ್ತು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ (International Firefighters’ Day 2022).


  ಅಗ್ನಿಶಾಮಕ ದಳದವರು ಸಮಾಜದ ಕಾವಲುಗಾರರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾರ್ವಜನಿಕ ಸುರಕ್ಷತೆಗಾಗಿ ಮತ್ತು ದುರಂತ ಘಟನೆಗಳಿಂದ ಜೀವಗಳನ್ನು ರಕ್ಷಿಸುವ ಸಲುವಾಗಿ ಅಗ್ನಿಶಾಮಕ ದಳದ ಅನೇಕರು ಅಸಂಖ್ಯಾತ ತ್ಯಾಗಗಳನ್ನು ಮಾಡಿದ್ದಾರೆ. ಆದ್ದರಿಂದ, ಪ್ರತಿ ವರ್ಷ ಅವರ ಕೆಲಸ, ತ್ಯಾಗ, ಧೈರ್ಯ ಮತ್ತು ಸಮರ್ಪಣೆಯನ್ನು ಗೌರವಿಸಲು, ಮೇ 4 ಅನ್ನು ಅಂದರೆ ಇಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನಾಗಿ ಆಚರಿಸಲಾಗುತ್ತದೆ. ಕರ್ತವ್ಯದ ಸಾಲಿನಲ್ಲಿ ಪ್ರಾಣ ಕಳೆದುಕೊಂಡ ಅಗ್ನಿಶಾಮಕ ತಜ್ಞರಿಗೆ ಗೌರವ ಸಲ್ಲಿಸಲು ಈ ವಿಶೇಷ ದಿನವನ್ನು ಗುರುತಿಸಲಾಗಿದೆ.


  ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಮಹತ್ವ ಮತ್ತು ಇತಿಹಾಸ


  ಮೇ 4 ರಂದು, ಹುತಾತ್ಮರಾದ ಎಲ್ಲಾ ಅಗ್ನಿಶಾಮಕ ದಳದವರಿಗೆ ನಮನ ಸಲ್ಲಿಸಲು ಜನರು ಕೆಂಪು ಮತ್ತು ನೀಲಿ ರಿಬ್ಬನ್‌ಗಳಿಂದ ಮಾಡಿದ ಸಾಂಕೇತಿಕ ಬ್ಯಾಡ್ಜ್ ಅನ್ನು ಧರಿಸುತ್ತಾರೆ. ಹಾಗಾದರೆ, ಕೆಂಪು ಮತ್ತು ನೀಲಿ ಬ್ಯಾಡ್ಜ್‌ ಯಾಕೆ, ಅದರ ವಿಶೇಷತೆ ಏನು ಅನ್ನೋ ಆಲೋಚನೆ ನಿಮ್ಮ ಮನಸ್ಸಲ್ಲಿ ಮೂಡಿದ್ಯಾ.. ? ಕೆಂಪು ಮತ್ತು ನೀಲಿ ಎರಡೂ ಅಗ್ನಿಶಾಮಕ ಕೆಲಸದ ಮುಖ್ಯ ಅಂಶಗಳಾಗಿವೆ. ಏಕೆಂದರೆ ಕೆಂಪು ಬೆಂಕಿಯನ್ನು ಸೂಚಿಸುತ್ತದೆ ಮತ್ತು ನೀಲಿ ಬಣ್ಣವು ನೀರಿನ ಸಂಕೇತವಾಗಿದೆ.


  ಇದನ್ನೂ ಓದಿ: Explained: ತರಕಾರಿ ಬಲು ದುಬಾರಿ! ಆಗಾಗ ಬೆಲೆ ಏರಿಕೆ ಆಗುವುದಕ್ಕೆ ಕಾರಣವೇನು ಗೊತ್ತಾ?


  ಇನ್ನು, ಈ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ ಯಾಕೆ, ಹೇಗೆ ಹುಟ್ಟಿಕೊಂಡಿತು ಅಂತೀರಾ..? ಡಿಸೆಂಬರ್ 2, 1998 ರಂದು ಆಸ್ಟ್ರೇಲಿಯಾದ ಲಿಂಟನ್ ಪಟ್ಟಣದಲ್ಲಿ ದುರಂತ ಘಟನೆ ಸಂಭವಿಸಿದ ನಂತರ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ ಎಂಬ ಕಲ್ಪನೆ ಹುಟ್ಟಿಕೊಂಡಿತು. ಆ ಭೀಕರ ಘಟನೆಯಲ್ಲಿ, ಕಾಡ್ಗಿಚ್ಚನ್ನು ನಂದಿಸಲು ಪ್ರಯತ್ನಿಸುವಾಗ ಐದು ಅಗ್ನಿಶಾಮಕ ಸಿಬ್ಬಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಇಂತಹ ಸಿಬ್ಬಂದಿಗಳಿಗೆ ನಮನ ಸಲ್ಲಿಸಲು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಆಚರಣೆ ಆರಂಭವಾಯಿತು.


  ಗ್ಯಾರಿ ವ್ರೆಡೆವೆಲ್ಡ್ಟ್, ಕ್ರಿಸ್ ಇವಾನ್ಸ್, ಸ್ಟುವರ್ಟ್ ಡೇವಿಡ್ಸನ್, ಜೇಸನ್ ಥಾಮಸ್ ಮತ್ತು ಮ್ಯಾಥ್ಯೂ ಆರ್ಮ್‌ಸ್ಟ್ರಾಂಗ್ - ಈ ಐದು ಅಗ್ನಿಶಾಮಕ ಸಿಬ್ಬಂದಿ ಅಂದು ತಮ್ಮ ಪ್ರಾಣತ್ಯಾಗ ಮಾಡಿದ್ದರು. ಅವರು ಸ್ಟ್ರೈಕ್ ತಂಡದ ಭಾಗವಾಗಿದ್ದರು ಮತ್ತು SOS ಕರೆಗೆ ಹಾಜರಾಗಲು ಧಾವಿಸಬೇಕಾಯಿತು. ಆದರೆ ಬೆಂಕಿಯೊಂದಿಗೆ ಹೋರಾಡಿದ ಈ ಎಲ್ಲಾ ಐವರು ದುರದೃಷ್ಟವಶಾತ್‌ ಬಲಿಯಾಗಬೇಕಾಯಿತು.


  ಇದನ್ನೂ ಓದಿ: Auto Rickshaw Garden: ಆಟೋ ರಿಕ್ಷಾದ ಮೇಲೆ ಉದ್ಯಾನವನ ಬೆಳೆಸಿದ ಚಾಲಕ


  ಈ ದುರಂತದ ನಂತರ, ಜನವರಿ 4, 1998 ರಂದು, ಕೆಚ್ಚೆದೆಯ ಅಗ್ನಿಶಾಮಕರನ್ನು ಗೌರವಿಸಲು ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲು ಎಲ್ಲಾ ರಾಷ್ಟ್ರಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಯಿತು.


  ಈ ಮಧ್ಯೆ, ಅಂತಾರಾಷ್ಟ್ರೀಯ ಅಗ್ನಿಶಾಮಕ ದಳದ ದಿನದ ಇತರ ಪ್ರಮುಖ ಅಂಶವೆಂದರೆ ಅಂತಹ ದುರಂತಗಳನ್ನು ತಡೆಗಟ್ಟುವುದು ಮತ್ತು ಮುಂದಿನ ದಿನಗಳಲ್ಲಿ ತೀವ್ರವಾದ ಮತ್ತು ಸಂಪೂರ್ಣ ತರಬೇತಿಯನ್ನು ಸುಧಾರಿಸುವ ಅಗತ್ಯವನ್ನು ವ್ಯಕ್ತಪಡಿಸುವುದು. ಇದನ್ನು ಕೆಂಪು ಮತ್ತು ನೀಲಿ ಬಣ್ಣದ ರಿಬ್ಬನ್‌ಗಳನ್ನು ಧರಿಸುವುದು ಮಾತ್ರವಲ್ಲದೆ, ನಿವೃತ್ತ ಮತ್ತು ಮಾಜಿ ಅಗ್ನಿಶಾಮಕ ಸಿಬ್ಬಂದಿಯ ವೈದ್ಯಕೀಯ ಚಿಕಿತ್ಸೆ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ಚಾರಿಟಿಗೆ ಹಣವನ್ನು ದೇಣಿಗೆ ನೀಡುವ ಮೂಲಕ ಆಚರಿಸಲಾಗುತ್ತದೆ.

  Published by:Harshith AS
  First published: