• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Happiest Country: ಜಗತ್ತಿನಲ್ಲಿ ಅತ್ಯಂತ ಖುಷಿಯಾಗಿರೋ ದೇಶ ಇದು, ಭಾರತ ಎಷ್ಟನೇ ಸ್ಥಾನದಲ್ಲಿದೆ ನೋಡಿ

Happiest Country: ಜಗತ್ತಿನಲ್ಲಿ ಅತ್ಯಂತ ಖುಷಿಯಾಗಿರೋ ದೇಶ ಇದು, ಭಾರತ ಎಷ್ಟನೇ ಸ್ಥಾನದಲ್ಲಿದೆ ನೋಡಿ

ಸಂತೋಷದ ದಿನ

ಸಂತೋಷದ ದಿನ

ಸತತ ಆರನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದ ದೇಶವಾಗಿ ಫಿನ್‌ಲ್ಯಾಂಡ್‌ ಸ್ಥಾನ ಗಳಿಸಿದೆ. ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

  • Share this:
  • published by :

ಪ್ರತಿ ಬಾರಿಯಂತೆ ಈ ಬಾರಿಯೂ ಫಿನ್‌ಲ್ಯಾಂಡ್ ( Finland)‌ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ. ವಾರ್ಷಿಕ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌ನಲ್ಲಿ ಫಿನ್‌ಲ್ಯಾಂಡ್ ನಂ. 1 ಸ್ಥಾನ ಪಡೆದಿದೆ. ಸತತ ಆರನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದ ದೇಶವಾಗಿ ಫಿನ್‌ಲ್ಯಾಂಡ್‌ ಸ್ಥಾನ ಗಳಿಸಿದೆ. ಫಿನ್‌ಲ್ಯಾಂಡ್‌ನ ನಂತರದಲ್ಲಿ ಡೆನ್ಮಾರ್ಕ್ (Denmark) 2ನೇ ಸ್ಥಾನದಲ್ಲಿದ್ದರೆ, ಐಸ್ಲ್ಯಾಂಡ್ 3 ನೇ ಸ್ಥಾನ ಪಡೆದುಕೊಂಡಿದೆ. ಸಂತೋಷವನ್ನು ಅಳೆಯಲು ಪ್ರಮುಖವಾಗಿ ಆಯಾ ದೇಶಗಳ GDP ತಲಾವಾರು, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರ ಪ್ರಮಾಣ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವರದಿಯನ್ನು (Report) ನೀಡಲಾಗುತ್ತದೆ.


ಈ ವರದಿಯನ್ನು ಮಾರ್ಚ್ 20ರಂದು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಈ ದಿನವನ್ನು ಅಂತರರಾಷ್ಟ್ರೀಯ ಸಂತೋಷದ ದಿನವಾಗಿ ಆಚರಿಸಲಾಗುತ್ತದೆ.


ಅಂದಹಾಗೆ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ಯುಎನ್ ಸಸ್ಟೈನಬಲ್ ಡೆವಲಪ್‌ಮೆಂಟ್ ಸೊಲ್ಯೂಷನ್ಸ್ ನೆಟ್‌ವರ್ಕ್‌ನ ಪ್ರಕಟಣೆಯಾಗಿದೆ. ಇದು 150 ಕ್ಕೂ ಹೆಚ್ಚು ದೇಶಗಳ ಜನರ ಜಾಗತಿಕ ಸಮೀಕ್ಷೆಯ ಡೇಟಾವನ್ನು ಆಧರಿಸಿದೆ. ಈ ಮಧ್ಯೆ ಪ್ರಸ್ತುತ ಹ್ಯಾಪಿನೆಸ್‌ ರಿಪೋರ್ಟ್‌ ಹಿಂದಿನ ಶ್ರೇಯಾಂಕಗಳನ್ನು ಹೋಲುತ್ತದೆ. ಅನೇಕ ನಾರ್ಡಿಕ್ ದೇಶಗಳು ಉನ್ನತ ಸ್ಥಾನಗಳಲ್ಲಿವೆ.


ನಾರ್ಡಿಕ ದೇಶಗಳಲ್ಲಿ ಸಂತೋಷದ ಪ್ರಮಾಣ ಹೆಚ್ಚು


"ನಾರ್ಡಿಕ್ ದೇಶಗಳು ತಮ್ಮ ವೈಯಕ್ತಿಕ ಮತ್ತು ಸಾಂಸ್ಥಿಕ ನಂಬಿಕೆಯಲ್ಲಿ ಉನ್ನತ ಮಟ್ಟದಲ್ಲಿವೆ. ನಾರ್ಡಿಕ್‌ ದೇಶಗಳು 2020 -2021 ರಲ್ಲಿ ಕೋವಿಡ್‌ ಸಾವಿನ ಪ್ರಮಾಣವನ್ನು ಪಶ್ಚಿಮ ಯುರೋಪ್‌ ದೇಶದಲ್ಲಿನ ಮೂರನೇ ಒಂದು ಪ್ರಮಾಣದಲ್ಲಿ ಮಾತ್ರ ಹೊಂದಿದ್ದವು ಎಂದು ವರದಿಯ ಲೇಖಕರು ಡಾಕ್ಯುಮೆಂಟ್‌ನಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: 15 ಲಕ್ಷಕ್ಕೂ ಜಾಸ್ತಿ ಬಣ್ಣ ಬಣ್ಣದ ಹೂವುಗಳಿರುವ ಲೋಕವಿದು! ಈಗ ಮಿಸ್​ ಮಾಡಿದ್ರೆ ಇನ್ಯಾವತ್ತೂ ಸಿಗೋದಿಲ್ಲ


ವರದಿಯ ಲೇಖಕರಲ್ಲಿ ಒಬ್ಬರಾದ ಜಾನ್ ಹೆಲ್ಲಿವೆಲ್ ಅವರು, "ಇತರರಿಗೆ ಸಹಾಯ ಮಾಡುವುದು, ಅದರಲ್ಲೂ ವಿಶೇಷವಾಗಿ ಅಪರಿಚಿತರಿಗೆ ಸಹಾಯ ಮಾಡುವಂಥ ಪ್ರಮಾಣ 2021ರಲ್ಲಿ ಏರಿಕೆ ಕಂಡಿದೆ.


World Happiness Report,international day of happiness,Finland,Finland happiest country,happiest country in the world, World Happiness Report,Covid 19,Finland,Most happy countrie,India,Russia Ukraine, kannada news, trending news, international news, ಕನ್ನಡ ನ್ಯೂಸ್​, ಯಾವ ದೇಶ ಅತ್ಯಂತ ಸಂತೋಷವಾಗಿದೆ, ಸಂತೋಷಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ, ವೈರಲ್​ ನ್ಯೂಸ್​
ರಿಪೋರ್ಟ್​


ನಂತರ 2022 ರಲ್ಲಿ ಉನ್ನತ ಮಟ್ಟದಲ್ಲಿದೆ. ಕಷ್ಟದ ಸಂದರ್ಭದಲ್ಲಿಯೂ ಸಹ, ನಕಾರಾತ್ಮಕ ಭಾವನೆಗಳಿಗಿಂತ ಸಕಾರಾತ್ಮಕ ಭಾವನೆಗಳು ಎರಡು ಪಟ್ಟು ಹೆಚ್ಚು ಪ್ರಚಲಿತವಾಗಿದೆ" ಎಂಬುದಾಗಿ ಲೇಖಕರು ಹೇಳುತ್ತಾರೆ.


ಭಾರತಕ್ಕೆ 125 ನೇ ಸ್ಥಾನ!


ಇನ್ನು ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ನಮ್ಮ ದೇಶಕ್ಕೆ 126ನೇ ಸ್ಥಾನ ದೊರೆತಿದೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತವು ನೇಪಾಳ, ಚೀನಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕಿಂತ ಕೆಳಗೆ ಅಂದರೆ 126 ನೇ ಸ್ಥಾನದಲ್ಲಿದೆ.


ಇದನ್ನೂ ಓದಿ: 8 ಸಾವಿರ ಇದ್ರೆ ಸಾಕು, ಇಷ್ಟೆಲ್ಲಾ ಸ್ಥಳಗಳಿಗೆ ಫ್ಯಾಮಿಲಿ ಜೊತೆ ಟ್ರಿಪ್​ ಹೋಗ್ಬೋದು!


ಭಾರತದ ಶ್ರೇಯಾಂಕವು ಖಂಡಿತವಾಗಿಯೂ 136 ರಿಂದ 125 ಕ್ಕೆ ಸುಧಾರಿಸಿದೆ. ಆದರೆ ದೇಶವು ನೇಪಾಳ, ಬಾಂಗ್ಲಾದೇಶ ಮುಂತಾದ ನೆರೆಯ ರಾಷ್ಟ್ರಗಳಿಗಿಂತ ಕೆಳಮಟ್ಟದಲ್ಲಿದೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಹೊರತಾಗಿಯೂ, ಭಾರತವು ಸತತವಾಗಿ ಸೂಚ್ಯಂಕದಲ್ಲಿ ಕಡಿಮೆ ಸ್ಥಾನದಲ್ಲಿರುವುದು ವಿಪರ್ಯಾಸ.


ಟಾಪ್‌ 10 ದೇಶಗಳು


ಹ್ಯಾಪಿನೆಸ್‌ ರಿಪೋರ್ಟ್‌ ಪ್ರಕಾರ ಫಿನ್‌ಲ್ಯಾಂಡ್ 7.8 ಅಂಕಗಳೊಂದಿಗೆ ಸತತ ಆರನೇ ವರ್ಷಕ್ಕೆ ಅಗ್ರಸ್ಥಾನದಲ್ಲಿದ್ದು, ಡೆನ್ಮಾರ್ಕ್, ಐಸ್‌ಲ್ಯಾಂಡ್‌ ಕ್ರಮವಾಗಿ 2ನೇ ಹಾಗೂ ಮೂರನೇ ಸ್ಥಾನದಲ್ಲಿವೆ.


ನಂತರದಲ್ಲಿ ಟಾಪ್ 10 ಪಟ್ಟಿಯಲ್ಲಿರುವ ಇತರ ದೇಶಗಳು ಯಾವವು ಅನ್ನೋದನ್ನು ನೋಡೋದಾದ್ರೆ, ಇಸ್ರೇಲ್, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ, ಸ್ವಿಟ್ಜರ್ಲೆಂಡ್, ಲಕ್ಸೆಂಬರ್ಗ್ ಮತ್ತು ನ್ಯೂಜಿಲೆಂಡ್ ದೇಶಗಳಾಗಿವೆ.
ಇನ್ನು ಈ ಬಾರಿ ರಷ್ಯಾ-ಉಕ್ರೇನ್ ಯುದ್ಧವು ಎರಡೂ ದೇಶಗಳ ಶ್ರೇಯಾಂಕದಲ್ಲಿ ಕುಸಿತಕ್ಕೆ ಕಾರಣವಾಗಿದ್ದು, ರಷ್ಯಾ 72ನೇ ಸ್ಥಾನದಲ್ಲಿದ್ದರೆ, ಉಕ್ರೇನ್ 92ನೇ ಸ್ಥಾನದಲ್ಲಿದೆ.


ವಿಶ್ವದ ಅತ್ಯಂತ ಅತೃಪ್ತ ದೇಶಗಳು


137 ದೇಶಗಳ ಪೈಕಿ ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ ಮತ್ತು ವರದಿಯ ಪ್ರಕಾರ ಅತ್ಯಂತ ಅತೃಪ್ತಿ ಹೊಂದ ದೇಶವಾಗಿದೆ.


ಈ ರಿಪೋರ್ಟ್‌ನ ಕೆಳಗಿರುವ ಇತರ ಪ್ರದೇಶಗಳು ಲೆಬನಾನ್, ಜಿಂಬಾಬ್ವೆ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮುಂತಾದವು. ಈ ದೇಶಗಳು ಹೆಚ್ಚಿನ ಭ್ರಷ್ಟಾಚಾರ ಮತ್ತು ಕಡಿಮೆ ಜೀವಿತಾವಧಿಯನ್ನು ಹೊಂದಿವೆ ಎಂದು ವರದಿ ಹೇಳಿದೆ.

top videos
    First published: